ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತನ್ನ ಹೆರಿಗೆಗೆ ಸೈಕಲ್ ಏರಿ ಆಸ್ಪತ್ರೆಗೆ ತೆರಳಿದ ಸಚಿವೆಯ ಸಾಹಸ ನೋಡಿ!

|
Google Oneindia Kannada News

ಆಕ್ಲೆಂಡ್(ನ್ಯೂಜಿಲೆಂಡ್), ಆಗಸ್ಟ್ 21: ನ್ಯೂಜಿಲೆಂಡಿನ ಮಹಿಳಾ ಸಚಿವೆ ಜ್ಯೂಲಿ ಆನ್ನ್ ಜೆಂಟರ್ ತನ್ನ ಹೆರಿಗೆಗೆಂದು ಸೈಕಲ್ ಏರಿ ಆಸ್ಪತ್ರೆಗೆ ತೆರಳುವ ಮೂಲಕ ಹುಬ್ಬೇರಿಸುವಂತೆ ಮಾಡಿದ್ದಾರೆ.

ಗರ್ಭಿಣಿಯಾದವಳು ನಾಲ್ಕು ಹೆಜ್ಜೆ ನಡೆದಾಡಿದರೇನೇ 'ಅಯ್ಯೋ ಭ್ರೂಣಕ್ಕೆ ತೊಂದರೆ ಆಗುತ್ತೆ' ಅನ್ನೋ ಜನರಿರುವ ಕಾಲದಲ್ಲಿ ತನ್ನದೇ ಹೆರಿಗೆಗೆ, ತಾನೇ ಸೈಕಲ್ ಓಡಿಸಿಕೊಂಡು ಆಸ್ಪತ್ರೆಗೆ ಹೋಗೋದಂದ್ರೆ ಸಾಮಾನ್ಯ ವಿಷಯಾನಾ?

New Zealand minister cycles to hospital for her delivery

38 ವರ್ಷದ ಜ್ಯೂಲಿ, ನ್ಯೂಜಿಲೆಂಡಿನ ಮಹಿಳಾ ಸಚಿವೆ. 'ನನಗೆ ಕಾರಿಗಿಂತ ಸೈಕಲ್ ನಲ್ಲಿ ಬರುವುದೇ ಹೆಚ್ಚು ಆರಾಮು ಅನ್ನಿಸಿದ್ದರಿಂದ ಹೀಗೆ ಬಂದೆ. ನಾನು ಆರೋಗ್ಯವಾಗಿದ್ದೇನೆ. ಹೆರಿಗೆ ಒಂದು ಸಹಜ ಪ್ರಕ್ರಿಯೆಯಷ್ಟೆ. ಅದಕ್ಕೆ ಆತಂಕಪಡುವ ಅಗತ್ಯವಿಲ್ಲ' ಎನ್ನುತ್ತಾರೆ ಜ್ಯೂಲಿ!

ಕಾರವಾರ: ಆಂಬುಲೆನ್ಸ್ ನಲ್ಲಿಯೇ ಅವಳಿ ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿಕಾರವಾರ: ಆಂಬುಲೆನ್ಸ್ ನಲ್ಲಿಯೇ ಅವಳಿ ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ

ಇಲ್ಲಿನ ಆಕ್ಲೆಂಡ್ ಸಿಟಿ ಆಸ್ಪತ್ರೆಗೆ ದಾಖಲಾಗಿರುವ ಜ್ಯೂಲಿ, ತಾವು ಸೈಕಲ್ ನಲ್ಲಿ ಆಸ್ಪತ್ರೆಗೆ ತೆರಳಿದ ಚಿತ್ರವನ್ನು ಇನ್ ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಿದ್ದಾರೆ. ತಾವು ಕೇವಲ ಮೂರು ತಿಂಗಳಷ್ಟೇ ಮಾತೃತ್ವದ ರಜೆ ತೆಗೆದುಕೊಳ್ಳುತ್ತೇನೆ, ನಂತರ ಮಗುವಿನೊಂದಿಗೇ ಕೆಲಸಕ್ಕೆ ಹಾಜರಾಗುತ್ತೇನೆ ಎಂದು ತುಂಬು ವಿಶ್ವಾಸದಿಂದ ನುಡಿಯುತ್ತಾರೆ ಜ್ಯೂಲಿ!

ಇತ್ತೀಚೆಗಷ್ಟೇ ನ್ಯೂಜಿಲೆಂಡ್ ಪ್ರಧಾನಿ ಜಸಿಂದಾ ಆರ್ಡೆನ್ ಅವರು ಅಧಿಕಾರದಲ್ಲಿರುವ ಸಂದರ್ಭದಲ್ಲೇ ಮಗುವಿಗೆ ಜನ್ಮ ನೀಡಿದ್ದರು. ಹಾಗೆಯೇ ಪಾಕಿಸ್ತಾನದ ಪ್ರಧಾನಿಯಾಗಿದ್ದ ಬೆನೆಜಿರ್ ಬುಟ್ಟೊ ಅವರೂ, ಅಧಿಕಾರದಲ್ಲಿದ್ದಾಗಲೇ ಮಗುವಿಗೆ ಜನ್ಮನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
New Zealand’s Minister for Women, Julie Anne Genter, has taken the internet by storm by cycling to a hospital to give birth to her first baby.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X