ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ಕೊರೊನಾ ಭೀತಿ: ಬ್ರಿಟನ್‌ಗೆ ವಿಮಾನ ಹಾರಾಟ ನಿಲ್ಲಿಸಿದ ಫಿಲಿಪೈನ್ಸ್

|
Google Oneindia Kannada News

ಮನಿಲಾ, ಡಿಸೆಂಬರ್ 23: ಬ್ರಿಟನ್‌ನಲ್ಲಿ ಹೊಸ ರೂಪಾಂತರಿ ಕೊರೊನಾ ವೈರಸ್‌ ಪತ್ತೆಯಾದ ಬಳಿಕ ಯೂರೋಪಿಯನ್ ರಾಷ್ಟ್ರಗಳು ಸೇರಿದಂತೆ ಏಷ್ಯಾದ ಹಲವು ರಾಷ್ಟ್ರಗಳು ಬ್ರಿಟನ್‌ಗೆ ವಿಮಾನ ಹಾರಾಟ ಸೇವೆ ನಿಲ್ಲಿಸಿದ್ದು, ಭಾರತದ ಬಳಿಕ ಫಿಲಿಪೈನ್ಸ್ ಕೂಡ ಇಂಗ್ಲೆಂಡ್‌ಗೆ ವಿಮಾನ ಸೇವೆಯನ್ನು ಸ್ಥಗಿತಗೊಳಿಸಿದೆ.

ಫಿಲಿಪೈನ್ಸ್ ಅಧ್ಯಕ್ಷ ರೊಡ್ರಿಗೋ ಡುಟರ್ಟೆ ಇಂಗ್ಲೆಂಡ್‌ನಿಂದ ಬರುವ ಎಲ್ಲಾ ವಿಮಾನಗಳನ್ನು ನಿಷೇಧಿಸಿದ್ದಾರೆ ಎಂದು ಅವರ ವಕ್ತಾರರು ಬುಧವಾರ ಹೇಳಿದ್ದಾರೆ. ಯುರೋಪಿಯನ್ ರಾಷ್ಟ್ರವು ಹೆಚ್ಚು ಕೋವಿಡ್-19 ಸಾಂಕ್ರಾಮಿಕ ರೋಗದ ಒತ್ತಡವನ್ನು ಎದುರಿಸುತ್ತಿದೆ. ಇದರ ಜೊತೆಗೆ ಇಂಗ್ಲೆಂಡ್‌ನ ಹೊಸ ರೂಪಾಂತರಿ ವೈರಸ್ ಹಲವು ರಾಷ್ಟ್ರಗಳಲ್ಲಿ ಆತಂಕ ಮೂಡಿಸಿದೆ.

ಬ್ರಿಟನ್ ನಂತರ ದಕ್ಷಿಣ ಆಫ್ರಿಕಾ ಸರದಿ; ಐದು ದೇಶಗಳ ವಿಮಾನ ರದ್ದುಬ್ರಿಟನ್ ನಂತರ ದಕ್ಷಿಣ ಆಫ್ರಿಕಾ ಸರದಿ; ಐದು ದೇಶಗಳ ವಿಮಾನ ರದ್ದು

ಫಿಲಿಪೈನ್ಸ್‌ಗೆ ಇಂಗ್ಲೆಂಡ್‌ನ ಎಲ್ಲಾ ವಿಮಾನಗಳನ್ನು ಡಿಸೆಂಬರ್ 24 ರಿಂದ ಡಿಸೆಂಬರ್ 31 ರವರೆಗೆ ಸ್ಥಗಿತಗೊಳಿಸಲಾಗಿದೆ ಎಂದು ಅಧ್ಯಕ್ಷೀಯ ವಕ್ತಾರ ಹ್ಯಾರಿ ರೋಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಭಾರತವು ಕೂಡ ಇಂಗ್ಲೆಂಡ್‌ಗೆ ಡಿಸೆಂಬರ್ 31 ರವರೆಗೆ ವಿಮಾನ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

New Virus Strain:Philippines Bans All Flight From Britain

ಕಳೆದ 14 ದಿನಗಳಲ್ಲಿ ಇಂಗ್ಲೆಂಡ್‌ನಲ್ಲಿರುವ ತನ್ನ ಎಲ್ಲಾ ಫಿಲಿಫೈನ್ಸ್ ಪ್ರಯಾಣಿಕರಿಗೂ ಸಹ ತಾತ್ಕಾಲಿಕವಾಗಿ ಅದೇ ಅವಧಿಗೆ ದೇಶಕ್ಕೆ ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆ.

English summary
Philippines President Rodrigo Duterte has banned all flights from the United Kingdom.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X