ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೈಜೀರಿಯಾ ಶಾಲೆಯೊಂದರಲ್ಲಿ 300ಕ್ಕೂ ಹೆಚ್ಚು ಬಾಲಕಿಯರ ಅಪಹರಣ

|
Google Oneindia Kannada News

ಲಾಗೋಸ್,ಫೆಬ್ರವರಿ 27: ಉತ್ತರ ನೈಜೀರಿಯಾದ ವಸತಿ ಶಾಲೆಯೊಂದರಲ್ಲಿ 300ಕ್ಕೂ ಹೆಚ್ಚು ಬಾಲಕಿಯರನ್ನು ಕೆಲವು ಬಂದೂಕುಧಾರಿಗಳು ಅಪಹರಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಎಲ್ಲಾ ಮಕ್ಕಳನ್ನು ಸುರಕ್ಷಿತವಾಗಿ ಅವರ ಪೋಷಕರ ಬಳಿ ತಲುಪಿಸುವುದು ನಮ್ಮ ಮೂಲ ಉದ್ದೇಶವಾಗಿದೆ. ಹಣಕ್ಕಾಗಿ ಮುಗ್ಧ ಶಾಲಾ ಮಕ್ಕಳನ್ನು ಅಪಹರಿಸಿ, ಬೆದರಿಕೆಯೊಡ್ಡುವ ಬಂಡುಕೋರರಿಗೆ ನಾವು ಹೆದರುವುದಿಲ್ಲ ಎಂದು ನೈಜೀರಿಯಾದ ಅಧ್ಯಕ್ಷ ಮೊಹಮ್ಮದ್ ಬುಹಾರಿ ಅವರು ತಿಳಿಸಿದರು.

ತಾಯಿಗೆ ಹೆದರಿ ಕಾಡಿನಲ್ಲಿದ್ದು, ಅಪಹರಣದ ನಾಟಕವಾಡಿದ ಹೈಸ್ಕೂಲ್ ಹುಡ್ಗಿ!ತಾಯಿಗೆ ಹೆದರಿ ಕಾಡಿನಲ್ಲಿದ್ದು, ಅಪಹರಣದ ನಾಟಕವಾಡಿದ ಹೈಸ್ಕೂಲ್ ಹುಡ್ಗಿ!

ಜಂಗೆಬೆ ಪಟ್ಟಣದಲ್ಲಿರುವ ಬಾಲಕಿಯರ ಸರ್ಕಾರಿ ಕಿರಿಯ ಮಾಧ್ಯಮಿಕ ಶಾಲೆಯ ವಿದ್ಯಾರ್ಥಿನಿಯರ ಸಾಮೂಹಿಕ ಅಪಹರಣ ಮಾಡಲಾಗಿದ್ದು, ಪೊಲೀಸ್‌ ಮತ್ತು ಮಿಲಿಟರಿ ಪಡೆ ವಿದ್ಯಾರ್ಥಿನಿಯರ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದೆ.

Nigerias Zamfara School Abduction: More Than 300 Nigerian Girls Missing

ನನ್ನ 10 ಮತ್ತು 13 ವರ್ಷದ ಮಕ್ಕಳಿಬ್ಬರನ್ನೂ ಅಪಹರಿಸಲಾಗಿದೆ. ಶಾಲೆಯ ಹತ್ತಿರದಲ್ಲಿ ದೊಡ್ಡ ಪ್ರಮಾಣದಲ್ಲಿ ಸೇನಾ ಪಡೆಯಿದ್ದರೂ, ಬಾಲಕಿಯರನ್ನು ರಕ್ಷಿಸಲು ಅವರಿಗೆ ಸಾಧ್ಯವಾಗಿಲ್ಲ ಎಂಬುದು ನಿರಾಶಾದಾಯಕವಾಗಿದೆ ಎಂದು ಪೋಷಕರೊಬ್ಬರು ಹೇಳಿದ್ದಾರೆ.

ಬಾಲಕಿಯರನ್ನು ಅಪಹರಿಸಿದ ಬಳಿಕ ಕಾಡಿಗೆ ಕರೆದೊಯ್ದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಬಾಲಕಿಯರನ್ನು ಅಪಹರಿಸಿ ಹಣಕ್ಕೆ ಬೇಡಿಕೆ ಇಡುವುದೇ ಅವರ ಟಾರ್ಗೆಟ್, ನಮಗೆ ಮಕ್ಕಳನ್ನು ಸುರಕ್ಷಿತವಾಗಿ ವಾಪಸ್ ಕರೆತರುವುದೇ ಮುಖ್ಯ.

ಕಳೆದ ವಾರ 42 ಮಂದಿಯನ್ನು ಅಪಹರಿಸಲಾಗಿದ್ದು ಅದರಲ್ಲಿ 27 ಮಂದಿ ಮಕ್ಕಳಿದ್ದರು.ಅವರನ್ನು ಇನ್ನೂ ಬಿಡುಗಡೆ ಮಾಡಿಲ್ಲ.ಮಧ್ಯರಾತ್ರಿ 1 ಗಂಟೆ ವೇಳೆಗೆ ಬಾಲಕಿಯರನ್ನು ಅಪಹರಿಸಲಾಗಿದೆ.

ಕೆಲವು ಗನ್‌ಮೆನ್‌ಗಳು ಸರ್ಕಾರಿ ಭದ್ರತಾ ಸಿಬ್ಬಂದಿಗಳಂತೆ ಬಟ್ಟೆ ಧರಿಸಿದ್ದರು.ವಾಹನದಲ್ಲಿ ಕುಳಿತುಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಒತ್ತಡ ಹಾಕಿದ್ದರು.ಪೋಷಕರಿಗೆ ತಿಳಿದ ಬಳಿಕ ಅವರು ಶಾಲೆಗಳನ್ನು ಸುತ್ತುವರೆದಿದ್ದಾರೆ, ಆದರೆ ಆಗಲೇ ಬಾಲಕಿಯರನ್ನು ಅಪಹರಿಸಿ ಕರೆದೊಯ್ಯಲಾಗಿತ್ತು.

English summary
Police say they believe the girls were taken to a forest after being abducted from their boarding school in Jangebe, Zamfara state, on Friday morning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X