• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

49 ಮುಸ್ಲಿಂರನ್ನು ಬಲಿಪಡೆದವ ಆಸ್ಟ್ರೇಲಿಯಾದ ಭಯೋತ್ಪಾದಕ

|

ಕ್ರೈಸ್ಟ್ ಚರ್ಚ್, ಮಾರ್ಚ್ 15 : ಕರಾಳ ಶುಕ್ರವಾರದಂದು ನ್ಯೂಜಿಲೆಂಡ್ ನ ಎರಡು ಮಸೀದಿಗಳಲ್ಲಿ ನಡೆದ ಭೀಕರ ಹತ್ಯಾಕಾಂಡದಲ್ಲಿ ಸಾವಿಗೀಡಾದವರ ಸಂಖ್ಯೆ 49ಕ್ಕೇರಿದೆ. ಇದಕ್ಕೆ ಕಾರಣರಾದ ನಾಲ್ವರನ್ನು ಬಂಧಿಸಲಾಗಿದ್ದು, ಅವರನ್ನು ಆಸ್ಟ್ರೇಲಿಯಾದ ಉಗ್ರವಾದಿಗಳು ಎಂದು ಗುರಿತಿಸಲಾಗಿದೆ.

ಹೆಲ್ಮೆಟ್ ಧರಿಸಿ, ಮಿಲಿಟರ್ ದಿರಿಸಿನಲ್ಲಿ ಬಂದಿದ್ದ ವ್ಯಕ್ತಿ ಅಲ್ ನೂರ್ ಮಸೀದಿಯಲ್ಲಿ ನಡೆಸಿದ ಮಾರಣಹೋಮವನ್ನು ಲೈವ್ ಶೂಟ್ ಮಾಡಿದ್ದಾನೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಅಡ್ಡಾಡುತ್ತಿದ್ದು, ಹತ್ಯಾಕಾಂಡದ ಭೀಕರತೆಯನ್ನು ಮತ್ತಷ್ಟು ಭಯಾನಕವಾಗಿಸಿದೆ.

"ಇದು ನ್ಯೂಜಿಲೆಂಡ್ ನ ಇತಿಹಾಸದಲ್ಲಿಯೇ ಅತ್ಯಂತ ಕರಾಳ ದಿನ. ಇಂಥ ಹಿಂಸಾತ್ಮಕ ಕೃತ್ಯ ಹಿಂದೆಂದೂ ಜರುಗಿರಲಿಲ್ಲ. ಇದು ಅತ್ಯಂತ ವ್ಯವಸ್ಥಿತವಾಗಿ ಮತ್ತು ಪೂರ್ವ ಯೋಜನೆಯಿಂದ ಮಾಡಲಾದ ಭಯೋತ್ಪಾದಕ ದಾಳಿ ಎಂಬುದು ಸ್ಪಷ್ಟವಾಗಿದೆ" ಎಂದು ನ್ಯೂಜಿಲೆಂಡ್ ನ ಪ್ರಧಾನಿ ಜಸಿಂಡಾ ಅರ್ಡರ್ನ್ ಅವರು ಹೇಳಿದ್ದಾರೆ.

ನ್ಯೂಜಿಲೆಂಡ್ ನಲ್ಲಿ ಕರಾಳ ಶುಕ್ರವಾರ : ಮಸೀದಿಯಲ್ಲಿ ರಕ್ತದೋಕುಳಿ

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳಲ್ಲಿ ಇನ್ನೂ ಹಲವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಇನ್ನೂ ಏರುವ ಸಾಧ್ಯತೆಯಿದೆ. ಎರಡು ಮಸೀದಿಗಳಲ್ಲಿ ಗುಂಡಿನ ದಾಳಿ ನಡೆದಿದೆಯಾದರೂ ಅಲ್ ನೂರ್ ಮಸೀದಿಯಲ್ಲಿ ಹೆಚ್ಚಿನ ಸಾವು ಸಂಭವಿಸಿದೆ.

