• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರೊನಾ ಯುದ್ಧ ಗೆದ್ದ ನ್ಯೂಜಿಲ್ಯಾಂಡ್ ಕೈಗೊಂಡ ಶಿಸ್ತು ಕ್ರಮಗಳೇನು?

|

ವಿಶ್ವದಾದ್ಯಂತ ಇಲ್ಲಿಯವರೆಗೂ 30,64,902 ಮಂದಿಗೆ ಮಾರಣಾಂತಿಕ ಕೊರೊನಾ ವೈರಸ್ ಸೋಂಕು ತಗುಲಿದೆ. 2,11,611 ಜನರ ಪ್ರಾಣವನ್ನು ಕೊರೊನಾ ವೈರಸ್ ಬಲಿ ಪಡೆದಿದೆ. ದಿನಗಳು ಉರುಳಿದಂತೆ ಕೊರೊನಾ ಅಟ್ಟಹಾಸ ಹೆಚ್ಚಾಗುತ್ತಲೇ ಇದೆ.

ಕೊರೊನಾ ಕಾರ್ಮೋಡ ಯಾವಾಗ ಸರಿಯುತ್ತೋ ಅಂತ ಜನ ದಿನಗಳನ್ನು ಎಣಿಸುತ್ತಿರುವಾಗಲೇ, ನ್ಯೂಜಿಲ್ಯಾಂಡ್ ಸಮಾಧಾನಕರ ಸುದ್ದಿಯೊಂದನ್ನು ನೀಡಿದೆ. ಕೊರೊನಾ ವಿರುದ್ಧ ಯುದ್ಧವನ್ನು ನ್ಯೂಜಿಲ್ಯಾಂಡ್ ಭಾಗಶಃ ಗೆದ್ದಿದೆ.

ಲಾಕ್ ಡೌನ್ ವಿಚಾರದಲ್ಲಿ ಎಡವಟ್ಟು: ಸ್ವೀಡನ್ ಜನರ ಪ್ರಾಣಕ್ಕೆ ಕುತ್ತು!

ಕೋವಿಡ್-19 ಪಾಸಿಟಿವ್ ಪ್ರಕರಣಗಳು ಒಂದಂಕಿಗೆ ಇಳಿದಿರುವ ಬೆನ್ನಲ್ಲೇ, ''ನಾವು ದೇಶದಿಂದ ಕೊರೊನಾ ವೈರಸ್ ಅನ್ನು 'ಎಲಿಮಿನೇಟ್' ಮಾಡಿದ್ದೇವೆ'' ಎಂದು ನ್ಯೂಜಿಲ್ಯಾಂಡ್ ಸರ್ಕಾರ ಘೋಷಿಸಿದೆ.

ಗುರಿ ಸಾಧಿಸಿದ ನ್ಯೂಜಿಲ್ಯಾಂಡ್

ಗುರಿ ಸಾಧಿಸಿದ ನ್ಯೂಜಿಲ್ಯಾಂಡ್

ನ್ಯೂಜಿಲ್ಯಾಂಡ್ ನಲ್ಲಿ ಇಲ್ಲಿಯವರೆಗೂ 1472 ಕೋವಿಡ್-19 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಆ ಪೈಕಿ 19 ಮಂದಿ ಮಾತ್ರ ಸಾವನ್ನಪ್ಪಿದ್ದಾರೆ. ನ್ಯೂಜಿಲ್ಯಾಂಡ್ ಇದೀಗ ಪ್ರತಿ ದಿನ ಕೇವಲ ಒಂದಂಕಿಯಲ್ಲಿ ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗುತ್ತಿವೆ. ಈ ಹಿನ್ನಲೆಯಲ್ಲಿ ''ಕೊರೊನಾ ವೈರಸ್ ಅನ್ನು ಎಲಿಮಿನೇಟ್ ಮಾಡಬೇಕೆನ್ನುವ ನಮ್ಮ ಗುರಿಯನ್ನು ನಾವು ಸಾಧಿಸಿದ್ದೇವೆ'' ಎಂದು ನ್ಯೂಜಿಲ್ಯಾಂಡ್ ಡೈರೆಕ್ಟರ್ ಜೆನರಲ್ ಆಫ್ ಹೆಲ್ತ್ ಆಶ್ಲೆ ಬ್ಲೂಮ್ ಫೀಲ್ಡ್ ಹೇಳಿದ್ದಾರೆ.

