ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತಕ್ಕೆ ಜಯ; ಯುರೋಪ್ ಸಂಸತ್‌ನಲ್ಲಿ ಸಿಎಎ ಪರ ಮತದಾನ ಇಲ್ಲ

|
Google Oneindia Kannada News

ನವದೆಹಲಿ, ಜನವರಿ 29 : ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರದಲ್ಲಿ ಭಾರತಕ್ಕೆ ತಾತ್ಕಾಲಿಕ ಜಯ ಸಿಕ್ಕಿದೆ. ಯುರೋಪಿಯನ್ ಸಂಸತ್‌ನಲ್ಲಿ ಸಿಎಎ ಕುರಿತು ಮತದಾನ ನಡೆಸದಿರಲು ತೀರ್ಮಾನಿಸಲಾಗಿದೆ.

ಯುರೋಪ್ ಸಂಸತ್‌ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಒಟ್ಟು 5 ನಿರ್ಣಯ ಮಂಡನೆ ಮಾಡಲಾಗಿತ್ತು. ಸಂಸತ್‌ನಲ್ಲಿ ಮೊದಲು ನಿರ್ಣಯಗಳ ಬಗ್ಗೆ ಚರ್ಚೆ ನಡೆಸಿ, ಮತಕ್ಕೆ ಹಾಕಲು ನಿರ್ಧರಿಸಲಾಗಿತ್ತು.

ಯೂರೋಪ್ ಸಂಸತ್‌ನಲ್ಲಿ ಪೌರತ್ವ ಕಾಯ್ದೆ ವಿರುದ್ಧ ನಿರ್ಣಯಯೂರೋಪ್ ಸಂಸತ್‌ನಲ್ಲಿ ಪೌರತ್ವ ಕಾಯ್ದೆ ವಿರುದ್ಧ ನಿರ್ಣಯ

No Voting In European Parliament On Resolution On CAA

ಸಿಎಎ ವಿರೋಧಿಸಿ ಯುರೋಪ್ ಸಂಸತ್‌ನಲ್ಲಿ ನಿರ್ಣಯ ಮಂಡನೆ ಮಾಡಿರುವುದಕ್ಕೆ ಭಾರತ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಸದ್ಯದ ಮಾಹಿತಿಯಂತೆ ಮತಕ್ಕೆ ಹಾಕುವುದನ್ನು ಮುಂದಕ್ಕೆ ಹಾಕಲಾಗಿದೆ. ಗುರುವಾರ ಸಿಎಎ ಪರ ಚರ್ಚೆ ಮತ್ತು ಮತದಾನ ನಡೆಯುವುದಿಲ್ಲ.

ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಗಡಿಬಿಡಿ, ಮೋದಿ-ದೀದಿ ಸಿಡಿಮಿಡಿದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಗಡಿಬಿಡಿ, ಮೋದಿ-ದೀದಿ ಸಿಡಿಮಿಡಿ

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧವಾಗಿ ನಿರ್ಣಯ ಮಂಡನೆ ಮಾಡಿದ್ದಕ್ಕೆ ಭಾರತ ತೀವ್ರವಾಗಿ ವಿರೋಧ ವ್ಯಕ್ತಪಡಿಸಿತ್ತು. ಇದು ಭಾರತ ಆಂತರಿಕ ವಿಚಾರ, ದೇಶದ ಎರಡೂ ಸದನಗಳಲ್ಲಿ ಚರ್ಚಿಸಿ, ಪ್ರಜಾಸತ್ಮಾಕ ರೀತಿಯಲ್ಲಿಯೇ ಶಾಸನ ಜಾರಿಗೊಳಿಸಲಾಗಿದೆ ಎಂದು ಭಾರತ ಹೇಳಿತ್ತು.

ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಬಾಂಗ್ಲಾ ಪ್ರಧಾನಿ ಹೀಗೆ ಹೇಳುವುದೇ?ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಬಾಂಗ್ಲಾ ಪ್ರಧಾನಿ ಹೀಗೆ ಹೇಳುವುದೇ?

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಯುರೋಪ್ ಪಾರ್ಲಿಮೆಂಟ್ ಅಧ್ಯಕ್ಷರಿಗೆ ಸಿಎಎ ವಿರುದ್ಧ ಆರು ನಿರ್ಣಯ ಅಂಗೀಕರಿಸಿದ್ದಕ್ಕೆ ಪತ್ರ ಬರೆದಿದ್ದರು. ಭಾರತದ ವಾದಕ್ಕೆ ಈಗ ಯುರೋಪ್‌ನಲ್ಲಿ ಬೆಲೆ ಸಿಕ್ಕಿದೆ.

ಕಳೆದ ವಾರ ಯುರೋಪ್‌ ಸಂಸತ್‌ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಆರು ನಿರ್ಣಯಗಳನ್ನು ಅಂಗೀಕರಿಸಲಾಗಿತ್ತು. ಗುರುವಾರ ಅದರ ಬಗ್ಗೆ ಚರ್ಚೆ ನಡೆಸಿ ಮತಕ್ಕೆ ಹಾಕಲು ತೀರ್ಮಾನಿಸಲಾಗಿತ್ತು.

English summary
Diplomatic victory for India there will be no voting on the European parliament on the Citizenship Amendment Act on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X