ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ್ಯೂಜಿಲೆಂಡಿನಲ್ಲಿ ಮತ್ತೆ ಕೊವಿಡ್ 19 ಪಾಸಿಟಿವ್ ಸೋಂಕು

|
Google Oneindia Kannada News

ವೆಲ್ಲಿಂಗ್ಟನ್, ಜೂನ್ 16: ಕೋವಿಡ್-19 ಪಾಸಿಟಿವ್ ಪ್ರಕರಣಗಳು ಒಂದಂಕಿಗೆ ಇಳಿದಿದೆ. ದೇಶದಿಂದ 'ಕೊರೊನಾ ವೈರಸ್ ಹೊರ ಹಾಕಿದ್ದೇವೆ' ಎಂದು ನ್ಯೂಜಿಲೆಂಡ್ ಪ್ರಧಾನಿ ಜೆಸಿಂಡಾ ಆರ್ಡೆರ್ನ್ ಕಚೇರಿ ಪ್ರಕಟಿಸಿ 10 ದಿನದೊಳಗೆ ಮತ್ತೆ ಕೊರೊನಾವೈರಸ್ ಸೋಂಕು ಕಾಣಿಸಿಕೊಂಡಿದೆ.

Recommended Video

Ramesh Aravind's week days with ramesh is start from June 18th | Oneindia Kannada

ಮಾರ್ಚ್ 23 ರಂದು ನ್ಯೂಜಿಲೆಂಡ್ ಮೂರನೇ ಹಂತದ ಲಾಕ್ ಡೌನ್ ಘೋಷಣೆಯಾಗಿತ್ತು. ಈ ಲಾಕ್ಡೌನ್ ಅವಧಿಯಲ್ಲಿ ಕಠಿಣ ಕ್ರಮ, ಸಾರ್ವಜನಿಕರ ನೆರವಿನಿಂದ ಸೋಂಕು ನಿಯಂತ್ರಣ ಸಾಧ್ಯವಾಗಿತ್ತು. ಅಗತ್ಯ ವಸ್ತುಗಳ ಮಾರಾಟ ಹೊರತುಪಡಿಸಿ ಎಲ್ಲಾ ರೀತಿಯ ವ್ಯಾಪಾರ-ವಹಿವಾಟು ಬಂದ್ ಆಗಿತ್ತು. ಶಾಲಾ-ಕಾಲೇಜು, ಸಾರ್ವಜನಿಕ ಕಾರ್ಯಕ್ರಮಗಳು, ಸಾರಿಗೆ ವ್ಯವಸ್ಥೆ ಸ್ಥಗಿತಗೊಂಡಿತ್ತು. ನೌಕರರು ಮನೆಯಿಂದಲೇ ಕೆಲಸ ಮಾಡಿದ್ದರು.

ಕೊವಿಡ್ 19 ಯುದ್ಧದಲ್ಲಿ ಗೆಲುವು ಸಾಧಿಸಿದ ನ್ಯೂಜಿಲೆಂಡ್ಕೊವಿಡ್ 19 ಯುದ್ಧದಲ್ಲಿ ಗೆಲುವು ಸಾಧಿಸಿದ ನ್ಯೂಜಿಲೆಂಡ್

ಆದರೆ, ಜೂನ್ ಮೊದಲ ವಾರ ಸೋಂಕಿತರ ಸಂಖ್ಯೆ ಗಣನೀಯವಾಗಿ ತಗ್ಗಿದ್ದರಿಂದ ಕೊರೊನಾಮುಕ್ತ ಎಂದು ಘೋಷಿಸಲಾಗಿತ್ತು. ಎಲ್ಲಾ ರೀತಿ ಮುಕ್ತ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ದೇಶಿ ವಿಮಾನಯಾನ, ಅಂತಾರಾಷ್ಟ್ರೀಯ ಗಡಿ ಬಂದ್ ಆಗಿತ್ತು. ಆದರೆ, ಯುಕೆಯಿಂದ ಬಂದ ಇಬ್ಬರು ಮಹಿಳಾ ಪ್ರಯಾಣಿಕರು ತಮ್ಮ ಜೊತೆಗೆ ವೈರಸ್ ಸೋಂಕನ್ನು ತಂದಿದ್ದಾರೆ.

 ಯುಕೆಯಿಂದ ಬಂದಿದ್ದ ಇಬ್ಬರು ಮಹಿಳೆಯರು

ಯುಕೆಯಿಂದ ಬಂದಿದ್ದ ಇಬ್ಬರು ಮಹಿಳೆಯರು

ಯುಕೆಯಿಂದ ಬಂದಿದ್ದ ಇಬ್ಬರು ಮಹಿಳೆಯರು ಆಕ್ಲೆಂಡ್ ನಿಂದ ವೆಲ್ಲಿಂಗ್ಟನ್ ತನಕ 650 ಕಿ.ಮೀ ದೂರದ ಪ್ರಯಾಣ ಮಾಡಿದ್ದಾರೆ. ಈ ಟ್ರಿಪ್ ಕೈಗೊಳ್ಳುವುದಕ್ಕೆ ಮೊದಲೇ ಇವರಿಗೆ ಕೊವಿಡ್ 19 ಪಾಸಿಟಿವ್ ಬಂದಿತ್ತು ಎಂಬುದು ಈಗ ದೃಢಪಟ್ಟಿದೆ. ಆದರೆ, ಕ್ವಾರಂಟೈನ್, ಐಸೊಲೇಷನ್ ಗೆ ಒಳಗಾಗದೆ ತಮ್ಮ ಪ್ರಯಾಣ ಮುಂದುವರೆಸಿದ್ದಾರೆ ಎಂದು ಆರೋಗ್ಯ ಅಧಿಕಾರಿ ಆಶ್ಲೆ ಬ್ಲೂಮ್ ಫೀಲ್ಡ್ ಹೇಳಿದ್ದಾರೆ.