ಜಾಗರೂಕರಾಗಿರಬೇಕು ಎಂದ ಪ್ರಧಾನಿ

ಜಾಗರೂಕರಾಗಿರಬೇಕು ಎಂದ ಪ್ರಧಾನಿ

''ಕೊರೊನಾ ವೈರಸ್ ಅನ್ನು ನಾವು ಎಲಿಮಿನೇಟ್ ಮಾಡಿದ್ದೇವೆ ನಿಜ. ಆದರೆ ನಿರ್ಮೂಲನೆ ಆಗಿಲ್ಲ. ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ'' ಎಂದಿದ್ದಾರೆ ಆಶ್ಲೆ ಬ್ಲೂಮ್ ಫೀಲ್ಡ್. ಇನ್ನು, ''ಕೊರೊನಾ ವೈರಸ್ ಎಲಿಮಿನೇಟ್ ಆಗಿದ್ದರೂ, ನಾವು ಜಾಗರೂಕರಾಗಿರಬೇಕು. ಹೊಸ ಪ್ರಕರಣಗಳು ವರದಿಯಾಗುವ ನಿರೀಕ್ಷೆಯಿದೆ'' ಎಂದು ನ್ಯೂಜಿಲ್ಯಾಂಡ್ ಪ್ರಧಾನಿ ಜಸಿಂಡಾ ಅರ್ಡೆರ್ನ್ ಹೇಳಿದ್ದಾರೆ.

ಕಡಿಮೆ ಜನಸಂಖ್ಯೆ, ಹೆಚ್ಚು ಕೊರೊನಾ ಸೋಂಕು, ಕಮ್ಮಿ ಸಾವು: ಇದು ಸಿಂಗಾಪುರ್!

ಸಾಮಾಜಿಕ ಅಂತರ ಪಾಲಿಸಬೇಕು

ಸಾಮಾಜಿಕ ಅಂತರ ಪಾಲಿಸಬೇಕು

ಸೋಂಕಿತ ಪ್ರಕರಣಗಳ ಸಂಖ್ಯೆ ಕಮ್ಮಿಯಾಗುತ್ತಿರುವುದರಿಂದ ಲಾಕ್ ಡೌನ್ ನಿಯಮಗಳು ನ್ಯೂಜಿಲ್ಯಾಂಡ್ ನಲ್ಲಿ ನಾಲ್ಕನೇ ಹಂತದಿಂದ ಮೂರನೇ ಹಂತಕ್ಕೆ ಇಳಿದಿದೆ. ಇಂದಿನಿಂದ ವ್ಯಾಪಾರ-ವಹಿವಾಟು ಭಾಗಶಃ ತೆರೆಯಲಿದ್ದು, ಎಲ್ಲರೂ ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸಬೇಕಿದೆ.

ಈಗಲೂ ನಿರ್ಬಂಧ

ಈಗಲೂ ನಿರ್ಬಂಧ

'ವರ್ಕ್ ಫ್ರಮ್ ಹೋಮ್' ಮಂತ್ರ ಜಪಿಸುತ್ತಿರುವ ನ್ಯೂಜಿಲ್ಯಾಂಡ್ ನಲ್ಲಿ ಈಗಲೂ ಜಿಮ್, ಲೈಬ್ರರಿ, ಮ್ಯೂಸಿಯಂಗಳನ್ನು ತೆರೆಯಲು ಅವಕಾಶ ನೀಡಲಾಗಿಲ್ಲ. ಮದುವೆ ಮತ್ತು ಅಂತ್ಯ ಸಂಸ್ಕಾರದ ಸಮಯದಲ್ಲಿ 10 ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ.

