ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಯಾವುದೇ ಪಿಎಚ್‌ಡಿ, ಡಿಗ್ರಿ ಮೌಲ್ಯಯುತವಲ್ಲ': ತಾಲಿಬಾನ್‌ ನೂತನ ಶಿಕ್ಷಣ ಸಚಿವ

|
Google Oneindia Kannada News

ಕಾಬೂಲ್‌, ಸೆಪ್ಟೆಂಬರ್‌ 08: "ಯಾವುದೇ ಪಿಎಚ್‌ಡಿ ಡಿಗ್ರಿ, ಸ್ನಾತಕೋತ್ತರ ಪದವಿ ಈಗ ಮೌಲ್ಯಯುತವಲ್ಲ," ಎಂದು ಅಫ್ಘಾನಿಸ್ತಾನದ ತಾಲಿಬಾನ್‌ ಸರ್ಕಾರದ ನೂತನ ಶಿಕ್ಷಣ ಸಚಿವ ಶೇಖ್ ಮೌಲ್ವಿ ನೂರುಲ್ಲಾ ಮುನೀರ್ ಹೇಳಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

"ಯಾವುದೇ ಪಿಎಚ್‌ಡಿ ಡಿಗ್ರಿ, ಮಾಸ್ಟರ್‌ ಡಿಗ್ರಿ ಈಗ ಮೌಲ್ಯಯುತವಾಗಿಲ್ಲ. ಅಧಿಕಾರದಲ್ಲಿ ಇರುವ ಮುಲ್ಲಾಹ್‌ ಹಾಗೂ ತಾಲಿಬಾನ್‌ ಅಧಿಕಾರದಲ್ಲಿದೆ. ಆದರೆ ಅವರಿಗೆ ಯಾವುದೇ ಪಿಎಚ್‌ಡಿ ಇಲ್ಲ, ಎಮ್‌ಎ ಇಲ್ಲ ಹಾಗೂ ಹೈಸ್ಕೂಲ್‌ ಕೂಡಾ ಓದಿಲ್ಲ," ಎಂದು ವಿಡಿಯೋದಲ್ಲಿ ಹೇಳಿದ್ದಾರೆ.

ಕಾಬೂಲ್‌ನಲ್ಲಿ ಪಾಕ್‌ ವಿರುದ್ದ ಪ್ರತಿಭಟನೆಗೆ ಮಹಿಳೆಯರು ಭಾಗಿ: ತಾಲಿಬಾನ್‌ನಿಂದ ಗಾಳಿಯಲ್ಲಿ ಗುಂಡುಕಾಬೂಲ್‌ನಲ್ಲಿ ಪಾಕ್‌ ವಿರುದ್ದ ಪ್ರತಿಭಟನೆಗೆ ಮಹಿಳೆಯರು ಭಾಗಿ: ತಾಲಿಬಾನ್‌ನಿಂದ ಗಾಳಿಯಲ್ಲಿ ಗುಂಡು

ಈ ವಿಡಿಯೋವವು ಈಗ ವೈರಲ್‌ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ. "ಈ ಮನುಷ್ಯ ಶಿಕ್ಷಣದ ಬಗ್ಗೆ ಯಾಕೆ ಮಾತನಾಡುತ್ತಿದ್ದಾರೆ," ಎಂದು ಟ್ವಿಟ್ಟರ್‌ನಲ್ಲಿ ನೆಟ್ಟಿಗರು ಪ್ರಶ್ನಿಸಿದ್ದಾರೆ. ಇನ್ನು ಮತ್ತೋರ್ವ ನೆಟ್ಟಿಗರು ತಾಲಿಬಾನ್‌ ಸರ್ಕಾರದ "ನೂತನ ಉನ್ನತ ಶಿಕ್ಷಣ ಸಚಿವರು ಉನ್ನತ ಶಿಕ್ಷಣ ಮೌಲ್ಯಯುತವಲ್ಲ ಎಂದು ಹೇಳಿದ್ದಾರೆ," ಎಂದು ವ್ಯಂಗ್ಯವಾಡಿದ್ದಾರೆ. "ಶಿಕ್ಷಣದ ಬಗ್ಗೆ ಹೀಗೆ ನಾಚಿಕೆಗೇಡಿನ ಹೇಳಿಕೆ ನೀಡುವವರು ಈ ಶಿಕ್ಷಣದ ಖಾತೆಯನ್ನು ಹೊಂದಿರುವುದು ಆಘಾತಕಾರಿ," ಎಂದು ಮತ್ತೋರ್ವ ನೆಟ್ಟಿಗರು ತಿಳಿಸಿದ್ದಾರೆ.

