ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎವರೆಸ್ಟ್ ಹೆಬ್ಬಾಗಿಲು ಲೂಕ್ಲಾದಲ್ಲಿ ವಿಮಾನ ದುರಂತದಲ್ಲಿ 3 ಸಾವು

|
Google Oneindia Kannada News

ಲೂಕ್ಲಾ, ಏಪ್ರಿಲ್ 14: ಇಲ್ಲಿನ ತೇನ್ಜಿಂಗ್ ಹಿಲ್ಲರಿ ವಿಮಾನ ನಿಲ್ದಾಣದಲ್ಲಿಂದು ದುರಂತ ಸಂಭವಿಸಿದೆ. ಸಮ್ಮಿಟ್ ಏರ್ ಸಂಸ್ಥೆ(ಗೋಮಾ ಏರ್) ಗೆ ಸೇರಿರುವ ಲಘು ವಿಮಾನವೊಂದು ದುರಂತಕ್ಕೀಡಾಗಿದ್ದು, ಕೋ ಪೈಲಟ್ ಸೇರಿ ಮೂವರು ಮೃತಪಟ್ಟಿದ್ದು, 5ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಜಗತ್ತಿನ ಅತ್ಯಂತ ಭಯಾನಕ ರನ್ ವೇಗಳಲ್ಲಿ ಲೂಕ್ಲಾ ವಿಮಾನ ನಿಲ್ದಾಣ ಕೂಡಾ ಒಂದೆನಿಸಿದೆ. ಇಲ್ಲಿನ ಕಡಿದಾದ ರನ್ ವೇ, ಇಕ್ಕಟ್ಟಾದ ವಿಮಾನ ನಿಲ್ದಾಣದಲ್ಲಿ ವಿಮಾನ ಟೇಕಾಫ್, ಲ್ಯಾಂಡಿಂಗ್ ಮಾಡುವುದೇ ದೊಡ್ಡ ಸಾಹಸ.

ಇಂಥ ವಿಮಾನ ನಿಲ್ದಾಣದಲ್ಲಿ ಪ್ರತಿ ಕೂಲ ಹವಾಮಾನದ ನಡುವೆ ಇಂದು ಚೆಕ್ ನಿರ್ಮಿತ ಎಲ್ ಇಟಿ 410 ಸಮ್ಮಿಟ್ ಏರ್ ವಿಮಾನವನ್ನು ಟೇಕಾಫ್ ಮಾಡಲು ಯತ್ನಿಸಿದ ಪೈಲಟ್ ಗೆ ಅಲ್ಲಿ ನಿಲ್ಲಿಸಲಾಗಿದ್ದ ಹೆಲಿಕಾಪ್ಟರ್ ಕಂಡಿದೆ. ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಯತ್ನಿಸಿದರೂ ಫಲ ನೀಡಲಿಲ್ಲ. ಹೆಲಿಕಾಪ್ಟರ್ ಗೆ ಗುದ್ದಿ, ವಿಮಾನದ ಮುಂಭಾಗ ಮೂತಿ ನೆಲಕ್ಕಪ್ಪಳಿಸಿದೆ ಎಂದು ವಿಮಾನಯಾನ ಅಧಿಕಾರಿ ರಾಜ್ ಕುಮಾರ್ ಛೆಟ್ರಿ ಹೇಳಿದ್ದಾರೆ.

Nepal: Three killed, 5 injured in Summit Air crash in Lukla

ವಿಮಾನ ದುರಂತಕ್ಕೂ ಮುನ್ನ ಶಿಖಾ ತನ್ನ ಪತಿಗೆ ಕಳಿಸಿದ ಕೊನೆಯ ಸಂದೇಶ ಇದುವಿಮಾನ ದುರಂತಕ್ಕೂ ಮುನ್ನ ಶಿಖಾ ತನ್ನ ಪತಿಗೆ ಕಳಿಸಿದ ಕೊನೆಯ ಸಂದೇಶ ಇದು

ನೇಪಾಳದ ಸೋಲೋ ಕುಂಬು ಕಣಿವೆ ಪ್ರದೇಶದಲ್ಲಿರುವ ಲೂಕ್ಲಾ ವಿಮಾನ ನಿಲ್ದಾಣವು ಎವರೆಸ್ಟ್ ಬೇಸ್ ಕ್ಯಾಂಪ್ ಟ್ರೆಕ್ ಹೋಗುವವರಿಗೆ ಹೆಬ್ಬಾಗಿಲಾಗಿದೆ. ಕಠ್ಮಂಡು ವಿಮಾನ ನಿಲ್ದಾಣವನ್ನು ಜೂನ್ 31ರ ತನಕ ಮುಚ್ಚಲಾಗಿದ್ದು, ಲೂಕ್ಲಾದಿಂದ ಈ ವಿಮಾನವು ರಾಮೆಚಾಪ್ ಗೆ ತೆರಳುತ್ತಿತ್ತು ಎಂದು ತಿಳಿದು ಬಂದಿದೆ.

ಮೃತರನ್ನು ಕೋ ಪೈಲಟ್ ಸುಜಿತ್ ಧುಂಗನಾ, ಪೊಲೀಸ್ ಸಿಬ್ಬಂದಿಗಳಾದ ರಾಮ್ ಬಹದ್ದೂರ್ ತಮಾಂಗ್, ರುದ್ರ ಶ್ರೇಷ್ಠ ಎಂದು ತಿಳಿದು ಬಂದಿದೆ. ಕ್ಯಾ. ರಬಿನಾಥ್ ರೊಕಯಾ, ಮನಂಗ್ ಏರ್ ಚೆಟ್ ಬಿ ಗುರುಂಗ್ ಅವರು ಸೇರಿದಂತೆ ಗಾಯಗೊಂಡ ಪ್ರಯಾಣಿಕರನ್ನು ಕಠ್ಮಂಡುವಿಗೆ ಏರ್ ಲಿಫ್ಟ್ ಮಾಡಲಾಗಿದ್ದು, ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಲೂಕ್ಲಾ ವಿಮಾನ ನಿಲ್ದಾಣ, ರನ್ವೇ ಝಲಕ್ ಈ ವಿಡಿಯೋದಲ್ಲಿದೆ ನೋಡಿ:

2008ರಲ್ಲಿ ಯೇತಿ ವಿಮಾನಯಾನ ಸಂಸ್ಥೆ ವಿಮಾನ ದುರಂತದಲ್ಲಿ 18 ಮಂದಿ ದುರ್ಮರಣ ಹೊಂದಿದ್ದರು. ಮೃತರ ಪೈಕಿ ಬಹುತೇಕ ಜರ್ಮನಿಯ ಟ್ರೆಕ್ಕರ್ಸ್ ಇದ್ದರು.

English summary
Around Three people were killed and five were injured in Summit Air flight crash at Tenzing-Hillary-Lukla airport. The aircraft had collided with a parked chopper at the airport.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X