ಕೊರೊನಾ ವಿರುದ್ಧ ಹೋರಾಡಲು ನ್ಯೂಜಿಲ್ಯಾಂಡ್ ಕೈಗೊಂಡ ಕ್ರಮಗಳು

ಕೊರೊನಾ ವಿರುದ್ಧ ಹೋರಾಡಲು ನ್ಯೂಜಿಲ್ಯಾಂಡ್ ಕೈಗೊಂಡ ಕ್ರಮಗಳು

ಫೆಬ್ರವರಿ 28 ರಂದು ನ್ಯೂಜಿಲ್ಯಾಂಡ್ ನಲ್ಲಿ ಮೊಟ್ಟಮೊದಲ ಕೋವಿಡ್-19 ಪಾಸಿಟಿವ್ ಕೇಸ್ ಪತ್ತೆಯಾಯ್ತು. ಮಾರ್ಚ್ 14 ರ ವೇಳೆಗೆ ಆರು ಪ್ರಕರಣಗಳು ನ್ಯೂಜಿಲ್ಯಾಂಡ್ ನಲ್ಲಿ ದೃಢಪಟ್ಟವು. ಆಗ ''ನ್ಯೂಜಿಲ್ಯಾಂಡ್ ಗೆ ಬರುವ ಜನರು ಕಡ್ಡಾಯವಾಗಿ ಎರಡು ವಾರಗಳ ಕಾಲ ಸೆಲ್ಫ್-ಐಸೋಲೇಟ್ ಆಗಬೇಕು'' ಎಂಬ ನಿಯಮವನ್ನು ಪ್ರಧಾನಿ ಜಾರಿಗೆ ತಂದರು. ಮಾರ್ಚ್ 20 ರಂದು ವಿದೇಶಿಯರ ಎಂಟ್ರಿಗೆ ನ್ಯೂಜಿಲ್ಯಾಂಡ್ ನಿರ್ಬಂಧ ಹೇರಿತು.

ಹಂತ ಹಂತವಾಗಿ ಲಾಕ್ ಡೌನ್ ಕಠಿಣ

ಹಂತ ಹಂತವಾಗಿ ಲಾಕ್ ಡೌನ್ ಕಠಿಣ

ಮಾರ್ಚ್ 23 ರಂದು ನ್ಯೂಜಿಲ್ಯಾಂಡ್ ನಲ್ಲಿ ಮೂರನೇ ಹಂತದ ಲಾಕ್ ಡೌನ್ ಘೋಷಣೆಯಾಯ್ತು. ಇದರ ಅನುಸಾರ, ಅಗತ್ಯ ವಸ್ತುಗಳ ಮಾರಾಟ ಹೊರತುಪಡಿಸಿ ಎಲ್ಲಾ ರೀತಿಯ ವ್ಯಾಪಾರ-ವಹಿವಾಟು ಬಂದ್ ಆಯ್ತು. ಶಾಲಾ-ಕಾಲೇಜು, ಸಾರ್ವಜನಿಕ ಕಾರ್ಯಕ್ರಮಗಳು, ಸಾರಿಗೆ ವ್ಯವಸ್ಥೆ ಸ್ಥಗಿತಗೊಂಡವು. ನೌಕರರು ಮನೆಯಿಂದಲೇ ಕೆಲಸ ಮಾಡಿದರು.

ಮನೆಯಿಂದ ಹೊರಗೆ ಬರುವಂತಿರಲಿಲ್ಲ

ಮನೆಯಿಂದ ಹೊರಗೆ ಬರುವಂತಿರಲಿಲ್ಲ

ಮಾರ್ಚ್ 25 ರಿಂದ ನಾಲ್ಕನೇ ಹಂತದ ಲಾಕ್ ಡೌನ್ ಜಾರಿಗೆ ಬಂತು. ಇದರ ಅನುಸಾರ, ಅಗತ್ಯ ವಿಚಾರಕ್ಕೆ ಹೊರತುಪಡಿಸಿದಂತೆ ಮನೆಯಿಂದ ಯಾರೂ ಹೊರಗೆ ಕಾಲಿಡುವಂತಿರಲಿಲ್ಲ. 5 ಮಿಲಿಯನ್ ಜನಸಂಖ್ಯೆ ಹೊಂದಿರುವ ನ್ಯೂಜಿಲ್ಯಾಂಡ್ ನಲ್ಲಿ ಇಲ್ಲಿಯವರೆಗೂ 123,920 ಜನರಿಗೆ ಕೋವಿಡ್-19 ಪರೀಕ್ಷೆ ಮಾಡಲಾಗಿದೆ.

ಓಹ್.. ಜುಲೈನಲ್ಲಿ 'ಕೊರೊನಾ-ದಿ ಎಂಡ್': ಸಂಶೋಧಕರ ಈ ಮಾತು ನಿಜವಾಗಲಿ!

English summary
New Zealand claims elimination of Coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X