ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರಗಳಲ್ಲಿ: ಮೋದಿಗೆ ಫಿದಾ ಆದ ಕೆನಡಾ ನಾಗರೀಕರು

|
Google Oneindia Kannada News

ಬೆಂಗಳೂರು, ಏ. 16: ಭಾರತದ ಪ್ರಧಾನಿ ನರೇಂದ್ರ ಮೋದಿ ಕೆನಡಾ ಪ್ರವಾಸ ಮುಗಿಸಿದ್ದಾರೆ. ಟೊರಂಟೋ ದಲ್ಲಿ ಭಾರತೀಯ ನಾಗರೀಕರನ್ನು ಉದ್ದೇಶಿಸಿ ಮಾತನಾಡಿದ್ದಾರೆ.

42 ವರ್ಷಗಳ ಬಳಿಕ ಕೆನಡಾಕ್ಕೆ ಭೇಟಿ ನೀಡಿದ ಭಾರತದ ಮೊದಲ ಪ್ರಧಾನಿ ಅನೇಕ ಒಪ್ಪಂದಗಳಿಗೆ ಸಹಿ ಹಾಕಿದರು. ಕೆನಡಾ ಇನ್ನು ಐದು ವರ್ಷಗಳ ಕಾಲ ಭಾರತಕ್ಕೆ ಪರಮಾಣು ಇಂಧನ (ಯುರೇನಿಯಂ) ಪೂರೈಕೆ ಮಾಡಲಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಕೆನಡಾ ಪ್ರಧಾನಿ ಸ್ಪೀಫನ್‌ ಹಾರ್ಪರ್‌ ಅವರು ಈ ಸಂಬಂಧ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. [ಕೆನಡಾದಲ್ಲಿ ಮೋದಿ ಭಾಷಣದ ಮುಖ್ಯಾಂಶಗಳು]

ಈ ಮೂಲಕ ನಾಗರೀಕ ಪರಮಾಣು ಇಂಧನ ವಲಯದಲ್ಲಿ ಉಭಯ ದೇಶಗಳು ದಶಕಗಳ ಬಳಿಕ ವಾಣಿಜ್ಯ ಸಹಕಾರವನ್ನು ಪುನರಾರಂಭಿಸಲಿವೆ. ಈ ಒಪ್ಪಂದದ ಪ್ರಕಾರ, ರಷ್ಯಾ, ಕಜಕಸ್ತಾನದ ಬಳಿಕ ಭಾರತಕ್ಕೆ ಯುರೇನಿಯಂ ಪೂರೈಕೆ ಮಾಡಲಿರುವ 3ನೇ ದೇಶ ಕೆನಡಾವಾಗಿದೆ.

ಸ್ವಾಗತವೂ ನಿಮಗೆ

ಸ್ವಾಗತವೂ ನಿಮಗೆ

ಟೊರಂಟೋದಲ್ಲಿ ಭಾರತೀಯ ಮೂಲದವರು ನರೇಂದ್ರ ಮೋದಿ ಅವರಿಗೆ ಭವ್ಯ ಸ್ವಾಗತ ಕೋರಿದರು. ನರೇಂದ್ರ ಮೋದಿ ಅವರೊಂದಿಗೆ ಫೋಟೋ ತೆಗೆಸಿಕೊಳ್ಳಲು ಮುಗಿಬಿದ್ದಿದ್ದು ಕಂಡು ಬಂತು.

ಕೆನಡಾದಲ್ಲಿ ಭಾರತೀಯ ನೃತ್ಯ

ಕೆನಡಾದಲ್ಲಿ ಭಾರತೀಯ ನೃತ್ಯ

ನರೇಂದ್ರ ಮೋದಿ ಅವರಿಗೆ ನೃತ್ಯದ ಸ್ವಾಗತ. ಟೊರಂಟೋ ವಿಮಾನ ನಿಲ್ದಾಣದಲ್ಲಿ ಇಳಿದ ನಂತರ ಪ್ರಧಾನಿ ಅವರನ್ನು ಬರಮಾಡಿಕೊಂಡ ನಂತರ ಭಾರತೀಯ ನೃತ್ಯಗಳ ಮೂಲಕ ಸ್ವಾಗತ ಕೋರಲಾಯಿತು

ಭೇಟಿ ದಾಖಲಿಸಿದ ಪ್ರಧಾನಿ

ಭೇಟಿ ದಾಖಲಿಸಿದ ಪ್ರಧಾನಿ

ಪ್ರಧಾನಿ ನರೇಂದ್ರ ಮೋದಿ ಸೆನೆಟ್ ಮತ್ತು ಹೌಸ್ ಆಫ್ ಕಾಮನ್ಸ್ ವಿಸಿಟರ್ ಪಟ್ಟಿಯಲ್ಲಿ ತಮ್ಮ ರುಜು ಮಾಡಿದರು. ಸ್ಟೀಫನ್ ಹಾರ್ಪರ್ ಹಾಜರಿದ್ದರು. ಪ್ರಧಾನಿ ಭೇಟಿ ಉಭಯ ದೇಶಗಳ ಇತಿಹಾಸದಲ್ಲಿ ಹೊಸ ಬಾಂಧ್ಯವ್ಯ ಬೆಸೆಯಿತು.

ಕೆನಡಾ ಪ್ರಧಾನಿ ಜತೆ ಹೆಜ್ಜೆ ಹಾಕಿದ ಮೋದಿ

ಕೆನಡಾ ಪ್ರಧಾನಿ ಜತೆ ಹೆಜ್ಜೆ ಹಾಕಿದ ಮೋದಿ

ಒಟ್ಟಾವದಿಂದ ಕೆನಡಾ ಪ್ರಧಾನಿ ಸ್ಟೀಫನ್ ಹಾರ್ಪರ್ ಜತೆ ಒಂದೇ ವಿಮಾನದಲ್ಲಿ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ. ಮೋದಿ ವಿದೇಶಿ ನಾಯಕರ ಜತೆ ಹೇಗೆ ವರ್ತಿಸಬೇಕು ಎಂಬುದನ್ನು ತೋರಿಸಿಕೊಟ್ಟರು. ಹಿಂದೆ ಒಬಾಮಾ ಭಾರತಕ್ಕೆ ಭೇಟಿ ನೀಡಿದ್ದಾಗ ಮೋದಿ-ಒಬಾಮಾ ಇಬ್ಬರೇ ಕುಳಿತು ಟೀ ಕುಡಿದಿದ್ದನ್ನು ಇಲ್ಲಿ ನೆನಪು ಮಾಡಿಕೊಳ್ಳಬಹುದು.

English summary
Narendra Modi's visit to Canada has become a huge hit among Indian diaspora in Toronto on Wednesday, April 15. Modi addressed the Indians living in Toronto. While speaking at Ricoh Coliseum in the city, the PM said, "There is one solution to all the problems and that is development".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X