ಉಗ್ರ ಆಸ್ಟ್ರೇಲಿಯಾದ ಸಂಜಾತ

ಉಗ್ರ ಆಸ್ಟ್ರೇಲಿಯಾದ ಸಂಜಾತ

ಈ ದಾಳಿ ನಡೆಸಿದ ವ್ಯಕ್ತಿಯ ಚಿತ್ರ ಕೂಟ ಟ್ವಿಟ್ಟರ್ ನಲ್ಲಿ ಅಲೆದಾಡುತ್ತಿದ್ದು, ಆತ ಆಸ್ಟ್ರೇಲಿಯಾದವನಾಗಿದ್ದು, ಬಲಪಂಥೀಯ ಭಯೋತ್ಪಾದಕ, ವಯೊಲೆಂಟ್ ಟೆರರಿಸ್ಟ್ ಎಂದು ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಅವರು ಹೇಳಿಕೆ ನೀಡಿದ್ದಾರೆ. ಅಚ್ಚರಿಯ ಸಂಗತಿಯೆಂದರೆ, ಬಂಧಿತ ನಾಲ್ವರಲ್ಲಿ ಓರ್ವ ಮಹಿಳೆಯೂ ಇರುವುದು. ಈ ಹತ್ಯೆಗೆ ಮೂಲ ಉದ್ದೇಶವೇನೆಂದು ಇನ್ನೂ ತಿಳಿದುಬಂದಿಲ್ಲ. ಆದರೆ, ಈ ಹತ್ಯಾಕಾಂಡದಿಂದಾಗಿ ನ್ಯೂಜಿಲೆಂಡ್ ಮಾತ್ರ ಜರ್ಝರಿತವಾಗಿದೆ.

ನ್ಯೂಜಿಲೆಂಡ್ ನಲ್ಲಿ ರಕ್ತದೋಕುಳಿ : ಮಹಿಳೆ ಸೇರಿ ನಾಲ್ವರು ವಶಕ್ಕೆ

ಗಾಯಗೊಂಡು ತೆವಳುತ್ತಿದ್ದವರನ್ನೂ ಬಿಟ್ಟಿಲ್ಲ

ಗಾಯಗೊಂಡು ತೆವಳುತ್ತಿದ್ದವರನ್ನೂ ಬಿಟ್ಟಿಲ್ಲ

ತನ್ನ ಹೆಲ್ಮೆಟ್ಟಿಗೆ ಕ್ಯಾಮೆರಾ ಅಳವಡಿಸಿಕೊಂಡಿದ್ದ ಉಗ್ರ ಮಸೀದಿಯ ಬಾಗಿಲಿನಿಂದಲೇ ಗುಂಡಿನ ಮೊರೆತ ಆರಂಭಿಸಿದ್ದಾನೆ. ಕೋಣೆ ಕೋಣೆ ಹೊಕ್ಕು ಗುಂಡಿನ ಸುರಿಮಳೆಗೈದಿದ್ದಾನೆ. ಆತನ ದಾಳಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದವರನ್ನು ಮಾತ್ರವಲ್ಲ ಮಲಗಿದವರನ್ನು ಕೂಡ ಬಿಡದೆ ಬೆನ್ನತ್ತಿ ಕೊಂದು ಹಾಕಿದ್ದಾನೆ. ಗಾಯಗೊಂಡು ತೆವಳುತ್ತಿದ್ದವರನ್ನು ಬಿಡದೆ ರಕ್ತದೋಕುಳಿಯಾಡಿದ್ದಾನೆ ಆಸ್ಟ್ರೇಲಿಯಾದ ಉಗ್ರ. 28 ವರ್ಷದ ಬಿಳಿ ಉಗ್ರನನ್ನು ಬಂಧಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಮಹಿಳೆ ಸೇರಿದಂತೆ ಇನ್ನೂ ಮೂವರನ್ನು ಬಂಧಿಸಲಾಗಿದೆಯಾದರೂ, ಈ ಘಟನೆಗೂ ಅವರ ಪಾತ್ರಕ್ಕೂ ಇನ್ನೂ ಕೊಂಡಿ ಸಿಕ್ಕಿಲ್ಲ.

