ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಕಥೆಯೇ ಮುಗಿದಿಲ್ಲ, ಚೀನಾದಲ್ಲಿ ಮತ್ತೊಂದು ಡೆಡ್ಲಿ ವೈರಸ್ ಪತ್ತೆ

|
Google Oneindia Kannada News

ಬೀಜಿಂಗ್, ಜೂನ್ 30: ಜಗತ್ತಿಗೆ ಕೊರೊನಾವೈರಸ್ ಹರಡಿಸಿ 213 ರಾಷ್ಟ್ರಗಳ ಪಾಲಿನ ವಿಲನ್ ಆಗಿರುವ ಚೀನಾದಲ್ಲಿ ಕೊರೊನಾ ಕಥೆಯೇ ಮುಗಿದಿಲ್ಲ ಅದಾಗಲೇ ಮತ್ತೊಂದು ಸಾಂಕ್ರಾಮಿಕ ವೈರಸ್ ತಲೆದೂರಿದೆ.

Recommended Video

SSLC and PUC Result dates finalized,ಫಲಿತಾಂಶ ದಿನಾಂಕ ಹೇಳಿದ ಶಿಕ್ಷಣ ಸಚಿವರು | Oneindia Kannada

ಹೌದು, ಚೀನಾದಲ್ಲಲಿ ವಿಜ್ಞಾನಿಗಳು ಸಾಂಕ್ರಾಮಿಕ ರೋಗವನ್ನು ಹರಡಬಲ್ಲ ಸ್ವೈನ್ ಫ್ಲೂ (ಹಂದಿಜ್ವರ)ದ ವೈರಸ್ ಅನ್ನು ಪತ್ತೆ ಮಾಡಿದ್ದಾರೆ. ಈ ವೈರಸ್ ಹಂದಿಗಳಲ್ಲಿ ಕಾಣಿಸಿಕೊಡಿದ್ದು, ಮನುಷ್ಟರಿಗೂ ಅಂಟಿಕೊಳ್ಳುವ ಸಾಮರ್ಥ್ಯವಿದೆ. ಜೊತೆಗೆ ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಭೀತಿಯಿದೆ.

ಕೊರೊನಾ ರೋಗಿಗಳ ಶವಸಂಸ್ಕಾರ ವಿಡಿಯೋ; ತನಿಖೆಗೆ ಬಳ್ಳಾರಿ ಡಿಸಿ ಆದೇಶಕೊರೊನಾ ರೋಗಿಗಳ ಶವಸಂಸ್ಕಾರ ವಿಡಿಯೋ; ತನಿಖೆಗೆ ಬಳ್ಳಾರಿ ಡಿಸಿ ಆದೇಶ

ಚೀನಾದ ಕೆಲ ಪ್ರಾಂತ್ಯಗಳಲ್ಲಿರುವ ಹಂದಿಗಳಿಗೆ ಹೊಸ ಇನ್‌ಫ್ಲುಯೆಂಜಾ ವೈರಸ್‌ನಿಂದ ಹೆಚ್ಚು ಸೋಂಕಿಗೆ ಒಳಗಾಗುತ್ತಿವೆ. ಈ ಸೋಂಕು ಸದ್ಯದಲ್ಲೇ ಮನುಷ್ಯರಿಗೂ ಹರಡುವ ಸಾಧ್ಯತೆ ಇದೆ. ಇದು ಸುಲಭದಲ್ಲಿ ಒಬ್ಬರಿಂದ ಒಬ್ಬರಿಗೆ ಹರಡಬಹುದಾಗಿದ್ದು, ಈ ಬಗ್ಗೆ ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

New Swine Flu Virus With Pandemic Potential Found in China

ಇನ್ನು ಹಂದಿಗಳಿಗೆ ಕಾಣಿಸಿಕೊಂಡಿರುವ ಇನ್‌ಫ್ಲುಯೆಂಜಾ ವೈರಸ್‌ , ಜಿ-4 ಎಂಬ ಹೆಸರಿನ ವೈರಸ್‌ ಆಗಿದ್ದು, ಹಂದಿಗಳಿಗಷ್ಟೇ ಅಲ್ಲದೆ ಯುರೋಪಿಯನ್ ಮತ್ತು ಏಷ್ಯನ್ ಪಕ್ಷಿಗಳಿಗೂ ತಗಲುವ ಸಾಧ್ಯತೆ ಇದೆ.

