ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರಿಟನ್‌ನ ರಾಜಕೀಯ ಆಶ್ರಯ ಕೋರಿದ ನೀರವ್ ಮೋದಿ

|
Google Oneindia Kannada News

ನವದೆಹಲಿ, ಜೂನ್ 11: ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ಸುಮಾರು 13 ಸಾವಿರ ಕೋಟಿ ವಂಚಿಸಿ ಪರಾರಿಯಾದ ಆರೋಪ ಎದುರಿಸುತ್ತಿರುವ ಭಾರತದ ವಜ್ರದ ವ್ಯಾಪಾರಿ ನೀರವ್ ಮೋದಿ ಅವರು ಇಂಗ್ಲೆಂಡ್‌ನಲ್ಲಿ ರಾಜಕೀಯ ಆಶ್ರಯಕ್ಕಾಗಿ ಕೋರಿದ್ದಾರೆ ಎಂದು ವರದಿಯಾಗಿದೆ.

ಆದರೆ, ಈ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿರುವ ಬ್ರಿಟನ್‌ನ ಗೃಹ ಸಚಿವಾಲಯ, ವೈಯಕ್ತಿಕ ಪ್ರಕರಣಗಳ ಕುರಿತು ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದೆ.

4,299 ಕೋಟಿ ಹಣ ಹಂಚಿಕೊಂಡಿರುವ ನೀರವ್ ಮೋದಿ: ಇ.ಡಿ. ವರದಿ4,299 ಕೋಟಿ ಹಣ ಹಂಚಿಕೊಂಡಿರುವ ನೀರವ್ ಮೋದಿ: ಇ.ಡಿ. ವರದಿ

ನೀರವ್ ಮೋದಿ ಅವರನ್ನು ಗಡಿಪಾರು ಮಾಡುವ ಸಂಬಂಧ ಬ್ರಿಟನ್ ಸರ್ಕಾರಕ್ಕೆ ಮನವಿ ಸಲ್ಲಿಸುವ ಮೊದಲು ಕಾನೂನು ಜಾರಿ ಸಂಸ್ಥೆಗಳು ತಮ್ಮನ್ನು ಸಂಪರ್ಕಿಸಲು ಕಾಯುತ್ತಿರುವುದಾಗಿ ಸರ್ಕಾರದ ಮೂಲಗಳು ತಿಳಿಸಿವೆ.

Nirav Modi claiming political asylum in UK

ನೀರವ್ ಮೋದಿ ಮತ್ತು ಅವರ ಸಂಬಂಧಿ ಮೆಹುಲ್ ಚೋಕ್ಸಿ ಅವರು ಪಂಜಾಬ್ ನ್ಯಾಷನಲ್‌ ಬ್ಯಾಂಕ್‌ನಿಂದ ಸುಮಾರು 13 ಸಾವಿರ ಕೋಟಿ ಸಾಲವನ್ನು ಅಕ್ರಮವಾಗಿ ಪಡೆದುಕೊಂಡು ವಂಚನೆ ಮಾಡಿರುವ ಆರೋಪ ಎದುರಿಸುತ್ತಿದ್ದಾರೆ. ಇಬ್ಬರೂ ಆರೋಪಿಗಳು ದೇಶದಿಂದ ಪಲಾಯನ ಮಾಡಿದ್ದಾರೆ.

ಮಲ್ಯ, ಮೋದಿ, ಚೋಕ್ಸಿಗೆ ತಟ್ಟಲಿದೆ 'ಇಡಿ'ಯ ಹೊಸ ಕಾನೂನಿನ ಬಿಸಿಮಲ್ಯ, ಮೋದಿ, ಚೋಕ್ಸಿಗೆ ತಟ್ಟಲಿದೆ 'ಇಡಿ'ಯ ಹೊಸ ಕಾನೂನಿನ ಬಿಸಿ

ಈಗಾಗಲೇ ವಿವಿಧ ಬ್ಯಾಂಕುಗಳಿಗೆ ಸುಮಾರು 9 ಸಾವಿರ ಕೋಟಿ ವಂಚಿಸಿ ಪರಾರಿಯಾದ ಆರೋಪ ಎದುರಿಸುತ್ತಿರುವ ಮದ್ಯ ಉದ್ಯಮಿ ವಿಜಯ್ ಮಲ್ಯ ಅವರನ್ನು ಗಡಿಪಾರು ಮಾಡುವಂತೆ ಭಾರತ ಸರ್ಕಾರ ಬ್ರಿಟನ್‌ಗೆ ಮನವಿ ಮಾಡಿದೆ.

ನೀರವ್ ಮೋದಿ, ಚೋಕ್ಸಿ, ಪಿಎನ್‌ಬಿ ಮಾಜಿ ಮುಖ್ಯಸ್ಥೆ ಉಷಾ ಅನಂತಸುಬ್ರಮಣಿಯನ್, ಬ್ಯಾಂಕ್‌ನ ಇಬ್ಬರು ಎಕ್ಸಿಕ್ಯುಟಿವ್ ನಿರ್ದೇಶಕರು ಮತ್ತು ನೀರವ್ ಮೋದಿ ಅವರಿಗೆ ಸೇರಿದ ಮೂರು ಕಂಪೆನಿಗಳು ಸೇರಿದಂತೆ 25ಕ್ಕೂ ಹೆಚ್ಚು ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

English summary
Nirav Modi an accused of more than 13,000 crore fraud case to Punjab National Bank in Inida, is seeking political asylum in Britain.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X