• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಶ್ವಕ್ಕೆ ಮತ್ತೊಂದು 'ವೈರಸ್' ಅಂಟಿಸಲು ಹೊರಟಿದೆಯಾ ಚೀನಾ?

|

ಬೀಜಿಂಗ್, ಆಗಸ್ಟ್.05: ಚೀನಾದ ವುಹಾನ್ ನಗರದಲ್ಲಿ ಮೊದಲು ಕಾಣಿಸಿಕೊಂಡ ಕೊರೊನಾವೈರಸ್ ಇಂದಿಗೂ ಜಗತ್ತಿನ ಮೂಲೆ ಮೂಲೆಗಳಲ್ಲೂ ಜನರ ಪ್ರಾಣವನ್ನು ಹಿಂಡುತ್ತಿವೆ. ಪ್ರತಿನಿತ್ಯ ಲಕ್ಷಾಂತರ ಜನರಿಗೆ ಕೊವಿಡ್-19 ಸೋಂಕು ಅಂಟಿಕೊಳ್ಳುತ್ತಿದೆ. ಇದರ ನಡುವೆಯೇ ಚೀನಾದಲ್ಲಿ ಮತ್ತೊಂದು ಮಾರಕ ವೈರಸ್ ಜನ್ಮತಾಳಿದೆ.

   China ಹೊಸ Virus ಗೆ 7 ಮಂದಿ ಬಲಿ | Oneindia Kannada

   ಗಡಿಯಲ್ಲಿ ಚೀನಾದ ರಸ್ತೆ: ಭಾರತದ ಆತಂಕಕ್ಕೆ ಕಾರಣವೇನು?

   ಚೀನಾದಲ್ಲಿ ಕಾಣಿಸಿಕೊಳ್ಳುತ್ತಿರುವ ಹೊಸ ವೈರಸ್ ನಿಂದ ಮತ್ತೊಂದು ಆತಂಕ ಸೃಷ್ಟಿಯಾಗಿದೆ. ಈ ಬಾರಿ ಉಣ್ಣಿಗಳ ಕಚ್ಚುವಿಕೆಯಿಂದ ಅಪಾಯಕಾರಿ ವೈರಸ್ ಗಳು ಮನುಷ್ಯನ ದೇಹವನ್ನು ಹೊಕ್ಕುತ್ತಿದ್ದು, ಈಗಾಗಲೇ ಅಪಾಯಕಾರಿ ಸೋಂಕಿಗೆ ಚೀನಾದಲ್ಲಿ 7 ಮಂದಿ ಪ್ರಾಣ ಬಿಟ್ಟಿದ್ದಾರೆ. 60ಕ್ಕೂ ಹೆಚ್ಚು ಜನರಲ್ಲಿ ಹೊಸ ವೈರಸ್ ಕಾಣಿಸಿಕೊಂಡಿರುವುದು ಭೀತಿಯನ್ನು ಹುಟ್ಟು ಹಾಕುತ್ತಿದೆ ಎಂದು ಚೀನಾದ ಗ್ಲೋಬಲ್ ಟೈಮ್ಸ್ ಪತ್ರಿಕೆಯು ವರದಿ ಮಾಡಿದೆ.

   ಕೊರೊನಾ ವೈರಸ್: ಜಗತ್ತಿಗೆ ಚೀನಾ ಮುಚ್ಚಿಟ್ಟ ನಾಲ್ಕು ಭಯಾನಕ ಸುಳ್ಳುಗಳು

   ಜ್ವರದ ಜೊತೆಗೆ ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್ ಬುನ್ಯಾವೈರಸ್ ( SFTSV) ಎಂದು ಗುರುತಿಸಿರುವ ಹೊಸ ವೈರಸ್ ಚೀನಾದ ಜನರನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ. ಡ್ರ್ಯಾಗನ್ ರಾಷ್ಟ್ರದಿಂದ ಮತ್ತೊಂದು ವೈರಸ್ ವಿಶ್ವಕ್ಕೆ ವ್ಯಾಪಿಸುತ್ತಾ ಎಂಬ ಅನುಮಾನವು ಮತ್ತಷ್ಟು ಭೀತಿಯನ್ನು ಹುಟ್ಟು ಹಾಕುತ್ತಿದೆ. ಅದ್ಯಾಕೆ ಎನ್ನುವ ಪ್ರಶ್ನೆಗಳಿಗೆ ಉತ್ತರವು ಇಲ್ಲಿದೆ.

   ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

   60ಕ್ಕೂ ಅಧಿಕ ಮಂದಿಗೆ ಹೊಕ್ಕ ಅಪಾಯಕಾರಿ ಸೋಂಕು

   60ಕ್ಕೂ ಅಧಿಕ ಮಂದಿಗೆ ಹೊಕ್ಕ ಅಪಾಯಕಾರಿ ಸೋಂಕು

   ಕೊರೊನಾವೈರಸ್ ಸೋಂಕು ಹರಡುವಿಕೆ ಭೀತಿ ನಡುವೆ ಇದೀಗ ಚೀನಾದಲ್ಲಿ ಎಸ್ಎಫ್ ಚಿಎಸ್ ವೈರಸ್ ಜನರ ದೇಹವನ್ನು ಹೊಕ್ಕುತ್ತಿದೆ. 2020ರ ಮೊದಲ ಆರು ತಿಂಗಳಿನಲ್ಲಿ ಪೂರ್ವ ಚೀನಾದ ಜಿಯಾಂಗ್ಸು ಪ್ರದೇಶದಲ್ಲಿ 37 ಮಂದಿಗೆ ಎಸ್ಎಫ್ ಚಿಎಸ್ ವೈರಸ್ ಪತ್ತೆಯಾಗಿದ್ದವು. ಇತ್ತೀಚಿಗೆ ಪೂರ್ವ ಚೀನಾದ ಅಂಹ್ಯೂ ಪ್ರದೇಶದಲ್ಲಿ 23 ಮಂದಿಗೆ ಎಸ್ಎಫ್ ಚಿಎಸ್ ವೈರಸ್ ದೃಢಪಟ್ಟಿದೆ.

   ಎಸ್ಎಫ್ ಚಿಎಸ್ ವಿ ಸೋಂಕಿದ್ದಲ್ಲಿ ಒಂದು ತಿಂಗಳು ಚಿಕಿತ್ಸೆ

   ಎಸ್ಎಫ್ ಚಿಎಸ್ ವಿ ಸೋಂಕಿದ್ದಲ್ಲಿ ಒಂದು ತಿಂಗಳು ಚಿಕಿತ್ಸೆ

   ಜಿಯಾಂಗ್ಸು ರಾಜಧಾನಿಯಾದ ನಾನ್‌ಜಿಂಗ್‌ನಲ್ಲಿರುವ ವಾಂಗ್ ಎಂಬ ಮಹಿಳೆಗೆ ಎಸ್ಎಫ್ ಚಿಎಸ್ ವೈರಸ್‌ ತಗಲಿತ್ತು. ಈ ವೇಳೆ ಮಹಿಳೆಯಲ್ಲಿ ಜ್ವರ ಮತ್ತು ಕೆಮ್ಮಿನಂತ ರೋಗಲಕ್ಷಣಗಳು ಕಂಡು ಬಂದಿದ್ದವು. ಸೋಂಕಿತ ಮಹಿಳೆಯಲ್ಲಿ ವೈದ್ಯರು ಲ್ಯುಕೋಸೈಟ್ ಎಣಿಕೆಯ ಕುಸಿತವನ್ನು ಕಂಡುಕೊಂಡರು, ಜೊತೆಗೆ ಆಕೆಯ ರಕ್ತದಲ್ಲಿ ಕಡಿಮೆ ಪ್ಲೇಟ್‌ಲೆಟ್ ಎಣಿಕೆ ಕಂಡುಬಂದಿದೆ. ಒಂದು ತಿಂಗಳ ಚಿಕಿತ್ಸೆಯ ನಂತರ, ವಾಂಗ್ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಯಿತು. ಇದರ ನಡುವೆಯೂ ವೈರಸ್ ನಿಂದಾಗಿ ಪೂರ್ವ ಚೀನಾದ ಅನ್ಹುಯಿ ಮತ್ತು ಜೆಜಿಯಾಂಗ್ ಪ್ರಾಂತ್ಯದಲ್ಲಿ ಏಳಕ್ಕೂ ಹೆಚ್ಚು ಜನರು ಪ್ರಾಣ ಬಿಟ್ಟಿದ್ದಾರೆ.

