ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Jacinda Ardern: ಚುನಾವಣೆಗೂ ಮುನ್ನಾ ರಾಜೀನಾಮೆ ಘೋಷಿಸಿದ ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ ಅರ್ಡೆರ್ನ್

|
Google Oneindia Kannada News

ವೆಲ್ಲಿಂಗ್ಟನ್, ಜನವರಿ, 19: ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ ಅರ್ಡೆರ್ನ್ ಮುಂದಿನ ತಿಂಗಳು ರಾಜೀನಾಮೆ ನೀಡುವುದಾಗಿ ಗುರುವಾರ ಘೋಷಿಸಿದ್ದಾರೆ.

ತಮ್ಮ ಲೇಬರ್ ಪಕ್ಷದ ಸದಸ್ಯರ ಸಭೆಯಲ್ಲಿ ಈ ಬಗ್ಗೆ ಘೋಷಿಸಿರುವ ಅವರು, ಅಕ್ಟೋಬರ್‌ನಲ್ಲಿ ಚುನಾವನೆ ನಡೆಯಲಿದ್ದು, ಮರುಚುನಾವಣೆ ಹೋರಾಡುವ ಶಕ್ತಿ ತನಗೆ ಇದೆ ಎಂಬ ನಂಬಿಕೆ ನನಗಿಲ್ಲ ಎಂದಿದ್ದಾರೆ.

Karnataka SSLC Exam 2023 :ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ವೇಳಾಪಟ್ಟಿಯಲ್ಲಿ ಬದಲಾವಣೆ , ಮಾಹಿತಿ ಇಲ್ಲಿದೆKarnataka SSLC Exam 2023 :ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ವೇಳಾಪಟ್ಟಿಯಲ್ಲಿ ಬದಲಾವಣೆ , ಮಾಹಿತಿ ಇಲ್ಲಿದೆ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಸಿಂಡಾ ಅರ್ಡೆರ್ನ್, ಫೆಬ್ರವರಿ 7 ರೊಳಗೆ ತನ್ನ ಅಧಿಕಾರಾವಧಿಯು ಕೊನೆಗೊಳ್ಳಲಿದೆ ಎಂದು ಹೇಳಿದ್ದಾರೆ.

New Zealand PM Jacinda Ardern Will Resign Next Month

2017 ರಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ಪ್ರಧಾನ ಮಂತ್ರಿಯಾದ ಜಸಿಂಡಾ ಅರ್ಡೆರ್ನ್, ಮೂರು ವರ್ಷಗಳ ನಂತರ ನಡೆದ ಚುನಾವಣೆಯಲ್ಲಿ ತನ್ನ ಕೇಂದ್ರ-ಎಡ ಲೇಬರ್ ಪಕ್ಷವನ್ನು ಸಮಗ್ರ ವಿಜಯದತ್ತ ಮುನ್ನಡೆಸಿದ್ದರು. ಇತ್ತೀಚಿನ ಸಮೀಕ್ಷೆಗಳಲ್ಲಿ ಅವರ ಪಕ್ಷ ಮತ್ತು ವೈಯಕ್ತಿಕ ಜನಪ್ರಿಯತೆ ಕುಸಿತ ಕಂಡಿದೆ.

ಅಕ್ಟೋಬರ್ 14 ರ ಶನಿವಾರದಂದು ಮುಂದಿನ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಅಲ್ಲಿಯವರೆಗೆ ಅವರು ಚುನಾವಣಾ ಸಂಸದರಾಗಿ ಮುಂದುವರಿಯುವುದಾಗಿ ಜಸಿಂಡಾ ಅರ್ಡೆರ್ನ್ ತಿಳಿಸಿದ್ದಾರೆ.

ರಾಜೀನಾಮೆ ನಿರ್ಧಾರವು ನನ್ನದೇ ಎಂದು ಹೇಳಿರುವ ಅವರು, "ದೇಶವನ್ನು ಮುನ್ನಡೆಸುವುದು ಅತ್ಯಂತ ವಿಶೇಷವಾದ ಕೆಲಸ. ಆದರೆ ಅತ್ಯಂತ ಸವಾಲಿನ ಕೆಲಸ. ನೀವು ಪೂರ್ಣ ಶಕ್ತಿ ಹೊಂದಿರದ ಹೊರತು ನೀವು ದೇಶವನ್ನು ಮುನ್ನಡೆಸಲು ಸಾಧ್ಯವಿಲ್ಲ. ಹಾಗೂ ಅಂತಹ ಕೆಲಸ ಮಾಡಬಾರದು. ನಾನು ಇನ್ನು ಆ ಶಕ್ತಿ ಹೊಂದಿಲ್ಲ" ಎಂದಿದ್ದಾರೆ.

