ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡೆಲ್ಟಾ ಸೋಂಕು: ನ್ಯೂಜಿಲೆಂಡ್‌ನಲ್ಲಿ ಲಾಕ್‌ಡೌನ್ ವಿಸ್ತರಣೆ

|
Google Oneindia Kannada News

ನ್ಯೂಜಿಲೆಂಡ್‌ನಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಲಾಕ್‌ಡೌನ್ ವಿಸ್ತರಿಸಲಾಗಿದೆ.

ಪ್ರಧಾನಿ ಜಸಿಂಡಾ ಆರ್ಡರ್ನ್ ಲಾಕ್‌ಡೌನ್ ಘೋಷಿಸಿದ್ದಾರೆ, ಡೆಲ್ಟಾ ಸೋಂಕು ಕಾಣಿಸಿಕೊಂಡಿರುವ ಕಾರಣ ಮೂರು ದಿನಗಳ ಕಾಲ ಲಾಕ್‌ಡೌನ್ ವಿಸ್ತರಿಸಲಾಗಿದೆ. ಆಗಸ್ಟ್ 27ರ ಮಧ್ಯರಾತ್ರಿವರೆಗೂ ಲಾಕ್‌ಡೌನ್ ಮುಂದುವರೆಯಲಿದೆ.

ಇನ್ನು ಆಕ್‌ಲೆಂಡ್‌ನ್ನು ಕೊರೊನಾ ಕೇಂದ್ರಬಿಂದು ಎಂದು ಗುರುತಿಸಲಾಗಿದ್ದು,ಅಲ್ಲಿ ಆಗಸ್ಟ್ 31ರವರೆಗೂ ನಿರ್ಬಂಧಗಳು ಮುಂದುವರೆಯಲಿವೆ. ನ್ಯೂಜಿಲೆಂಡ್‌ನಲ್ಲಿ 35 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಈಗ ಒಟ್ಟು 107 ಪ್ರಕರಣಗಳಿವೆ. 33 ಪ್ರಕರಣಗಳು ಆಕ್‌ಲೆಂಡ್‌ನಲ್ಲಿದೆ.

New Zealand Extends Lockdown Amid Delta Outbreak

ವ್ಯಕ್ತಿಯೊಬ್ಬರಲ್ಲಿ ಸ್ಥಳೀಯವಾಗಿ ಹಬ್ಬಿದ ಕೊರೊನಾ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ, ನ್ಯೂಜಿಲೆಂಡ್‌ನಲ್ಲಿ ದೇಶಾದ್ಯಂತ ಮೂರು ದಿನ ಲಾಕ್ಡೌನ್‌ ಘೋಷಿಸಲಾಗಿತ್ತು. ವಿದೇಶಗಳಲ್ಲಿ ಸೋಂಕಿನಿಂದ ಏನಾಗಿದೆ ಎಂಬ ವಿಷಯ ನಮ್ಮ ಕಣ್ಣ ಮುಂದಿದೆ.

ಹೀಗಾಗಿ ನಾವು ಯಾವುದೇ ಅಪಾಯವನ್ನು ಮೈಮೇಲೆ ಎಳೆದುಕೊಳ್ಳಲು ಸಿದ್ದರಿಲ್ಲ. ಹೀಗಾಗಿ ಸೋಂಕಿತ ವ್ಯಕ್ತಿಯಾದ ಪತ್ತೆ ಆಕ್ಲೆಂಡ್‌ ಮತ್ತು ಆತ ಭೇಟಿ ನೀಡಿದ್ದ ಕೊರೋಮಂಡೆಲ್‌ನಲ್ಲಿ 7 ದಿನಗಳ ಕಾಲ ಲಾಕ್ಡೌನ್‌ ಜಾರಿ ಮಾಡಲಾಗುವುದು. ಉಳಿದ ಪ್ರದೇಶಗಳಲ್ಲಿ ಮೂರು ದಿನ ಲಾಕ್ಡೌನ್‌ ಜಾರಿಯಲ್ಲಿರಲಿದೆ ಎಂದು ಪ್ರಧಾನಿ ಜೆಸಿಂಡಾ ಆ್ಯರ್ಡೆನ್‌ ಪ್ರಕಟಿಸಿದ್ದಾರೆ.

New Zealand Extends Lockdown Amid Delta Outbreak

ಈ ಸುದ್ದಿ ಹೊರಬಿದ್ದ ಬೆನ್ನಲ್ಲೇ, ಜನ ಮಾಲ್‌, ಸೂಪರ್‌ ಮಾರ್ಕೆಟ್‌ಗಳ ಮುಂದೆ ಸರತಿಯಲ್ಲಿ ನಿಂತು ಅಗತ್ಯ ವಸ್ತು ಖರೀದಿಗೆ ಮುಂದಾಗಿದ್ದಾರೆ. ದೇಶದಲ್ಲಿ 6 ತಿಂಗಳ ಬಳಿಕ ಮೊದಲ ಕೇಸು ಪತ್ತೆಯಾಗಿದೆ.

50 ಲಕ್ಷ ಜನಸಂಖ್ಯೆ ಹೊಂದಿರುವ ನ್ಯೂಜಿಲೆಂಡ್‌ನಲ್ಲಿ ಇದುವರೆಗೆ 2926 ಜನರಿಗೆ ಸೋಂಕು ತಗುಲಿದ್ದು, 26 ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ. ಮತ್ತೊಂದೆಡೆ ಮುಂದುವರೆದ ದೇಶಗಳಿಗೆ ಹೋಲಿಸಿದರೆ ನ್ಯೂಜಿಲೆಂಡ್‌ನಲ್ಲಿ ಲಸಿಕೆ ವಿತರಣೆ ಪ್ರಮಾಣವೂ ಬಹಳ ಕಡಿಮೆ ಇದೆ. ಶೇ.32ರಷ್ಟುಜನರು ಸಿಂಗಲ್‌ ಡೋಸ್‌ ಮತ್ತು ಶೇ.18ರಷ್ಟುಜನರು ಮಾತ್ರವೇ ಎರಡೂ ಡೋಸ್‌ ಪಡೆದುಕೊಂಡಿದ್ದಾರೆ.

English summary
New Zealand will remain in lockdown until the weekend as new cases continue to rise. Meanwhile, Taiwan's president took the first shot of homegrown vaccine amid criticism of its rushed approval. Follow DW for the latest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X