ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೀವದ ಹಂಗು ತೊರೆದು ಕೊರೊನಾ ರೋಗಿಗೆ ಚಿಕಿತ್ಸೆ ನೀಡಿದ 73 ವರ್ಷದ ವೈದ್ಯ

|
Google Oneindia Kannada News

ದೆಹಲಿ, ಮಾರ್ಚ್ 20: ಜಗತ್ತಿಗೆ ಸಾಂಕ್ರಾಮಿಕ ರೋಗ ಆಗಿ ಪರಿಣಮಿಸಿರುವ ಕೊರೊನಾ ವೈರಸ್‌ ದಾಳಿಗೆ ಇಡಿ ವಿಶ್ವವೇ ನಲುಗಿಹೋಗಿದೆ. 2.2 ಲಕ್ಷಕ್ಕೂ ಅಧಿಕ ಜನರು ಸೋಂಕಿನಿಂದ ಬಳಲುತ್ತಿದ್ದು, 10 ಸಾವಿರಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.

ಇಂತಹ ಕಠಿಣ ಶ್ರಮದಲ್ಲಿ ಜಗತ್ತಿನಾದ್ಯಂತ ವೈದ್ಯರು ರಾತ್ರಿ-ಹಗಲು ಎನ್ನದೇ ಕೊರೊನಾ ಪೀಡಿತರನ್ನು ರಕ್ಷಿಸಲು ಹೋರಾಡುತ್ತಿದ್ದಾರೆ. ಆದರೆ ಇಲ್ಲೊಬ್ಬ ವೈದ್ಯ ತನ್ನ 73 ವರ್ಷದಲ್ಲೂ ನಿಸ್ವಾರ್ಥ ಸೇವೆ ಮಾಡುತ್ತಾ, ಪ್ರಮಾಣಿಕತೆ ಮೆರೆದಿದ್ದಾರೆ.

ಎಲೆಕ್ಟ್ರಾನಿಕ್ ಸಿಟಿಯಲ್ಲಿ ಕೊರೊನಾ: ಗೊಂದಲ ಮೂಡಿಸಿದ 'ಧ್ವನಿವರ್ಧಕ' ಘೋಷಣೆ, ಸ್ಪಷ್ಟನೆ ಇಲ್ಲಿದೆಎಲೆಕ್ಟ್ರಾನಿಕ್ ಸಿಟಿಯಲ್ಲಿ ಕೊರೊನಾ: ಗೊಂದಲ ಮೂಡಿಸಿದ 'ಧ್ವನಿವರ್ಧಕ' ಘೋಷಣೆ, ಸ್ಪಷ್ಟನೆ ಇಲ್ಲಿದೆ

ಹೌದು, ನಿವೃತ್ತಿ ಹೊಂದಬೇಕಾಗಿರುವ ಈ ವಯಸ್ಸಿನಲ್ಲಿ 73 ವರ್ಷದ ಡಾಕ್ಟರ್, ಕೊರೊನಾ ರೋಗಿಗಳಿಗೆ ಚಿಕಿತ್ಸೆ ಕೊಡ್ತಿದ್ದಾರೆ. ಈ ಕುರಿತು ಆ ವೈದ್ಯನ ಮಗಳು ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡಿದ್ದು, ತಂದೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

73 Year Old Doctor Treating Corona Patients

''ಇವರು ನನ್ನ ತಂದೆ. ತನ್ನ ಕೆಲಸವನ್ನು ಅತಿಯಾಗಿ ಇಷ್ಪಪಡುವ ಮತ್ತು ನಿವೃತ್ತಿ ಪಡೆದ ನನ್ನ ತಂದೆ ತುರ್ತು ನಿಗಾ ಘಟಕದಲ್ಲಿ ಕಾರ್ಯನಿರತವಾಗಿರುವ ಫೋಟೋ ಇದು. ಅವರ ಆರೋಗ್ಯ ಹೇಗಿದೆ, ಏನು ಮಾಡುತ್ತಿದ್ದೀರಾ ಎಂದು ಕೇಳಿದ್ದಕ್ಕೆ ಅವರು ಕಳುಹಿಸಿದ ಫೋಟೋ ಇದು. ಒಂದು ಕ್ಷಣ ನನ್ನ ಕಣ್ಣಲ್ಲಿ ನೀರು ಬಂತು'' ಎಂದು ಭಾವುಕರಾಗಿದ್ದಾರೆ.

ಕೈ ತೊಳೆಯುವುದರ ಅನುಕೂಲ ಹೇಳಿದ ಮೊದಲ ಡಾಕ್ಟರ್‌ಗೆ ಗೂಗಲ್ ನಮನಕೈ ತೊಳೆಯುವುದರ ಅನುಕೂಲ ಹೇಳಿದ ಮೊದಲ ಡಾಕ್ಟರ್‌ಗೆ ಗೂಗಲ್ ನಮನ

ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಪೋಸ್ಟ್ ನೋಡಿದ ನೆಟ್ಟಿಗರು, 73 ವರ್ಷದ ಆ ವೈದ್ಯರನ್ನು ಶ್ಲಾಘಿಸಿದ್ದಾರೆ. ಕೊರೊನಾ ವಿರುದ್ಧ ಹೋರಾಡುತ್ತಾ, ರೋಗಿಗಳಿಗೆ ಆತ್ಮಸ್ಥೈರ್ಯ ತುಂಬುತ್ತಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.

English summary
73 Year old Doctor treating COVID 19 patients while risking his life. a daughter praised his father's honesty work in the age of 73.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X