ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊವಿಶೀಲ್ಡ್ ಲಸಿಕೆ ಪಡೆದಿದ್ದೀರಾ ನಮ್ಮ ದೇಶಕ್ಕೆ ಬನ್ನಿ: 9 ದೇಶಗಳಿಂದ ಪ್ರಯಾಣಕ್ಕೆ ಅನುಮತಿ!

|
Google Oneindia Kannada News

ನವದೆಹಲಿ, ಜುಲೈ 01: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಡುವೆ ಕೊವಿಶೀಲ್ಡ್ ಲಸಿಕೆ ಪಡೆದುಕೊಂಡಿರುವ ಭಾರತೀಯರ ಪ್ರಯಾಣಕ್ಕೆ ಯುರೋಪಿನ 9 ರಾಷ್ಟ್ರಗಳು ಅನುಮತಿ ನೀಡಿವೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಹಾಗೂ ಆಸ್ಟ್ರಾಜೆನಿಕಾ ಸಂಶೋಧಿಸಿರುವ ಪುಣೆಯ ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದಿಸುತ್ತಿರುವ ಕೊವಿಶೀಲ್ಡ್ ಲಸಿಕೆ ಪಡೆದ ಭಾರತೀಯರು ಯುರೋಪ್ ಖಂಡದ 9 ರಾಷ್ಟ್ರಗಳಿಗೆ ಪ್ರಯಾಣಿಸಲು ಅನುಮತಿ ನೀಡಲಾಗಿದೆ.

ಭಾರತದ ಲಸಿಕೆಗಳಿಗೆ ಒಪ್ಪಿಗೆ ನೀಡಿ ಇಲ್ಲವೇ ಕಡ್ಡಾಯ ಕ್ವಾರಂಟೈನ್ ಅನುಭವಿಸಿ; ಭಾರತದ ಎಚ್ಚರಿಕೆಭಾರತದ ಲಸಿಕೆಗಳಿಗೆ ಒಪ್ಪಿಗೆ ನೀಡಿ ಇಲ್ಲವೇ ಕಡ್ಡಾಯ ಕ್ವಾರಂಟೈನ್ ಅನುಭವಿಸಿ; ಭಾರತದ ಎಚ್ಚರಿಕೆ

ಯುರೋಪಿನ ಆಸ್ಟ್ರೀಯಾ, ಜರ್ಮನಿ, ಸ್ಲೋವೆನಿಯಾ, ಗ್ರೀಸ್, ಐಸ್ ಲ್ಯಾಂಡ್, ಐರ್ಲೆಂಡ್, ಸ್ಪೇನ್ ರಾಷ್ಟ್ರಗಳಿಗೆ ಕೊವಿಡ್-19 ಲಸಿಕೆ ಪಡೆದಿರುವ ಭಾರತೀಯರ ಪ್ರಯಾಸಲು ಅವಕಾಶವಿದೆ. ಇವುಗಳ ಜೊತೆ ಸ್ವಿಡ್ಜರ್ಲೆಂಡ್ ಕೂಡಾ ಭಾರತೀಯ ಪ್ರಯಾಣಿಕರಿಗೆ ಗ್ರೀನ್ ಸಿಗ್ನಲ್ ಕೊಟ್ಟಿದೆ. ಈ ರಾಷ್ಟ್ರಗಳಿಗಿಂದ ಭಿನ್ನವಾಗಿ ಭಾರತದಲ್ಲಿ ವೈದ್ಯಕೀಯ ಔಷಧೀಯ ನಿಯಂತ್ರಣ ಪ್ರಾಧಿಕಾರದಿಂದ ಅನುಮೋದನೆ ಪಡೆದಿರುವ ಯಾವುದೇ ಲಸಿಕೆಯನ್ನು ಹಾಕಿಸಿಕೊಂಡ ಭಾರತೀಯರು ತಮ್ಮ ದೇಶಕ್ಕೆ ಆಗಮಿಸಬಹುದು ಎಂದು ಎಸ್ಟೋನಿಯಾ ಸ್ಪಷ್ಟಪಡಿಸಿದೆ.

