ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುದ್ಧದ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಸರ್ವಾಧಿಕಾರಿ ಕಿಮ್

By ಅನಿಕೇತ್
|
Google Oneindia Kannada News

ಉತ್ತರ ಕೊರಿಯಾದ ಸರ್ವಾಧಿಕಾರಿ, ಅಮೆರಿಕದ ಪರಮ ಶತ್ರು ಕಿಮ್ ಜೊಂಗ್ ಉನ್ ಮತ್ತೊಮ್ಮೆ ಯುದ್ಧದ ಬಗ್ಗೆ ಮಾತನಾಡಿದ್ದಾನೆ. ಆದರೆ ಕಿಮ್ ವರಸೆ ಈಗ ಬದಲಾಗಿದೆ. ಇಷ್ಟು ದಿನ ಯುದ್ಧ ಅಂದರೆ ಹಪಹಪಿಸುತ್ತಿದ್ದ ಕಿಮ್, ಈ ಬಾರಿ ಮಾತ್ರ ಯುದ್ಧ ನಡೆಯಲ್ಲ ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದಾನೆ.

Recommended Video

India and Nepal border dispute explained | Oneindia Kannada

ಭೂಮಿ ಮೇಲೆ ಇನ್ನುಮುಂದೆ ಯುದ್ಧಗಳು ನಡೆಯೋದಿಲ್ಲ ಅಂತಾ ಸ್ವತಃ ಕಿಮ್ ಘೋಷಿಸಿದ್ದಾನೆ. 1950-53ರ ಕೊರಿಯಾ ಯುದ್ಧ ಅಂತ್ಯಗೊಂಡು 67 ವರ್ಷ ಕಳೆದಿದ್ದು, ವಾರ್ಷಿಕೋತ್ಸದಲ್ಲಿ ಕಿಮ್ ಮಾತನಾಡಿದ್ದ. ಯುದ್ಧದಲ್ಲಿ ಪಾಲ್ಗೊಂಡಿದ್ದ ಮಾಜಿ ಯೋಧರನ್ನು ಅಭಿನಂದಿಸುವಾಗ ಸರ್ವಾಧಿಕಾರಿ ಕಿಮ್ ಇನ್ಮುಂದೆ ಯುದ್ಧ ನಡೆಯಲ್ಲ ಅಂತಾ ಹೇಳಿದ್ದಾನೆ.

ಕಿಮ್ ಜೊಂಗ್ ಹಿಂದಿನ ಶಕ್ತಿ ಸೋದರಿ ಯೋ ಜಂಗ್!ಕಿಮ್ ಜೊಂಗ್ ಹಿಂದಿನ ಶಕ್ತಿ ಸೋದರಿ ಯೋ ಜಂಗ್!

ಆದರೆ ಕಿಮ್ ನೀಡಿರುವ ಹೇಳಿಕೆ ಜಗತ್ತಿನಲ್ಲಿ ಸಂಚಲನ ಮೂಡಿಸಿದೆ. ಮಾತೆತ್ತಿದರೆ ಸಾಕು ಅಣ್ವಸ್ತ್ರಗಳನ್ನು ಬಳಸುವ ಬೆದರಿಕೆ ಹಾಕುತ್ತಿದ್ದ ಕಿಮ್, ಈಗ ಯಾಕೆ ಇಷ್ಟು ಬದಲಾಗಿದ್ದಾನೆ ಅಂತಾ ಕಿಮ್ ವಿರೋಧಿ ದೇಶಗಳು ಹುಬ್ಬೇರಿಸಿವೆ. ಅದರಲ್ಲೂ ಅಮೆರಿಕ ಈ ಸುದ್ದಿ ಕೇಳಿ ಶಾಕ್‌ಗೆ ಒಳಗಾಗಿದೆ. ಅಷ್ಟಕ್ಕೂ ಕಿಮ್ ಹೇಳಿಕೆ ಹಿಂದಿನ ಉದ್ದೇಶವಾದರೂ ಏನು ಅನ್ನೋದರ ಸಂಪೂರ್ಣ ಮಾಹಿತಿ ಮುಂದೆ ಇದೆ ನೋಡಿ.

