ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Stuff ಸುದ್ದಿ: ಇಡೀ ಸುದ್ದಿಸಂಸ್ಥೆ ಖರೀದಿಸಲು ಕೇವಲ 46.61 ರೂಪಾಯಿ!

|
Google Oneindia Kannada News

ವೆಲ್ಲಿಂಗ್ಟನ್, ಮೇ.26: ಕೊರೊನಾ ವೈರಸ್ ಹರಡುವಿಕೆ ಹಾಗೂ ಲಾಕ್ ಡೌನ್ ನಿಂದಾಗಿ ಸಾವಿರಾರು ಕಂಪನಿಗಳು ಬಾಗಿಲು ಹಾಕಿಕೊಳ್ಳುತ್ತಿವೆ. ಆದಾಯವಿಲ್ಲದೇ ಸಂಸ್ಥೆಗಳು ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಲಾಗುತ್ತಿದೆ.

Recommended Video

ಹೊಸ ಹೊಸ ಬೆಂಗಳೂರಿನ ಏರಿಯಾಗಳಲ್ಲಿ ಕೊರೊನ | Corona Erupting in Wards of Bangalore | Oneindia Kannada

ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡು ನಿರುದ್ಯೋಗಿಗಳಾಗಿ ಮನೆಯಲ್ಲಿ ಕುಳಿತುಕೊಂಡಿದ್ದಾರೆ. ಸಾವಿರಾರು ಕಂಪನಿಗಳು ಆದಾಯವಿಲ್ಲದೇ ನಷ್ಟದಲ್ಲಿವೆ. ಇದರ ನಡುವೆ ನ್ಯೂಜಿಲೆಂಡ್ ಸುದ್ದಿ ಸಂಸ್ಥೆಯೊಂದು ಕೇವಲ 1 ನ್ಯೂಜಿಲೆಂಡ್ ಡಾಲರ್(46.61 ರೂಪಾಯಿ)ಗೆ ಮಾರಾಟವಾಗಿದೆ.

ಫಿಲಿಪೈನ್ಸ್‌ನ ಅತಿದೊಡ್ಡ ಟಿವಿ ಚಾನೆಲ್‌ನ ಕಾರ್ಯಾಚರಣೆ ನಿಲ್ಲಿಸಲು ಆದೇಶಫಿಲಿಪೈನ್ಸ್‌ನ ಅತಿದೊಡ್ಡ ಟಿವಿ ಚಾನೆಲ್‌ನ ಕಾರ್ಯಾಚರಣೆ ನಿಲ್ಲಿಸಲು ಆದೇಶ

ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದೊಂದು ಸುದ್ದಿ ಸಾಕಷ್ಟು ಸದ್ದು ಮಾಡುತ್ತಿದೆ. ಆಸ್ಟ್ರೇಲಿಯನ್ ಮೂಲದ Nine Entertainment ಸಮೂಹ ಸಂಸ್ಥೆಯ ಅಂಗಸಂಸ್ಥೆ ನ್ಯೂಜಿಲೆಂಡ್ ನಲ್ಲಿರುವ Stuff.Co.NZ ವೆಬ್ ಸೈಟ್ ನ್ನು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿನೀಡ್ ಬೌಚರ್ 1 ನ್ಯೂಜಿಲೆಂಡ್ ಡಾಲರ್ ನೀಡಿ ಖರೀದಿಸಿದ್ದಾರೆ.

