ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಮ್ ಆಯಿಲ್ ರಫ್ತು ನಿರ್ಬಂಧ ತೆರವುಗೊಳಿಸಲಿದೆ ಇಂಡೋನೇಷ್ಯಾ

|
Google Oneindia Kannada News

ಜಕರ್ತಾ, ಮೇ 19: ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ಯುದ್ಧದ ನಡುವೆ ಜಾಗತಿಕ ಮಾರುಕಟ್ಟೆಯಲ್ಲಿ ತೈಲ, ತರಕಾರಿ ಬೆಲೆ ಗಗನಮುಖಿ ಆಗಿ ಏರಿಕೆ ಆಗುತ್ತಿದೆ. ಇದರ ಮಧ್ಯೆ ಮುಂದಿನ ವಾರವೇ ಇಂಡೋನೇಷ್ಯಾ ತಾಳೆ ಎಣ್ಣೆ ರಫ್ತಿನ ಮೇಲಿನ ನಿಷೇಧವನ್ನು ತೆಗೆದುಹಾಕುತ್ತದೆ ಎಂದು ಅಧ್ಯಕ್ಷ ಜೋಕೊ ವಿಡೋಡೊ ಗುರುವಾರ ತಿಳಿಸಿದ್ದಾರೆ.

ಕಳೆದ ತಿಂಗಳು ದೇಶೀಯ ಕೊರತೆಯ ಹಿನ್ನಲೆ ಚಾಕೊಲೇಟ್ ಸ್ಪ್ರೆಡ್‌ಗಳಿಂದ ಸೌಂದರ್ಯವರ್ಧಕಗಳವರೆಗಿನ ಸರಕುಗಳ ಶ್ರೇಣಿಯಲ್ಲಿ ಬಳಸಲಾಗುವ ಸರಕುಗಳ ಪೂರೈಕೆ ಸುರಕ್ಷಿತಗೊಳಿಸಲು ದ್ವೀಪಸಮೂಹವು ಈ ನಿಷೇಧವನ್ನು ಜಾರಿಗೊಳಿಸಿತ್ತು.

ಭಾರತೀಯರ ಬದುಕೇ ಹಂಡಾವರಣ; ಇದು 16 ತಿಂಗಳಿನಲ್ಲೇ ಗರಿಷ್ಠ ಹಣದುಬ್ಬರ ಕೊಟ್ಟ ಹೊಡೆತ!ಭಾರತೀಯರ ಬದುಕೇ ಹಂಡಾವರಣ; ಇದು 16 ತಿಂಗಳಿನಲ್ಲೇ ಗರಿಷ್ಠ ಹಣದುಬ್ಬರ ಕೊಟ್ಟ ಹೊಡೆತ!

"ಅಡುಗೆ ಎಣ್ಣೆಯ ಪೂರೈಕೆಯ ಆಧಾರದ ಮೇಲೆ ಮತ್ತು ತಾಳೆ ಎಣ್ಣೆ ಉದ್ಯಮದಲ್ಲಿ 17 ಮಿಲಿಯನ್ ಜನರು ಇದ್ದಾರೆ. ರೈತರು ಮತ್ತು ಇತರ ಪೋಷಕ ಕಾರ್ಮಿಕರು, ಅಡುಗೆ ಎಣ್ಣೆ ರಫ್ತುಗಳನ್ನು ಮೇ 23ರಂದು ಸೋಮವಾರ ಪುನಃ ತೆರೆಯುವುದಕ್ಕೆ ನಾನು ನಿರ್ಧರಿಸಿದ್ದೇನೆ" ಎಂದು ವಿಡೋಡೊ ಹೇಳಿದ್ದಾರೆ.

Next Week Indonesia To Lift Ban On Palm Oil Exports

ಅಲ್ಲದೇ ದೇಶದಲ್ಲಿ ಬೇಡಿಕೆಗೆ ತಕ್ಕಂತೆ ಕೈಗೆಟುಕುವ ಬೆಲೆಯಲ್ಲಿ ತೈಲವನ್ನು ಪೂರೈಸುವುದಕ್ಕೆ ಸರ್ಕಾರವು ಎಲ್ಲ ರೀತಿ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದಿದ್ದಾರೆ.

ತಾಳೆ ಎಣ್ಣೆ ರಫ್ತಿಗೆ ನಿರ್ಬಂಧ: ಪಾಮ್ ಆಯಿಲ್ ರಫ್ತು ನಿಷೇಧ ಆದೇಶವನ್ನು ಅಧಿಕಾರಿಗಳು ಕಟ್ಟುನಿಟ್ಟಾಗಿ ಜಾರಿಗೊಳಿಸಿದ್ದರು. ಇಂಡೋನೇಷ್ಯಾ ನೌಕಾಪಡೆಯು ಈ ತಿಂಗಳ ಆರಂಭದಲ್ಲಿ ಆದೇಶವನ್ನು ಉಲ್ಲಂಘಿಸಿ ದೇಶದಿಂದ ತಾಳೆ ಎಣ್ಣೆಯನ್ನು ಸಾಗಿಸುತ್ತಿದ್ದ ಟ್ಯಾಂಕರ್ ಅನ್ನು ವಶಪಡಿಸಿಕೊಂಡಿತ್ತು. ಈ ನಿಷೇಧವು ಜಾರಿಗೊಳಿಸಿದ ನಂತರ, ದೇಶದ 270 ಮಿಲಿಯನ್ ಜನರಿಗೆ ತಾಳೆ ಎಣ್ಣೆಯನ್ನು ಅಗತ್ಯಕ್ಕೆ ತಕ್ಕಂತೆ ಸರಬರಾಜು ಮಾಡುವುದು ಸರ್ಕಾರದ "ಪ್ರಮುಖ ಆದ್ಯತೆ" ಆಗಿತ್ತು ಎಂದು ವಿಡೋಡೋ ಹೇಳಿದ್ದಾರೆ.

