ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ್ಯೂಜಿಲೆಂಡ್‌ಗೆ ಕಾಲಿಟ್ಟ ಡೆಲ್ಟಾ; ಒಂದೇ ಪ್ರಕರಣಕ್ಕೆ ಲಾಕ್‌ಡೌನ್ ಘೋಷಿಸಿದ ದೇಶ

By ಒನ್‌ಇಂಡಿಯಾ ಡೆಸ್ಕ್‌
|
Google Oneindia Kannada News

ನ್ಯೂಜಿಲೆಂಡ್, ಆಗಸ್ಟ್‌ 18: ಇಡೀ ವಿಶ್ವವನ್ನೇ ಕೊರೊನಾ ಸೋಂಕು ಆವರಿಸಿದ್ದು, ಹಲವು ದೇಶಗಳು ಸೋಂಕಿನಿಂದ ತತ್ತರಿಸಿವೆ. ಆದರೆ ನ್ಯೂಜಿಲೆಂಡ್‌ನಲ್ಲಿ ಫೆಬ್ರವರಿ ನಂತರ ಇದೀಗ ಕೊರೊನಾ ಸೋಂಕಿನ ಒಂದೇ ಒಂದು ಪ್ರಕರಣ ದಾಖಲಾಗುತ್ತಿದ್ದಂತೆ ಇಡೀ ದೇಶಕ್ಕೆ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ.

ಸ್ಥಳೀಯವಾಗಿ ಫೆಬ್ರವರಿ ನಂತರ ಮೊದಲ ಕೊರೊನಾ ಪ್ರಕರಣ ದೃಢಪಟ್ಟಿದ್ದು, ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ ಅರ್ಡರ್ನ್ ದೇಶಾದ್ಯಂತ ಲಾಕ್‌ಡೌನ್ ಘೋಷಣೆ ಮಾಡಿದ್ದಾರೆ.

ಒಡೆದ ವಲಸಿಗರ ಒಗ್ಗಟ್ಟು? ಅಷ್ಟಕ್ಕೂ ಅದರ ಹಿಂದಿನ ಮರ್ಮವೇನು? ಇಲ್ಲಿದೆ ಮಾಹಿತಿ! ಒಡೆದ ವಲಸಿಗರ ಒಗ್ಗಟ್ಟು? ಅಷ್ಟಕ್ಕೂ ಅದರ ಹಿಂದಿನ ಮರ್ಮವೇನು? ಇಲ್ಲಿದೆ ಮಾಹಿತಿ!

ಈ ಕೊರೊನಾ ಸೋಂಕು ಡೆಲ್ಟಾ ರೂಪಾಂತರವಾಗಿರಬಹುದು ಎಂದು ಆರೋಗ್ಯಾಧಿಕಾರಿಗಳು ಅಂದಾಜಿಸಿದ್ದಾರೆ. ಈ ಸೋಂಕಿನ ಜೆನೋಮ್ ಸೀಕ್ವೆನ್ಸಿಂಗ್ ಮುಂದುವರೆದಿದೆ ಎಂದು ಅರ್ಡರ್ನ್ ಮಂಗಳವಾರ ಮಾಹಿತಿ ನೀಡಿದ್ದಾರೆ.

New Zealand Announces Lockdown Over one Covid case

ದೇಶದ ಬೃಹತ್ ನಗರ ಅಕ್ಲಾಂಡ್‌ನಲ್ಲಿ 58 ವರ್ಷದ, ಕೊರೊನಾ ಲಸಿಕೆ ಪಡೆಯದ ವ್ಯಕ್ತಿಯೊಬ್ಬರು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ದೇಶದ ಇತರೆ ಭಾಗಗಳಿಗೆ ಅವರು ಪ್ರಯಾಣಿಸಿದ್ದಾರೆ ಎಂದು ಆರೋಗ್ಯ ನಿರ್ದೇಶಕ ಆಶ್ಲೇ ಬ್ಲೂಮ್‌ಫೀಲ್ಡ್‌ ತಿಳಿಸಿದ್ದಾರೆ.