Nine European Countries Allowing Travel To People Who Have Taken Covishield Vaccine: Sources

ಯುರೋಪ್ ರಾಷ್ಟ್ರಗಳಲ್ಲಿ ಗ್ರೀನ್ ಪಾಸ್:

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಸಂದರ್ಭದಲ್ಲಿ ಮುಕ್ತ ಸಂಚಾರಕ್ಕೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಯುರೋಪಿಯನ್ ಒಕ್ಕೂಟವು ಡಿಜಿಟಲ್ ಕೊವಿಡ್ ಪ್ರಮಾಣಪತ್ರ ಅಥವಾ "ಗ್ರೀನ್ ಪಾಸ್" ಗುರುವಾರದಿಂದ ಜಾರಿಗೆ ತಂದಿದೆ. ಈ ನಿಯಮದ ಪ್ರಕಾರ, ಯುರೋಪಿಯನ್ ಮೆಡಿಸನ್ ಏಜೆನ್ಸಿ ಮೂಲಕ ಅನುಮೋದನೆ ಪಡೆದಿರುವ ಕೊರೊನಾವೈರಸ್ ಲಸಿಕೆಯನ್ನು ಹಾಕಿಸಿಕೊಂಡ ವ್ಯಕ್ತಿಗಳು ಯುರೋಪ್ ರಾಷ್ಟ್ರಗಳ ಸರಹದ್ದಿಯಲ್ಲಿ ಪ್ರಯಾಣಿಸುವುದಕ್ಕೆ ಮುಕ್ತ ಅವಕಾಶ ನೀಡಲಾಗುತ್ತದೆ.

ಗ್ರೀನ್ ಪಾಸ್ ಅಡಿ ಭಾರತೀಯರ ಪ್ರಯಾಣಕ್ಕೆ ನಿರ್ಬಂಧ:

Recommended Video

ಭಾರತದ ಇನ್ಸ್ಟಾಗ್ರಾಮ್ ವಿಚಾರದಲ್ಲಿ ಕೊಹ್ಲಿಗಿಂತ ಶ್ರೀಮಂತ ಯಾರು ಇಲ್ಲ | Oneindia Kannada

ಯುರೋಪಿಯನ್ ಒಕ್ಕೂಟವು ಜಾರಿಗೊಳಿಸಿರುವ ಗ್ರೀನ್ ಪಾಸ್ ನಿಯಮಗಳ ಅಡಿಯಲ್ಲಿ ಕೊವ್ಯಾಕ್ಸಿನ್ ಅಥವಾ ಕೊವಿಶೀಲ್ಡ್ ಲಸಿಕೆಯನ್ನು ಪಡೆದ ಭಾರತೀಯರು ಯುರೋಪ್ ರಾಷ್ಟ್ರಗಳಿಗೆ ಪ್ರವೇಶಿಸುವಂತಿಲ್ಲ ಎಂದು ಈ ಮೊದಲು ನಿರ್ಬಂಧ ವಿಧಿಸಲಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯ ಸರ್ಕಾರವು ಯುರೋಪಿಯನ್ ಪ್ರಜೆಗಳ ವಿರುದ್ಧ ಅದೇ ನಿಯಮವನ್ನು ಜಾರಿಗೊಳಿಸಿತ್ತು. ಭಾರತದಲ್ಲಿ ಅನುಮೋದನೆ ಪಡೆದಿರುವ ಲಸಿಕೆಯನ್ನು ಪಡೆದುಕೊಳ್ಳಿ, ಇಲ್ಲದಿದ್ದರೆ ಕ್ವಾರೆಂಟೈನ್ ಆಗಲು ಸಿದ್ಧರಾಗಿ ಎಂದು ಎಚ್ಚರಿಕೆ ನೀಡಿತ್ತು.

English summary
Nine European Countries Allowing Travel To People Who Have Taken Covishield Vaccine: Sources.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X