ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ್ಯೂಜಿಲೆಂಡ್ ಚುನಾವಣೆ: ಪ್ರಧಾನಿ ಜೆಸಿಂಡಾ ಪಕ್ಷಕ್ಕೆ ಅಭೂತಪೂರ್ವ ಜಯ

|
Google Oneindia Kannada News

ಆಕ್ಲಂಡ್, ಅಕ್ಟೋಬರ್ 17: ನ್ಯೂಜಿಲೆಂಡ್ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನಿ ಜೆಸಿಂಡಾ ಆರ್ಡನ್ ಪ್ರಚಂಡ ದಿಗ್ವಿಜಯ ಸಾಧಿಸಿದ್ದಾರೆ. ಕೋವಿಡ್ 19ರ ವಿರುದ್ಧದ ಹೋರಾಟದಲ್ಲಿ ಇಡೀ ಜಗತ್ತಿನ ಮೆಚ್ಚುಗೆಗೆ ಒಳಗಾದ ಜೆಸಿಂಡಾ ಅವರಿಗೆ ಅಭೂತಪೂರ್ವ ಬಹುಮತ ಸಿಕ್ಕಿದ್ದು, ತಮ್ಮ ಸುಧಾರಣಾ ಕಾರ್ಯಸೂಚಿಗಳನ್ನು ಜಾರಿಗೆ ತರಲು ಅವಕಾಶ ಸಿಕ್ಕಂತಾಗಿದೆ.

ಮೂರನೇ ಎರಡರಷ್ಟು ಮತಗಳ ಎಣಿಕೆಯೊಂದಿಗೆ ಜೆಸಿಂಡಾ ಅವರ ಲೇಬರ್ ಪಕ್ಷವು ಶೇ 49.2 ಮತಗಳನ್ನು ಪಡೆದಿದ್ದು, 120 ಸದಸ್ಯರ ಸಂಸತ್‌ನಲ್ಲಿ ಸುಮಾರು 64 ಸೀಟುಗಳನ್ನು ಪಡೆದುಕೊಂಡಿದೆ. 1996ರಲ್ಲಿ ಪ್ರಮಾಣಾನುಗುಣ ಮತದಾನದ ಪದ್ಧತಿಯನ್ನು ನ್ಯೂಜಿಲೆಂಡ್ ಅಳವಡಿಸಿಕೊಂಡಾಗಿನಿಂದ ಇದುವರೆಗೂ ಯಾವ ನಾಯಕರೂ ಸಂಪೂರ್ಣ ಬಹುಮತ ಪಡೆದಿರಲಿಲ್ಲ. ಇದರಿಂದಾಗಿ ಇದುವರೆಗೂ ಬಹು ಪಕ್ಷಗಳ ಸಮ್ಮಿಶ್ರ ಸರ್ಕಾರಗಳೇ ಆಡಳಿತ ನಡೆಸುತ್ತಿದ್ದವು.

ಕೊವಿಡ್ 19 ಯುದ್ಧದಲ್ಲಿ ಗೆಲುವು ಸಾಧಿಸಿದ ನ್ಯೂಜಿಲೆಂಡ್ಕೊವಿಡ್ 19 ಯುದ್ಧದಲ್ಲಿ ಗೆಲುವು ಸಾಧಿಸಿದ ನ್ಯೂಜಿಲೆಂಡ್

ಶೇ 87ರಷ್ಟು ಮತಗಳನ್ನು ಎಣಿಕೆ ಮಾಡಲಾಗಿದೆ. ಇದರಲ್ಲಿ ಜೆಸಿಂಡಾ ಅವರ ಪಕ್ಷ ಶೇ 49.2ರಷ್ಟು ಬೆಂಬಲ ಪಡೆದುಕೊಂಡಿದೆ. 1930ರಿಂದ ನ್ಯೂಜಿಲೆಂಡ್‌ನಲ್ಲಿ ಇದು ಅತ್ಯಧಿಕ ಮತ ಹಂಚಕೆಯಾಗಿದೆ. ವಿರೋಧ ಪಕ್ಷ ರಾಷ್ಟ್ರೀಯ ಪಾರ್ಟಿ ಶೇ 27 ಮತಗಳಿಗೆ ಕುಸಿದಿದೆ. 2002ರಿಂದ ಇದು ವಿರೋಧಪಕ್ಷಗಳ ಅತ್ಯಂತ ಕಳಪೆ ಸಾಧನೆಯಾಗಿದೆ.

New Zealand Election: PM Jacinda Ardern Won A Landslide Victory

ಈ ಬಾರಿಯ ಸರ್ಕಾರದಲ್ಲಿ ಸೇರಿಕೊಳ್ಳುವಂತೆ ಗ್ರೀನ್ ಪಾರ್ಟಿಯನ್ನು ಆಹ್ವಾನಿಸಲಾಗುತ್ತದೆಯೇ ಎಂಬ ಬಗ್ಗೆ ಜೆಸಿಂಡಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಗ್ರೀನ್ ಪಕ್ಷವು ಶೇ 7.6ರಷ್ಟು ಮತಗಳನ್ನು ಪಡೆದುಕೊಂಡಿದೆ.

English summary
New Zealand General Election: Prime Minister Jacinda Ardern's Labour Party won a landslide victory.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X