   2011ರಲ್ಲೇ ಪತ್ತೆಯಾಗಿದ್ದು ಈ ಅಪಾಯಕಾರಿ ವೈರಸ್

   2011ರಲ್ಲೇ ಪತ್ತೆಯಾಗಿದ್ದು ಈ ಅಪಾಯಕಾರಿ ವೈರಸ್

   ಎಸ್‌ಎಫ್‌ಟಿಎಸ್ ವೈರಸ್ ಎನ್ನುವುದು ಹೊಸ ವೈರಸ್ ಅಲ್ಲ. 2011ರಲ್ಲಿ ಚೀನಾದ ಸಂಶೋಧಕರು ಈ ವೈರಸ್‌ನ್ನು ಪ್ರತ್ಯೇಕ ರೋಗಕಾರಕ ಬುನ್ಯಾ ವೈರಸ್ ವರ್ಗಕ್ಕೆ ಸೇರಿಸಿದ್ದಾರೆ ಎಂದು ಚೀನಾದ ಅಧಿಕಾರಿಗಳು ಹೇಳುತ್ತಾರೆ. ಉಣ್ಣಿಗಳಿಂದ ಮನುಷ್ಯರಿಗೆ ಈ ಸೋಂಕು ಹರಡಲಿದ್ದು, ಮನುಷ್ಯರಿಂದ ಮನಷ್ಯರಿಗೆ ಹರಡುವಂತಾ ಸಾಂಕ್ರಾಮಿಕ ವೈರಸ್ ಎಂದು ಸಾಂಕ್ರಾಮಿಕ ರೋಗ ತಜ್ಞರು ಗುರುತಿಸಿದ್ದರು. ಇದರ ನಡುವೆ ಕಳೆದ ಹತ್ತು ವರ್ಷಗಳಲ್ಲಿ, ಪೂರ್ವ ಏಷ್ಯಾದಲ್ಲಿ ತೀವ್ರ ಜ್ವರ ಮತ್ತು ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್ ಪ್ರಕರಣಗಳಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ.

   ಮನುಷ್ಯರ ನಡುವೆ ಸೋಂಕು ಹರಡುವ ಬಗ್ಗೆ ಎಚ್ಚರಿಕೆ ಸಂದೇಶ

   ಮನುಷ್ಯರ ನಡುವೆ ಸೋಂಕು ಹರಡುವ ಬಗ್ಗೆ ಎಚ್ಚರಿಕೆ ಸಂದೇಶ

   ಮನುಷ್ಯರಿಂದ ಮನುಷ್ಯನಿಗೆ ಎಸ್‌ಎಫ್‌ಟಿಎಸ್ ವೈರಸ್ ಹರಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎಂದು ಝೇಜಿಯಾಂಗ್ ವಿಶ್ವವಿದ್ಯಾಲಯದ ಮೊದಲ ಅಂಗಸಂಸ್ಥೆಯಾಗಿರುವ ಆಸ್ಪತ್ರೆಯ ವೈದ್ಯ ಶೆಂಗ್ ಜಿಫಾಂಗ್ ಎಚ್ಚರಿಕೆ ನೀಡಿದ್ದಾರೆ. ಜೊತೆಗೆ ಸೋಂಕಿತ ರೋಗಿಗಳ ರಕ್ತ ಅಥವಾ ಗಂಟಲು ದ್ರವದ ಮೂಲಕ ವೈರಸ್ ಹರಡುವ ಅಪಾಯವಿರುತ್ತದೆ. ಮುಖ್ಯವಾಗಿ ಉಣ್ಣಿಗಳ ಕಡಿತವೇ ಸೋಂಕು ಪ್ರಸರಣದ ಪ್ರಮುಖ ಮಾರ್ಗವಾಗಿದೆ ಎಂದು ವೈದ್ಯರು ಎಚ್ಚರಿಸಿದ್ದಾರೆ. ಆದರೆ ಇದರ ಜೊತೆಗೆ ಜನರು ಜಾಗರೂಕರಾಗಿ ಇರುವವರೆಗೂ, ಅಂತಹ ವೈರಸ್ ಮತ್ತು ಸಾಂಕ್ರಾಮಿಕ ರೋಗದ ಬಗ್ಗೆ ಹೆಚ್ಚು ಭಯಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