ಈ ಬಗ್ಗೆ ಚೀನಾ ಅಗ್ರಿಕಲ್ಚರಲ್ ಯೂನಿವರ್ಸಿಟಿಯ (ಸಿಎಯು) ಲಿಯು ಜಿನ್ಹುವಾ ನೇತೃತ್ವದ ತಂಡವು ಚೀನಾದ 10 ಕಸಾಯಿಖಾನೆಗಳ 30 ಸಾವಿರಕ್ಕೂ ಅಧಿಕ ಹಂದಿಗಳ ಸ್ವ್ಯಾಬ್‌ಗಳ ಪರೀಕ್ಷೆ ಮಾಡಿದ್ದು, ಅವುಗಳ ಉಸಿರಾಟದ ತೊಂದರೆಯಿಂದ ಬಳಲುತ್ತಿರುವುದು ತಿಳಿದುಬಂದ ಹಿನ್ನೆಲೆಯಲ್ಲಿ, ಇದರ ಅಧ್ಯಯನ ನಡೆಸಲಾಗಿತ್ತು. ಇದೀಗ ಈ ವೈರಸ್ ಕುರಿತಂತೆ ವಿಜ್ಞಾನಿಗಳು ಮಾಹಿತಿ ನೀಡಿದ್ದು, ಈ ವೈರಸ್ ನಿಯಂತ್ರಣಕ್ಕೆ ಈಗಾಗಲೇ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವ ಅಗತ್ಯವಿದೆ ಎಂದಿದ್ದಾರೆ.

ಚೀನಾ ಆ್ಯಪ್‌ಗಳ ನಿಷೇಧ : ಭಾರತದ ನಿರ್ಧಾರಕ್ಕೆ ಕಳವಳ ವ್ಯಕ್ತಪಡಿಸಿದ ಚೀನಾಚೀನಾ ಆ್ಯಪ್‌ಗಳ ನಿಷೇಧ : ಭಾರತದ ನಿರ್ಧಾರಕ್ಕೆ ಕಳವಳ ವ್ಯಕ್ತಪಡಿಸಿದ ಚೀನಾ

ಹೊಸದಾಗಿ ಹುಟ್ಟಿಕೊಂಡಿರುವ ಈ ವೈರಸ್ ಮೂರು ವಂಶಾವಳಿಗಳ ವಿಶಿಷ್ಟ ಮಿಶ್ರಣವಾಗಿದೆ. ಯುರೋಪಿಯನ್ ಮತ್ತು ಏಷ್ಯನ್ ಪಕ್ಷಿಗಳಲ್ಲಿ ಕಂಡುಬರುವ ತಳಿಗಳಿಗೆ ಹೋಲುತ್ತದೆ. 2009 ರ ಸಾಂಕ್ರಾಮಿಕ ರೋಗಕ್ಕೆ ಕಾರಣವಾದ H1N1 ತಳಿ ಮತ್ತು ಏವಿಯನ್, ಮಾನವ ಮತ್ತು ಹಂದಿ ಇನ್ಫ್ಲುಯೆನ್ಸ ವೈರಸ್‌ಗಳಿಂದ ಜೀನ್‌ಗಳನ್ನು ಹೊಂದಿರುವ ಉತ್ತರ ಅಮೆರಿಕಾದ H1N1 ಆಗಿದೆ.

English summary
New swine flu virus with 'pandemic potential' found in china. Scientists says need close monitoring. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X