ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ್ಯೂಜಿಲೆಂಡ್ ನಲ್ಲಿ ಪ್ರಬಲ ಭೂಕಂಪ, ಸುನಾಮಿ ಭೀತಿ ಹಿಂತೆಗೆತ

|
Google Oneindia Kannada News

ವೆಲ್ಲಿಂಗ್ಟನ್, ಜೂಣ್ 18: ನ್ಯೂಜಿಲೆಂಡ್ ನಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ರಿಕ್ಚರ್ ಮಾಪಕದಲ್ಲಿ 7.4 ತೀವ್ರತೆ ದಾಖಲಾಗಿದೆ. ಪೆಸಿಫಿಕ್ ಸುನಾಮಿ ಕೇಂದ್ರದಿಂದ ಸುನಾಮಿ ಎಚ್ಚರಿಕೆ ನೀಡಲಾಗಿದೆ.

Recommended Video

Sachin Tendulkars real reason behind retirement was revealed by coach Gary Kristen|Oneindia Kannada

ಫಿಜಿ, ಕೆರ್ಮಾಡೆಕ್ ದ್ವೀಪ್, ನ್ಯೂ ಕೆಲೆಡೊನಿಯಾ, ನ್ಯೂಜಿಲೆಂಡ್, ನಿಯುಯಿ, ತೊಂಗಾ ಹಾಗೂ ವಾನಾಯುತು ಪ್ರದೇಶದಲ್ಲಿ ಸುನಾಮಿ ಭೀತಿ ಎಚ್ಚರಿಕೆ ನೀಡಲಾಗಿದೆ.

New Zealand earthquake: Powerful 7.4 magnitude sparks tsunami warning

ಕೆರ್ಮಾಡೆಲ್ ದ್ವೀಪದ ದಕ್ಷಿಣ ಭಾಗದಲ್ಲಿ ಸಂಭವಿಸಿದ ಭೂಕಂಪವು ನ್ಯೂಜಿಲೆಂಡ್ ನ ಈಶಾನ್ಯಕ್ಕೆ 800-1000 ಕಿ.ಮೀ ದೂರದಲ್ಲಿದೆ ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ ಹೇಳಿದೆ.

ನ್ಯೂಜಿಲೆಂಡ್ ನ ನಾರ್ಥ್ ದ್ವೀಪದದಲ್ಲಿರುವ ಒಪೊಟಿಕಿಯಿಂದ 685 ಕಿ.ಮೀ ನಲ್ಲಿ ಭೂಕಂಪದ ಕೇಂದ್ರ ಬಿಂದು ಕಂಡು ಬಂದಿದೆ. ಕೇಂದ್ರ ಬಿಂದುವಿನಂದ 300 ಕಿ, ಮೀ ದೂರದಲ್ಲಿ ಸುನಾಮಿ ಅಲೆಯ ಭೀತಿಯಿದೆ ಎಂದು ಎಚ್ಚರಿಸಲಾಗಿದೆ.

ಕೆಲ ನಿಮಿಷಗಳ ಬಳಿಕ ಸುನಾಮಿ ಎಚ್ಚರಿಕೆ ಹಿಂತೆಗೆತ:
ಭೂಕಂಪದ ಕೇಂದ್ರ ಬಿಂದು ಸ್ಥಿತವಾಗಿದ್ದ 300 ಕಿ.ಮೀ. ವ್ಯಾಪ್ತಿಯಲ್ಲಿ ಭಾರಿ ಗಾತ್ರದ ಸುನಾಮಿ ಅಲೆಗಳು ದಡಕ್ಕೆ ಅಪ್ಪಳಿಸುವ ಸಾಧ್ಯತೆ ಹೆಚ್ಚಾಗಿದೆ ಎಂದು ಪೆಸಿಫಿಕ್​ ಸುನಾಮಿ ಮುನ್ನೆಚ್ಚರಿಕಾ ಕೇಂದ್ರ ಎಚ್ಚರಿಕೆ ನೀಡಿತ್ತು. ಆದರೆ, ಎಚ್ಚರಿಕೆ ನೀಡಿದ ಕೆಲ ನಿಮಿಷಗಳ ನಂತರ ಎಚ್ಚರಿಕೆಯನ್ನು ಹಿಂಪಡೆಯಲಾಗಿದೆ.

2011ರಲ್ಲಿ 6.3 ತೀವ್ರತೆಯ ಭೂಕಂಪ ಸಂಭವಿಸಿತ್ತು 150 ಮಂದಿ ಮೃತಪಟ್ಟಿದ್ದರು. 2018ರಲ್ಲಿ 7.8 ತೀವ್ರತೆಯ ಭೂಕಂಪ ಸಂಭವಿಸಿತ್ತು. ಸಾಕಷ್ಟು ಪ್ರಮಾಣದ ಆಸ್ತಿಪಾಸ್ತಿಗಳು ನಾಶವಾಗಿದ್ದವು.ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ ಅರ್ಡರ್ನ್ ಅವರು ಮೇ 25ರಂದು ಸುದ್ದಿವಾಹಿನಿಯೊಂದಕ್ಕೆ ಸಂದರ್ಶನ ನೀಡುತ್ತಿದ್ದ ಸಂದರ್ಭದಲ್ಲಿ ತೀವ್ರ ಭೂಕಂಪ ಸಂಭವಿಸಿತ್ತು. ನ್ಯೂಜಿಲೆಂಡ್ ರಾಜಧಾನಿ ವೆಲ್ಲಿಂಗ್ಟನ್‌ನಲ್ಲಿ ಸಂದರ್ಶನ ನೀಡುತ್ತಿದ್ದಾಗ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5.8 ತೀವ್ರತೆ ದಾಖಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
Preliminary data from the organisation says the 7.4 magnitude quake struck south of the Kermadec Islands, which are around 800–1,000 km northeast of New Zealand's North Island
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X