ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ ಮೂಲದ ಮೂವರು ಆರ್ಥಿಕ ತಜ್ಞರಿಗೆ 2021 ರ ಅರ್ಥಶಾಸ್ತ್ರ ನೊಬೆಲ್‌ ಪ್ರಶಸ್ತಿ

|
Google Oneindia Kannada News

ನ್ಯೂಯಾರ್ಕ್, ಅಕ್ಟೋಬರ್‌ 11: ಅಮೆರಿಕ ಮೂಲದ ಮೂವರು ಆರ್ಥಿಕ ತಜ್ಞರಿಗೆ 2021 ರ ಅರ್ಥಶಾಸ್ತ್ರ ನೊಬೆಲ್‌ ಪ್ರಶಸ್ತಿಯನ್ನು ನೀಡಲಾಗಿದೆ. 2021 ನೇ ಸಾಲಿನ ಅರ್ಥಶಾಸ್ತ್ರ ನೊಬೆಲ್‌ ಪ್ರಶಸ್ತಿಯನ್ನು ಇಂದು ಘೋಷಣೆ ಮಾಡಲಾಗಿದ್ದು, ಅರ್ಥಶಾಸ್ತ್ರ ನೊಬೆಲ್‌ ಪ್ರಶಸ್ತಿಗೆ ಡೇವಿಡ್‌ ಕಾರ್ಡ್, ಜೋಶುವಾ ಡಿ.ಅಂಗ್ರಿಸ್ಟ್‌ ಮತ್ತು ಗ್ವಿಡೊ ಡಬ್ಲ್ಯೂ ಇಂಬೆನ್ಸ್‌ಗೆ ದೊರಕಿದೆ.

ಅಮೆರಿಕದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ಡೇವಿಡ್‌ ಕಾರ್ಡ್‌ಗೆ ಕಾರ್ಮಿಕರ ಆರ್ಥಿಕತೆಗೆ ಸಂಬಂಧಿಸಿದ ನೊಬೆಲ್‌ ಪಶಸ್ತಿ ಲಭಿಸಿದೆ. ಇನ್ನು ಈ ಪ್ರಶಸ್ತಿಯಲ್ಲಿ ಅರ್ಧ ಭಾಗ ಡೇವಿಡ್‌ ಅವರಿಗೆ ಹಾಗೂ ಉಳಿದ ಅರ್ಧ ಭಾಗವು ಜೋಶುವಾ ಡಿ.ಅಂಗ್ರಿಸ್ಟ್‌ ಮತ್ತು ಗ್ವಿಡೊ ಡಬ್ಲ್ಯೂ ಇಂಬೆನ್ಸ್‌ಗೆ ಸಂದಿದೆ.

ಪತ್ರಕರ್ತರಾದ ಮಾರಿಯಾ ರೆಸ್ಸಾ, ಡಿಮಿಟ್ರಿ ಮುರಾಟೋವ್‌ಗೆ 2021ರ ನೊಬೆಲ್ ಶಾಂತಿ ಪ್ರಶಸ್ತಿಪತ್ರಕರ್ತರಾದ ಮಾರಿಯಾ ರೆಸ್ಸಾ, ಡಿಮಿಟ್ರಿ ಮುರಾಟೋವ್‌ಗೆ 2021ರ ನೊಬೆಲ್ ಶಾಂತಿ ಪ್ರಶಸ್ತಿ