   ವಲಸೆ ಹೋಗುವ ಪಕ್ಷಿಗಳಿಂದ ಸೋಂಕಿನ ಆತಂಕ

   ವಲಸೆ ಹೋಗುವ ಪಕ್ಷಿಗಳಿಂದ ಸೋಂಕಿನ ಆತಂಕ

   ವಲಸೆ ಕಾಡು ಪಕ್ಷಿಗಳು ಲೈಮ್ ಕಾಯಿಲೆ, ವೆಸ್ಟ್ ನೈಲ್ ವೈರಸ್ ಹಾಗೂ ಎಸ್‌ಎಫ್‌ಟಿಎಸ್ ವೈರಸ್ ಹರಡುವಿಕೆಗೆ ಕಾರಣವಾಗುತ್ತವೆ ಎಂದು ತಿಳಿದು ಬಂದಿದೆ. ಏಕೆಂದರೆ ಕಾಡು ಪಕ್ಷಿಗಳು ಆಹಾರ ಹುಡುಕಲು ಮತ್ತು ಸಂತಾನೋತ್ಪತ್ತಿ ಉದ್ದೇಶಗಳಿಗಾಗಿ ಬಹಳ ದೂರ ಪ್ರಯಾಣಿಸುತ್ತವೆ ಮತ್ತು ಅವು ಉಣ್ಣಿ ಸೇರಿದಂತೆ ವಿವಿಧ ಪರಾವಲಂಬಿಗಳನ್ನು ಒಯ್ಯುವುದರಿಂದ, ಎಸ್‌ಎಫ್‌ಟಿಎಸ್ ವೈರಸ್ ಹರಡುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ತಿಳಿದು ಬಂದಿದೆ.

   ಎಸ್‌ಎಫ್‌ಟಿಎಸ್ ಸೋಂಕಿನಿಂದ ಸಾವಿನ ಪ್ರಮಾಣ ಹೆಚ್ಚು

   ಎಸ್‌ಎಫ್‌ಟಿಎಸ್ ಸೋಂಕಿನಿಂದ ಸಾವಿನ ಪ್ರಮಾಣ ಹೆಚ್ಚು

   "2009ರಲ್ಲಿ ಚೀನಾದ ಗ್ರಾಮೀಣ ಪ್ರದೇಶದಲ್ಲಿ ಮೊದಲ ಬಾರಿಗೆ ಎಸ್‌ಎಫ್‌ಟಿಎಸ್ ವೈರಸ್ ಪತ್ತೆಯಾದ ಸಂದರ್ಭದಲ್ಲಿ ಸಾವಿನ ಪ್ರಮಾಣವು ಶೇ.6ರಷ್ಟಿತ್ತು. ಇದೀಗ ಈ ಪ್ರಮಾಣವು ಶೇ.30ರಷ್ಟು ಏರಿಕೆಯಾಗಿದೆ. ಚೀನಾವಷ್ಟೇ ಅಲ್ಲದೇ ನೆರೆಯ ಜಪಾನ್ ಮತ್ತು ದಕ್ಷಿಣ ಕೊರಿಯಾದಲ್ಲಿ 2015ರಲ್ಲಿ ಸಾವಿನ ಪ್ರಮಾಣ ಶೇಕಡಾ 30ಕ್ಕಿಂತ ಹೆಚ್ಚಿತ್ತು ಎಂದು ಎನ್‌ಸಿಬಿಐ ವರದಿ ಮಾಡಿದೆ.

   English summary
   New Contagion Virus Passed Via Tick-Bites Emerges In China, 7 Dead, 60 Take Ill.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X