ನ್ಯೂಜಿಲೆಂಡ್‌ನಲ್ಲಿ ಮಂಗಳವಾರದಿಂದ ಆರಂಭಗೊಂಡು ಮುಂದಿನ ಮೂರು ದಿನಗಳವರೆಗೆ ಕಠಿಣ ಹಂತದ ಲಾಕ್‌ಡೌನ್ ಜಾರಿಯಲ್ಲಿರಲಿದೆ ಎಂದು ಆರ್ಡರ್ನ್ ಘೋಷಣೆ ಮಾಡಿದ್ದಾರೆ. ನಾಲ್ಕನೇ ಹಂತದ ಲಾಕ್‌ಡೌನ್ ಅಡಿಯಲ್ಲಿ, ಪ್ರತಿಯೊಬ್ಬರೂ ಮನೆಯಲ್ಲೇ ಇರಬೇಕು ಹಾಗೂ ಸೂಪರ್‌ಮಾರ್ಕೆಟ್‌ಗಳು ಹಾಗೂ ಔಷಧಾಲಯದಂಥ ಅಗತ್ಯ ಸೇವೆಗಳ ವ್ಯಾಪಾರ ವಹಿವಾಟನ್ನೂ ಮುಚ್ಚಲಾಗುತ್ತದೆ ಎಂದು ತಿಳಿಸಿದ್ದಾರೆ.

New Zealand Announces Lockdown Over one Covid case

ಸೋಂಕಿತ ವ್ಯಕ್ತಿ ಓಡಾಡಿದ್ದ ಅಕ್ಲಾಂಡ್ ಹಾಗೂ ಕೋರೊಮಾಂಡೆಲ್ ಪೆನೆನ್ಸುಲಾ ಪ್ರದೇಶದಲ್ಲಿ ವಾರದ ಅವಧಿ ನಾಲ್ಕನೇ ಹಂತದ ಲಾಕ್‌ಡೌನ್ ಹೇರಲಾಗಿದೆ.

ಒಂದು ವರ್ಷದ ಹಿಂದೆ ನ್ಯೂಜೆಲೆಂಡ್‌ ಸೋಂಕಿನ ಗಂಭೀರ ಪರಿಣಾಮ ಎದುರಿಸಿದ್ದು, ಅತ್ಯಂತ ಕಠಿಣ ಲಾಕ್‌ಡೌನ್ ವಿಧಿಸಲಾಗಿತ್ತು.

"ಸಮುದಾಯದಲ್ಲಿ ಡೆಲ್ಟಾ ರೂಪಾಂತರ ಹೊಂದಿರುವ ವಿಶ್ವದ ಕೊನೆಯ ದೇಶ ನಮ್ಮದಾಗಿದೆ. ಸೋಂಕು ನಿಯಂತ್ರಣಕ್ಕೆ ಬೇರೆ ದೇಶಗಳ ಅನುಭವಗಳು, ಕೊರೊನಾ ನಿಯಂತ್ರಣಕ್ಕೆ ಅವರು ತೆಗೆದುಕೊಂಡ ಕ್ರಮಗಳ ಕುರಿತು ನಾವು ತಿಳಿದುಕೊಳ್ಳಬೇಕಿದೆ. ಏನು ಕ್ರಮಗಳು ಫಲ ಕೊಡುವುದಿಲ್ಲ ಎಂಬುದನ್ನೂ ನಾವು ಕಂಡುಕೊಳ್ಳಬೇಕಿದೆ" ಎಂದಿದ್ದಾರೆ.

ಇಡೀ ವಿಶ್ವಕ್ಕೆ ಡೆಲ್ಟಾ ರೂಪಾಂತರ ಮಾರಕವಾಗಿದೆ. ಹೀಗಾಗಿ ಇದನ್ನು ತಡೆಯಲು ಮತ್ತೆ ಕಠಿಣವಾದ ಹಾದಿಯನ್ನು ಹಿಡಿಯಲೇಬೇಕಿದೆ. ಇದರಲ್ಲಿ ನಾವು ವಿಫಲವಾದರೆ ಮುಂದೆ ಕೆಟ್ಟ ಪರಿಸ್ಥಿತಿ ಎದುರಾಗಲಿದೆ. ಅದಕ್ಕಾಗಿ ನಮಗೆ ಒಂದೇ ಅವಕಾಶವಿದೆ ಎಂದು ಅವರು ವಿವರಿಸಿದ್ದಾರೆ.

