• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜೀವ ಇರುವವರೆಗೂ ಹೋರಾಡುತ್ತೇವೆ! ಮಹಾಯುದ್ಧ ಘೋಷಿಸಿದ ಇಸ್ರೇಲ್ ಪ್ರಧಾನಿ!

|
Google Oneindia Kannada News

ಎಲ್ಲೆಂದರಲ್ಲಿ ಹಾರಿ ಬರುತ್ತಿರುವ ರಾಕೆಟ್‌ಗಳು, ಬೀದಿ ಬೀದಿಯಲ್ಲಿ ಬಿದ್ದಿರುವ ಹೆಣಗಳು. ಗಾಜಾಪಟ್ಟಿಯಲ್ಲಿ ಇದೀಗ ಇಂಥ ಕರುಳು ಕಿವುಚುವ ದೃಶ್ಯಗಳು ಮಾಮೂಲಾಗಿವೆ. ಪ್ಯಾಲೆಸ್ತೇನ್ ಹಾಗೂ ಇಸ್ರೇಲ್ ಕಿತ್ತಾಟ 200ಕ್ಕೂ ಹೆಚ್ಚು ಜನರ ಹೆಣ ಉರುಳಿಸಿದೆ. ಆದರೆ ಈ ಹೊತ್ತಲ್ಲೇ ಇಸ್ರೇಲ್ ಪಿಎಂ ಬೆಂಜಮಿನ್ ನೆತನ್ಯಾಹು ಅಗತ್ಯ ಇರುವವರೆಗೂ ಗಾಜಾ ಪಟ್ಟಿಯಲ್ಲಿ ದಾಳಿ ನಡೆಸಲಿದ್ದೇವೆ ಎಂದಿದ್ದಾರೆ.

   ಜೀವ ಇರೋ ವರೆಗೂ ಹೋರಾಟ ಮಾಡ್ತೀವಿ, ಮಹಾಯುದ್ಧ ಪ್ರಾರಂಭ ಮಾಡಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ | Oneindia Kannada

   ಗಾಜಾ ಪಟ್ಟಿಯಲ್ಲಿ ಘರ್ಷಣೆಗೆ ಹಮಾಸ್ ಉಗ್ರರ ಗ್ಯಾಂಗ್ ಕಾರಣ, ಆದರೆ ರಾಕೆಟ್ ದಾಳಿಯಲ್ಲಿ ನಾಗರಿಕರು ಜೀವ ಬಿಡುವುದನ್ನ ತಪ್ಪಿಸಲು ಸಾಧ್ಯವಿರುವ ಎಲ್ಲಾ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ. ಈ ಮೂಲಕ ಜೀವ ಇರುವವರೆಗೆ ಹೋರಾಡುತ್ತೇವೆ ಎಂಬ ಸಂದೇಶ ರವಾನಿಸಿರುವ ಇಸ್ರೇಲ್ ಪ್ರಧಾನಿ ನೆತನ್ಯಾಹು, ಹಮಾಸ್ ಉಗ್ರ ಪಡೆ ವಿರುದ್ಧ ಮಹಾಯುದ್ಧ ಘೋಷಿಸಿದ್ದಾರೆ.

   ಹಿಂಸಾಚಾರಕ್ಕೆ ನಾವು ಕಾರಣರಲ್ಲ, ಹೀಗಾಗಿ ನಮಗೆ ಅಪರಾಧಿ ಭಾವನೆಯೂ ಇಲ್ಲ. ಆದರೆ ನಮ್ಮ ಮೇಲೆ ದಾಳಿ ನಡೆಸಿರುವವರಿಗೆ ಅಪರಾಧಿ ಭಾವನೆ ಇರಬೇಕು ಎಂದು ತಮ್ಮ ಮಾತಿನಲ್ಲೇ ತಿವಿದಿದ್ದಾರೆ.