ಅಲ್ ನೂರ್ ಮಸೀದಿಯಲ್ಲಿ ಹೆಚ್ಚು ಹತ್ಯೆ

ಅಲ್ ನೂರ್ ಮಸೀದಿಯಲ್ಲಿ ಹೆಚ್ಚು ಹತ್ಯೆ

ಮೊದಲು ಅಲ್ ನೂರ್ ಮಸೀದಿಯ ಮೇಲೆ ದಾಳಿ ಮಾಡಲಾಗಿದೆ. ಅಲ್ಲಿ ಶುಕ್ರವಾರದ ಪ್ರಾರ್ಥನೆಗೆ ಬಂದಿದ್ದವರಲ್ಲಿ 41 ಜನರು ಹತರಾಗಿದ್ದಾರೆ. ಮತ್ತೊಂದು ಲಿನ್ ವುಡ್ ನ ಹೊರವಲಯದಲ್ಲಿರುವ ಸಣ್ಣ ಮಸೀದಿಯಲ್ಲಿ 7 ಜನರು ಹತ್ಯೆಗೀಡಾಗಿದ್ದಾರೆ. ಓರ್ವ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ದುರಾದೃಷ್ಟಕರ ಸಂಗತಿಯೆಂದರೆ, ಹತ್ಯಾಗೀಡಾದವರಲ್ಲಿ ಮಹಿಳೆಯರು ಮತ್ತು ಮಕ್ಕಳು ಕೂಡ ಸೇರಿದ್ದಾರೆ. ಸತ್ತವರಷ್ಟೇ ಜನ ಗಾಯಾಳುಗಳಾಗಿ ಆಸ್ಪತ್ರೆ ಸೇರಿದ್ದಾರೆ. ಅವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಆ ವ್ಯಕ್ತಿ ಧೈರ್ಯ ತೋರದೆ ಹೋಗಿದ್ದರೆ

ಆ ವ್ಯಕ್ತಿ ಧೈರ್ಯ ತೋರದೆ ಹೋಗಿದ್ದರೆ

ಪ್ರತ್ಯಕ್ಷದರ್ಶಿಯೊಬ್ಬರ ಪ್ರಕಾರ, ಗುಂಡಿನ ಮೊರೆತ ಕೇಳಲು ಆರಂಭಿಸುತ್ತಿದ್ದಂತೆ ಅವರು ಅಲ್ಲಿಂದ ತಪ್ಪಿಸಿಕೊಂಡಿದ್ದಾರೆ. ಸುಮಾರು ಹತ್ತರಿಂದ ಹದಿನೈದು ನಿಮಿಷ ಗುಂಡಿನ ಮೊರೆತ ಕೇಳಿಬಂದಿದೆ. ನಂತರ ಅಲ್ಲಿ ಹೋಗಿ ನೋಡುವಷ್ಟರಲ್ಲಿ ಅವರ ಪತ್ನಿಯೇ ಹತ್ಯೆಗೀಡಾಗಿದ್ದರು. ಹತ್ಯೆ ಮಾಡಿದವ ಬಿಳಿಯನಾಗಿದ್ದ, ಹೆಲ್ಮೆಟ್ ಮತ್ತು ಬುಲೆಟ್ ಪ್ರೂಫ್ ಜಾಕೆಟ್ ಧರಿಸಿದ್ದ. ಮತ್ತೊಬ್ಬ ಪ್ರತ್ಯಕ್ಷದರ್ಶಿಯ ಪ್ರಕಾರ, ವ್ಯಕ್ತಿಯೊಬ್ಬ ಧೈರ್ಯಮಾಡಿ ಉಗ್ರನನ್ನು ಹಿಂದಿನಿಂದ ಹಿಡಿದುಕೊಂಡಿದ್ದಾನೆ. ಆಗ ಉಗ್ರ ಕೈಯಲ್ಲಿದ್ದ ಗನ್ ಅನ್ನು ಕೈಬಿಟ್ಟಿದ್ದಾನೆ. ನಂತರ ಉಗ್ರ ಬಾಗಿಲ ಬಳಿ ತಪ್ಪಿಸಿಕೊಂಡು ಓಡಿಹೋಗಿದ್ದಾನೆ. ಆ ವ್ಯಕ್ತಿ ಧೈರ್ಯ ತೋರದೆ ಹೋಗಿದ್ದರೆ ಇನ್ನಷ್ಟು ಜನರು ಹತ್ಯೆಯಾಗಿರುತ್ತಿದ್ದರು.