No PhD, Masters Degree Valuable: Talibans New Education Minister

ಮುಲ್ಲಾ ಮೊಹಮ್ಮದ್ ಹಸನ್ ಅಖುಂದ್ ನೇತೃತ್ವದ ತಾಲಿಬಾನ್‌ನ ಹೊಸ "ಮಧ್ಯಂತರ ಸರ್ಕಾರ" ದಲ್ಲಿ, ತಾಲಿಬಾನ್ ನಾಯಕತ್ವ ಮಂಡಳಿಯ ಮುಖ್ಯಸ್ಥ ಮೊಹಮ್ಮದ್ ಹಸನ್ ಹಂಗಾಮಿ ಪ್ರಧಾನಿಯಾಗಿ ಹೆಸರಿಸಲಾಗಿದೆ.

ವಿಶ್ವಸಂಸ್ಥೆಯಿಂದ ಹೆಸರಿಸಲ್ಪಟ್ಟ ಭಯೋತ್ಪಾದಕ ಸಿರಾಜುದ್ದೀನ್ ಹಕ್ಕಾನಿ ಮಹಿಳೆಯಿಲ್ಲದ 33 ಸದಸ್ಯರ ಕ್ಯಾಬಿನೆಟ್‌ನಲ್ಲಿ ಹೊಸ ಹಂಗಾಮಿ ಸಚಿವರಾಗಿದ್ದಾರೆ. "ನಾನು ಹೇಳಿದಂತೆ ಇಂದು, ತಾಲಿಬಾನ್‌ಗಳು ತಮ್ಮ ಸರ್ಕಾರವನ್ನು ಘೋಷಿಸಿದ್ದಾರೆ," ಎಂದು ಅಫ್ಘಾನಿಸ್ತಾನದ ರಾಯಭಾರಿ ಮತ್ತು ವಿಶ್ವಸಂಸ್ಥೆಯ ಖಾಯಂ ಪ್ರತಿನಿಧಿ ಗುಲಾಂ ಇಸಾಜೈ ಹೇಳಿದರು.

ಅಫ್ಘಾನಿಸ್ತಾನದಲ್ಲಿ 33 ಸದಸ್ಯರ ತಾಲಿಬಾನ್ ಸರ್ಕಾರ ರಚನೆ: ಪೂರ್ಣ ಪಟ್ಟಿಅಫ್ಘಾನಿಸ್ತಾನದಲ್ಲಿ 33 ಸದಸ್ಯರ ತಾಲಿಬಾನ್ ಸರ್ಕಾರ ರಚನೆ: ಪೂರ್ಣ ಪಟ್ಟಿ

ಅಫ್ಘಾನಿಸ್ತಾನವನ್ನು ಸಂಪೂರ್ಣವಾಗಿ ತನ್ನ ವಶಕ್ಕೆ ಪಡೆದುಕೊಂಡ ಒಂದು ತಿಂಗಳು ಪೂರ್ಣವಾಗುವ ಮುನ್ನಲೇ ತಾಲಿಬಾನ್‌ ಅಫ್ಘಾನಿಸ್ತಾನದಲ್ಲಿ ಹೊಸ ಸಂಪುಟವನ್ನು ರಚನೆ ಮಾಡಿದೆ. "ಇನ್ನು ಭವಿಷ್ಯದಲ್ಲಿ ಎಲ್ಲಾ ಅಫ್ಘಾನಿಸ್ತಾನದ ನಿರ್ಧಾರಗಳು ಪವಿತ್ರ ಶರಿಯಾದ ನಿಯಮದಂತೆ ಆಗಲಿದೆ," ಎಂದು ತಾಲಿಬಾನ್ ಸರ್ವೋಚ್ಚ ನಾಯಕ ಹೈಬತುಲ್ಲಾ ಅಖುಂಡಜಾದ ಈ ಹಿಂದೆಯೇ ತಿಳಿಸಿದ್ದಾರೆ.

