ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

51 ಜನರನ್ನು ಕೊಂದವನಿಗೆ ಕಠಿಣಾತಿಕಠಿಣ ಶಿಕ್ಷೆ..!

|
Google Oneindia Kannada News

ನ್ಯೂಜಿಲ್ಯಾಂಡ್ನಲ್ಲಿ ಮಸೀದಿಗೆ ನುಗ್ಗಿ ಪ್ರಾರ್ಥನೆ ಮಾಡುತ್ತಿದ್ದವರ ಮೇಲೆ ಮನಸ್ಸಿಗೆ ಬಂದಂತೆ ಗುಂಡು ಹಾರಿಸಿ 51 ಜನರನ್ನು ಹತ್ಯೆಗೈದಿದ್ದ ಹಂತಕನಿಗೆ ಜೀವಿತಾವಧಿ ಶಿಕ್ಷೆಯಾಗಿದೆ. ಹಂತಕ ಬ್ರೆಂಟನ್ ಟ್ಯಾರಂಟ್‌ ಸಾಯುವವರೆಗೂ ಜೈಲಿನಲ್ಲೇ ಕೊಳೆಯಬೇಕಿದೆ. ಅಲ್ಲದೆ ಆರೋಪಿಗೆ ಶಿಕ್ಷೆ ಅವಧಿಯಲ್ಲಿ ಕಲ್ಪಿಸಲಾಗುವ ರಜೆ ಸೌಲಭ್ಯವನ್ನೂ ನೀಡದೆ, ಪೆರೋಲ್ ರದ್ದುಗೊಳಿಸಲಾಗಿದೆ.

Recommended Video

NEET ವಿಷಯದಲ್ಲಿ ರಾಜಕೀಯ ಮಾಡಲು ಬಿಡುವುದಿಲ್ಲ.. | Oneindia Kannada

ಬ್ರೆಂಟನ್ ಟ್ಯಾರಂಟ್‌ ನ್ಯೂಜಿಲ್ಯಾಂಡ್ನಲ್ಲಿ ಇಷ್ಟು ಕಠಿಣ ಶಿಕ್ಷೆ ಪಡೆಯುತ್ತಿರುವ ಮೊದಲ ವ್ಯಕ್ತಿಯಾಗಿದ್ದಾನೆ. ಬ್ರೆಂಟನ್ ಟ್ಯಾರಂಟ್ ಕೃತ್ಯವು ಅಮಾನವೀಯ ಎಂದಿರುವ ನ್ಯೂಜಿಲ್ಯಾಂಡ್ ಕೋರ್ಟ್ ಹಂತಕನನ್ನು ಸಮಾಜದಲ್ಲಿ ಬದುಕುವ ಅರ್ಹತೆ ಇಲ್ಲದವನು ಎಂದಿದೆ.

ಮಸೀದಿ ಮೇಲೆ ದಾಳಿ: ಪಾತಕಿಗೆ ಇತಿಹಾಸದ ಹೋರಾಟಗಳೇ ಸ್ಫೂರ್ತಿಮಸೀದಿ ಮೇಲೆ ದಾಳಿ: ಪಾತಕಿಗೆ ಇತಿಹಾಸದ ಹೋರಾಟಗಳೇ ಸ್ಫೂರ್ತಿ

ತೀರ್ಪು ಪ್ರಕಟಣೆ ಸಂದರ್ಭ ನ್ಯಾಯಾಧೀಶ ಕ್ಯಾಮರಾನ್ ಮಂಡೆರ್ ಹಂತಕನ ಬಗ್ಗೆ ವಿಷಾದದ ಮಾತುಗಳನ್ನಾಡಿದ್ದಾರೆ.ಜನಾಂಗೀಯವಾದದ ವಿಷ ತುಂಬಿಕೊಂಡ ಬ್ರೆಂಟನ್ ಟ್ಯಾರಂಟ್ ಸಾರ್ವಜನಿಕ ಸಮಾಜದಲ್ಲಿ ಬದುಕುವ ಅರ್ಹತೆಯನ್ನೇ ಹೊಂದಿಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ. ಇದೇ ಕಾರಣಕ್ಕೆ ಬ್ರೆಂಟನ್ ಟ್ಯಾರಂಟ್‌ಗೆ ಪೆರೋಲ್ ರಹಿತ ಜೀವಾವಧಿ ಶಿಕ್ಷೆ ಪ್ರಕಟಿಸಲಾಗಿದ್ದು, ಈ ಮೂಲಕ ನ್ಯೂಜಿಲ್ಯಾಂಡ್ ಇತಿಹಾಸದಲ್ಲೇ ನಡೆದ ಭೀಕರ ಗುಂಡಿನ ದಾಳಿ ಪ್ರಕರಣದ ವಿಚಾರಣೆ ಮುಕ್ತಾಯವಾಗಿದೆ.

