• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಾರಕ ಕೊರೊನಾ ವೈರಸ್‌ಗೆ ಹೊಸ ಹೆಸರು: ಲಸಿಕೆ ಕಂಡುಹಿಡಿಯಲು ಇನ್ನೂ 18 ತಿಂಗಳು ಬೇಕು

|
   ಕೊರೋನಾ ವೈರಸ್ ಗೆ ಮರುನಾಮಕರಣ ಕೋವಿಡ್-19 | Coronavirus | Oneindia Kannada

   ಬೀಜಿಂಗ್, ಫೆಬ್ರವರಿ 12: ಕೊರೊನಾ ವೈರಸ್ ಈಗಾಗಲೇ ಸಾವಿರಾರು ಮಂದಿಯನ್ನು ಬಲಿಪಡೆದುಕೊಂಡಿದ್ದು, ಇನ್ನಷ್ಟು ವ್ಯಾಪಿಸುವ ಆತಂಕ ಮೂಡಿಸಿದೆ. ಆದರೆ, ವೈರಸ್‌ಅನ್ನು ನಿಯಂತ್ರಿಸಲು ಪರಿಣಾಮಕಾರಿ ಲಸಿಕೆ ಕಂಡು ಹಿಡಿಯಲು ಇನ್ನೂ ಒಂದೂವರೆ ವರ್ಷ ಬೇಕಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) ತಿಳಿಸಿದೆ.

   18 ತಿಂಗಳಲ್ಲಿ ಕೊರೊನಾ ವೈರಸ್ ಲಸಿಕೆ ಸಿದ್ಧವಾಗಲಿದೆ ಎಂದಿರುವ ಸಂಸ್ಥೆ, ವೈರಸ್‌ಗೆ ಹೊಸ ಹೆಸರು ನೀಡಿದ್ದು, 'ಕೋವಿಡ್-19' (COVID-19) ಎಂದು ನಾಮಕರಣ ಮಾಡಲಾಗಿದೆ.

   ಕೊರೊನಾ ವೈರಸ್ ಬಂದರೆ ಏನೇನಾಗುತ್ತದೆ?: ಅಧ್ಯಯನ ವರದಿ

   ಸೋಮವಾರ ಒಂದೇ ದಿನ ಚೀನಾದಲ್ಲಿ ವೈರಸ್‌ನಿಂದ 108 ಮಂದಿ ಮೃತಪಟ್ಟ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರ ತಂಡ ಚೀನಾಕ್ಕೆ ಭೇಟ ನೀಡಿ ಪರಿಸ್ಥಿತಿ ಅವಲೋಕನ ಮಾಡಿದೆ. ಚೀನಾದಲ್ಲಿ ಒಟ್ಟು 1,016 ಮಂದಿ ಮೃತಪಟ್ಟಿದ್ದು, 42,638 ಮಂದಿ ಅಸ್ವಸ್ಥರಾಗಿದ್ದಾರೆ. ಚೀನಾದ ಆಚೆಗೆ ಹಾಂಕಾಂಗ್ ಮತ್ತು ಫಿಲಿಪ್ಪೀನ್ಸ್‌ನಲ್ಲಿ ತಲಾ ಒಬ್ಬರು ಕೊರೊನಾದಿಂದ ಮೃತಪಟ್ಟಿದ್ದಾರೆ. ಕನಿಷ್ಠ 25 ದೇಶಗಳಲ್ಲಿನ ಜನರಲ್ಲಿ 'ಕೋವಿಡ್-19' ಇರುವುದು ದೃಢಪಟ್ಟಿದೆ. ಕೊರೊನಾ ತೀವ್ರತೆ ಹೆಚ್ಚಿರುವ ಹುಬೆಯಿ ಪ್ರಾಂತ್ಯದಿಂದ ಏಳು ದೇಶಗಳು ತಮ್ಮ ಪ್ರಜೆಗಳನ್ನು ಸ್ಥಳಾಂತರಿಸಿವೆ.

   ಏನಿದು COVID-19?

   ಏನಿದು COVID-19?

