ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕಕ್ಕೆ ಆತಂಕ ತಂದಿರುವ ಡೆಡ್ಲಿ 'ವೈರಸ್'

By Mahesh
|
Google Oneindia Kannada News

ನ್ಯೂಯಾರ್ಕ್, ಆ.5: ಆಫ್ರಿಕಾದಲ್ಲಿ ಸಕ್ರಿಯವಾಗಿರುವ ಜಗತ್ತಿನ ಅತ್ಯಂತ ಮಾರಕ ವೈರಾಣು 'ಎಬೋಲಾ' ಈಗ ಅಮೆರಿಕ ಹಾಗೂ ದಕ್ಷಿಣ ಕೊರಿಯಾಕ್ಕೂ ಭೀತಿ ಹುಟ್ಟಿಸುತ್ತಿದೆ. ನ್ಯೂಯಾರ್ಕ್ ನಲ್ಲಿ ಸೋಮವಾರ ವ್ಯಕ್ತಿಯೊಬ್ಬರಿಗೆ ಈ ಮಾರಕ ವೈರಸ್ ಇರುವುದು ಖಾತ್ರಿಯಾಗಿರುವುದು ಆತಂಕ ಇನ್ನಷ್ಟು ಹೆಚ್ಚಿಸಿದೆ.

ಇತ್ತೀಚೆಗೆ ಪಶ್ಚಿಮ ಆಫ್ರಿಕಾಕ್ಕೆ ಹೋಗಿ ನ್ಯೂಯಾರ್ಕಿಗೆ ಹಿಂತಿರುಗಿದ್ದ ಈ ವ್ಯಕ್ತಿ ನ್ಯೂಯಾರ್ಕ್ ಸಿಟಿ ಆಸ್ಪತ್ರೆಗೆ ಸೋಮವಾರ ದಾಖಲಾಗಿದ್ದರು. ಅವರಿಗೆ ಜ್ವರದ ಜೊತೆಗೆ ಕರುಳುಬೇನೆ ಕೂಡಾ ಇತ್ತು. ತೀವ್ರ ತಪಾಸಣೆ ನಂತರ ಆ ವ್ಯಕ್ತಿಗೆ ಎಬೋಲಾ ವೈರಸ್ ಹೊಕ್ಕಿರುವುದು ಪತ್ತೆಯಾಗಿದೆ ಎಂದು ಮೌಂಟ್ ಸಿನೈ ಆಸ್ಪತ್ರೆ ವೈದ್ಯರು ಹೇಳಿದ್ದಾರೆ.

ಎಬೋಲಾ ಪೀಡಿತ ರೋಗಿಯನ್ನು ಪ್ರತ್ಯೇಕ ಕೋಣೆಯಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೆರಡು ದಿನಗಳಲ್ಲಿ ಎಬೋಲಾ ವೈರಸ್ ಇರುವ ಬಗ್ಗೆ ಸಂಪೂರ್ಣ ಮಾಹಿತಿ ಸಿಗಲಿದೆ. ಪ್ರಾಥಮಿಕ ಹಂತದ ಚಿಕಿತ್ಸೆಯ ನಂತರ ಎಬೋಲಾ ವೈರಾಣು ಪೀಡಿತ ಜ್ವರ ಎಂದು ಪರಿಗಣಿಸಲಾಗಿದೆ ಎಂದು ಡಾ. ಸಂಜಯ್ ಗುಪ್ತ ಹೇಳಿದ್ದಾರೆ.

ಮಂಗಳವಾರ ಲಿಬೆರಿಯಾದಿಂದ ಅಟ್ಲಾಂಟಾಕ್ಕೆ ವ್ಯಕ್ತಿಯೊಬ್ಬರು ಬರಲಿದ್ದು, ಆಕೆಗೆ ಚಿಕಿತ್ಸೆ ನೀಡಲು ವಿಮಾನ ನಿಲ್ದಾಣದಲ್ಲೇ ವ್ಯವಸ್ಥೆ ಕಲ್ಪಿಸಲಾಗಿದೆ.
ಇನ್ನೊಂದೆಡೆ ಕೊರಿಯಾ ಕೂಡಾ ಮುನ್ನಚ್ಚರಿಕೆ ಕ್ರಮ ಕೈಗೊಂಡಿದ್ದು, ಗಿನಿಯಾ, ಸಿಯಾರಾ ಲಿಯೋನ್ ಮುಂತಾದ ಕಡೆ ತೆರಳುವ ತನ್ನ ನಾಗರಿಕೆಗೆ ಎಚ್ಚರಿಕೆ ಸಂದೇಶ ಕಳಿಸಿದೆ. ಆಫ್ರಿಕಾದಿಂದ ಹಿಂತಿರುಗುವ ಪ್ರಯಾಣಿಕರನ್ನು ತೀವ್ರ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.