ಹೇಗೆ ನಡೆದಿತ್ತು ಭೀಕರ ದಾಳಿ..?

ಹೇಗೆ ನಡೆದಿತ್ತು ಭೀಕರ ದಾಳಿ..?

ಮಾರ್ಚ್ 15, 2019ರಲ್ಲಿ ಒಟ್ಟು 5 ಗನ್ ಗಳನ್ನು ಹಿಡಿದು ಕ್ರೈಸ್ಟ್‌ಚರ್ಚ್‌ ಮಸೀದಿಗೆ ನುಗ್ಗಿದ ಆಸ್ಟ್ರೆಲೀಯಾ ಮೂಲದ ಹಂತಕ, ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದವರ ಮೇಲೆ ಮನಬಂದಂತೆ ಗುಂಡು ಹಾರಿಸಿದ್ದ. ಮಕ್ಕಳು, ಮಹಿಳೆಯರು ಸೇರಿ 51 ಜನರನ್ನು ಹತ್ಯೆಗೈದಿದ್ದ. ಅಷ್ಟೇ ಅಲ್ಲದೆ ಮಸೀದಿಗೆ ನುಗ್ಗಿ ದಾಳಿ ಮಾಡುತ್ತಿರುವುದನ್ನು ಲೈವ್ ವಿಡಿಯೋ ಮಾಡಿಕೊಂಡಿದ್ದ ಬ್ರೆಂಟನ್ ಟ್ಯಾರಂಟ್‌.

ಚಿತ್ರದಲ್ಲಿ: ನ್ಯಾಯಾಲಯದಲ್ಲಿ ಆಸ್ಟ್ರೇಲಿಯಾ ಮೂಲದ ಬ್ರೆಂಟನ್ ಹ್ಯಾರಿಸನ್ ಟರೆಂಟ್(29)

ಜನಾಂಗೀಯ ವಿಷ ಕಾರುತ್ತಿದ್ದ ಬ್ರೆಂಟನ್

ಜನಾಂಗೀಯ ವಿಷ ಕಾರುತ್ತಿದ್ದ ಬ್ರೆಂಟನ್

ಜನಾಂಗೀಯ ವಿಷ ಕಾರುತ್ತಿದ್ದ ಬ್ರೆಂಟನ್ ತನ್ನನ್ನು ಬಿಳಿಯರ ಪರ ಹೋರಾಟಗಾರ ಎಂದು ಕರೆದುಕೊಂಡಿದ್ದ. ಈ ದಾಳಿಯನ್ನು ಕಂಡು ಇಡೀ ಜಗತ್ತು ಬೆಚ್ಚಿಬಿದ್ದಿತ್ತು. ಈ ಘಟನೆ ನಂತರ ನ್ಯೂಜಿಲ್ಯಾಂಡ್ ಪ್ರಧಾನಿ ಜೆಸಿಂಡಾ ಅರ್ಡೆರ್ನ್, ಮಿಲಿಟರಿ ವೆಪನ್ ಗಳ ಮಾರಾಟವನ್ನು ದೇಶದಲ್ಲಿ ನಿರ್ಬಂಧಿಸಿದ್ದರು. ಈ ಮೂಲಕ ಸಾರ್ವಜನಿಕರಿಗೆ ಮಿಲಿಟರಿ ವೆಪನ್ಗಳು ಸಿಗುವುದನ್ನು ತಡೆದಿದ್ದರು.