   ಕೊರೊನಾ ವೈರಸ್‌ನಿಂದ ಬರುವ ಕಾಯಿಲೆಗೆ 'ಕೋವಿಡ್-19' ಎಂಬ ಹೆಸರು ಇರಿಸಲಾಗಿದೆ. ಇದರಲ್ಲಿ CO ಎನ್ನುವುದು ಕೊರೊನಾ ಮತ್ತು VI ವೈರಸ್ ಎಂಬ ಪದಗಳನ್ನು ಪ್ರತಿನಿಧಿಸುತ್ತದೆ. D ಎಂದರೆ ಕಾಯಿಲೆ (Disease). ಕೊರೊನಾ ವೈರಸ್ ಮೊದಲು ಕಾಣಿಸಿಕೊಂಡಿದ್ದು 2019ರ ಇಸವಿಯಲ್ಲಿ. ಹೀಗಾಗಿ ಇವುಗಳನ್ನು ಸೇರಿಸಿ COVID-19 ಎಂಬ ಹೆಸರು ಇಡಲಾಗಿದೆ.

   ಹೆಸರು ಇರಿಸುವುದೂ ಮುಖ್ಯ

   ಹೆಸರು ಇರಿಸುವುದೂ ಮುಖ್ಯ

   ವೈರಸ್ ಅಥವಾ ಕಾಯಿಲೆಗೆ ಒಂದು ನಿರ್ದಿಷ್ಟ ಹೆಸರನ್ನು ಇರಿಸುವುದು ಬಹಳ ಮುಖ್ಯ. ಏಕೆಂದರೆ ಇತರೆ ಹೆಸರುಗಳು ಗೊಂದಲಕಾರಿಯಾಗಿರಬಹುದು. ಭವಿಷ್ಯದಲ್ಲಿ ಯಾವುದೇ ಕೊರೊನಾ ವೈರಸ್ ಸಮಸ್ಯೆಗಳು ಮತ್ತೆ ಉಂಟಾದಾಗ ಅದನ್ನು ಗುರುತಿಸಲು ಸುಲಭವಾಗುತ್ತದೆ ಎಂದು ಡಬ್ಲ್ಯೂ ಎಚ್‌ ಒ ಪ್ರಧಾನ ನಿರ್ದೇಶಕ ಟೆಡ್ರೊಸ್ ಅಢನೊಮ್ ತಿಳಿಸಿದ್ದಾರೆ.

   ಕೊರೊನಾದಿಂದ ವೈದ್ಯ ಸಾವು: ಸರ್ಕಾರದಿಂದ ಮತ್ತೊಂದು ಆಘಾತಕಾರಿ ಕೃತ್ಯ ಬೆಳಕಿಗೆ

   ನಂಬರ್ ಒನ್ ಶತ್ರು ಎಂದು ಪರಿಗಣಿಸಿ

   ನಂಬರ್ ಒನ್ ಶತ್ರು ಎಂದು ಪರಿಗಣಿಸಿ

   ಕೊರೊನಾ ವೈರಸ್‌ಅನ್ನು ಜನರ ನಂಬರ್ ಒನ್ ಶತ್ರು ಎಂದು ಜಗತ್ತು ಪರಿಗಣಿಸಬೇಕಿದೆ ಎಂದು ಟೆಡ್ರೊಸ್ ಹೇಳಿದ್ದಾರೆ. ವೈರಸ್ ಹರಡದಂತೆ ತಡೆಯಲು ದೇಶಗಳು ಎಷ್ಟು ಸಾಧ್ಯವೋ ಅಷ್ಟು ಆಕ್ರಮಣಕಾರಿ ನೀತಿ ಅನುಸರಿಸಬೇಕಿರುವುದು ಅನಿವಾರ್ಯವಾಗಿದೆ. ಈ ವೈರಸ್‌ಅನ್ನು ಜಗತ್ತು ಸಾರ್ವಜನಿಕರ ನಂಬರ್ ಒನ್ ಶತ್ರು ಎಂದು ಪರಿಗಣಿಸಿ ಎಚ್ಚೆತ್ತುಕೊಳ್ಳದೆ ಹೋದರೆ ನಾವು ನಮ್ಮ ಪ್ರಮಾದಗಳಿಮದ ಪಾಠ ಕಲಿಯುತ್ತೇವೆ ಎನಿಸುವುದಿಲ್ಲ ಎಂದು ಎಚ್ಚರಿಸಿದ್ದಾರೆ.