ಕೊರೊನಾ ನಿರ್ವಹಣೆಯಲ್ಲಿ ನ್ಯೂಜಿಲೆಂಡ್ ಪ್ರಶಂಸೆ ಗಿಟ್ಟಿಸಿಕೊಂಡಿದೆ. ಕೊರೊನಾ ನಿಯಂತ್ರಣಕ್ಕೆ ಎಲ್ಲಾ ದೇಶಗಳಿಗಿಂತ ಬಹುಬೇಗ ಕ್ರಮ ತೆಗೆದುಕೊಂಡು ಮೊದಲು ಗಡಿ ಮುಚ್ಚಿದ ದೇಶ ನ್ಯೂಜೆಲೆಂಡ್ ಆಗಿತ್ತು. ಎಲ್ಲೆಡೆಯಿಂದ ಸಂಪರ್ಕ ಕಡಿತಗೊಳಿಸಿ ವ್ಯಾಪಕವಾಗಿ ಸೋಂಕು ಹರಡದಂತೆ ತಡೆದಿತ್ತು. ಹೊರಗಡೆಯಿಂದ ಬಂದವರ ಮೇಲೆ ನಿಗಾ ಇಟ್ಟು, ಕಠಿಣ ಕ್ವಾರಂಟೈನ್ ನಿಯಮಗಳನ್ನು ಹೇರಿತ್ತು.

ಐದು ಮಿಲಿಯನ್ ಜನಸಂಖ್ಯೆ ಹೊಂದಿದ್ದ ನ್ಯೂಜಿಲೆಂಡ್‌ನಲ್ಲಿ 3000 ಕೊರೊನಾ ಪ್ರಕರಣಗಳು ಮಾತ್ರ ದಾಖಲಾಗಿದ್ದವು. 26 ಮಂದಿ ಮಾತ್ರ ಸೋಂಕಿನಿಂದ ಸಾವನ್ನಪ್ಪಿದ್ದರು. ಆದರೆ ಕೊರೊನಾ ಲಸಿಕೆ ನೀಡುವುದರಲ್ಲಿ ಮಾತ್ರ ನ್ಯೂಜಿಲೆಂಡ್ ಹಿಂದೆ ಉಳಿದಿತ್ತು.

ಲಸಿಕೆ ಪಡೆದ ಬೇರೆ ದೇಶದ ಪ್ರಜೆಗಳಿಗೆ 2022ರ ಆರಂಭದಲ್ಲಿ ದೇಶಕ್ಕೆ ಬರಲು ಅನುಮತಿ ನೀಡುವ ಕುರಿತು ಚಿಂತನೆ ನಡೆಸಿತ್ತು.

ನ್ಯೂಜೆಲೆಂಡ್‌ನ ನೆರೆಯ ಆಸ್ಟ್ರೇಲಿಯಾ ಕೂಡ ಕೊರೊನಾ ನಿರ್ವಹಣೆ ವಿಷಯದಲ್ಲಿ ಪ್ರಶಂಸೆ ಪಡೆದುಕೊಂಡಿತ್ತು. ಆದರೆ ಕಳೆದ ಕೆಲವು ವಾರಗಳಿಂದ ಅಲ್ಲಿಯೂ ಡೆಲ್ಟಾ ಹಾವಳಿ ಆರಂಭವಾಗಿದೆ. ಆಸ್ಟ್ರೇಲಿಯಾದ ಅರ್ಧ ಜನಸಂಖ್ಯೆ ಲಾಕ್‌ಡೌನ್‌ ಅಡಿಯಲ್ಲಿದೆ. ಜೂನ್‌ನಿಂದಲೂ ದೇಶದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಸಿಡ್ನಿ ಲಾಕ್‌ಡೌನ್‌ನಲ್ಲಿದೆ.

English summary
New Zealand's Prime Minister Jacinda Ardern has announced a nationwide lockdown after the country confirmed one coronavirus case,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X