2022 ರ ಕೊನೆಯಲ್ಲಿ ತಾನು ಪ್ರಧಾನ ಮಂತ್ರಿಯಾಗಿ ಮುಂದುವರಿಯಬಹುದೇ ಬೇಡವೆ ಎಂಬ ಬಗ್ಗೆ ತೀರ್ಮಾನ ಮಾಡಲು ಜಸಿಂಡಾ ಅರ್ಡೆರ್ನ್ ಸಮಯ ತೆಗೆದುಕೊಂಡಿದ್ದರು. ಅಂತಿಮವಾಗಿ ಗುರುವಾರ ತಾನು ಪ್ರಧಾನಿ ಸ್ಥಾನದಿಮದ ಕೆಳಗಿಳಿಯುವ ಸಮಯವಿದು ಎಂದು ಘೋಷಣೆ ಮಾಡಿದ್ದಾರೆ. ಈ ಆರಂಭಿಕ ಪ್ರಕಟಣೆಯು ಸರ್ಕಾರಿ ಸಂಸ್ಥೆಗಳು ಮತ್ತು ರಾಜಕೀಯ ಪಕ್ಷಗಳ ಯೋಜನೆ ಮತ್ತು ಸಿದ್ಧತೆಗೆ ಅವಕಾಶ ನೀಡುತ್ತದೆ ಎಂದು ಹೇಳಿದ್ದಾರೆ.

ಜಸಿಂಡಾ ಅರ್ಡೆರ್ನ್ 2017 ರಲ್ಲಿ 37 ನೇ ವಯಸ್ಸಿನಲ್ಲಿ ಪ್ರಧಾನ ಮಂತ್ರಿಯಾದವರು. ನ್ಯೂಜಿಲೆಂಡ್‌ನ ಮೂರನೇ ಮಹಿಳಾ ನಾಯಕಿ ಮತ್ತು ವಿಶ್ವದ ಅತ್ಯಂತ ಕಿರಿಯ ನಾಯಕರಲ್ಲಿ ಒಬ್ಬರಾಗಿದ್ದರು.

ಅವರು 2020 ರಲ್ಲಿ ಎರಡನೇ ಅವಧಿಗೆ ಜಸಿಂಡಾ ಅರ್ಡೆರ್ನ್ ಮರು ಆಯ್ಕೆಯಾಗಿದ್ದರು. ಸಾಂಕ್ರಾಮಿಕ ರೋಗದ ಸಮಯದಲ್ಲಿ ಆಕೆಯ ನೇತೃತ್ವದ ಸರ್ಕಾರ ತೆಗೆದುಕೊಂಡ ಕ್ರಮಗಳು ವಿಶ್ವದಲ್ಲಿ ಬಾರಿ ಶ್ಲಾಘನೆ ಪಡೆಯಿತು.

ಗುರುವಾರ ಜಸಿಂಡಾ ಅವರ ರಾಜೀನಾಮೆ ಘೋಷಣೆ ನಂತರ ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಆಂಥೋನಿ ಅಲ್ಬನೀಸ್ ಅವರು ಜಸಿಂಡಾ ಅರ್ಡೆರ್ನ್ ಅವರನ್ನು ಶ್ಲಾಘಿಸಿದ್ದಾರೆ. "ಅವರು ಬುದ್ಧಿವಂತಿಕೆ ಮತ್ತು ಶಕ್ತಿಯೊಂದಿಗೆ ಹೇಗೆ ಮುನ್ನಡೆಸಬೇಕು ಎಂಬುದನ್ನು ಜಗತ್ತಿಗೆ ತೋರಿಸಿದ್ದಾರೆ. ಆಕೆ ನನಗೆ ಉತ್ತಮ ಸ್ನೇಹಿತೆ" ಎಂದು ಹೇಳಿದ್ದಾರೆ.

English summary
New Zealand Prime Minister Jacinda Ardern announced she will resign next month. The general election will be held on October 14. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X