'1992ರ ಬಳಿಕ ಮೊದಲ ಶೂಟೌಟ್ ನ್ಯೂಜಿಲೆಂಡ್‌ಗೆ ಇಂದು ಕರಾಳದಿನ''1992ರ ಬಳಿಕ ಮೊದಲ ಶೂಟೌಟ್ ನ್ಯೂಜಿಲೆಂಡ್‌ಗೆ ಇಂದು ಕರಾಳದಿನ'

ಚಿತ್ರದಲ್ಲಿ: ಮನಲ್ ಡೊಖಾನ್

ತೀರ್ಪನ್ನು ಎಲ್ಲರೂ ಸ್ವಾಗತಿಸಿದ್ದಾರೆ

ತೀರ್ಪನ್ನು ಎಲ್ಲರೂ ಸ್ವಾಗತಿಸಿದ್ದಾರೆ

ನ್ಯೂಜಿಲ್ಯಾಂಡ್ನಲ್ಲಿ ಮಸೀದಿಯಲ್ಲಿ ಹತ್ಯೆ ನಡೆದಿದಾಗಿನಿಂದಲೂ ಅದನ್ನ ತೀವ್ರವಾಗಿ ಖಂಡಿಸುತ್ತಾ ಬಂದಿದ್ದ ಜೆಸಿಂಡಾ ಅರ್ಡೆರ್ನ್, ಇಂದಿನ ತೀರ್ಪನ್ನು ಸ್ವಾಗತಿಸಿದ್ದಾರೆ. ಮುಗ್ಧರನ್ನು ಬಲಿ ಪಡೆದಿರುವ ಕ್ರೂರಿ ಇನ್ನು ಜೈಲು ಕಂಬಿಗಳ ಹಿಂದೆ ಮೌನವಾಗಿ ಮತ್ತು ಏಕಾಂಗಿಯಾಗಿ ಶಿಕ್ಷೆ ಅನುಭವಿಸಲಿದ್ದಾನೆ ಎನ್ನುವ ಮೂಲಕ ತೀರ್ಪನ್ನು ಸ್ವಾಗತಿಸಿದ್ದಾರೆ.

ಚಿತ್ರದಲ್ಲಿ: ಮಸೀದಿ ಶೂಟಿಂಗ್ ಸಂತ್ರಸ್ತ ತಾಜ್ ಮೊಹಮ್ಮದ್ ಕ್ರಮಾನ್

ನ್ಯೂಜಿಲ್ಯಾಂಡ್ ಪ್ರಧಾನಿ ಹೇಳಿದ್ದೇನು..?

ನ್ಯೂಜಿಲ್ಯಾಂಡ್ ಪ್ರಧಾನಿ ಹೇಳಿದ್ದೇನು..?

ಘಟನೆ ನಡೆದಾಗಲೂ ನ್ಯೂಜಿಲ್ಯಾಂಡ್ ಪ್ರಧಾನಿ ಜೆಸಿಂಡಾ ಅರ್ಡೆರ್ನ್ ಜನಾಂಗೀಯವಾದವನ್ನು ತೀವ್ರವಾಗಿ ಖಂಡಿಸಿದ್ದರು. ಅಲ್ಲದೆ ಹಂತಕನಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದ್ದರು. ಒಟ್ಟಿನಲ್ಲಿ ನ್ಯೂಜಿಲ್ಯಾಂಡ್ ಇತಿಹಾಸದಲ್ಲೇ ಭೀಕರ ಹತ್ಯಾಕಾಂಡ ನಡೆಸಿದ್ದ ಕ್ರೂರಿಗೆ ಕಠಿಣವಾದ ಶಿಕ್ಷೆಯನ್ನೇ ವಿಧಿಸಲಾಗಿದೆ.

English summary
New Zealand mosque gunman Brenton Tarrant sentenced to life in prison without parole. He was attacked mosque in Christchurch on 15 March 2019, And Brenton Tarrant where killed 51 people in that attack.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X