ಆರ್ಥಿಕ ಹೊಡೆತಕ್ಕೆ ಬೆಚ್ಚಿಬಿದ್ಧನಾ ಡಿಕ್ಟೇಟರ್..?

ಆರ್ಥಿಕ ಹೊಡೆತಕ್ಕೆ ಬೆಚ್ಚಿಬಿದ್ಧನಾ ಡಿಕ್ಟೇಟರ್..?

ಹೌದು ಇಡೀ ಪ್ರಪಂಚಕ್ಕೆ ಕೊರೊನಾವೈರಸ್ ಎಂಬ ಮಹಾಮಾರಿ ಶಾಕ್ ಕೊಟ್ಟಿದೆ. ಬಲಾಢ್ಯ ದೇಶಗಳೇ ಆರ್ಥಿಕವಾಗಿ ದಿವಾಳಿಯಾಗುವ ಹಂತ ತಲುಪಿವೆ. ಇಂತಹ ಹೊತ್ತಲ್ಲಿ ಚೀನಾ ಬೆಂಬಲದೊಂದಿಗೆ ತನ್ನ ದೇಶ ಕಟ್ಟಿಕೊಂಡಿರುವ ಉತ್ತರ ಕೊರಿಯಾ ಸ್ಥಿತಿ ಹೇಗಿರಬೇಡ ಹೇಳಿ..? ಸದ್ಯಕ್ಕೆ ಉತ್ತರ ಕೊರಿಯಾ ಆರ್ಥಿಕ ಮುಗ್ಗಟ್ಟಿನಿಂದ ತತ್ತರಿಸಿ ಹೋಗಿದೆ. ಉ. ಕೊರಿಯಾ ಸ್ನೇಹಿತ ಚೀನಾ ಕೂಡ ಅಂದುಕೊಂಡಷ್ಟು ಸಹಾಯ ಮಾಡುತ್ತಿಲ್ಲ. ಇಷ್ಟೆಲ್ಲದರ ಮಧ್ಯೆ ಅಮೆರಿಕ ಹೇರಿರುವ ಆರ್ಥಿಕ ದಿಗ್ಬಂಧನ ಬೇರೆ. ಇದೆಲ್ಲದರ ಪರಿಣಾಮ ಕಿಮ್ ದೇಶ ತತ್ತರಿಸಿದೆ. ಇದನ್ನೆಲ್ಲಾ ಸರಿಪಡಿಸಲು ಹಾಗೂ ಅಮೆರಿಕ ಸೇರಿದಂತೆ ತನ್ನ ಶತ್ರು ರಾಷ್ಟ್ರಗಳನ್ನು ಸಮಾಧಾನ ಮಾಡಲು ಕಿಮ್ ಈ ರೀತಿ ಹೇಳಿಕೆ ನೀಡುತ್ತಿದ್ದಾನಾ ಎಂಬ ಅನುಮಾನ ಮೂಡಿದೆ.

ತನ್ನದೇ ಶೈಲಿಯಲ್ಲಿ ಶತ್ರುಗಳಿಗೆ ಪ್ರತ್ಯುತ್ತರ..!

ತನ್ನದೇ ಶೈಲಿಯಲ್ಲಿ ಶತ್ರುಗಳಿಗೆ ಪ್ರತ್ಯುತ್ತರ..!

ಅಷ್ಟಕ್ಕೂ ಸರ್ವಾಧಿಕಾರಿ ಕಿಮ್ ಯುದ್ಧ ನಡೆಯೋದಿಲ್ಲ ಎಂಬ ಹೇಳಿಕೆ ನೀಡಿದ್ದರು ಕೂಡ ತನ್ನ ದೇಶದಲ್ಲಿರುವ ಪರಮಾಣು ಶಸ್ತ್ರಾಸ್ತ್ರ ನಾಶ ಮಾಡುವ ಬಗ್ಗೆ ಮಾತನಾಡಿಲ್ಲ. ಬದಲಾಗಿ ಅಣ್ವಸ್ತ್ರಗಳ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾನೆ. ಅಲ್ಲದೆ ನಮ್ಮ ಪರಮಾಣು ಶಸ್ತ್ರಾಸ್ತ್ರಗಳು ಉತ್ತರ ಕೊರಿಯಾದ ರಕ್ಷಣೆಗೆ ಹಾಗೂ ಶತ್ರುಗಳ ದಾಳಿಯನ್ನು ಹಿಮ್ಮೆಟ್ಟಿಸಲು ಶಕ್ತವಾಗಿವೆ ಎಂದಿದ್ದಾನೆ. ಈ ಮೂಲಕ ಉತ್ತರ ಕೊರಿಯಾ ಬಳಿ ಅಣ್ವಸ್ತ್ರ ಇರುವುದರಿಂದ ಯುದ್ಧದ ಮಾತೇ ಇಲ್ಲ ಅಂತಾ ಶತೃ ರಾಷ್ಟ್ರಗಳಿಗೆ ತಿರುಗೇಟು ನೀಡಿದ್ದಾನೆ. ಕಿಮ್ ಹೇಳಿಕೆ ಉಲ್ಲೇಖಿಸಿ ಉ. ಕೊರಿಯಾದ ‘ಕೆಸಿಎನ್ಎ' (Korean Central News Agency) ವರದಿ ಮಾಡಿದೆ.

