ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹವಾಮಾನ ತುರ್ತು ಪರಿಸ್ಥಿತಿ ಘೋಷಿಸಿದ ನ್ಯೂಜಿಲೆಂಡ್ ಸರ್ಕಾರ

|
Google Oneindia Kannada News

ವೆಲ್ಲಿಂಗ್ಟನ್, ಡಿಸೆಂಬರ್ 02: ನ್ಯೂಜಿಲೆಂಡ್ ಸರ್ಕಾರವು ಸಾಂಕೇತಿಕವಾಗಿ ಹವಾಮಾನ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ.'

ಈ ಮೊದಲು ಜಪಾನ್, ಕೆನಡಾ, ಫ್ರಾನ್ಸ್ ಮತ್ತು ಬ್ರಿಟನ್ ಸೇರಿದಂತೆ 30 ಕ್ಕೂ ಹೆಚ್ಚು ರಾಷ್‌ಟರಗಳು ಹವಾಮಾನ ತುರ್ತು ಪರಿಸ್ಥಿತಿ ಘೋಷಿಸಿವೆ. ಈ ಸಾಂಕೇತಿಕ ಘೋಷಣೆಯ ನಿರ್ಣಯ ಕೈಗೊಳ್ಳುವ ಮೂಲಕ ಆ ರಾಷ್ಟ್ರಗಳ ಜತೆಗೆ ನ್ಯೂಜಿಲೆಂಡ್ ಕೂಡ ಸೇರಿಕೊಂಡಿದೆ.

ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ ಸಂದರ್ಶನದ ವೇಳೆ ತೀವ್ರ ಭೂಕಂಪ ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ ಸಂದರ್ಶನದ ವೇಳೆ ತೀವ್ರ ಭೂಕಂಪ

ಸರ್ಕಾರ ಕೈಗೊಂಡ ಈ ನಿರ್ಣಯದ ಪರವಾಗಿ 76 ಶಾಸಕರು ಮತ ಚಲಾಯಿಸಿದ್ದಾರೆ. 76-43 ಮತಗಳಿಂದ ಈ ನಿರ್ಣಯ ಅಂಗೀಕಾರಗೊಂಡಿದೆ. ಈ ಹವಾಮಾನ ತುರ್ತು ಪರಿಸ್ಥಿತಿ ಘೋಷಣೆ ಮುಂದಿನ ಪೀಳಿಗೆಯವರು ಎದುರಿಸಲಿರುವ ಪಾರಿಸಾರಿಕ ಬಿಕ್ಕಟ್ಟುಗಳಿಗೆ ಸೂಕ್ತ ಪರಿಹಾರವಾಗುತ್ತದೆ ಎಂದು ಜೆಸಿಂಡಾ ಹೇಳಿದ್ದಾರೆ.

New Zealand Symbolically Declares Climate Emergency

ಕಲ್ಲಿದ್ದಲ್ಲು ಬಾಯ್ಲರ್‌ಗಳನ್ನು ನಿಷೇಧ, ಎಲೆಕ್ಟ್ರಿಕ್ ಕಾರುಗಳ ಖರೀದಿಯಂತಹ ಉಪಕ್ರಮಗಳ ಮೂಲಕ ಸಾರ್ವಜನಿಕ ಸಂಸ್ಥೆಗಳು 2025ರ ವೇಳೆಗೆ ಇಂಗಾಲ ಹೊರಸೂಸುವಿಕೆಯನ್ನು ತಟಸ್ಥಗೊಳಿಸುವಂತಹ ಪ್ರಯತ್ನಗಳನ್ನು ಸರ್ಕಾರ ಆರಂಭಿಸಿದೆ.

ಸಾಮಾನ್ಯವಾಗಿ ನೈಸರ್ಗಿಕ ವಿಪತ್ತುಗಳಂತಹ ವಿಚಾರದಲ್ಲಿ ಆತ್ರ ಸರ್ಕಾರಗಳು ತುರ್ತು ಪರಿಸ್ಥಿತಿ ಘೋಷಿಸುತ್ತವೆ. ಆದರೆ ಹವಾಮಾನ ಬದಲಾವಣೆಯ ಸಮಸ್ಯೆಯನ್ನು ಪರಿಹರಿಸದಿದ್ದರೆ ನಿಸರ್ಗ ವಿಪತ್ತು ಸಂಭವಿಸುತ್ತಲೇ ಇರುತ್ತದೆ ಎಂದು ನ್ಯೂಜಿಲೆಂಡ್ ಪ್ರಧಾನಿ ಜೆಸಿಂಡಾ ಹೇಳಿದ್ದಾರೆ.

English summary
Joining more than 30 countries, New Zealand on Wednesday took the symbolic step of declaring a climate emergency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X