ಈ ಪಾಮ್ ಎಣ್ಣೆಯನ್ನು ಅಡುಗೆ ಎಣ್ಣೆಯಿಂದ ಸಂಸ್ಕರಿಸಿದ ಆಹಾರಗಳು, ಸೌಂದರ್ಯ ವರ್ಧಕಗಳು ಮತ್ತು ಜೈವಿಕ ಇಂಧನಗಳವರೆಗೆ ಉತ್ಪನ್ನಗಳಲ್ಲಿ ಬಳಸಲಾಗುತ್ತದೆ. ಇದು ವಿಶ್ವದ ಅತ್ಯಂತ ವ್ಯಾಪಕವಾಗಿ ಬಳಸಲಾಗುವ ಸಸ್ಯಜನ್ಯ ಎಣ್ಣೆಯಾಗಿದೆ. ಬಿಸ್ಕತ್ತುಗಳು, ಮಾರ್ಗರೀನ್, ಲಾಂಡ್ರಿ ಡಿಟರ್ಜೆಂಟ್‌ಗಳು ಮತ್ತು ಚಾಕೊಲೇಟ್ ಸೇರಿದಂತೆ ಹಲವು ಉತ್ಪನ್ನಗಳ ತಯಾರಿಕೆಯಲ್ಲಿ ಇದೇ ತಾಳೆ ಎಣ್ಣೆಯನ್ನು ಬಳಸಲಾಗುತ್ತದೆ.

Next Week Indonesia To Lift Ban On Palm Oil Exports

ಅಡುಗೆ ಎಣ್ಣೆ ಬೆಲೆ ನಿಯಂತ್ರಣ: ಕಳೆದ ಏಪ್ರಿಲ್ 28ರಂದು ನಿಷೇಧವು ಜಾರಿಗೆ ಬಂದ ನಂತರ ದೇಶೀಯ ಪೂರೈಕೆ ಮತ್ತು ಅಡುಗೆ ಎಣ್ಣೆಯ ಬೆಲೆ ಸುಧಾರಿಸಿದೆ. ಈ ಹಿನ್ನೆಲೆ ನಿಷೇಧವನ್ನು ತೆರವುಗೊಳಿಸುವುದಕ್ಕೆ ನಿರ್ಧರಿಸಲಾಗಿದೆ ಎಂದು ಇಂಡೋನೇಷ್ಯಾದ ಅಧ್ಯಕ್ಷ ಜೋಕೊ ವಿಡೋಡೊ ಹೇಳಿದರು. ನಿಷೇಧದ ನಂತರ ಬೆಲೆಗಳು ಲೀಟರ್‌ಗೆ 19,800 ರೂಪಾಯಿಗಳಿಂದ ($1.35) ಸುಮಾರು 17,200 ರೂಪಾಯಿಗಳಿಗೆ ($1.17) ಕುಸಿದಿದೆ. ನಿಷೇಧದ ನಂತರ ಅಡುಗೆ ಎಣ್ಣೆಯ ದೇಶೀಯ ಸರಬರಾಜು ತಿಂಗಳಿಗೆ 64,500 ಟನ್‌ಗಳಿಂದ 211,000 ಟನ್‌ಗಳಿಗೆ ಮೂರು ಪಟ್ಟು ಹೆಚ್ಚಾಗಿದೆ ಎಂದು ಅವರು ಹೇಳಿದರು.

Recommended Video

ಎಂಥಾ ಕ್ಯಾಚ್!!!ಮ್ಯಾಕ್ಸ್ವೆಲ್ ಹಿಡಿದ ಕ್ಯಾಚ್ ನೋಡಿ ಅಚ್ಚರಿಗೊಂಡ ಕ್ರಿಕೆಟ್ ಲೋಕ | OneIndia Kannada

ಇಂಡೋನೆಷ್ಯಾ ಜಗತ್ತಿಗೆ ಸರಬರಾಜು ಮಾಡುವ ಒಟ್ಟು ತಾಳೆ ಎಣ್ಣೆಯಲ್ಲಿ ಅರ್ಧಕ್ಕಿಂತ ಹೆಚ್ಚು ಪಾಮ್ ಆಯಿಲ್ ಅನ್ನು ಭಾರತ ಮತ್ತು ಚೀನಾ ರಾಷ್ಟ್ರಗಳೇ ಆಮದು ಮಾಡಿಕೊಳ್ಳುತ್ತವೆ. ಆ ಮೂಲಕ ಇಂಡೋನೆಷ್ಯಾದಿಂದ ಅತಿಹೆಚ್ಚು ಪಾಮ್ ಆಯಿಲ್ ಆಮದು ಮಾಡಿಕೊಳ್ಳುವ ರಾಷ್ಟ್ರಗಳಾಗಿವೆ. ಉಕ್ರೇನ್‌ನ ಮೇಲೆ ರಷ್ಯಾದ ಯುದ್ಧದ ನಂತರ ಜಾಗತಿಕ ಅಡುಗೆ ಎಣ್ಣೆಯ ಬೆಲೆಗಳು ಈ ವರ್ಷ ಏರಿಕೆಯಾಗಿವೆ. ಇದು ಆ ಪ್ರದೇಶದಿಂದ ಸೂರ್ಯಕಾಂತಿ ಎಣ್ಣೆಯ ಸಾಗಣೆಕೆಯ ಮೇಲೆ ಪೆಟ್ಟು ಕೊಟ್ಟಿತ್ತು.

English summary
Next Week Indonesia To Lift Ban On Palm Oil Exports. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X