ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಹೆಚ್ಚಳ; ಭಾರತದ ವಿಮಾನಗಳ ಮೇಲೆ ನೆದರ್‌ಲ್ಯಾಂಡ್ ನಿರ್ಬಂಧ

|
Google Oneindia Kannada News

ನೆದರ್‌ಲ್ಯಾಂಡ್, ಏಪ್ರಿಲ್ 26: ಭಾರತದಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಭಾರತದಿಂದ ಆಗಮಿಸುವ ಪ್ರಯಾಣಿಕ ವಿಮಾನಗಳನ್ನು ನೆದರ್‌ಲ್ಯಾಂಡ್ ರದ್ದುಗೊಳಿಸಿದೆ.

ಸೋಮವಾರ ಸಂಜೆ 6 ಗಂಟೆಯಿಂದ ಭಾರತದಿಂದ ಬರುವ ವಿಮಾನಗಳನ್ನು ರದ್ದುಗೊಳಿಸುತ್ತಿರುವುದಾಗಿ ನೆದರ್‌ಲ್ಯಾಂಡ ಘೋಷಿಸಿದೆ. ಮೇ 1ರವರೆಗೂ ವಿಮಾನಗಳ ಮೇಲೆ ನಿರ್ಬಂಧ ಮುಂದುವರೆಯಲಿದೆ ಎಂದು ಡಚ್ ನಾಗರಿಕ ವಿಮಾನಯಾನ ಸಚಿವಾಲಯ ಪ್ರಕಟಿಸಿದೆ.

10 ದಿನ ಭಾರತ- ದುಬೈ ವಿಮಾನ ರದ್ದುಗೊಳಿಸಿದ ಎಮಿರೇಟ್ಸ್‌10 ದಿನ ಭಾರತ- ದುಬೈ ವಿಮಾನ ರದ್ದುಗೊಳಿಸಿದ ಎಮಿರೇಟ್ಸ್‌

ಭಾನುವಾರ ರಾತ್ರಿ ವಿಮಾನ ರದ್ದು ಆದೇಶ ಹೊರಡಿಸಲಾಗಿದೆ. ಸಾರ್ವಜನಿಕ ಆರೋಗ್ಯ ಇಲಾಖೆ ಸಲಹೆ ಮೇರೆಗೆ ಕ್ಯಾಬಿನೆಟ್‌ನಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.

Netherland Suspends Flights From India Till May 1 Ahead Of Corona Surge

ಭಾರತದಲ್ಲಿ ಕೊರೊನಾ ಎರಡನೇ ಅಲೆ ಆತಂಕ ಸೃಷ್ಟಿಸಿದ್ದು, ಕಳೆದ ಕೆಲವು ದಿನಗಳಿಂದ ದೇಶದಲ್ಲಿ ಮೂರು ಲಕ್ಷ ದಿನನಿತ್ಯದ ಕೊರೊನಾ ಪ್ರಕರಣಗಳು ದಾಖಲಾಗುತ್ತಿವೆ.

ಭಾನುವಾರ ಭಾರತದಲ್ಲಿ 3,49,691 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. 24 ಗಂಟೆಯಲ್ಲಿ 2,767 ಜನರು ಸಾವನ್ನಪ್ಪಿದ್ದು, 2,17,113 ಜನರು ಡಿಸ್ಚಾರ್ಜ್ ಆಗಿದ್ದಾರೆ. ಮಹಾರಾಷ್ಟ್ರ, ಕರ್ನಾಟಕ, ಉತ್ತರ ಪ್ರದೇಶ, ಗುಜರಾತ್ ಹಾಗೂ ಕೇರಳದಲ್ಲಿ ಹೆಚ್ಚಿನ ಪ್ರಕರಣಗಳು ದಾಖಲಾಗುತ್ತಿದ್ದು, ದೇಶದ ಒಟ್ಟಾರೆ ಪ್ರಕರಣಗಳಲ್ಲಿ ಈ ರಾಜ್ಯಗಳ ಪಾಲು 54% ಇದೆ.

ಕೊರೊನಾ ಅಲೆ ದೇಶದಲ್ಲಿ ಜೋರಾಗಿದ್ದು, ಹಲವು ದೇಶಗಳು ಭಾರತದಿಂದ ವಿಮಾನ ಪ್ರಯಾಣವನ್ನು ರದ್ದುಗೊಳಿಸಿವೆ. ಭಾರತದಿಂದ ಹಿಂದಿರುಗಿದವರಿಗೆ ಫ್ರಾನ್ಸ್‌ ಹತ್ತು ದಿನಗಳ ನಿರ್ಬಂಧ ಹೇರಿದೆ. ಈಚೆಗೆ ಬ್ರಿಟನ್, ಮುಂಜಾಗ್ರತಾ ಕ್ರಮವಾಗಿ ಭಾರತವನ್ನು "ಕೆಂಪು ಪಟ್ಟಿ"ಗೆ ಸೇರಿಸಿ ವಿಮಾನ ಓಡಾಟವನ್ನು ನಿಷೇಧಿಸಿದೆ. ಹಾಂಗ್‌ಕಾಂಗ್ ಕೂಡ ಮಂಗಳವಾರ ಭಾರತದಿಂದ ಬರುವ ವಿಮಾನಗಳಿಗೆ 14 ದಿನಗಳ ಕಾಲ ನಿರ್ಬಂಧ ಹೇರಿದೆ.

English summary
Netherland suspends flights from india till May 1 ahead of coronavirus surge,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X