• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನ್ಯೂಜಿಲೆಂಡಿನ ವೈಟ್ ಐಲ್ಯಾಂಡ್ ಅಗ್ನಿಪರ್ವತ ಸ್ಫೋಟ, ಐವರು ಬಲಿ

|

ವೆಲ್ಲಿಂಗ್ಟನ್, ಡಿಸೆಂಬರ್ 09: ನ್ಯೂಜಿಲೆಂಡಿನ ವೈಟ್ ಐಲ್ಯಾಂಡ್ ಅಗ್ನಿಪರ್ವತ ಸ್ಫೋಟಗೊಂಡಿದ್ದು, ಐದು ಮಂದಿ ಬಲಿಯಾಗಿದ್ದಾರೆ. ಸ್ಫೋಟದ ಸಂದರ್ಭದಲ್ಲಿ ಮೃತಪಟ್ಟವರು ಅಗ್ನಿಪರ್ವತ ನೋಡಲು ಹೋಗಿದ್ದ ಪ್ರವಾಸಿಗರು ಎಂದು ಸ್ಥಳೀಯ ಪೊಲೀಸರು ಹೇಳಿದ್ದಾರೆ.

ನ್ಯೂಜಿಲೆಂಡ್ ಸೇನೆ ಹಾಗೂ ಪೊಲೀಸರ ನೆರವಿನಿಂದ 23 ಮಂದಿಯನ್ನು ಈ ದ್ವೀಪದಿಂದ ಹೊರಕ್ಕೆ ತರಲಾಗಿದೆ. ವಾಕಾರಿ ಎಂದು ಕೂಡಾ ಕರೆಯಲ್ಪಡುವ ವೈಟ್ ಐಲ್ಯಾಂಡ್ ಸಕ್ರಿಯ ಅಗ್ನಿಪರ್ವತವಾಗಿದೆ. ಜೊತೆಗೆ ಖಾಸಗಿ ದ್ವೀಪವೂ ಇಲ್ಲಿದ್ದು, ಪ್ರಮುಖ ಪ್ರವಾಸಿ ತಾಣವಾಗಿದೆ.

ಪ್ರವಾಸಿಗರ ಪೈಕಿ ಮೈಕಲ್ ಸ್ಕಾಡೆ ಎಂಬುವರು ಅಗ್ನಿಪರ್ವತದಿಂದ ದಟ್ಟವಾದ ಹೊಗೆ ಹೊರಬರುವುದನ್ನು ಚಿತ್ರಿಸಿ ಟ್ವೀಟ್ ಮಾಡಿದ್ದಾರೆ. ಸ್ಫೋಟಗೊಳ್ಳುವುದಕ್ಕೂ 30 ನಿಮಿಷ ಮುಂಚೆ ಅಗ್ನಿ ಪರ್ವತ ಬಳಿ ಇದ್ದೆ ಎಂದಿದ್ದಾರೆ.

ಸುಮಾರು 50 ಮಂದಿ ಪ್ರವಾಸಿಗರು ದ್ವೀಪಕ್ಕೆ ಇಂದು ತೆರಳಿದ್ದರು. ಕೆಲವರು ರಾಯಲ್ ಕೆರಿಬಿಯನ್ ಒಡೆತನದ ಕ್ರೂಸ್ ಶಿಪ್ ಓವೇಷನ್ ಆಫ್ ದಿ ಸೀಸ್ ನಲ್ಲಿದ್ದರು. ಸದ್ಯ ವೈಟ್ ಐಲ್ಯಾಂಡ್ ಬಳಿಯ ಕರಾವಳಿ ನಗರಿ ಟಾರಂಗಾದಲ್ಲಿದೆ.

English summary
A volcano has erupted in New Zealand, leaving five dead and several unaccounted for, police have said.Tourists were seen walking inside the crater of White Island volcano just moments before the eruption.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X