1 ಡಾಲರ್ ಗೆ ಸ್ಟಫ್ ಮಾರಾಟದ ಬಗ್ಗೆ ಸ್ಪಷ್ಟನೆ

1 ಡಾಲರ್ ಗೆ ಸ್ಟಫ್ ಮಾರಾಟದ ಬಗ್ಗೆ ಸ್ಪಷ್ಟನೆ

ನ್ಯೂಜಿಲೆಂಡ್ ಬಹುದೊಡ್ಡ ಸುದ್ದಿ ಸಮೂಹದ ಅಂಗ ಸಂಸ್ಥೆಯಾಗಿರುವ Stuff.Co.NZ ವೆಬ್ ಸೈಟ್ ನ್ನು ಕೇವಲ ಒಂದು ನ್ಯೂಜಿಲೆಂಡ್ ಡಾಲರ್(46.61 ರೂಪಾಯಿ)ಗೆ ಖರೀದಿಸಿರುವ ಬಗ್ಗೆ ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿನೀಡ್ ಬೌಚರ್ ಸ್ಪಷ್ಟನೆ ನೀಡಿದ್ದಾರೆ. ಸ್ಟಫ್ ಸಂಸ್ಥೆಯನ್ನು ಖರೀದಿಸುತ್ತಿರುವುದು ತಮಗೆ ಖುಷಿ ಕೊಟ್ಟಿದೆ. ಮೇ.31ರ ಅಂತ್ಯದ ವೇಳೆಗೆ ಖರೀದಿಯ ಪ್ರಕ್ರಿಯೆಗಳು ಬಹುತೇಕ ಪೂರ್ಣಗೊಳ್ಳಲಿವೆ ಎಂದು ಸ್ಟಫ್ ಸಿಇಓ ಸಿನೀಡ್ ಬೌಚರ್ ತಿಳಿಸಿದ್ದಾರೆ.

ಚಿತ್ರಕೃಪೆ: Stuff

900 ಸಿಬ್ಬಂದಿ 400 ಪತ್ರಕರ್ತರನ್ನು ಹೊಂದಿರುವ ಸುದ್ದಿಸಂಸ್ಥೆ

900 ಸಿಬ್ಬಂದಿ 400 ಪತ್ರಕರ್ತರನ್ನು ಹೊಂದಿರುವ ಸುದ್ದಿಸಂಸ್ಥೆ

ಸ್ಟಫ್ ಸುದ್ದಿ ಸಂಸ್ಥೆಯು ವಿವಿಧ ರಾಷ್ಟ್ರಗಳಲ್ಲಿ ವೆಲ್ಲಿಂಗ್ ಟನ್ ಡೊಮಿನಿಯನ್ ಪೋಸ್ಟ್ ಮತ್ತು ಕ್ರಿಶ್ಚ್ ಚರ್ಚ್ ಪ್ರೆಸ್ ಸೇರಿದಂತೆ ಹಲವು ಪತ್ರಿಕೆಗಳನ್ನು ಹೊಂದಿದೆ. ಈ ಸಮೂಹ ಸಂಸ್ಥೆಯಲ್ಲಿ 400 ಪತ್ರಕರ್ತರೂ ಸೇರಿದಂತೆ 900 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.

ಸ್ಟಫ್ ಸಂಸ್ಥೆಗೆ ತೀವ್ರ ಆರ್ಥಿಕ ಸಂಕಷ್ಟ

ಸ್ಟಫ್ ಸಂಸ್ಥೆಗೆ ತೀವ್ರ ಆರ್ಥಿಕ ಸಂಕಷ್ಟ

ಆಸ್ಟ್ರೇಲಿಯನ್ ಮೂಲದ Nine Entertainment ಸಂಸ್ಥೆಯ ಅಂಗಸಂಸ್ಥೆಯಾಗಿರುವ ಸ್ಟಫ್ ಸಂಸ್ಥೆಯು ಕೊರೊನಾ ವೈರಸ್ ಸಾಂಕ್ರಾಮಿಕ ಪಿಡುಗು ಹರಡುವ ಮೊದಲಿನಿಂದಲೂ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿತ್ತು. ಜಾಹೀರಾತುಗಳ ಕೊರತೆ ಸಂಸ್ಥೆಯ ಆದಾಯಕ್ಕೆ ಹೊಡೆತ ಕೊಟ್ಟಿತ್ತು.

