ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮ್ಯಾನ್ಮಾರ್ ಸೇನಾಪಡೆಗೆ ಯಾವುದೇ ಶಸ್ತ್ರಾಸ್ತ್ರ ಪೂರೈಸಿಲ್ಲ: ಹೆಚ್ಎಎಲ್

|
Google Oneindia Kannada News

ಬೆಂಗಳೂರು, ಏಪ್ರಿಲ್ 1: ಮ್ಯಾನ್ಮಾರ್ ಸೇನಾ ಪಡೆ ಜೊತೆಗೆ ಯಾವುದೇ ರೀತಿ ವ್ಯಾವಹಾರಿಕ ಒಪ್ಪಂದ ಮತ್ತು ಸಂಪರ್ಕವನ್ನು ಹೊಂದಿಲ್ಲ ಎಂದು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಡೆಟ್(HAL) ಸ್ಪಷ್ಟವಾಗಿ ಹೇಳಿದೆ.

ಮ್ಯಾನ್ಮಾರ್ ಮತ್ತು ಸ್ಟಾಕ್ಹೋಮ್ ಅಂತಾರಾಷ್ಟ್ರೀಯ ಶಾಂತಿ ಮತ್ತು ಸಂಶೋಧನಾ ಸಂಸ್ಥೆಯ ಶಸ್ತ್ರಾಸ್ತ್ರ ವರ್ಗಾವಣೆ ದತ್ತಾಂಶದ ವರದಿ ಬಿಡುಗಡೆಗೊಳಿಸಿತ್ತು. 2017 ರಿಂದ 19ರವರೆಗೆ ಮ್ಯಾನ್ಮಾರ್‌ ಸೇನಾಪಡೆಗೆ ಎಚ್‌ಎಎಲ್ ಉಪಕರಣಗಳನ್ನು ಪೂರೈಸಿದೆ ಎಂದು ಹೇಳಿತ್ತು. ಇದರ ಬೆನ್ನಲ್ಲೇ ಎಚ್ಎಎಲ್ ಸ್ಪಷ್ಟನೆ ನೀಡಿದೆ.

"50 ಪ್ರತಿಭಟನಾಕಾರರ ಸಾವು; ಮಯನ್ಮಾರ್ ಸೇನೆ ನಾಚಿಕೆಪಡುವ ದಿನ"

"ಯುಎನ್ಎಚ್ಆರ್ ಸಿ ನೀಡಿರುವ ವರದಿಯು ವಾಸ್ತವಿಕವಾಗಿ ತಪ್ಪು ಮಾಹಿತಿಯಿಂದ ಕೂಡಿದೆ. ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಸಂಸ್ಥೆಯು 2017 ರಿಂದ 2019 ರವರೆಗೆ ಮ್ಯಾನ್ಮಾರ್ ರಕ್ಷಣಾ ಪಡೆಗಳೊಂದಿಗೆ ಯಾವುದೇ ವ್ಯವಹಾರಗಳನ್ನು ಹೊಂದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

No Business Links With Myanmars Military; HAL Clarification

ಮ್ಯಾನ್ಮಾರ್‌ನಲ್ಲಿ 500ಕ್ಕೂ ಹೆಚ್ಚು ಮಂದಿ ಸಾವು:

ಮ್ಯಾನ್ಮಾರ್‌ನಲ್ಲಿ ಶಾಂತಿಯುತವಾಗಿ ನಡೆಯುತ್ತಿದ್ದ ಹೋರಾಟ ಉಗ್ರ ಸ್ವರೂಪಕ್ಕೆ ತಿರುಗಿದ್ದು, 500ಕ್ಕೂ ಹೆಚ್ಚು ಜನರನ್ನು ಕೊಂದು ಹಾಕಲಾಗಿದೆ. ಪ್ರತಿಭಟನಾನಿರತರ ಮೇಲೆ ನಡೆಸಿದ ದಾಳಿಯಲ್ಲಿ ಮೃತಪಟ್ಟವರಲ್ಲಿ ಮಕ್ಕಳು ಮತ್ತು ಮಹಿಳೆಯರು ಕೂಡ ಇದ್ದಾರೆ. ಇದರ ಬೆನ್ನಲ್ಲೇ ದೇಶದಲ್ಲಿ ಪ್ರಜಾಸತ್ತಾತ್ಮಕವಾಗಿ ಚುನಾಯಿತಗೊಂಡ ಸರ್ಕಾರ ಉರುಳಿಸಿದ ನಂತರ ಮಿಲಿಟರಿಗೆ ಶಸ್ತ್ರಾಸ್ತ್ರ ವರ್ಗಾವಣೆ ಮಾಡಿರುವುದರ ಬಗ್ಗೆ ತೀವ್ರ ಪರಿಶೀಲನೆ ನಡೆಸಲಾಗುತ್ತಿದೆ.

ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ಮತ್ತು ಇಂಗ್ಲೆಂಡ್ ರಾಷ್ಟ್ರಗಳು ಮ್ಯಾನ್ಮಾರ್‌ನ ಮಿಲಿಟರಿಗೆ ಸಂಬಂಧಿಸಿದ ಅನೇಕ ವ್ಯಕ್ತಿಗಳು ಮತ್ತು ಘಟಕಗಳಿಗೆ ನಿರ್ಬಂಧ ವಿಧಿಸಿವೆ. ಜೊತೆಗೆ ಮ್ಯಾನ್ಮಾರ್‌ನ ಕೆಲವು ಸಂಘಟನೆಗಳ ವಿರುದ್ಧವೂ ನಿರ್ಬಂಧ ಹೇರಲಾಗಿದೆ. ಅಲ್ಲದೇ, ಮ್ಯಾನ್ಮಾರ್‌ನಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಅಂತರರಾಷ್ಟ್ರೀಯ ಸಮುದಾಯ ವ್ಯಾಪಕವಾಗಿ ಖಂಡಿಸಿದೆ.

ಕ್ಷಣ ಕ್ಷಣದ ಸುದ್ದಿಗಳಿಗಾಗಿ ಒನ್ ಇಂಡಿಯಾ ಕನ್ನಡ ಟೆಲಿಗ್ರಾಂ ಚಾನಲ್ ಸೇರಿ

English summary
No Business Links With Myanmar's Military; HAL Clarification.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X