ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈವೆರೆಗೆ ಓಮಿಕ್ರಾನ್‌ನಿಂದ ಸಾವು ವರದಿಯಾಗಿಲ್ಲ: ವಿಶ್ವ ಆರೋಗ್ಯ ಸಂಸ್ಥೆ

|
Google Oneindia Kannada News

ವಾಷಿಂಗ್ಟನ್‌, ಡಿಸೆಂಬರ್‌ 05: "ಕೊರೊನಾ ವೈರಸ್‌ನ ಹೊಸ ರೂಪಾಂತರ ಓಮಿಕ್ರಾನ್‌ನಿಂದಾಗಿ ಸಾವು ಸಂಭವಿಸಿರುವ ಬಗ್ಗೆ ಯಾವುದೇ ವರದಿಗಳು ಆಗಿಲ್ಲ," ಎಂದು ವಿಶ್ವ ಆರೋಗ್ಯ ಸಂಸ್ಥೆಯು ಹೇಳಿದ್ದು, "ಆದರೆ ಈ ಕೋವಿಡ್‌ನ ಹೊಸ ರೂಪಾಂತರ ಓಮಿಕ್ರಾನ್‌ ಮುಂಬರುವ ತಿಂಗಳುಗಳಲ್ಲಿ ಯುರೋಪ್‌ನ ಅರ್ಧಕ್ಕಿಂತ ಹೆಚ್ಚು ಕೋವಿಡ್ ಪ್ರಕರಣಗಳಿಗೆ ಕಾರಣವಾಗಬಹುದು," ಎಂಬ ಎಚ್ಚರಿಕೆಯನ್ನು ಇದೇ ಸಂದರ್ಭದಲ್ಲಿ ನೀಡಿದೆ.

"ಈ ಓಮಿಕ್ರಾನ್‌ ಎಷ್ಟು ಸಾಂಕ್ರಾಮಿಕವಾಗಿದೆ, ಹೆಚ್ಚು ತೀವ್ರವಾದ ಅನಾರೋಗ್ಯವನ್ನು ಉಂಟುಮಾಡುತ್ತದೆಯೇ ಮತ್ತು ಅದರ ವಿರುದ್ಧ ಚಿಕಿತ್ಸೆಗಳು ಮತ್ತು ಲಸಿಕೆಗಳು ಎಷ್ಟು ಪರಿಣಾಮಕಾರಿ ಎಂದು ನಿರ್ಧಾರ ಮಾಡಲು ಇನ್ನು ಕೆಲವು ವಾರ ಬೇಕಾಗಬಹುದು," ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಹಾಗೆಯೇ "ಈ ಓಮಿಕ್ರಾನ್‌ ಪ್ರರಕಣವು ಈವರೆಗೆ ಒಟ್ಟು 38 ದೇಶಗಳಲ್ಲಿ ಕಂಡು ಬಂದಿದೆ. ಆದರೆ ಈವರೆಗೂ ಯಾವುದೇ ಸಾವು ಪ್ರಕರಣಗಳು ವರದಿ ಆಗಿಲ್ಲ," ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಓಮಿಕ್ರಾನ್ ಭೀತಿ; ಅಮೆರಿಕ ಪ್ರಯಾಣಕ್ಕೆ ಹೊಸ ನಿಯಮ ಓಮಿಕ್ರಾನ್ ಭೀತಿ; ಅಮೆರಿಕ ಪ್ರಯಾಣಕ್ಕೆ ಹೊಸ ನಿಯಮ

