ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆನ್ನಿಗೆ ಚೂರಿ ಹಾಕಿದ ಪಾಕಿಸ್ತಾನದ ವಿರುದ್ಧ ಟ್ರಂಪ್ ಗರಂ

By Sachhidananda Acharya
|
Google Oneindia Kannada News

ವಾಷಿಂಗ್ಟನ್, ಜನವರಿ 1: ಪಾಕಿಸ್ತಾನ ಉಗ್ರರ ಪಾಲಿನ ಸ್ವರ್ಗ ಎಂದು ಮತ್ತೊಮ್ಮೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಿಡಿಕಾರಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಟ್ರಂಪ್, "ಅಮೆರಿಕಾ ಮೂರ್ಖನಾಗಿ ಕಳೆದ 15 ವರ್ಷಗಳಲ್ಲಿ ಪಾಕಿಸ್ತಾನಕ್ಕೆ 33 ಬಿಲಿಯನ್ ಡಾಲರ್ ಸೇನಾ ನೆರವು ನೀಡಿತು. ಇದಕ್ಕೆ ಪ್ರತಿಯಾಗಿ ನಮ್ಮ ನಾಯಕರನ್ನು ಮೂರ್ಖರು ಎಂದುಕೊಂಡು ಪಾಕಿಸ್ತಾನ ನಮಗೆ ನೀಡಿದ್ದು ಸುಳ್ಳು ಮತ್ತು ಮೋಸ ಮಾತ್ರ. ನಾವು ಅಫ್ಘಾನಿಸ್ತಾನದಲ್ಲಿ ಬೇಟೆಯಾಡುತ್ತಿರುವ ಉಗ್ರರಿಗೆ ಪಾಕಿಸ್ತಾನ ಸುರಕ್ಷಿತ ಸ್ವರ್ಗಗಳನ್ನು ದಯಾಪಾಲಿಸಿದೆ. ಇನ್ನು ಇದು ಸಾಧ್ಯವಿಲ್ಲ," ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

No more military aid: Trump punishes Pakistan

ಪಾಕಿಸ್ತಾನದಲ್ಲಿ ವಿಶ್ವಸಂಸ್ಥೆ ಘೋಷಣೆ ಮಾಡಿರುವ ಉಗ್ರ ಹಫೀಸ್ ಸಯೀದ್ 'ಮಿಲ್ಲಿ ಮುಸ್ಲಿಂ ಲೀಗ್' ಪಕ್ಷ ಸ್ಥಾಪನೆ ಮಾಡಿದ್ದು, 2018ರ ಚುನಾವಣೆಯಲ್ಲಿ ಸ್ಪರ್ಧಿಸಲು ಇಚ್ಛಿಸಿದ್ದಾನೆ. ಈ ವಿಷಯ ಹೊರ ಬೀಳುತ್ತಿದ್ದಂತೆ ಟ್ರಂಪ್ ಟ್ವೀಟ್ ನಲ್ಲಿ ಗುಡುಗಿದ್ದಾರೆ.

26/11 ಮುಂಬೈ ದಾಳಿಯಲ್ಲಿ ಹಫೀಸ್ ಸಯೀದ್ ವಿರುದ್ಧ ಸರಿಯಾದ ಸಾಕ್ಷ್ಯಗಳಿಲ್ಲ ಎಂಬ ನೆಪವೊಡ್ಡಿ ಪಾಕಿಸ್ತಾನದ ನ್ಯಾಯಾಲಯ ಇತ್ತೀಚೆಗೆ ಆತನನ್ನು ಗೃಹ ಬಂಧನದಿಂದ ಮುಕ್ತಗೊಳಿಸಿತ್ತು.

ಇದೀಗ ಪಾಕಿಸ್ತಾನಕ್ಕೆ ನೀಡುವ ಸೇನಾ ನೆರವು ಸ್ಥಗಿತಗೊಳಿಸುವುದಾಗಿ ಟ್ರಂಪ್ ಗುಡುಗಿದ್ದಾರೆ.

ಹಾಗೆ ನೋಡಿದರೆ ಇತ್ತೀಚೆಗೆ ಅಂದರೆ ಡಿಸೆಂಬರ್ 30ರಂದು ಕೂಡಾ ಉಗ್ರರ ನಿಗ್ರಹಕ್ಕೆ ಪಾಕಿಸ್ತಾನಕ್ಕೆ ಅಮೆರಿಕಾ ಸೇನಾ ನೆರವು ನೀಡಲಿದೆ ಎಂದು ವರದಿಯಾಗಿತ್ತು.

English summary
United States President Donald Trump has, yet again, castigated Pakistan for providing safe havens to terrorists. Trump, in a strongly-worded tweet, said America had been 'foolishly' providing military aid to Pakistan for 15 years, but in return, it has only received 'lies and deceit.'
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X