ಅಫ್ಘಾನಿಸ್ತಾನದಲ್ಲಿ ನೂತನ ತಾಲಿಬಾನ್ ಸರ್ಕಾರದ ಮುಖ್ಯಸ್ಥರನ್ನಾಗಿ ಮುಲ್ಲಾ ಮೊಹಮ್ಮದ್ ಹಸನ್ ಅಖುಂದ್‌ ಅವರನ್ನು ನೇಮಕ ಮಾಡಲಾಗಿದೆ. ತಾಲಿಬಾನ್ ಸಂಸ್ಥಾಪಕ ಮತ್ತು ದಿವಂಗತ ಸರ್ವೋಚ್ಚ ನಾಯಕ ಮುಲ್ಲಾ ಒಮರ್ ಅವರ ಪುತ್ರ ಮುಲ್ಲಾ ಯಾಕೂಬ್ ಅವರನ್ನು ರಕ್ಷಣಾ ಸಚಿವರನ್ನಾಗಿ ನೇಮಿಸಲಾಗಿದೆ. ಹಕ್ಕಾನಿ ನೆಟ್ವರ್ಕ್ ನಾಯಕ ಸಿರಾಜುದ್ದೀನ್ ಹಕ್ಕಾನಿಗೆ ಆಂತರಿಕ ಸಚಿವ ಸ್ಥಾನ ನೀಡಲಾಗಿದೆ ಎಂದು ಮುಜಾಹಿದ್ ಹೇಳಿದ್ದಾರೆ.

ಈ ನಡುವೆ ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ ವಿರುದ್ದದ ಆಕ್ರೋಶವೂ ಕೂಡಾ ಅಧಿಕವಾಗಿದೆ. ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ಪಾಕಿಸ್ತಾನದ ವಿರುದ್ದ ಜನರು ಪ್ರತಿಭಟನೆ ನಡೆಸಿದ್ದಾರೆ. ಈ ಪ್ರತಿಭಟನೆಯಲ್ಲಿ ಮಹಿಳೆಯರು ಕೂಡಾ ಭಾಗಿಯಾಗಿದ್ದರು. ಅಫ್ಘಾನಿಸ್ತಾನದಲ್ಲಿ ಪಾಕಿಸ್ತಾನದ ರಾಯಭಾರಿ ಕಚೇರಿಯ ಮುಂದೆ ಜನರು ಪ್ರತಿಭಟನೆಯನ್ನು ನಡೆಸಿದ್ದು, ಜನರನ್ನು ಚದುರಿಸಲು ತಾಲಿಬಾನ್‌ ಗಾಳಿಯಲ್ಲಿ ಗುಂಡು ಹಾರಿಸಿದೆ.

ಈ ನಡುವೆ ತಾಲಿಬಾನ್‌ ವಕ್ತಾರ ಜವೀದುಲ್ಲಾ ಮುಜಾಹಿದ್‌ ಕಠಿಣ ಎಚ್ಚರಿಕೆಯನ್ನು ನೀಡಿದ್ದಾರೆ. "ಬಂಡಾಯವನ್ನು ಹುಟ್ಟು ಹಾಕಲು ಯಾರದರೂ ಪ್ರಯತ್ನ ಮಾಡಿದರೆ ಅವರು ಗಂಭೀರ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಬಂಡಾಯ ಮಾಡುವ ಯತ್ನವು ಸಹಿಸಲಾಗದು. ನಾವು ಬೇರೆ ಯಾರಿಗೂ ಅವಕಾಶ ನೀಡಲಾರೆವು," ಎಂದು ಎಚ್ಚರಿಕೆ ನೀಡಿದ್ದಾರೆ. ತಾಲಿಬಾನ್‌ 1996 ರಿಂದ 2001 ರವರೆಗೆ ತಾಲಿಬಾನ್‌ ಅಫ್ಘಾನಿಸ್ತಾನದಲ್ಲಿ ಆಡಳಿತವನ್ನು ನಡೆಸಿದ್ದು, ಈ ಸಂದರ್ಭದಲ್ಲಿ ಮಹಿಳಾ ಸ್ವಾತಂತ್ಯ್ರವನ್ನು ಸಂಪೂರ್ಣವಾಗಿ ಮೊಟಕುಗೊಳಿಸಲಾಗಿತ್ತು. ಆದರೆ ಈಗ ಕೊಂಚ ಬದಲಾವಣೆಯನ್ನು ತಾಲಿಬಾನ್‌ ಮಾಡಿಕೊಂಡಿದೆ. ಆದರೆ ಮಹಿಳೆಯರು ಈ ಹಿಂದೆ ಇದ್ದ ತಮ್ಮ ಹಕ್ಕುಗಳನ್ನು ಕಳೆದುಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ.

(ಒನ್‌ ಇಂಡಿಯಾ ಸುದ್ದಿ)

English summary
Taliban's New Education Minister Sheikh Molvi Noorullah Munir said No PhD, Master's Degree Valuable.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X