New York patient being tested for Ebola

ನಾರ್ಥ್ ಕರೋಲಿನಾ ಮೂಲದ ಡಾ. ಕೆಂಟ್ ಬ್ರಾಂಟ್ಲಿ ಅವರು ಲಿಬೇರಿಯಾದ ಎಬೋಲಾ ವೈರಸ್ ಪೀಡಿತ ರೋಗಿಯೊಬ್ಬರಿಗೆ ಹಲವು ಕಾಲದಿಂದ ಚಿಕಿತ್ಸೆ ನೀಡುತ್ತಿದ್ದರು. ಇತ್ತೀಚಿಗೆ ಡಾ. ಕೆಂಟ್ ಅವರ ದೇಹಾರೋಗ್ಯದಲ್ಲಿ ಇದ್ದಕ್ಕಿದ್ದಂತೆ ವ್ಯತ್ಯಾಸ ಕಂಡು ಬಂದಿತು. ತಕ್ಷಣವೇ ಪರೀಕ್ಷೆಗೆ ಒಳಪಡಿಸಿದ ನಂತರ 'ಪಾಸಿಟಿವ್' ಎಂದು ತಿಳಿದು ಬಂದಿದೆ. ಲಿಬೇರಿಯಾದ ಮೊನ್ರೊವಿಯಾದ ಆಸ್ಪತ್ರೆಯಲ್ಲಿ ಡಾ. ಕೆಂಟ್ ಅವರಿಗೂ ಚಿಕಿತ್ಸೆ ನೀಡಲಾಗುತ್ತಿದೆ.[ ವಿವರ ಇಲ್ಲಿ ಓದಿ]

ಎಬೋಲಾ ವೈರಸ್ ಗಾಳಿ ಅಥವಾ ನೀರಿನ ಮೂಲಕ ಸಾಂಕ್ರಾಮಿಕವಾಗಿ ಹರಡುವುದಿಲ್ಲ. ರೋಗ ಪೀಡಿತ ರಕ್ತ, ಜಿಹ್ವಾರಸ, ಮೂತ್ರ ಮುಂತಾದವುಗಳ ಸೋಕುವಿಕೆಯಿಂದ ಹರಡುತ್ತದೆ.

ಈ ನಡುವೆ ಎಬೋಲಾ ಸೋಂಕಿನ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವ ಆಫ್ರಿಕಾ ತಂಡಕ್ಕೆ ನೆರವು ನೀಡುವುದಕ್ಕಾಗಿ ಕನಿಷ್ಠ 50 ಮಂದಿ ಆರೋಗ್ಯಾಧಿಕಾರಿಗಳ ತಂಡವೊಂದನ್ನು ಪಶ್ಚಿಮ ಆಫ್ರಿಕಕ್ಕೆ ಕಳುಹಿಸುವ ಯೋಜನೆಯನ್ನು ಅಮೆರಿಕ ಪ್ರಕಟಿಸಿದೆ.

ಗಿನಿ, ಲೈಬೀರಿಯ ಹಾಗೂ ಸಿಯೆರಾ ಲಿಯೋನ್ ಸೇರಿದಂತೆ ಪಶ್ಚಿಮ ಆಫ್ರಿಕದ ರಾಷ್ಟ್ರಗಳಲ್ಲಿ ಇದುವರೆಗೆ 728 ಮಂದಿ ಎಬೋಲಾ ಸೋಂಕಿಗೆ ಬಲಿಯಾಗಿದ್ದಾರೆ.

ಗಾಂಬಿಯಾದಿಂದ ಬ್ರಿಟನ್ ತಲುಪಿದ ಬಳಿಕ ಸಾವಿಗೀಡಾದ ಮಹಿಳಾ ಪ್ರಯಾಣಿಕರೊಬ್ಬರಲ್ಲಿ ಎಬೋಲಾ ಸೋಂಕು ಇದ್ದುದು ಪರೀಕ್ಷೆಯಿಂದ ದೃಢಪಟ್ಟಿದೆ. ಇದೇ ವೇಳೆ ಎಬೋಲಾ ಸೋಂಕು ತಗಲಿರುವ ಅಮೆರಿಕದ ವೈದ್ಯರೊಬ್ಬರು ಲೈಬೀರಿಯದಿಂದ ಅಮೆರಿಕಕ್ಕೆ ಮರಳಿದ್ದು, ಚೇತರಿಸಿಕೊಳ್ಳುತ್ತಿರುವುದಾಗಿ ವರದಿಗಳು ತಿಳಿಸಿವೆ.

English summary
A patient admitted to a New York City hospital with a high fever and gastrointestinal symptoms Monday is being tested for Ebola.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X