ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಸದರ ಶಿಶುವಿಗೆ ಸಂಸತ್ತಿನಲ್ಲೇ ಹಾಲುಣಿಸಿದ ಸ್ಪೀಕರ್, ಚಿತ್ರ ವೈರಲ್

|
Google Oneindia Kannada News

ವೆಲ್ಲಿಂಗ್ಟನ್, ಆಗಸ್ಟ್ 22: ನ್ಯೂಜಿಲೆಂಡಿನ ಸಂಸದರೊಬ್ಬರ ಪುಟ್ಟ ಮಗುವನ್ನು ಸಂಸತ್ತಿನಲ್ಲಿ ಸ್ಪೀಕರ್ ತಮ್ಮ ಮಡಿಲಲ್ಲಿ ಮಲಗಿಸಿಕೊಂಡು, ಅದಕ್ಕೆ ಹಾಲುಣಿಸುತ್ತಿರುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ತಾವು ಸಂಸದರೊಬ್ಬರ ಶಿಶುವನ್ನು ಎತ್ತಿಕೊಂಡು, ಹಾಲುಣಿಸುತ್ತಿರುವ ಚಿತ್ರವನ್ನು ಸ್ಪೀಕರ್ ಟ್ರೆವಾರ್ ಮಲ್ಲಾರ್ಡ್ ಟ್ವೀಟ್ ಮಾಡಿದ್ದು, "ಸಹಜವಾಗಿ ಈ ಸ್ಪೀಕರ್ ಕುರ್ಚಿಯಲ್ಲಿ ಆ ಅಧಿಕಾರ ಇರುವವರನ್ನು ಬಿಟ್ಟರೆ ಬೇರೆಯವರು ಕೂರುವಂತಿಲ್ಲ. ಆದರೆ ಇಂದು ನನ್ನೊಂದಿಗೆ ಈ ಖುರ್ಚಿಯಲ್ಲಿ ವಿಐಪಿಯೊಬ್ಬರು ಕೂತಿದ್ದರು" ಎಂದಿದ್ದಾರೆ.

 3 ತಿಂಗಳ ಮುದ್ದು ಮಗಳ ಜೊತೆ ವಿಶ್ವಸಂಸ್ಥೆಗೆ ಬಂದ ಜೆಸಿಂಡ! 3 ತಿಂಗಳ ಮುದ್ದು ಮಗಳ ಜೊತೆ ವಿಶ್ವಸಂಸ್ಥೆಗೆ ಬಂದ ಜೆಸಿಂಡ!

ಅವರ ಈ ಪೋಸ್ಟ್ ಅನ್ನು ಸರಿಸುಮಾರು 11 ಸಾವಿರಕ್ಕೂ ಹೆಚ್ಚು ಜನ ಮೆಚ್ಚಿಕೊಂಡಿದ್ದರೆ, ಎರಡೂವರೆ ಸಾವಿರಕ್ಕೂ ಹೆಚ್ಚು ಜನ ಶೇರ್ ಮಾಡಿದ್ದಾರೆ. ಇದು ಸಂಸದರಾದ ಟಮಾಟಿ ಕೊಫಿ ಎಂಬುವವರ ಮಗುವಾಗಿದ್ದು, ಟಮಾಟಿ ಅವರಿಗೆ ಸ್ಪೀಕರ್ ಅಭಿನಂದನೆ ಸಲ್ಲಿಸಿದ್ದಾರೆ.

New Zealand: parliament speaker feeds baby during debate, Picture goes viral

ಆಸ್ಟ್ರೇಲಿಯನ್ ಗ್ರೀನ್ಸ್ ಸೆನೆಟರ್ ಲಾರಿಸ್ಸಾ ವಾಟರ್ಸ್ ಅವರು ಪ್ರಪ್ರಥಮ ಬಾರಿಗೆ ಸಂಸತ್ತಿನಲ್ಲಿ ತಮ್ಮ ಮಗುವಿಗೆ ಹಾಲುಣಿಸಿ ಇತಿಹಾಸ ನಿರ್ಮಿಸಿದ್ದರು.

ತನ್ನ ಹೆರಿಗೆಗೆ ಸೈಕಲ್ ಏರಿ ಆಸ್ಪತ್ರೆಗೆ ತೆರಳಿದ ಸಚಿವೆಯ ಸಾಹಸ ನೋಡಿ! ತನ್ನ ಹೆರಿಗೆಗೆ ಸೈಕಲ್ ಏರಿ ಆಸ್ಪತ್ರೆಗೆ ತೆರಳಿದ ಸಚಿವೆಯ ಸಾಹಸ ನೋಡಿ!

ಕಳೆದ ಸೆಪ್ಟೆಂಬರ್ ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿದ್ದ ನ್ಯೂಜಿಲೆಂಡ್ ಪ್ರಧಾನಿ ಜಸಿಂಡ ಆರ್ಡೆನ್, ತಮ್ಮ ಮೂರು ತಿಂಗಳ ಶಿಶುವನ್ನು ಸಭೆಗೆ ಕರೆತಂದು ಇತಿಹಾಸ ನಿರ್ಮಿಸಿದ್ದರು.

ಮೂರು ತಿಂಗಳ ಬಾಣಂತಿಯಾಗಿದ್ದರೂ ಮಗುವನ್ನು ಹೊತ್ತೇ ವಿಶ್ವಸಂಸ್ಥೆಯ ಸಾಮಾನ್ಯ ಸಭೆಗೆ ಆಗಮಿಸಿದ ಜೆಸಿಂಡ ಅವರ ಕರ್ತವ್ಯ ಪ್ರಜ್ಞೆಗೆ ವಿಶ್ವವೇ ತಲೆಬಾಗಿತ್ತು.

English summary
The speaker of New Zealand's parliament, Trevor Mallard, cradling and bottle-feeding a lawmaker's baby during a debate has gone viral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X