ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಲ್ವಾನ್ ಘರ್ಷಣೆಯಲ್ಲಿ ಸತ್ತ ಚೀನಿ ಸೈನಿಕರ ಗೌಪ್ಯ ಅಂತ್ಯ ಸಂಸ್ಕಾರ

|
Google Oneindia Kannada News

ಲಡಾಖ್, ಜುಲೈ 14: ಗಲ್ವಾನ್ ಕಣಿವೆಯಲ್ಲಿ ಭಾರತ-ಚೀನಾ ನಡುವೆ ಏರ್ಪಟ್ಟಿದ್ದ ಘರ್ಷಣೆಯಲ್ಲಿ ಚೀನಾದ 45 ಕ್ಕೂ ಹೆಚ್ಚು ಸೈನಿಕರು ಮೃತಪಟ್ಟಿದ್ದರು ಎನ್ನಲಾಗಿದ್ದು, ಆ ಮಾಹಿತಿಯನ್ನು ಮುಚ್ಚಿಡಲು ಗೌಪ್ಯವಾಗಿ ಅಂತ್ಯ ಸಂಸ್ಕಾರ ಮಾಡಿದೆ.

Recommended Video

PU Results : Udupi ವಿದ್ಯಾರ್ಥಿಗಳಿಗೆ ಅಭಿನಂದನೆಗಳು | Oneindia Kannada

ಅಮೆರಿಕದ ಗುಪ್ತಚರ ಸಂಸ್ಥೆ ಈ ಮಾಹಿತಿಯನ್ನು ಬಹಿರಂಗಪಡಿಸಿದೆ. ಅಂದು ನಡೆದ ಘರ್ಷಣೆಯಲ್ಲಿ ಭಾರತ 20 ಯೋಧರನ್ನು ಕಳೆದುಕೊಂಡಿದ್ದರೆ, ಚೀನಾದಲ್ಲಿ ಸತ್ತ ಸೈನಿಕರ ಸಂಖ್ಯೆ 45ಕ್ಕೂ ಅಧಿಕ ಎಂದು ಭಾರತೀಯ ಸೇನೆ ಹೇಳಿತ್ತು. ಇದರಲ್ಲಿ ಓರ್ವ ಕರ್ನಲ್ ಕೂಡ ಸೇರಿರುವಾಗಿ ಸೇನೆ ಹೇಳಿದೆ.

ಭಾರತದ ಗಡಿಯ ಹತ್ತಿರ ತನ್ನ ವಾಯುನೆಲೆ ವಿಸ್ತರಿಸಿದ ಚೀನಾಭಾರತದ ಗಡಿಯ ಹತ್ತಿರ ತನ್ನ ವಾಯುನೆಲೆ ವಿಸ್ತರಿಸಿದ ಚೀನಾ

ಚೀನಾ ರಹಸ್ಯವನ್ನು ಮುಚ್ಚಿಡುವ ಸಲುವಾಗಿ ಸತ್ತ ತನ್ನ ಸೈನಿಕರ ಶವಗಳನ್ನು ಚೀನಾ ಗುಪ್ತವಾಗಿ ಅಂತ್ಯಸಂಸ್ಕಾರ ಮಾಡಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಹಿಂಸಾತ್ಮಕ ಘರ್ಷಣೆಯಲ್ಲಿ ಅಸುನೀಗಿದ ತನ್ನ ಸೈನಿಕರ ಶವಗಳನ್ನು ಯಾರಿಗೂ ತಿಳಿಯದಂತೆ ಚೀನಾ ಮಣ್ಣು ಮಾಡಿದೆ ಎಂಬ ಆರೋಪವಿದೆ. ಆದರೆ ಇದನ್ನು ಚೀನಾ ನಿರಾಕರಿಸುತ್ತಿದೆ.

ಸತ್ತ ಸೈನಿಕರ ಅಂತ್ಯಸಂಸ್ಕಾರವನ್ನು ಬಹಿರಂಗವಾಗಿ ನಡೆಸದಂತೆ ಕುಟುಂಬದವರಿಗೆ ಹೇಳಿರುವುದು ಮಾತ್ರವಲ್ಲದೇ, ಕೆಲವೊಂದು ಸೈನಿಕರನ್ನು ತಾನೇ ಗುಟ್ಟಾಗಿ ಮಣ್ಣುಮಾಡಿದರೆ, ಇನ್ನು ಕೆಲವು ಸೈನಿಕರ ಕುಟುಂದವರಿಗೆ ಯಾರಿಗೂ ತಿಳಿಯದಂತೆ ಮಣ್ಣು ಮಾಡಲು ಒತ್ತಡ ಹೇರಿದೆ ಎಂದು ಗುಪ್ತಚರ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಮೃತ ಸೈನಿಕರ ಸಂಖ್ಯೆ ಕುರಿತು ಚೀನಾ ಮೌನ

ಮೃತ ಸೈನಿಕರ ಸಂಖ್ಯೆ ಕುರಿತು ಚೀನಾ ಮೌನ

ಆದರೆ ಚೀನಾ ಮಾತ್ರ ತನ್ನ ಸೈನಿಕರ ಮೃತ ಸಂಖ್ಯೆಗೆ ಸಂಬಂಧಿಸಿದಂತೆ ಮೌನ ತಾಳಿದೆ. ಅಷ್ಟೊಂದು ಬಲಿಷ್ಠವಾಗಿರುವ ಸೇನೆಯನ್ನು ಇಟ್ಟುಕೊಂಡು, ಭಾರತದ ಎದುರು ತಾನು ಈ ಪರಿಯ ಸೈನಿಕರನ್ನು ಕಳೆದುಕೊಂಡಿರುವುದು ವಿಶ್ವಕ್ಕೆ ಗೊತ್ತಾಗಿಬಿಟ್ಟರೆ ಮುಜುಗರಕ್ಕೆ ಒಳಗಾಗಬಹುದು ಎನ್ನುವ ಕಾರಣದಿಂದ ಅದು ಇನ್ನೂ ತನ್ನ ಸೈನಿಕರ ಗುಟ್ಟು ಬಿಟ್ಟುಕೊಟ್ಟಿಲ್ಲ.

