ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಕ್ಷಿಣ ಆಫ್ರಿಕಾದಲ್ಲಿ ಒಂದೇ ದಿನ 'ಓಮಿಕ್ರಾನ್' ಪ್ರಕರಣ ದ್ವಿಗುಣ

|
Google Oneindia Kannada News

ಜೊಹಾನ್ಸ್‌ಬರ್ಗ್, ಡಿಸೆಂಬರ್ 02: ದಕ್ಷಿಣ ಆಫ್ರಿಕಾದಲ್ಲಿ ಒಂದೇ ದಿನ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ ದ್ವಿಗುಣಗೊಂಡಿದೆ. ಹಾಗೆಯೇ 24 ದೇಶಗಳಿಗೆ ಈ ಸೋಂಕು ಹರಡಿದೆ.

ಬಹುಬೇಗ ಈ ರೂಪಾಂತರಿ ಹರಡುತ್ತಿದೆ ಎಂದು ತಜ್ಞರು ಹೇಳಿದ್ದಾರೆ. ಹಲವು ನಿರ್ಬಂಧಗಳನ್ನು ಸಡಿಲಗೊಳಿಸಿ ಈಗಾಗಲೇ ಹಳೇ ಸ್ಥಿತಿಗೆ ಮರಳುತ್ತಿರುವ ದೇಶಗಳಿಗೆ ಇದೀಗ ಮತ್ತೆ ಉಸಿರುಗಟ್ಟುವ ಸ್ಥಿತಿ ನಿರ್ಮಾಣವಾಗಿದೆ.

ಕೊರೊನಾವೈರಸ್ ಲಸಿಕೆ ಪಡೆದರೆ ಓಮಿಕ್ರಾನ್ ಕೂಡಾ ಏನೂ ಮಾಡುವುದಿಲ್ಲ!ಕೊರೊನಾವೈರಸ್ ಲಸಿಕೆ ಪಡೆದರೆ ಓಮಿಕ್ರಾನ್ ಕೂಡಾ ಏನೂ ಮಾಡುವುದಿಲ್ಲ!

ನವೆಂಬರ್ 8 ರಂದು ಓಮಿಕ್ರಾನ್ ಮೊದಲ ಪ್ರಕರಣ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿತ್ತು. ಇದು ಹೆಚ್ಚಿನ ಸಂಖ್ಯೆಯ ರೂಪಾಂತರಗಳನ್ನು ಹೊಂದಿರಲಿದ್ದು ಮರುಸೋಂಕಿನ ಅಪಾಯವನ್ನು ಸೂಚಿಸುತ್ತವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಇದು ನವೆಂಬರ್ 24 ರಂದು ದಕ್ಷಿಣ ಆಫ್ರಿಕಾದಲ್ಲಿ ಮೊದಲು ಪತ್ತೆಯಾಗಿದೆ ಎಂದು WHOಗೆ ವರದಿ ಮಾಡಲಾಗಿದೆ.

New Omicron Cases In South Africa Double In A Day

ನಂತರ ಬೋಟ್ಸ್ವಾನಾ, ಬೆಲ್ಜಿಯಂ, ಹಾಂಕಾಂಗ್ ಮತ್ತು ಇಸ್ರೇಲ್‌ನಲ್ಲಿಯೂ ಈ ಅಪಾಯಕಾರಿ ವೈರಸ್​ ಇರುವುದನ್ನು ಗುರುತಿಸಲಾಗಿದೆ.

'ಓಮಿಕ್ರಾನ್' ಆತಂಕ ಹಿನ್ನೆಲೆ ಹಲವಾರು ದೇಶಗಳು ದಕ್ಷಿಣ ಆಫ್ರಿಕಾಕ್ಕೆ ಮತ್ತು ಅಲ್ಲಿಂದ ಬೇರೆಡೆಗೆ ಪ್ರಯಾಣವನ್ನು ನಿಷೇಧಿಸಲು ಅಥವಾ ನಿರ್ಬಂಧಿಸಲು ನಿರ್ಧರಿಸಿವೆ.
ದಕ್ಷಿಣ ಆಫ್ರಿಕಾ, ನಮೀಬಿಯಾ, ಜಿಂಬಾಬ್ವೆ, ಬೋಟ್ಸ್ವಾನಾ, ಲೆಸೊಥೊ ಮತ್ತು ಇಸ್ವಾಟಿನಿಯಿಂದ ಬರುವ ಪ್ರಯಾಣಿಕರು ಯುಕೆ ಅಥವಾ ಐರಿಶ್ ಪ್ರಜೆಗಳು ಅಥವಾ ಯುಕೆ ನಿವಾಸಿಗಳ ಹೊರತು ಬೇರೆ ಯಾರೂ ಯುಕೆ ಪ್ರವೇಶಿಸಲು ಸಾಧ್ಯವಾಗುವುದಿಲ್ಲ.

ದಕ್ಷಿಣ ಆಫ್ರಿಕಾ, ಬೋಟ್ಸ್ವಾನಾ, ಜಿಂಬಾಬ್ವೆ, ನಮೀಬಿಯಾ, ಲೆಸೊಥೊ, ಇಸ್ವಾಟಿನಿ, ಮೊಜಾಂಬಿಕ್ ಮತ್ತು ಮಲಾವಿಯಿಂದ ವಿಮಾನಗಳನ್ನು ನಿರ್ಬಂಧಿಸಲಾಗುವುದು ಎಂದು ಅಮೆರಿಕ ಅಧಿಕಾರಿಗಳು ಹೇಳಿದ್ದಾರೆ.