   ‘ಹಮಾಸ್ ಉಗ್ರರು ಹೇಡಿಗಳು’

   ‘ಹಮಾಸ್ ಉಗ್ರರು ಹೇಡಿಗಳು’

   ಹಮಾಸ್ ಉಗ್ರರ ವಿರುದ್ಧ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಹಮಾಸ್ ಉಗ್ರರ ಗ್ಯಾಂಗ್ ಜನರ ಮಧ್ಯೆ ಅಡಗಿ ಕೂತು ಜನರ ಮೇಲೆಯೇ ದಾಳಿ ಮಾಡುತ್ತಿದೆ ಎಂದಿದ್ದಾರೆ. ಈ ಮೂಲಕ ಹಮಾಸ್ ಉಗ್ರ ಪಡೆಯನ್ನ ಹೇಡಿಗಳು ಎಂದು ಪರೋಕ್ಷವಾಗಿ ಟೀಕಿಸಿದ್ದಾರೆ. ಮತ್ತೊಂದ್ಕಡೆ ನಾವಿನ್ನೂ ಕಾರ್ಯಾಚರಣೆ ಮಧ್ಯದಲ್ಲಿದ್ದು, ಗುರಿ ಮುಟ್ಟಿಲ್ಲ ಎಂದು ಹೇಳಿದ್ದಾರೆ ನೆತನ್ಯಾಹು. ಹೀಗೆ ಇಸ್ರೇಲ್ ಯದ್ಧದಿಂದ ಹಿಂದೆ ಸರಿಯುವುದಿಲ್ಲ ಎಂಬ ಸಂದೇಶವನ್ನೂ ಪರೋಕ್ಷವಾಗಿ ರವಾನಿಸಿದ್ದಾರೆ ನೆತನ್ಯಾಹು.

   ಮಾಧ್ಯಮ ಕಚೇರಿಗಳು ದ್ವಂಸ

   ಮಾಧ್ಯಮ ಕಚೇರಿಗಳು ದ್ವಂಸ

   ಪ್ಯಾಲೆಸ್ತೇನ್ ಭಾಗದಲ್ಲಿ ಕುಳಿತು ಉಗ್ರರ ಗ್ಯಾಂಗ್ ಮಾಡಿರುವ ತಪ್ಪಿಗೆ ಇಸ್ರೇಲ್ ರಾಕೆಟ್ ಮಳೆಗರೆಯುತ್ತಿದೆ. ಅದರಲ್ಲೂ ಗಾಜಾ ಪಟ್ಟಿಯ ಅಂತಾರಾಷ್ಟ್ರೀಯ ಮಾಧ್ಯಮ ಸಂಸ್ಥೆಗಳ ಕಚೇರಿಗಳಿದ್ದ 13 ಮಹಡಿಯ ಬೃಹತ್ ಬಿಲ್ಡಿಂಗ್ ದ್ವಂಸ ಮಾಡಿದೆ. ಈ ಬಗ್ಗೆ ವಿಶ್ವಸಂಸ್ಥೆ ಮಹಾಕಾರ್ಯದರ್ಶಿ ಗುಟೆರಸ್‌ ಗುಟುರು ಹಾಕಿ, ಮಾಧ್ಯಮ ಸಂಸ್ಥೆ ಕಚೇರಿಗಳ ಮೇಲೆ ನಡೆದಿರುವ ದಾಳಿಯನ್ನು ಖಂಡಿಸಿದ್ದಾರೆ. ಜನವಸತಿ ಪ್ರದೇಶದ ಮೇಲೆ ಇಸ್ರೇಲ್‌ ನಡೆಸಿದ್ದ ವೈಮಾನಿಕ ದಾಳಿ ಬೇಸರ ತರಿಸಿದೆ ಎಂದಿದ್ದಾರೆ. ಹೀಗೆ ನಾಗರಿಕರು ಹಾಗೂ ಮಾಧ್ಯಮಗಳ ಕಚೇರಿ ಗುರಿಯಾಗಿಸಿ ದಾಳಿ ನಡೆಸುವುದು ಅಂತಾರಾಷ್ಟ್ರೀಯ ಕಾಯ್ದೆಯ ಉಲ್ಲಂಘನೆ ಎಂದು ಎಚ್ಚರಿಸಿದ್ದಾರೆ.

   3ನೇ ಮಹಾಯುದ್ಧಕ್ಕೆ ನಾಂದಿ..?

   3ನೇ ಮಹಾಯುದ್ಧಕ್ಕೆ ನಾಂದಿ..?