2019 ರಲ್ಲಿ ಭಾರತ ಮೂಲದ ಅಭಿಜಿತ್‌ ಬ್ಯಾನರ್ಜಿ, ಅವರ ಪತ್ನಿ ಎಸ್ತರ್‌ ಡಫ್ಲೊ ಹಾಗೂ ಹಾರ್ವರ್ಡ್‌ನ ಪ್ರಾಧ್ಯಾಪಕ ಮೈಖೆಲ್‌ ಕ್ರೆಮರ್‌ಗೆ ಅರ್ಥಶಾಸ್ತ್ರದ ನೊಬೆಲೆ ಪ್ರಶಸ್ತಿಯನ್ನು ನೀಡಲಾಗಿತ್ತು. ಈ ಹಿಂದೆ ಶರೀರಶಾಸ್ತ್ರ ಅಥವಾ ವೈದ್ಯಕೀಯ ಕ್ಷೇತ್ರದಲ್ಲಿ ನೀಡುವ ನೊಬೆಲ್ ಪ್ರಶಸ್ತಿಗೆ ಅಮೆರಿಕದ ವಿಜ್ಞಾನಿಗಳಾದ ಡೇವಿಡ್ ಜೂಲಿಯಸ್ ಮತ್ತು ಆರ್ಡೆಮ್ ಪಟಪೌಟಿಯನ್ ಭಾಜನರಾಗಿದ್ದಾರೆ. ದೇಹದ ತಾಪಮಾನ ಮತ್ತು ಸ್ಪರ್ಷದ ಗ್ರಾಹಕಗಳ ಬಗ್ಗೆ ಸಂಶೋಧನೆಗೆ ಈ ವಿಜ್ಞಾನಿಗಳಿಗೆ ಈ ಪ್ರಶಸ್ತಿ ನೀಡಲಾಗಿದೆ. ನೊಬೆಲ್ ವಿಜೇತರನ್ನು ಸೋಮವಾರ ನೊಬೆಲ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಥಾಮಸ್ ಪೆರ್ಲ್ಮನ್ ಘೋಷಿಸಿದ್ದರು.

Nobel Economics Prize awarded to 3 U.S. based economists

2021ರ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಜಪಾನ್, ಜರ್ಮನಿ ಮತ್ತು ಇಟಲಿ ಸೇರಿದಂತೆ ಮೂವರು ವಿಜ್ಞಾನಿಗಳಿಗೆ ನೀಡಲಾಗಿದೆ. ಜಪಾನ್ ವಿಜ್ಞಾನಿ ಸಿಯುಕುರೊ ಮನಾಬೆ, ಜರ್ಮನಿ ವಿಜ್ಞಾನಿ ಕ್ಲಾಸ್ ಹ್ಯಾಸೆಲ್‌ಮನ್ ಮತ್ತು ಇಟಲಿ ವಿಜ್ಞಾನಿ ಜಾರ್ಜಿಯೊ ಪ್ಯಾರಿಸಿ 2021ರ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ತಮ್ಮ "ಸಂಕೀರ್ಣ ಭೌತಿಕ ವ್ಯವಸ್ಥೆಗಳ ತಿಳುವಳಿಕೆಗೆ ಮಹತ್ವದ ಕೊಡುಗೆಗಳಿಗಾಗಿ' ವಿಜೇತರಾಗಿದ್ದಾರೆ.

ಆ ಬಳಿಕ ಕಳೆದ ಬುಧವಾರ ರಸಾಯನ ಶಾಸ್ತ್ರ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತರ ಹೆಸರನ್ನು ಘೋಷಣೆ ಮಾಡಲಾಗಿದೆ. ಜರ್ಮನಿಯ ಬೆಂಜಮಿನ್ ಲಿಸ್ಟ್ ಹಾಗೂ ಇಂಗ್ಲೆಂಡ್​ನ ಡೇವಿಡ್ ಡಬ್ಲ್ಯೂ.ಸಿ. ಮ್ಯಾಕ್‌ಮಿಲನ್ ಕೆಮಿಸ್ಟ್ರಿ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ನೊಬೆಲ್ ಪ್ರಶಸ್ತಿ ನೀಡಲಾಗಿದೆ. ಅಸಿಮ್ಮೆಟ್ರಿಕ್ ಆರ್ಗನೊಕಟಲಿಸಿಸ್ ಅಭಿವೃದ್ಧಿ ಪಡಿಸಿದ್ದಕ್ಕಾಗಿ ಈ ಇಬ್ಬರು ವಿಜ್ಞಾನಿಗಳಿಗೆ ಈ ಬಾರಿಯ ನೊಬೆಲ್ ಪ್ರಶಸ್ತಿ ಘೋಷಿಸಲಾಗಿದೆ.