ವಿಶ್ವದ ಭಯಾನಕ ದೇಶಗಳ ಪಟ್ಟಿಯಲ್ಲಿ ಉತ್ತರ ಕೊರಿಯಾವಿಶ್ವದ ಭಯಾನಕ ದೇಶಗಳ ಪಟ್ಟಿಯಲ್ಲಿ ಉತ್ತರ ಕೊರಿಯಾ

ನಮ್ಮನ್ನು ಮುಟ್ಟಿದರೆ ಗೊತ್ತಲ್ವಾ..?

ನಮ್ಮನ್ನು ಮುಟ್ಟಿದರೆ ಗೊತ್ತಲ್ವಾ..?

ತನ್ನ ಭಾಷಣದ ಉದ್ದಕ್ಕೂ ಯುದ್ಧ ನಡೆಯಲ್ಲ, ಯುದ್ಧ ನಡೆಯಲ್ಲ ಅಂತಾ ಹೇಳುತ್ತಲೇ ಉತ್ತರ ಕೊರಿಯಾದ ಶತೃಗಳಿಗೆ ಖಡಕ್ ಸಂದೇಶ ನೀಡಿದ್ದಾನೆ ಕಿಮ್. ಮತ್ತೊಂದು ಸಶಸ್ತ್ರ ಸಂಘರ್ಷ ತಡೆಗೆ ಹಾಗೂ ಬಾಹ್ಯ ಶಕ್ತಿಗಳ ವಿರುದ್ಧ ಗೆಲುವು ಸಾಧಿಸಲು ಉತ್ತರ ಕೊರಿಯಾ ಪರಮಾಣು ಶಸ್ತ್ರಾಸ್ತ್ರ ಅಭಿವೃದ್ಧಿಪಡಿಸಿದೆ. ಸಾಮ್ರಾಜ್ಯಶಾಹಿಗಳು ಸೇರಿದಂತೆ ಉತ್ತರ ಕೊರಿಯಾ ಶತ್ರುಗಳಿಂದ ಎದುರಾಗುವ ಮಿಲಿಟರಿ ಬೆದರಿಕೆ ಎದುರಿಸಲು ಸಮರ್ಥರಾಗಿದ್ದೇವೆ ಎಂದಿದ್ದಾನೆ. ನಮ್ಮ ವಿಶ್ವಾಸಾರ್ಹ ಪರಮಾಣು ಶಕ್ತಿಗೆ ಅಭಿನಂಧನೆ ಸಲ್ಲಿಸುತ್ತೇನೆ. ಆದರೆ ಭವಿಷ್ಯದಲ್ಲಿ ಯುದ್ಧವಿರುವುದಿಲ್ಲ. ನಮ್ಮ ದೇಶದ ಸುರಕ್ಷತೆ ಮತ್ತು ಭವಿಷ್ಯ ಶಾಶ್ವತವಾಗಿ ಖಾತರಿಯಾಗಿದೆ ಅಂತಾ ತನ್ನ ಬೆನ್ನನ್ನು ತಾನೇ ತಟ್ಟಿಕೊಂಡಿದ್ದಾನೆ.