   ಜಗತ್ತು ಕೊರೊನಾ ಕಿಚ್ಚಿನಲ್ಲಿ ಬೇಯುತ್ತಿದ್ದರೆ ಮಧ್ಯಪ್ರಾಚ್ಯ ಕೋಮು ಘರ್ಷಣೆಯಲ್ಲಿ ತೊಡಗಿದೆ. ಮತ್ತೊಂದೆಡೆ ಇಸ್ರೇಲ್-ಪ್ಯಾಲೆಸ್ತೇನ್‌ ನಡುವೆ ದಾಳಿ-ಪ್ರತಿದಾಳಿ ನಡೆಯುತ್ತಿರುವುದನ್ನು ನೋಡಿದರೆ 3ನೇ ಮಹಾಯುದ್ಧದ ಭೀತಿ ಆವರಿಸುತ್ತಿದೆ. ಏಕೆಂದರೆ ಇಸ್ರೇಲ್ ಪರವಾಗಿ ಯುರೋಪ್ ಹಾಗೂ ಅಮೆರಿಕ ನಿಂತರೆ, ಪ್ಯಾಲೆಸ್ತೇನ್‌ನ ಪರವಾಗಿ ಇಸ್ರೇಲ್ ಶತ್ರುಗಳು ಹಾಗೂ ಅಮೆರಿಕ ಶತ್ರು ರಾಷ್ಟ್ರಗಳು ನಿಲ್ಲುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಇಸ್ರೇಲ್-ಪ್ಯಾಲೆಸ್ತೇನ್‌ ಕಿತ್ತಾಟ 3ನೇ ಮಹಾಯುದ್ಧದ ಆತಂಕವನ್ನು ತಂದೊಡ್ಡಿದೆ. ಪರಸ್ಪರ ರಾಕೆಟ್ ದಾಳಿಗೆ ಎರಡೂ ದೇಶಗಳು ಮುಂದಾಗಿರುವುದು ಆತಂಕವನ್ನು ಮತ್ತಷ್ಟು ಹೆಚ್ಚು ಮಾಡಿದೆ.

   ಗಲಾಟೆ ಶುರುವಾಗಿದ್ದು ಹೇಗೆ..?

   ಗಲಾಟೆ ಶುರುವಾಗಿದ್ದು ಹೇಗೆ..?

   1967 ರ ಅರಬ್-ಇಸ್ರೇಲಿ ಯುದ್ಧದ ಸಮಯದಲ್ಲಿ ಇಸ್ರೇಲಿ ಪಡೆಗಳು ಭೂಪ್ರದೇಶವನ್ನು ವಶಪಡಿಸಿಕೊಂಡ ನೆನಪಿಗೆ ಮೆರವಣಿಗೆ ಆಯೋಜಿಸಲಾಗಿತ್ತು. ವಿಜಯದ ದಿನವನ್ನು ನೆನಪಿಸಿಕೊಳ್ಳುವ ಸಲುವಾಗಿ ಯಹೂದಿಗಳು ಜೆರುಸಲೇಂನ ಓಲ್ಡ್ ಸಿಟಿಯಲ್ಲಿ ಮೆರವಣಿಗೆಗೆ ಸಿದ್ಧತೆ ನಡೆಸಿದ್ದರು. ಆದರೆ ಮೆರವಣಿಗೆ ಆಯೋಜನೆ ಮಾಡಿದ್ದ ಹಿನ್ನೆಲೆಯಲ್ಲಿ ಹಿಂಸಾಚಾರ ಭುಗಿಲೆದ್ದಿದೆ ಎನ್ನಲಾಗುತ್ತಿದೆ. ಹೀಗೆ ಹಿಂಸೆ ಭುಗಿಲೇಳುತ್ತಲೇ ಇಸ್ರೇಲಿ ಪೊಲೀಸರು ಬಲಪ್ರಯೋಗ ನಡೆಸಿದ್ದಾರೆ. ಇಸ್ರೇಲಿ ಪೊಲೀಸರು ಮಧ್ಯಪ್ರವೇಶ ಮಾಡಿದ್ದೇ ತಡ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತ್ತು. ಇದಾದ ಬಳಿಕ ಪ್ಯಾಲೆಸ್ತೇನ್ ಹಾಗೂ ಇಸ್ರೇಲ್ ನಡುವೆ ಹಿಂಸೆ ಆರಂಭವಾಗಿ, ಗಾಜಾ ಪಟ್ಟಿ ಮೇಲೆ ನಡೆಯುತ್ತಿರುವ ದಾಳಿಗೆ 200ಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ.

   English summary
   Israel PM Netanyahu says, they never stop counter attack on Hamas terrorists until they reach the goal.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X