   18 ತಿಂಗಳು ಬೇಕಾಗಬಹುದು

   18 ತಿಂಗಳು ಬೇಕಾಗಬಹುದು

   ಕೊರೊನಾ ವೈರಸ್ ಅಥವಾ ಕೋವಿಡ್-19ಗೆ ಸೂಕ್ತ ಔಷಧ ಕಂಡುಹಿಡಿಯುವುದು ಇನ್ನೂ ಸಾಧ್ಯವಾಗಿಲ್ಲ. ಪ್ರಸ್ತುತ ಇರುವ ಎಲ್ಲ ಔಷಧ ಮಾದರಿಗಳು ಹಾಗೂ ಸಂಶೋಧನಾ ಸಾಧ್ಯತೆಗಳನ್ನು ಬಳಸಿಕೊಂಡು ಚಿಕಿತ್ಸೆ ನೀಡಲು ಪ್ರಯತ್ನಿಸಲಾಗುತ್ತಿದೆ. ಆದರೆ ಅದಕ್ಕೆ ಪರಿಣಾಮಕಾರಿ ಲಸಿಕೆ ಕಂಡು ಹಿಡಿಯಲು 18 ತಿಂಗಳು ಬೇಕಾಗಬಹುದು ಎಂದು ಡಬ್ಲ್ಯೂಎಚ್‌ಒ ತಿಳಿಸಿದೆ.

   ಒಟ್ಟಿಗೆ ಊಟ ಮಾಡಿದ ಒಂದೇ ಕುಟುಂಬದ 9 ಮಂದಿಯಲ್ಲಿ ಕೊರೊನಾ ವೈರಸ್

   ಇಲಿಗಳ ಮೇಲೆ ಲಸಿಕೆ ಪ್ರಯೋಗ ಮಾಡಿದ ಬ್ರಿಟನ್

   ಇಲಿಗಳ ಮೇಲೆ ಲಸಿಕೆ ಪ್ರಯೋಗ ಮಾಡಿದ ಬ್ರಿಟನ್

   ಕೊರೊನಾ ವೈರಸ್‌ಗೆ ಹೊಸ ಮಾದರಿಯ ಲಸಿಕೆ ತಯಾರಿಸಿದ್ದು, ಇಲಿಗಳ ಮೇಲೆ ಪ್ರಯೋಗಿಸಲಾಗುತ್ತಿದೆ. ಕೊರೊನಾ ವೈರಸ್ ಲಸಿಕೆಯನ್ನು ಮೊದಲ ಬಾರಿಗೆ ಪ್ರಾಣಿಗಳ ಮೇಲೆ ಪ್ರಯೋಗಿಸುತ್ತಿರುವುದು ನಾವೇ ಮೊದಲು ಎಂದು ಬ್ರಿಟನ್‌ನ ವಿಜ್ಞಾನಿಗಳ ತಂಡ ಹೇಳಿಕೊಂಡಿದೆ. ಬ್ಯಾಕ್ಟೀರಿಯಾಗಳಿಂದ ಹೊರತೆಗೆದ ಲಸಿಕೆಯನ್ನು ಇಲಿಗಳ ಮೇಲೆ ಪ್ರಯೋಗಿಸಿದ್ದೇವಷ್ಟೇ. ಅದರ ಫಲಿತಾಂಶ ಏನಾಗಲಿದೆ ಎಂದು ತಿಳಿಯಲು ಕೆಲವು ವಾರಗಳು ಬೇಕಾಗುತ್ತವೆ ಎಂದು ಅವರು ತಿಳಿಸಿದ್ದಾರೆ.

   English summary
   WHO said vaccine could be ready for Coronavirus in 18 months. Novel coronavirus will be renamed as COVID-19.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
   X