ಕಾದಂಬರಿಕಾರ ಅಬ್ದುಲ್​ರಜಾಕ್ ಗುರ್ನಾಹ್‌ಗೆ ಸಾಹಿತ್ಯ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿಕಾದಂಬರಿಕಾರ ಅಬ್ದುಲ್​ರಜಾಕ್ ಗುರ್ನಾಹ್‌ಗೆ ಸಾಹಿತ್ಯ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿ

ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ ಇಂದು ರಸಾಯನ ಶಾಸ್ತ್ರ ವಿಭಾಗದ ನೊಬೆಲ್ ಪ್ರಶಸ್ತಿ ಪುರಸ್ಕೃತರ ಹೆಸರನ್ನು ಘೋಷಿಸಿದೆ. ಜರ್ಮನಿಯ ಬೆಂಜಮಿನ್ ಲಿಸ್ಟ್ ಮತ್ತು ಯುಕೆಯ ಡೇವಿಡ್ ಮ್ಯಾಕ್‌ಮಿಲನ್‌ 2000ರಲ್ಲಿ ಸ್ವತಂತ್ರವಾಗಿ ಕ್ಯಾಟಲಿಸಿಸ್​ನ ಹೊಸ ಮಾರ್ಗವನ್ನು ಅಭಿವೃದ್ಧಿಪಡಿಸಿದ್ದರು.

ತಾಂಜಾನಿಯಾ ದೇಶದ ಕಾದಂಬರಿಕಾರ ಅಬ್ದುಲ್​ರಜಾಕ್ ಗುರ್ನಾಹ್‌ರಿಗೆ 2021ನೇ ಸಾಲಿನ ಸಾಹಿತ್ಯ ನೊಬೆಲ್ ಪ್ರಶಸ್ತಿ ದೊರೆತಿದೆ. ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ ಬುಧವಾರ ಮಹತ್ವದ ಈ ಪ್ರಶಸ್ತಿಗೆ ಅಬ್ದುಲ್​ರಜಾಕ್ ಗುರ್ನಾಹ್ ಹೆಸರನ್ನು ಘೋಷಿಸಿದ್ದು, 'ಗಲ್ಫ್ ದೇಶಗಳಲ್ಲಿನ ನಿರಾಶ್ರಿತರ ಮೇಲೆ ವಸಾಹತು ಶಾಹಿಯ ಪರಿಣಾಮ ಮತ್ತು ಅವರ ಸಂಸ್ಕೃತಿಯಲ್ಲಿ ಒಳನುಸುಳುವಿಕೆಯ ಕುರಿತು ರಾಜಿಯಿಲ್ಲದ ಮತ್ತು ಉದಾತ್ತವಾದ ಸಾಹಿತ್ಯ ಸೃಷ್ಟಿ'ಯನ್ನು ಪರಿಗಣಿಸಿ ನೊಬೆಲ್ ಪ್ರಶಸ್ತಿ ಪ್ರಕಟಿಸಲಾಗಿದೆ.

Recommended Video

Virat Kohli ನಾಯಕತ್ವದಿಂದ ಕೆಳಗಿಳಿದ ನಂತರ ಮೊದಲ ಬಾರಿಗೆ ಮಾತನಾಡಿದ್ದಾರೆ | Oneindia Kannada

ಇನ್ನು ಫಿಲಿಪೈನ್ಸ್ ಪತ್ರಕರ್ತೆ ಮರಿಯಾ ರೆಸ್ಸಾ ಮತ್ತು ರಷ್ಯಾದ ಪತ್ರಕರ್ತ ಡಿಮಿಟ್ರಿ ಮುರಾಟೋವ್ 2021ನೇ ಸಾಲಿನ ನೊಬೆಲ್​ ಶಾಂತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. "ರಷ್ಯಾ ಹಾಗೂ ಫಿಲಿಪೈನ್ಸ್​​ನಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಇವರಿಬ್ಬರೂ ದಿಟ್ಟ ಹೋರಾಟ ನಡೆಸಿದ್ದರು. ರೆಸ್ಸಾ ಮತ್ತು ಮುರಾಟೋವ್ ಫಿಲಿಪೈನ್ಸ್​ ಮತ್ತು ರಷ್ಯಾದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ನಡೆಸಿದ ಹೋರಾಟ ಪರಿಗಣಿಸಿ ಇವರಿಬ್ಬರಿಗೆ ಈ ಬಾರಿಯ ನೊಬೆಲ್​ ಶಾಂತಿ ಪುರಸ್ಕಾರ ನೀಡಲಾಗುವುದು," ಎಂದು ನೊಬೆಲ್ ಸಮಿತಿಯ ಅಧ್ಯಕ್ಷೆ ಬೆರಿಟ್ ರೀಸ್- ಆಂಡರ್ಸನ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.

(ಒನ್‌ಇಂಡಿಯಾ ಸುದ್ದಿ)

English summary
Nobel Economics Prize awarded to 3 U.S. based economists, David Card, Joshua Angrist and Guido Imbens. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X