 ಐಸೋಲೇಷನ್ ತಪ್ಪಿಸಿಕೊಂಡಿದ್ದರಿಂದ ಆತಂಕ

ಐಸೋಲೇಷನ್ ತಪ್ಪಿಸಿಕೊಂಡಿದ್ದರಿಂದ ಆತಂಕ

''ನ್ಯೂಜಿಲೆಂಡ್ ಗೆ ಬರುವ ಜನರು ಕಡ್ಡಾಯವಾಗಿ ಎರಡು ವಾರಗಳ ಕಾಲ ಸೆಲ್ಫ್-ಐಸೋಲೇಟ್ ಆಗಬೇಕು'' ಎಂಬ ನಿಯಮವನ್ನು ಪ್ರಧಾನಿ ಜಾರಿಗೆ ತಂದರು

ಮಾರ್ಚ್ 20ರಿಂದ ವಿದೇಶಿಯರ ಪ್ರವೇಶಕ್ಕೆ ನ್ಯೂಜಿಲೆಂಡ್ ನಿರ್ಬಂಧ ಹೇರಲಾಗಿತ್ತು. ಆದರೆ, ಕೊವಿಡ್ 19 ಲಕ್ಷಣಗಳು ಕಂಡು ಬಂದರೂ ಅಧಿಕಾರಿಗಳಿಗೆ ತಿಳಿಸದೆ ಐಸೋಲೇಷನ್ ತಪ್ಪಿಸಿಕೊಂಡು ಪ್ರವಾಸಕ್ಕೆ ತೆರಳಿರುವುದು ತಡವಾಗಿ ಗೊತ್ತಾಗಿದೆ.

 ಅತಿ ಹೆಚ್ಚು ಪರೀಕ್ಷೆ ನಡೆಸಿದ್ದ ನ್ಯೂಜಿಲೆಂಡ್

ಅತಿ ಹೆಚ್ಚು ಪರೀಕ್ಷೆ ನಡೆಸಿದ್ದ ನ್ಯೂಜಿಲೆಂಡ್

5 ಮಿಲಿಯನ್ ಜನಸಂಖ್ಯೆ ಹೊಂದಿರುವ ನ್ಯೂಜಿಲ್ಯಾಂಡ್ ನಲ್ಲಿ ಇಲ್ಲಿಯವರೆಗೂ 123,920 ಜನರಿಗೆ ಕೋವಿಡ್-19 ಪರೀಕ್ಷೆ ಮಾಡಲಾಗಿದೆ. 1504 ಪ್ರಕರಣಗಳ ಪೈಕಿ 22 ಮಂದಿ ಮೃತಪಟ್ಟಿದ್ದಾರೆ. ಕಳೆದ 24 ದಿನಗಳಲ್ಲಿ ಯಾವುದೇ ಹೊಸ ಕೇಸ್ ಪತ್ತೆಯಾಗಿರಲಿಲ್ಲ. ಆದರೆ, ಯುಕೆಯಿಂದ ದೋಹಾ, ಬ್ರಿಸ್ಬೇನ್ ಮೂಲಕ ನ್ಯೂಜಿಲೆಂಡ್ ಜೂನ್ 7ರಂದು ಬಂದಿರುವ ಈ ಇಬ್ಬರು 30 ರಿಂದ 40 ವರ್ಷ ವಯಸ್ಸಿನ ಆಸುಪಾಸಿನವರಿಂದ ಈಗ ಆತಂಕ ಹೆಚ್ಚಾಗಿದೆ.

 'ವರ್ಕ್ ಫ್ರಮ್ ಹೋಮ್' ಅನುಸರಿಸಿ ಗೆಲ್ಲಲಾಗಿತ್ತು

'ವರ್ಕ್ ಫ್ರಮ್ ಹೋಮ್' ಅನುಸರಿಸಿ ಗೆಲ್ಲಲಾಗಿತ್ತು

ಕಳೆದ ಎರಡು ತಿಂಗಳಿನಿಂದ 'ವರ್ಕ್ ಫ್ರಮ್ ಹೋಮ್' ಮಂತ್ರ ಜಪಿಸುತ್ತಿರುವ ನ್ಯೂಜಿಲೆಂಡ್ ಈಗ ಹೊಸ ಮಾದರಿ ಕಾರ್ಯ ನಿರ್ವಹಣೆಗೆ ಹೊಂದಿಕೊಂಡಿದೆ. ಆದರೆ, ಶಾಲೆ, ಜಿಮ್, ಲೈಬ್ರರಿ, ಮ್ಯೂಸಿಯಂಗಳನ್ನು ತೆರೆಯಲು ಅವಕಾಶ ನೀಡಲಾಗಿಲ್ಲ. ಮದುವೆ ಮತ್ತು ಅಂತ್ಯ ಸಂಸ್ಕಾರದ ಸಮಯದಲ್ಲಿ 10 ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ ಎಂಬ ನಿಯಮಗಳಿವೆ. ಅತಿ ಹೆಚ್ಚು ಪರೀಕ್ಷೆ ಹಾಗೂ ಕಠಿಣ ಲಾಕ್ಡೌನ್ ನಿಯಮಗಳ ಮೂಲಕ ಯುದ್ಧದಲ್ಲಿ ಗೆಲುವು ಸಾಧಿಸಲಾಗಿದೆ.

English summary
We are getting more details now of the two new Covid-19 cases in New Zealand – the first cases there for 24 days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X