ಕೊರೊನಾ ವೈರಸ್‌ ಸೋಂಕಿನ ಹೊಡೆತದಿಂದ ಕೊಂಚ ಚೇತರಿಸಿಕೊಳ್ಳುತ್ತಿರುವಾಗ ಈಗ ಓಮಿಕ್ರಾನ್‌ ಕಾಣಿಸಿಕೊಂಡಿರುವ ವಿಶ್ವದ ಹಲವಾರು ದೇಶಗಳಿಗೆ ತಲೆ ಬಿಸಿಯನ್ನು ಉಂಟು ಮಾಡಿದೆ. ಈ ಓಮಿಕ್ರಾನ್‌ ರೂಪಾಂತರವು ಜಾಗತಿಕ ಆರ್ಥಿಕ ಚೇತರಿಕೆಗೆ ಹಾನಿಯುಂಟುಮಾಡುವ ಎಚ್ಚರಿಕೆಗಳ ಮಧ್ಯೆ ವಿಶ್ವದ ಎಲ್ಲಾ ರಾಷ್ಟ್ರಗಳು ಓಮಿಕ್ರಾನ್‌ ತಡೆಗೆ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.

No deaths from Omicron yet Reported says WHO

ದಕ್ಷಿಣ ಆಫ್ರಿಕಾದಲ್ಲಿ ಓಮಿಕ್ರಾ‌ನ್‌ ಸೋಂಕು ಕಾಣಿಸಿಕೊಂಡ ಬಳಿಕ, ಯುಎಸ್ ಮತ್ತು ಆಸ್ಟ್ರೇಲಿಯಾದಲ್ಲಿಯೂ ಓಮಿಕ್ರಾನ್‌ ಸ್ಥಳೀಯವಾಗಿ ಹರಡುತ್ತಿದೆ. ನಾರ್ವೆಯಲ್ಲಿ ಕ್ರಿಸ್‌ಮಸ್ ಪಾರ್ಟಿ ನಡೆದ ಬಳಿಕ ಓಮಿಕ್ರಾನ್‌ ಕಾಣಿಸಿಕೊಂಡಿದ್ದು ಈಗ ಸ್ಥಳೀಯವಾಗಿ ಓಮಿಕ್ರಾನ್‌ ಪ್ರಕರಣಗಳ ಸಂಖ್ಯೆಯು 13 ಕ್ಕೆ ಏರಿಕೆ ಕಂಡಿದೆ. ಈ ನಡುವೆ ವಿಶ್ವ ಆರೋಗ್ಯ ಸಂಸ್ಥೆಯು ಈ ಓಮಿಕ್ರಾನ್‌ ಯಾವ ರೀತಿಯಲ್ಲಿ ಹರಡುತ್ತದೆ ಹಾಗೂ ಯಾವ ಚಿಕಿತ್ಸೆ ಸೂಕ್ತ ಎಂದು ತಿಳಿಸಲು ವಾರಗಳು ಬೇಕಾಗುತ್ತದೆ ಎಂದು ಹೇಳಿದೆ. ಆದರೆ ಕೊರೊನಾ ವೈರಸ್‌ ಸೋಂಕಿನ ವಿರುದ್ಧ ಲಸಿಕೆಯನ್ನು ನೀಡುವ ಕಾರ್ಯಕ್ರಮವನ್ನು ವೇಗಗೊಳಿಸಿ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಹೇಳಿದೆ.

ದೆಹಲಿಯಲ್ಲಿ ಮೊದಲ ಓಮಿಕ್ರಾನ್‌ ದೃಢ: ದೇಶದ ಐದನೇ ಪ್ರಕರಣದೆಹಲಿಯಲ್ಲಿ ಮೊದಲ ಓಮಿಕ್ರಾನ್‌ ದೃಢ: ದೇಶದ ಐದನೇ ಪ್ರಕರಣ