ಚಿತ್ರಕೃಪೆ: MSN.com

ನ್ಯೂಜಿಲೆಂಡ್ ಸ್ಥಳೀಯ ಮಾಲೀಕತ್ವಕ್ಕೆ ಆದ್ಯತೆ

ನ್ಯೂಜಿಲೆಂಡ್ ಸ್ಥಳೀಯ ಮಾಲೀಕತ್ವಕ್ಕೆ ಆದ್ಯತೆ

ಮೊದಲಿನಿಂದಲೂ ಸ್ಟಫ್ ಸಂಸ್ಥೆಗೆ ಸ್ಥಳೀಯ ಮಾಲೀಕತ್ವವನ್ನು ಒದಗಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುತ್ತಿತ್ತು. ಸ್ಥಳೀಯ ಮಾಲೀಕತ್ವ ಸಂಸ್ಥೆಗೆ ಹೊಸ ರೂಪ ಮತ್ತು ಶಕ್ತಿಯನ್ನು ನೀಡಬಲ್ಲ ಸಾಮರ್ಥ್ಯವನ್ನು ಹೊಂದಿದೆ ಎಂದು ಆಸ್ಟ್ರೇಲಿಯನ್ ಮೂಲದ Nine Entertainment ಸಮೂಹ ಸಂಸ್ಥೆಯ ಸಿಇಓ ಹಗ್ ಮಾರ್ಕ್ಸ್ ತಿಳಿಸಿದ್ದಾರೆ.

ಚಿತ್ರಕೃಪೆ: Stuff

ಸ್ಟಫ್ ಸಿಇಓ ಸಿನೀಡ್ ಬೌಚರ್ ಪತ್ರಿಕಾ ರಂಗ ಹಿನ್ನೆಲೆ

ಸ್ಟಫ್ ಸಿಇಓ ಸಿನೀಡ್ ಬೌಚರ್ ಪತ್ರಿಕಾ ರಂಗ ಹಿನ್ನೆಲೆ

ಸ್ಟಪ್ ಸಿಇಓ ಆಗಿರುವ 49 ವರ್ಷದ ಸಿನೀಡ್ ಬೌಚರ್ 1993ರಲ್ಲಿ ಮೊದಲ ಬಾರಿಗೆ ಪ್ರಸ್ ಸುದ್ದಿ ಸಂಸ್ಥೆಯಲ್ಲಿ ವರದಿಗಾರರಾಗಿ ಸೇವೆ ಆರಂಭಿಸಿದರು. ನಂತರ ಕಂಪನಿಯ ಡಿಜಿಟಲ್ ಆವಿಷ್ಕಾರಗಳಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಚಿತ್ರಕೃಪೆ: Newshub

ಆದಾಯ ಸಂಗ್ರಹಿಸಲು ಆನ್ ಲೈನ್ ಓದುರಗ ಮೊರೆ

ಆದಾಯ ಸಂಗ್ರಹಿಸಲು ಆನ್ ಲೈನ್ ಓದುರಗ ಮೊರೆ

ನ್ಯೂಜಿಲೆಂಡ್ ಪ್ರಖ್ಯಾತ ಸುದ್ದಿ ಸಂಸ್ಥೆ Stuff.Co.NZ ವೆಬ್ ಸೈಟ್ ಆದಾಯವನ್ನು ಹೆಚ್ಚಿಸಿಕೊಳ್ಳುವುದಕ್ಕೆ ಆನ್ ಲೈನ್ ಓದುಗರ ಮೊರೆ ಹೋಗಿದ್ದಾರೆ. ಕಳೆದ ತಿಂಗಳೇ ಆನ್ ಲೈನ್ ಓದುಗರಿಗೇ ಹಣ ಪಾವತಿಸುವಂತೆ ಮನವಿ ಮಾಡಿಕೊಳ್ಳಲಾಗಿದೆ. ದಿಢೀರನೇ ಉದ್ಯೋಗ ಕಡಿತ ಹಾಗೂ ಸುದ್ದಿ ಪತ್ರಿಕೆಗಳನ್ನು ಬಂದ್ ಮಾಡುವ ಬಗ್ಗೆ ಯಾವುದೇ ತೀರ್ಮಾನವನ್ನು ತೆಗೆದುಕೊಳ್ಳಲಾಗುವುದಿಲ್ಲ ಎಂದು ಸಿನೀಡ್ ಬೌಚರ್ ತಿಳಿಸಿದ್ದಾರೆ.

ಚಿತ್ರಕೃಪೆ: Stuff

English summary
New Zealand Media Company Stuff to be sold for Just NZ 1 Dollar. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X