ವಿಡಿಯೋ ಹಂಚಿಕೊಂಡರೆ ಜೈಲು ಶಿಕ್ಷೆ

ವಿಡಿಯೋ ಹಂಚಿಕೊಂಡರೆ ಜೈಲು ಶಿಕ್ಷೆ

ಉಗ್ರ ಚಿತ್ರೀಕರಿಸಿಕೊಂಡಿದ್ದ ವಿಡಿಯೋವನ್ನು ಹಲವರು ಇಂಟರ್ನೆಟ್ ನಲ್ಲಿ ಹರಿಯಬಿಟ್ಟಿದ್ದಾರೆ. ಈ ವಿಡಿಯೋ ಎಷ್ಟು ಭಯಾನಕವಾಗಿದೆಯೆಂದರೆ, ಹಲವರು ಈ ವಿಡಿಯೋ ಹಂಚಿಕೊಳ್ಳುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ನ್ಯೂಜಿಲೆಂಡ್ ಪೊಲೀಸರು ಆ ವಿಡಿಯೋ 'ತುಂಬಾ ಯಾತನಾದಾಯಕವಾಗಿದೆ' ಎಂದು ಹೇಳಿದ್ದು, ಇಂಥ ಆಕ್ಷೇಪಿತ ವಿಡಿಯೋವನ್ನು ಟ್ವಿಟ್ಟರ್ ನಲ್ಲಾಗಲಿ, ಸೋಷಿಯಲ್ ಮೀಡಿಯಾದಲ್ಲಾಗಲಿ ಹಂಚಿಕೊಂಡರೆ ಅವರು 10 ವರ್ಷ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ವರ್ಷಕ್ಕೆ 50 ಹತ್ಯೆ ದಾಟುವುದಿಲ್ಲ

ವರ್ಷಕ್ಕೆ 50 ಹತ್ಯೆ ದಾಟುವುದಿಲ್ಲ

ನ್ಯೂಜಿಲೆಂಡ್ ಎಂಥ ಶಾಂತಿಯುತ ರಾಷ್ಟ್ರವೆಂದರೆ 4.8 ಕೋಟಿ ಜನರಿರುವ ಇಡೀ ದೇಶದಲ್ಲಿ ಇಡೀ ವರ್ಷದಲ್ಲಿ ಎಣಿಸಿದರೂ ಹತ್ಯೆಗಳು 50 ದಾಟುವುದಿಲ್ಲ. ಅಂಥದ್ದರಲ್ಲಿ ಒಂದೇ ದಿನ 49 ಜನರ ಹತ್ಯೆಯಾಗಿದೆ. ಈ ಘಟನೆ ನ್ಯೂಜಿಲೆಂಡ್ ಜನರನ್ನು ಗರಬಡಿದವರಂತೆ ಮಾಡಿದೆ. ಪರಿಸ್ಥಿತಿ ತಹಬದಿಗೆ ಬರುವವರೆಗೆ ದೇಶದಲ್ಲಿರುವ ಯಾವ ಮುಸ್ಲಿಂನೂ ಯಾವುದೇ ಮಸೀದಿಗೆ ಭೇಟಿ ನೀಡಬಾರದು ಎಂದು ಪೊಲೀಸರು ಎಚ್ಚರಿಸಿದ್ದಾರೆ.

ಹೈದರಾಬಾದ್ ನ ವ್ಯಕ್ತಿ ಗಾಯಾಳು

ಹೈದರಾಬಾದ್ ನ ವ್ಯಕ್ತಿ ಗಾಯಾಳು

ಈ ದಾಳಿಯಲ್ಲಿ ಹೈದರಾಬಾದ್ ಮೂಲಕ ಅಹ್ಮದ್ ಜಹಾಂಗಿರ್ ಎಂಬುವವರು ಗಾಯಗೊಂಡಿದ್ದಾರೆ. ಎಐಎಂಐಎ ನಾಯಕ ಅಸಾದುದ್ದಿನ್ ಓವೈಸಿ ಅವರು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಈ ಮಾಹಿತಿ ನೀಡಿದ್ದು, ಹೈದರಾಬಾದ್ ಮೂಲಕ ಕುಟುಂಬದ ಸದಸ್ಯರಿಗೆ ಸಹಾಯ ಮಾಡಬೇಕೆಂದು ಕೋರಿದ್ದಾರೆ.