ಕಾಲಾನಂತರದಲ್ಲಿ ವೈರಸ್ ಬದಲಾಗುವುದು ಅಥವಾ ರೂಪಾಂತರಗೊಳ್ಳುವುದು ಅಸಾಮಾನ್ಯವೇನಲ್ಲ. ರೂಪಾಂತರವು ಪ್ರಸರಣ, ವೈರಲೆನ್ಸ್ ಅಥವಾ ಲಸಿಕೆಗಳ ಪರಿಣಾಮಕಾರಿತ್ವದಂತಹ ವಿಷಯಗಳ ಮೇಲೆ ಪರಿಣಾಮ ಬೀರಿದಾಗ ಒಂದು ರೂಪಾಂತರವು ಹಲವು ರೂಪುಗಳನ್ನು ಪಡೆಯುತ್ತದೆ.

ಆರಂಭದಲ್ಲಿ B.1.1.529 ಎಂದು ಹೆಸರಿಸಲಾದ ಈ ರೂಪಾಂತರದ ಪ್ರಕರಣಗಳ ಸಂಖ್ಯೆಯು ದಕ್ಷಿಣ ಆಫ್ರಿಕಾದ ಬಹುತೇಕ ಎಲ್ಲ ಪ್ರಾಂತ್ಯಗಳಲ್ಲಿ ಹೆಚ್ಚುತ್ತಿರುವಂತೆ ತೋರುತ್ತಿದೆ ಎಂದು ಶುಕ್ರವಾರ WHO ಹೇಳಿದೆ."ನವೆಂಬರ್ 9 ರಂದು ಸಂಗ್ರಹಿಸಲಾದ ಮಾದರಿಯಿಂದ ಮೊದಲ ದೃಢಪಡಿಸಿದ B.1.1.529 ಸೋಂಕು" ಎಂದು ಅದು ಹೇಳಿದೆ.

ಹೊಸ ರೂಪಾಂತರದ ಪರಿಣಾಮವನ್ನು ಅರ್ಥಮಾಡಿಕೊಳ್ಳಲು ಕೆಲವು ವಾರಗಳನ್ನು ತೆಗೆದುಕೊಳ್ಳುತ್ತದೆ ಎಂದು WHO ಹೇಳಿದೆ, ಏಕೆಂದರೆ ಅದು ಎಷ್ಟು ಹರಡುತ್ತದೆ ಎಂಬುದನ್ನು ನಿರ್ಧರಿಸಲು ವಿಜ್ಞಾನಿಗಳು ಕೆಲಸ ನಿರ್ವಹಿಸುತ್ತಿದ್ದಾರೆ.

ಹೊಸ ರೂಪಾಂತರದ ವಿರುದ್ಧ ಲಸಿಕೆಗಳು "ಬಹುತೇಕ ಖಚಿತವಾಗಿ" ಕಡಿಮೆ ಪರಿಣಾಮಕಾರಿಯಾಗಿರುತ್ತವೆ ಎಂದು ಯುಕೆ ಉನ್ನತ ಆರೋಗ್ಯ ಅಧಿಕಾರಿಯೊಬ್ಬರು ಎಚ್ಚರಿಸಿದ್ದಾರೆ.
ದಕ್ಷಿಣ ಆಫ್ರಿಕಾ, ಬೋಟ್ಸ್ವಾನಾ ಮತ್ತು ಹಾಂಗ್ ಕಾಂಗ್‌ನಿಂದ ಆಗಮಿಸುವ ಪ್ರಯಾಣಿಕರಿಗೆ ಭಾರತವು ಹೆಚ್ಚು ಕಠಿಣ ತಪಾಸಣೆ ಮತ್ತು ಪರೀಕ್ಷೆಗೆ ಆದೇಶಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ದೇಶಗಳು ತರಾತುರಿಯಲ್ಲಿ ಪ್ರಯಾಣ ನಿರ್ಬಂಧಗಳನ್ನು ಹೇರುವ ವಿರುದ್ಧ WHO ಎಚ್ಚರಿಸಿದೆ, ಅವರು ಮತ್ತು ವೈಜ್ಞಾನಿಕ ವಿಧಾನದ ಕಡೆ ಗಮನಹರಿಸಬೇಕು ಎಂದು ಹೇಳಿದೆ. ಆದರೂ UK ಜೊತೆಗೆ US, EU ದೇಶಗಳು ಮತ್ತು ಸ್ವಿಟ್ಜರ್ಲೆಂಡ್ ಕೆಲವು ದಕ್ಷಿಣ ಆಫ್ರಿಕಾದ ದೇಶಗಳಿಗೆ ಮತ್ತು ಅಲ್ಲಿಂದ ಬರುವ ವಿಮಾನಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಿವೆ.

Recommended Video

Omicron ಬಗ್ಗೆ ಜನರಿಗೆ ಎಷ್ಟು ಗೊತ್ತಿದೆ ? | Oneindia Kannada

English summary
The heavily mutated Omicron variant of the coronavirus is rapidly becoming dominant in South Africa, less than four weeks after being identified there, authorities said on Wednesday, as other countries tightened their borders against the new threat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X