ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಷಿಂಗ್‌ಟನ್‌ನಲ್ಲಿ ಗುಂಡಿನ ಸದ್ದು: ಸುಳ್ಳು ಸುದ್ದಿ

By Madhusoodhan
|
Google Oneindia Kannada News

ವಾಷಿಂಗ್ ಟನ್, ಜೂನ್, 30: ವಾಷಿಂಗ್ ಟನ್ ಹೊರವಲಯದ ವಾಯುನೆಲೆಯಲ್ಲಿ ಗುಂಡಿನ ಸದ್ದು ಕೇಳಿಬಂದ ಸುದ್ದಿ ಸುಳ್ಳು ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

ವಾಷಿಂಗ್ ಟನ್ ಹೊರವಲಯದ ಏರ್ ಪೋರ್ಸ್ ನ ಏರ್ ಬಸ್ ವೊಂದರಲ್ಲಿ ಗುಂಡಿನ ಸದ್ದಿ ಕೇಳಿ ಬಂದಿತ್ತು ಎಂದು ವರದಿಯಾಗಿತ್ತು. ಇದು ಉಗ್ರ ದಾಳಿಯ ಆತಂಕ ತಂದೊಡ್ಡಿತ್ತು. ಆಂಡ್ರೂಸ್ ಏರ್ ಬಸ್ ನಲ್ಲಿ ಬಂದೂಕುದಾರಿಯೊಬ್ಬ ಕಾಣಿಸಿಕೊಂಡಿದ್ದು ಅಡಗಿ ಕುಳಿತಿದ್ದಾನೆ ಎಂದು ಹೇಳಲಾಗಿತ್ತು.[ಅಮೆರಿಕ, ನೈಟ್ ಕ್ಲಬ್ ನಲ್ಲಿ ಗನ್ ಮ್ಯಾನಿನ ಮಾರಣಹೋಮ: 50 ಸಾವು]

america

ಎರಡು ಜನ ಸೈನಿಕರು ಗನ್ ಹಿಡಿದು ನಡೆದುಕೊಂಡು ಹೋಗುತ್ತಿದ್ದಾಗ ಅವರನ್ನು ಕಂಡು ಗೊಂದಲಕ್ಕೀಡಾದ ಸಿಬ್ಬಂದಿಯೊಬ್ಬರು ಉಗ್ರಗಾಮಿಗಳು ಇದ್ದಾರೆ ಎಂದು ತಪ್ಪು ಮಾಹಿತಿ ನೀಡಿದ್ದು ಸುಳ್ಳು ಸುದ್ದಿ ಹರಡಲು ಕಾರಣವಾಯಿತು.[ಉಗ್ರರ ಕರಿನೆರಳು ಬೆಳಗಾವಿಯ ಮೇಲೂ ಬಿತ್ತೇ?]

ಕಳೆದ ಜೂನ್ 13ರಂದು ಅಮೆರಿಕಾದ ಫ್ಲೋರಿಡಾದ ಒರ್ಲಾಂಡೊದಲ್ಲಿರುವ ಸಲಿಂಗಕಾಮಿಗಳ ನೈಟ್ ಕ್ಲಬ್‍ ಮೇಲೆ ಮುಂಜಾನೆ ಶಸ್ತ್ರಧಾರಿಯೊಬ್ಬ ದಾಳಿ ನಡೆಸಿ 50 ಜನರನ್ನು ಹತ್ಯೆ ಮಾಡಿದ್ದ.

ನಂತರ ದಾಳಿ ನಡೆಸಿದ ಶಸ್ತ್ರಧಾರಿಯನ್ನು ಪೊಲೀಸರು ಗುಂಡಿಕ್ಕಿ ಹತ್ಯೆಗೈದಿದ್ದರು. ಈತ ಅಮೆರಿಕಾದ ಫ್ಲೋರಿಡಾದ ಪೋರ್ಟ್ ಸೇಂಟ್ ಲೂಸಿಯದ ನಿವಾಸಿ 29 ವರ್ಷ ವಯಸ್ಸಿನ ಓಮರ್ ಮಾಟೀನ್ ಎಂದು ಗುರುತಿಸಲಾಗಿತ್ತು.

English summary
The "all clear" was given after a report of an active shooter at Joint Base Andrews. The base tweeted Thursday morning, instructing all personnel at the base in Washington's Maryland suburbs to shelter in place and says more information will be released as it comes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X