ಅಮೆರಿಕ v/s ಉ. ಕೊರಿಯಾ ನ್ಯೂಕ್ಲಿಯರ್ ಫೈಟ್

ಅಮೆರಿಕ v/s ಉ. ಕೊರಿಯಾ ನ್ಯೂಕ್ಲಿಯರ್ ಫೈಟ್

ಅಷ್ಟಕ್ಕೂ ಕಿಮ್ ಜೊಂಗ್ ಉನ್ ಹೇಳಿಕೆಯಲ್ಲಿ ಹಲವು ಮಾಹಿತಿಗಳು ಅಡಗಿವೆ. ಉತ್ತರ ಕೊರಿಯಾ ಅಣ್ವಸ್ತ್ರ ಪರೀಕ್ಷೆಗೆ ಇಳಿಯುತ್ತಿದ್ದಂತೆ ಅಮೆರಿಕ ತಿರುಗಿಬಿದ್ದಿತ್ತು. ಹತ್ತಾರು ವರ್ಷಗಳಿಂದ ಈ ಕಿರಿಕ್ ನಡೆಯುತ್ತಲೇ ಬಂದಿದೆ. ಆದರೆ ಕೆಲ ವರ್ಷಗಳಿಂದ ಸಂಬಂಧ ಒಂದಷ್ಟು ಸುಧಾರಿಸುವ ಮುನ್ಸೂಚನೆ ಸಿಕ್ಕಿತ್ತು. ಟ್ರಂಪ್ ಹಾಗೂ ಕಿಮ್ ಭೇಟಿ ನಂತರ ಇಬ್ಬರ ಸಂಬಂಧ ಸುಧಾರಿಸಲಿದೆ ಅಂತಾ ಹೇಳಲಾಗಿತ್ತು. ಆದರೆ ಮತ್ತೆ ಎರಡೂ ರಾಷ್ಟ್ರಗಳ ಮಧ್ಯೆ ಸಂಘರ್ಷ ಶುರುವಾಗಿದೆ. ಉ. ಕೊರಿಯಾ ವಿರುದ್ಧ ವಿಧಿಸಿರುವ ಆರ್ಥಿಕ ನಿರ್ಬಂಧ ತೆರವು ಮಾಡಲು ಅಮೆರಿಕ ಷರತ್ತುಗಳನ್ನು ಹಾಕಿತ್ತು. ಉ. ಕೊರಿಯಾ ಪರಮಾಣು ಮತ್ತು ಕ್ಷಿಪಣಿ ಯೋಜನೆಗಳನ್ನ ಕೈಬಿಡಬೇಕು ಅಂತಾ ಅಮೆರಿಕ ತಾಕೀತು ಮಾಡಿತ್ತು. ಇದರಿಂದ ಮತ್ತೆ ಕಿಮ್ ರೊಚ್ಚಿಗೆದ್ದು ನ್ಯೂಕ್ಲಿಯರ್ ಪ್ರಾಜೆಕ್ಟ್‌ಗಳನ್ನ ರೀ ಸ್ಟಾರ್ಟ್ ಮಾಡಿದ್ದ. ಹೀಗಾಗಿ ಎರಡೂ ದೇಶಗಳ ನಡುವಿನ ಮಾತುಕತೆ ಸದ್ಯಕ್ಕೆ ಸ್ಥಗಿತಗೊಂಡಿದೆ. ಇದರ ಬೆನ್ನಲ್ಲೇ ಕಿಮ್‌ ಈ ರೀತಿ ಹೇಳಿಕೆ ನೀಡಿದ್ದಾನೆ.

ಅಚ್ಚರಿ ಮೂಡಿಸಿದ ಕಿಮ್ ಜಾಂಗ್ ಉನ್- ಡೊನಾಲ್ಡ್ ಟ್ರಂಪ್ ಪತ್ರ ವ್ಯವಹಾರಅಚ್ಚರಿ ಮೂಡಿಸಿದ ಕಿಮ್ ಜಾಂಗ್ ಉನ್- ಡೊನಾಲ್ಡ್ ಟ್ರಂಪ್ ಪತ್ರ ವ್ಯವಹಾರ

English summary
North Korean Dictator Kim-Jong-Un Once Again Speaks About War. But This Time He Said ‘No More War On This Earth’. Kim Also Said That Nuclear Weapons Would Allow North Korea To Defend Itself.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X