"ಓಮಿಕ್ರಾನ್‌ನ ಯಾವುದೇ ಸಾವು ಪ್ರಕರಣಗಳು ಈವರೆಗೂ ವರದಿ ಆಗಿಲ್ಲ ಎಂದು ಹೇಳಿರುವ ವಿಶ್ವ ಆರೋಗ್ಯ ಸಂಸ್ಥೆಯು ಓಮಿಕ್ರಾನ್‌ ಬಗ್ಗೆ ಸರಿಯಾದ ಮಾಹಿತಿ ಲಭಿಸುವವರೆಗೂ ಅತೀ ಜಾಗರೂಕರಾಗಿರಲು ಹೇಳಿದೆ. ದಕ್ಷಿಣ ಆಫ್ರಿಕಾದ ಸಂಶೋಧಕರ ಪ್ರಾಥಮಿಕ ಅಧ್ಯಯನದ ಪ್ರಕಾರ, ನವೆಂಬರ್ 24 ರಂದು ಮೊದಲ ಬಾರಿಗೆ ವರದಿಯಾದ ಹೊಸ ರೂಪಾಂತರ ಓಮಿಕ್ರಾನ್‌, ಡೆಲ್ಟಾ ಅಥವಾ ಬೀಟಾ ತಳಿಗಳಿಗೆ ಹೋಲಿಸಿದರೆ ಸೋಂಕನ್ನು ಉಂಟು ಮಾಡುವ ಸಾಧ್ಯತೆ ಮೂರು ಪಟ್ಟು ಅಧಿಕವಾಗಿದೆ ಎಂದು ಸೂಚಿಸುತ್ತದೆ.

ದಕ್ಷಿಣ ಆಫ್ರಿಕಾದಲ್ಲಿ ಓಮಿಕ್ರಾನ್‌ ಏರಿಕೆ

Recommended Video

Omicron Alert : ಫೋನ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾದ ಸೌತ್ ಆಫ್ರಿಕಾದ‌ 10 ಮಂದಿ | Oneindia Kannada

ದಕ್ಷಿಣ ಆಫ್ರಿಕಾದಲ್ಲಿ ಓಮಿಕ್ರಾನ್ ರೂಪಾಂತರಿ ಹೆಚ್ಚಳವಾಗಿದ್ದು, ಮಕ್ಕಳ ಆರೋಗ್ಯದ ಚಿಂತೆ ಕಾಡುತ್ತಿದೆ ಎಂದು ವರದಿಯು ಉಲ್ಲೇಖ ಮಾಡಿದೆ. ಕೋವಿಡ್ 3ನೇ ಅಲೆಯ ಸಂದರ್ಭದಲ್ಲಿ ಓಮಿಕ್ರಾನ್ ರೂಪಾಂತರಿ ಕಂಡುಬಂದಿದ್ದು ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತಿರುವುದು ದಕ್ಷಿಣ ಆಫ್ರಿಕಾ ತಜ್ಞರಲ್ಲಿ ಆತಂಕವನ್ನುಂಟುಮಾಡಿದೆ. ನಿನ್ನೆ ಒಂದೇ ದಿನ ದೇಶದಲ್ಲಿ 16 ಸಾವಿರದ 55 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು 25 ಮಂದಿ ಮೃತಪಟ್ಟಿದ್ದಾರೆ. ಆದರೆ ಓಮಿಕ್ರಾನ್‌ನಿಂದ ಸಾವು ಅಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯು ದೃಢಪಡಿಸಿದೆ. ಹಲವು ದೇಶಗಳಲ್ಲಿ ಇದು ಕೋವಿಡ್ ನಾಲ್ಕನೇ ಅಲೆಯ ಆರಂಭವಾಗಿದ್ದು ವಿಶೇಷವಾಗಿ ಮಕ್ಕಳಲ್ಲಿ ಸೇರಿದಂತೆ ಎಲ್ಲಾ ವಯೋಮಾನದವರಲ್ಲಿ ಬೇಗವಾಗಿ ಹರಡುತ್ತಿದೆ ಎಂದು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಕಮ್ಯುನಿಕಬಲ್ ಡಿಸೀಸ್ (NICD)ಯ ಡಾ ವಾಸಿಲಾ ಜಸ್ಸತ್ ಹೇಳಿದ್ದಾರೆ.

English summary
No deaths from Omicron yet Reported says WHO.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X