ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಖ್ಖರೇ ಗಮನಿಸಿ, ಫ್ರಾನ್ಸಿನಲ್ಲಿ ಬುರ್ಖಾಗೆ ಮಾತ್ರ ನಿಷೇಧ!

By Mahesh
|
Google Oneindia Kannada News

ಪ್ಯಾರೀಸ್, ಫೆ. 03: ಫ್ರಾನ್ಸ್ ನಲ್ಲಿ ಸಿಖ್ ಸಮುದಾಯಕ್ಕೆ ಆತಂಕ ಉಂಟು ಮಾಡಿದ್ದ ಆದೇಶವೊಂದರ ಬಗ್ಗೆ ಭಾರತದಲ್ಲಿರುವ ಫ್ರೆಂಚ್ ರಾಯಭಾರಿ ಕಚೇರಿ ಸ್ಪಷ್ಟನೆ ನೀಡಿದೆ. ಬುರ್ಖಾಗೆ ಮಾತ್ರ ನಿಷೇಧ ಹೇರಲಾಗಿದೆ. ಸಿಖ್ಖರು ತಮ್ಮ ಪಗಡಿಯನ್ನು ಧರಿಸಿ ಓಡಾಡಬಹುದು ಎಂದು ಸ್ಪಷ್ಟಪಡಿಸಲಾಗಿದೆ.[ಹೊಲ್ಲಾಂಡೆ ಜೊತೆ ಬನಾರಸಿ ಸೀರೆಯುಟ್ಟ ಐಶ್ವರ್ಯಾ ರೈ ಪೋಸ್]

ಸಾರ್ವಜನಿಕ ಸ್ಥಳಗಳಲ್ಲಿ ಸಿಖ್ಖರು ತಮ್ಮ ತಲೆ ರುಮಾಲು (ಪಗಡಿ) ಧರಿಸಿ ಓಡಾಡುವಂತಿಲ್ಲ ಎಂಬ ಆದೇಶ ಹೊರಬಿದ್ದಿದೆ ಎಂಬ ಸುದ್ದಿ ಹಬ್ಬಿತ್ತು. ಅಮೆರಿಕ, ಯುರೋಪ್ ನಲ್ಲಿ ಸತತವಾಗಿ ಪಗಡಿ ಧರಿಸಲು ಸಿಖ್ಖರು ಹೋರಾಟ ನಡೆಸಿಕೊಂಡು ಬಂದಿದ್ದಾರೆ. ಸಿಖ್ಖರು ಪ್ರತಿಭಟನೆಗೆ ಮುಂದಾಗುವುದಕ್ಕೂ ಮುನ್ನ ಎಚ್ಚೆತ್ತುಕೊಂಡ ಹೊಲ್ಲಾಂಡೆ ಸರ್ಕಾರ, ತಮ್ಮ ಆದೇಶದ ಬಗ್ಗೆ ಸ್ಪಷ್ಟನೆ ನೀಡಿದೆ.['ಜೋ ಬೋಲೆ ಸೋ ನಿಹಾಲ್' ಎಂದ 40 ಕ್ರೈಸ್ತ ಕುಟುಂಬಗಳು]

No ban on Sikhs wearing turbans in France, ban only on burqas

ಇತ್ತೀಚಿಗೆ ನಡೆದ ಉಗ್ರರ ದಾಳಿ ಕಹಿ ಘಟನೆ ನಂತರ ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ಧರಿಸಿ ಓಡಾಡುವುದನ್ನು ನಿಷೇಧಿಸಲಾಗಿದೆ. ಧಾರ್ಮಿಕ ಸಹಿಷ್ಣುತೆಗೆ ಫ್ರಾನ್ಸ್ ಬೆಲೆ ಕೊಡುತ್ತದೆ. ಆದರೆ, ಧಾರ್ಮಿಕ ಚಿನ್ಹೆ, ದಿರಿಸು ಇತರೆ ಧರ್ಮ ಹಾಗೂ ರಾಷ್ಟ್ರಕ್ಕೆ ಮಾರಕವಾಗದಂತೆ ಇರಬೇಕು ಎಂಬ ಸರಳ ಕಾನೂನು ಹಿಂದಿನಿಂದ ನಡೆದುಕೊಂಡು ಬಂದಿದೆ.[ಬುರ್ಖಾ ಬ್ರಿಗೇಡ್ ಬರುತ್ತಿದೆ ಎಚ್ಚರ, ಎಚ್ಚರಾ!]

ಜನವರಿ 26, 2016ರಂದು ಭಾರತದ ಗಣರಾಜ್ಯೋತ್ಸವ ಆಚರಣೆ ಸಂಭ್ರಮದಲ್ಲಿ ಮುಖ್ಯ ಅತಿಥಿಯಾಗಿ ಫ್ರೆಂಚ್ ಅಧ್ಯಕ್ಷ ಫ್ರಾಂಕೊಯಿಸ್ ಹೊಲ್ಲಾಂಡೆ ಭಾರತಕ್ಕೆ ಆಗಮಿಸಿದ್ದರು.

ಆದರೆ, ಪೆರೇಡ್ ಸಂದರ್ಭದಲ್ಲಿ ಪ್ರತ್ಯೇಕ ಸಿಖ್ ರಿಜಿಮೆಂಟ್ ಭಾಗವಹಿಸಿರಲಿಲ್ಲ ಎಂಬುದನ್ನು ಗುರುತಿಸಿದ ಶಿರೋಮಣಿ ಅಕಾಲಿ ದಳ ಮುಖಂಡರು ಈ ಬಗ್ಗೆ ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಗೆ ಪತ್ರ ಬರೆದಿದ್ದಾರೆ. ಬಾದಲ್ ಅವರು ಫ್ರಾನ್ಸಿನಲ್ಲಿರುವ ಸಿಖ್ಖರ ಬಗ್ಗೆ ಕಾಳಜಿಯುಳ್ಳ ಪತ್ರವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ರವಾನಿಸಿದ್ದಾರೆ.

ಸಿಖ್ಖರು ರುಮಾಲು ಸುತ್ತಿಕೊಳ್ಳುವುದು ಧಾರ್ಮಿಕ ಸಂಕೇತ. ಗಣತಂತ್ರದಿನದಂದು ದೇಶದ ವೈವಿಧ್ಯತೆ ಪ್ರದರ್ಶಿಸುವಾಗ ಸಿಖ್ ತುಕಡಿ ಇಲ್ಲದೆ ಇರುವುದು ಬೇಸರ ತರಿಸಿದೆ. ದೇಶಭಕ್ತ ಸಮುದಾಯಕ್ಕೆ ನೋವಾಗಿದೆ ಎಂದು ಪ್ರಕಾಶ್ ಸಿಂಗ್ ಬಾದಲ್ ವಿಷಾದ ವ್ಯಕ್ತಪಡಿಸಿದ್ದಾರೆ. (ಪಿಟಿಐ)

English summary
The French embassy in New Delhi said there was no ban on wearing turbans in public spaces while reacting to a charge by a Sikh organisation that the community has been fighting for their right to wear the religious garb in France.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X