ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಯಲ್ ಪ್ರಿನ್ಸೆಸ್ ಗೆ ಅಜ್ಜಿ ಡಯಾನಾ ಹೆಸರು

By Mahesh
|
Google Oneindia Kannada News

ಲಂಡನ್, ಮೇ.4: ಬ್ರಿಟನ್ ರಾಜಮನೆತನಕ್ಕೆ ಹೊಸ ಹರ್ಷ ತಂದ ಹೊಸ ಪ್ರಿನ್ಸೆಸ್ ಗೆ ಮುದ್ದಾದ ಹೆಸರಿಡಲಾಗಿದೆ. ಪ್ರಿನ್ಸ್ ವಿಲಿಯಮ್ ಹಾಗೂ ಕೇಟ್ ಮಿಡ್ಲೆಟನ್ ದಂಪತಿಗೆ ಹೆಣ್ಣು ಮಗುವಿಗೆ ಅಜ್ಜಿ ಡಯಾನಾ ಹೆಸರಿಟ್ಟು ನಾಮಕರಣ ಮಾಡಲಾಗಿದೆ.

ರಾಯಲ್ ಫ್ಯಾಮಿಲಿಯ ಹೊಸ ಸದಸ್ಯೆ ಹೆಸರು ಶಾರ್ಲೊಟ್ ಎಲಿಜಬೆತ್ ಡಯಾನಾ ಎಂದು ಕೆನ್ಸಿಂಗ್ಟನ್ ಪ್ಯಾಲೇಸ್ ಸೋಮವಾರ ಘೋಷಿಸಿದೆ. ರಾಣಿ ಎಲಿಜಬೆತ್ ಹಾಗೂ ಪ್ರಿನ್ಸೆನ್ ಡಯಾನಾ ಹೆಸರನ್ನು ಮಗುವಿಗೆ ಇಡಬೇಕು ಎಂದು ಕೇಟ್ ಮಿಡ್ಲೆಟನ್ ಆಸೆಪಟ್ಟ ಹಿನ್ನೆಲೆಯಲ್ಲಿ ಪ್ರಿನ್ಸ್ ವಿಲಿಯಮ್ ತಮ್ಮ ಪುತ್ರಿಗೆ ಅದೇ ಹೆಸರನ್ನಿಟ್ಟಿದ್ದಾರೆ. [ಪುಟ್ಟ ಪ್ರಿನ್ಸೆಸ್ ಗೆ ಸ್ವಾಗತ, ಬ್ರಿಟನ್ ರಾಜಮನೆತನದಲ್ಲಿ ಹರ್ಷ]

New British royal baby named Charlotte Elizabeth Diana

ನಾಮಕರಣಕ್ಕೂ ಮುನ್ನ ಸ್ಯಾಂಡ್ರಿಘಂನಲ್ಲಿ ರಾಜ ಪರಿವಾರದೊಡನೆ ಕ್ವೀನ್ ಎಲಿಜಬೆತ್ ರನ್ನು ಭೇಟಿ ಮಾಡಿ ಬಂದಿದ್ದರು. ವಿಶಿಷ್ಟ ಹೆಸರನ್ನು ಇಡುವ ಉದ್ದೇಶದಿಂದ ಎರಡು ದಿನಗಳ ಚರ್ಚೆ ನಡೆಸಿ ಹೆಸರನ್ನು ಆಯ್ಕೆ ಮಾಡಲಾಗಿದೆ.

ಪ್ರಿನ್ಸ್ ಚಾರ್ಲ್ಸ್ ಅವರ ಹೆಸರಿನ ಸ್ತ್ರೀ ವಾಚಕ ಶಬ್ದ ಶಾರ್ಲೆಟ್(Charlotte) ಪದ, ಅಜ್ಜ ಚಾರ್ಲ್ಸ್ ಹೆಸರು, ಎಲಿಜಬೆತ್ ರಾಣಿ ಹೆಸರು,ಅಜ್ಜಿ ಡಯಾನಾ ಹೆಸರು ಎಲ್ಲವನ್ನು ಸೇರಿಸಿ Charlotte Elizabeth Diana ಎಂದು ಇಡಲಾಗಿದೆ.

ಪ್ರಿನ್ಸ್ ವಿಲಿಯಮ್ ಪತ್ನಿ ಕೇಟ್(33) ಶನಿವಾರ ಲಂಡನ್ ನ ಸೈಂಟ್ ಮೇರಿಸ್ ಆಸ್ಪತ್ರೆಯಲ್ಲಿ ಬೆಳಗ್ಗೆ 8.34 (BST)ಕ್ಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಆಸ್ಪತ್ರೆಗೆ ದಾಖಲಿಸಿದ 3 ಗಂಟೆಯೊಳಗೆ ಕೇಟ್ ಗೆ ಹೆರಿಗೆಯಾಗಿತ್ತು. ಪ್ರಿನ್ಸ್ ಮತ್ತು ಕೇಟ್ ಅವರ ಹೆಣ್ಣು ಮಗು 8 ಪೌಂಡ್ 3 ಔನ್ಸ್ (3.7ಕೆಜಿ) ತೂಕ ಹೊಂದಿದೆ.

ಪ್ರಿನ್ಸ್ ವಿಲಿಯಮ್ ಹಾಗೂ ಕೇಟ್ 2011ರ ಏಪ್ರಿಲ್ ತಿಂಗಳಿನಲ್ಲಿ ಅದ್ದೂರಿಯಾಗಿ ವಿವಾಹವಾಗಿದ್ದರು. 2013ರ ಜುಲೈನಲ್ಲಿ ಇದೇ ಸೈಂಟ್ ಮೇರಿಸ್ ಆಸ್ಪತ್ರೆಯಲ್ಲಿ ಕೇಟ್ ಗಂಡು ಮಗು(ಪ್ರಿನ್ಸ್ ಜಾರ್ಜ್)ವಿಗೆ ಜನ್ಮ ನೀಡಿದ್ದರು. (ಐಎಎನ್ಎಸ್)

English summary
The name of Britain's Princess of Cambridge, who was born on Saturday, is Charlotte Elizabeth Diana, Kensington Palace announced on Monday, May 4.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X