ಹುತಾತ್ಮರಾದ ಯೋಧರಿಗೆ ಗೌರವವೇ ಇಲ್ಲ

ಹುತಾತ್ಮರಾದ ಯೋಧರಿಗೆ ಗೌರವವೇ ಇಲ್ಲ

ಯಾವುದೇ ದೇಶದಲ್ಲಾದರೂ ಯೋಧ ಹುತಾತ್ಮನಾದ ಸಂದರ್ಭದಲ್ಲಿ ಅಂಥವರನ್ನು ಅತ್ಯಂತ ಗೌರವದಿಂದ ದೇಶದ ಬಾವುಟವನ್ನಿಟ್ಟು ಸಕಲ ರಾಜಮರ್ಯಾದೆಯೊಂದಿಗೆ ಅಂತ್ಯಸಂಸ್ಕಾರ ನೆರವೇರಿಸುವುದು ವಾಡಿಕೆ. ದೇಶಕ್ಕಾಗಿ ಪ್ರಾಣತೆತ್ತ ಯೋಧನಿಗೆ ದೇಶ ಸಲ್ಲಿಸುವ ಕೊನೆಯ ಗೌರವವಿದು. ಆದರೆ ನೀಚ ಚೀನಾ, ತನ್ನ ಸೈನಿಕರಿಗೆ ಗೌರವ ಸಲ್ಲಿಸುವುದು ದೂರದ ಮಾತು, ಘರ್ಷಣೆಯಲ್ಲಿ ಅಸುನೀಗಿದ ಸೈನಿಕರ ಶವಸಂಸ್ಕಾರದ ಮೆರವಣಿಗೆ ನಡೆಸದಂತೆ ಕುಟುಂಬಸ್ಥರ ಮೇಲೆ ಒತ್ತಡ ಹೇರಿದೆ ಎಂದು ಅಮೆರಿಕದ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.

ಆರೋಪ ನಿರಾಕರಸಿರುವ ಚೀನಾ

ಆರೋಪ ನಿರಾಕರಸಿರುವ ಚೀನಾ

ಈ ಆರೋಪವನ್ನು ನಿರಾಕರಿಸಿರುವ ಚೀನಾ, ಕರೊನಾ ವೈರಸ್‌ ಹಿನ್ನೆಲೆಯಲ್ಲಿ ಈ ರೀತಿಯ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ. ಆದರೆ ಎಷ್ಟು ಯೋಧರ ಅಂತ್ಯಕ್ರಿಯೆ ಮಾಡಲಾಗಿದೆ, ನಿಜವಾಗಿ ಸತ್ತವರೆಷ್ಟು ಎಂಬ ಮಾಹಿತಿಯನ್ನು ಮಾತ್ರ ನೀಡಲಿಲ್ಲ.ಚೀನಾದ ಮತ್ತೊಂದು ಘೋರ ಮುಖ ಬಯಲಾಗಿದೆ. ಭಾರತದ ಜತೆಗಿನ ಗಲ್ವಾನ್‌ ಕಣಿವೆಯಲ್ಲಿ ನಡೆದ ಘರ್ಷಣೆ ವೇಳೆ ಮೃತಪಟ್ಟ ತನ್ನ ದೇಶದ ಸೈನಿಕರ ಸಂಖ್ಯೆಯನ್ನು ಮುಚ್ಚಿಡಲು ನೀಚಕೃತ್ಯಕ್ಕೆ ಕೈಹಾಕಿರುವ ಆರೋಪ ಇದೀಗ ಕೇಳಿಬಂದಿದೆ.

ಚೀನಾ-ಭಾರತ ಘರ್ಷಣೆಯಲ್ಲಿ 20 ಮಂದಿ ಭಾರತೀಯ ಸೈನಿಕರು ಹುತಾತ್ಮ

ಚೀನಾ-ಭಾರತ ಘರ್ಷಣೆಯಲ್ಲಿ 20 ಮಂದಿ ಭಾರತೀಯ ಸೈನಿಕರು ಹುತಾತ್ಮ

ಚೀನಾ ಭಾರತದ ಮೇಲೆ ನಡೆಸಿದ್ದ ಘರ್ಷಣೆಯಲ್ಲಿ 20 ಮಂದಿ ಭಾರತೀಯ ಸೈನಿಕರು ಹುತಾತ್ಮರಾಗಿದ್ದರು. ಚೀನಾದ 45 ಸೈನಿಕರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿತ್ತಾದರೂ ಒಪ್ಪಿಕೊಳ್ಳಲು ಚೀನಾ ಸಿದ್ಧವಿರಲಿಲ್ಲ.

English summary
Chinese government has been pressurising families of its soldiers killed in Galwan clash not to conduct burials and funeral ceremonies, claimed a US intelligence report. It further added that China is denying burials in order to cover up its 'blunder'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X