ದಾಳಿಯ ಸೂಚನೆ ಮೊದಲೇ ನೀಡಲಾಗಿತ್ತು

ದಾಳಿಯ ಸೂಚನೆ ಮೊದಲೇ ನೀಡಲಾಗಿತ್ತು

ಅಚ್ಚರಿಯ ಸಂಗತಿಯೆಂದರೆ, ಈ ದಾಳಿ ನಡೆಸುವ ಕೆಲ ಸಮಯ ಮೊದಲು 8ಚಾನ್ ಎಂಬ ಚರ್ಚಾ ತಾಣದಲ್ಲಿ ದಾಳಿ ನಡೆಸುವ ಬಗ್ಗೆ ಬರೆದುಕೊಳ್ಳಲಾಗಿತ್ತು. ಅದನ್ನು ಫೇಸ್ ಬುಕ್ ನಲ್ಲಿ ಲೈವ್ ಸ್ಟ್ರೀಮಿಂಗ್ ಮಾಡುವುದಾಗಿ ಕೂಡ ಹೇಳಲಾಗಿತ್ತು ಎಂದು ರಾಯ್ಟರ್ ವರದಿ ಮಾಡಿದೆ. ಫೇಸ್ ಬುಕ್ ನಿಂದ ಆ ಪುಟವನ್ನು ಇದೀಗ ತೆಗೆದುಹಾಕಲಾಗಿದೆ.

ಬಾಂಗ್ಲಾ ಆಟಗಾರರು ಬಚಾವ್

ಬಾಂಗ್ಲಾ ಆಟಗಾರರು ಬಚಾವ್

ಅದೃಷ್ಟವಶಾತ್, ನ್ಯೂಜಿಲೆಂಡ್ ನಲ್ಲಿ ಟೆಸ್ಟ್ ಸರಣಿ ಆಡಲೆಂದು ಬಂದಿರುವ ಬಾಂಗ್ಲಾದೇಶದ 17 ಆಟಗಾರರಿರುವ ತಂಡ ಈ ಭಯಾನಕ ಹತ್ಯಾಕಾಂಡದಿಂದ ಪಾರಾಗಿದೆ. ಅವರು ಕೂಡ ಇದೇ ಮಸೀದಿಗೆ ಪ್ರಾರ್ಥನೆಗೆಂದು ಬಂದಿದ್ದರು. ಆದರೆ, ಕೂದಲೆಳೆಯಲ್ಲಿ ಪಾರಾಗಿದ್ದಾರೆ. ಅವರು ಇನ್ನೇನು ಮಸೀದಿ ಪ್ರವೇಶಿಸಬೇಕು ಎನ್ನುವಷ್ಟರಲ್ಲಿ ಗುಂಡಿನ ದಾಳಿ ಆರಂಭವಾಗಿದೆ. ತಕ್ಷಣ ಅವರನ್ನು ಆ ಸ್ಥಳದಿಂದ ಬೇರೆಡೆಗೆ ಕರೆದುಕೊಂಡು ಹೋಗಲಾಗಿದೆ. ಅಲ್ಲಾಹುವಿನ ದಯೆಯಿಂದ ನಾವೆಲ್ಲ ಪಾರಾಗಿದ್ದೇವೆ ಎಂದು ಬಾಂಗ್ಲಾದೇಶದ ನಾಯಕ ಮುಷ್ಫಿಕರ್ ಅವರು ಟ್ವೀಟ್ ಮಾಡಿದ್ದಾರೆ. ಈ ಘಟನೆಯ ನಂತರ ಮಾರ್ಚ್ 16ರಿಂದ ಆರಂಭವಾಗಬೇಕಿದ್ದ ಮೂರನೇ ಟೆಸ್ಟ್ ರದ್ದು ಮಾಡಲಾಗಿದೆ.

English summary
New Zealand masjid attack update in Kannada. 9 important developments after brutal murder by Australia based terrorist.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X