ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೇಪಾಳ ತಾರಾ ಏರ್ ವಿಮಾನ ಪತನ: ಎಲ್ಲಾ ಪ್ರಯಾಣಿಕರ ಸಾವು ದೃಢ

|
Google Oneindia Kannada News

ನೇಪಾಳ ತಾರಾ ಏರ್ ವಿಮಾನ ಪತನದಿಂದಾಗಿ ನಾಲ್ವರು ಭಾರತೀಯರು ಸೇರಿದಂತೆ ಎಲ್ಲಾ ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಲಾಗಿದೆ. ಭಾನುವಾರ ಪತನಗೊಂಡ ತಾರಾ ವಿಮಾನದಲ್ಲಿದ್ದ ನಾಲ್ವರು ಭಾರತೀಯರು ಸೇರಿದಂತೆ ಎಲ್ಲ ಪ್ರಯಾಣಿಕರು ಮೃತಪಟ್ಟಿದ್ದಾರೆ ಎಂದು ಸೋಮವಾರ ಬಿಡುಗಡೆ ಮಾಡಿದ ಪ್ರಯಾಣಿಕರ ಪಟ್ಟಿಯಲ್ಲಿ ಏರ್‌ಲೈನ್ಸ್ ತಿಳಿಸಿದೆ. ವಿಮಾನದಲ್ಲಿ 13 ನೇಪಾಳಿಗಳು, ನಾಲ್ವರು ಭಾರತೀಯರು ಮತ್ತು ಇಬ್ಬರು ಜರ್ಮನ್ನರು ಇದ್ದರು ಎನ್ನಲಾಗಿದೆ.

ಕೆನಡಾ ನಿರ್ಮಿತ ವಿಮಾನವು ಪೋಖರಾ ನಗರದಿಂದ ಮಧ್ಯ ನೇಪಾಳದ ಜನಪ್ರಿಯ ಪ್ರವಾಸಿ ಪಟ್ಟಣವಾದ ಜೋಮ್ಸೋಮ್‌ಗೆ ಹಾರುತ್ತಿತ್ತು. ಕಠ್ಮಂಡುವಿನಿಂದ ಸುಮಾರು 200 ಕಿಲೋಮೀಟರ್ ಪೂರ್ವಕ್ಕೆ ಪೋಖರಾದಿಂದ ಬೆಳಿಗ್ಗೆ 10:15 ಕ್ಕೆ ಟೇಕಾಫ್ ಆದ ತಾರಾ ಏರ್‌ಗೆ ಸೇರಿದ ವಿಮಾನ ಪತನಗೊಳ್ಳುವ ಮುನ್ನದ ಸ್ಥಿತಿ ಹೇಗಿತ್ತು ಎನ್ನುವ ಬಗ್ಗೆ ಇಲ್ಲಿಯವರೆಗೆ ತಿಳಿದಿಲ್ಲ ಎಂದು ನೇಪಾಳದ ನಾಗರಿಕ ವಿಮಾನಯಾನ ಪ್ರಾಧಿಕಾರ (ಸಿಎಎಎನ್) ಹೇಳಿಕೆಯಲ್ಲಿ ತಿಳಿಸಿದೆ.

ನಾಪತ್ತೆಯಾಗಿದ್ದ ನೇಪಾಳ ವಿಮಾನದ ಅವಶೇಷಗಳು ಪತ್ತೆನಾಪತ್ತೆಯಾಗಿದ್ದ ನೇಪಾಳ ವಿಮಾನದ ಅವಶೇಷಗಳು ಪತ್ತೆ

ಭಾರತದ ಪುಣೆಯ ನಿವಾಸಿಗಳು

ಭಾರತದ ಪುಣೆಯ ನಿವಾಸಿಗಳು

ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ ವೈಭವಿ ಬಾಂದೇರ್ಕರ್, ಅಶೋಕ್ ಕುಮಾರ್ ತ್ರಿಪಾಠಿ, ಧನುಷ್ ತ್ರಿಪಾಠಿ ಮತ್ತು ರಿತಿಕಾ ತ್ರಿಪಾಠಿ ಎಂದು ಗುರುತಿಸಲಾಗಿರುವ ಭಾರತೀಯ ಪ್ರಜೆಗಳು ಪುಣೆಯವರು ಎನ್ನಲಾಗಿದೆ. ಅಂತೆಯೇ ಅಪಘಾತದಲ್ಲಿ ನೇಪಾಳದ ಒಂದೇ ಕುಟುಂಬದ ಏಳು ಸದಸ್ಯರು ಸಹ ಸಾವನ್ನಪ್ಪಿದ್ದಾರೆ.

ನೇಪಾಳ ಪ್ರಧಾನಿ ಟ್ವೀಟ್

ನೇಪಾಳ ಪ್ರಧಾನಿ ಟ್ವೀಟ್

"ತಾರಾ ಏರ್‌ನಲ್ಲಿದ್ದ ಎಲ್ಲಾ ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ಕೇಳಲು ನನಗೆ ದುಃಖವಾಗಿದೆ" ಎಂದು ನೇಪಾಳದ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ ಸೋಮವಾರ ಮಧ್ಯಾಹ್ನ ಟ್ವೀಟ್ ಮಾಡಿ ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದರು.

ತಾರಾ ಏರ್‌ನ ವಕ್ತಾರ ಸುದರ್ಶನ್ ಬರ್ತೌಲಾ ಪ್ರಕಾರ, ಸೋಮವಾರ ಮಧ್ಯಾಹ್ನದ ಹೊತ್ತಿಗೆ, ಅಪಘಾತದ ಸ್ಥಳದಿಂದ 20 ಮೃತದೇಹಗಳನ್ನು ಪಡೆಯಲಾಗಿದೆ. ಜೊತೆಗೆ ಸ್ಥಳದಿಂದ 100 ಮೀಟರ್ ತ್ರಿಜ್ಯದಲ್ಲಿ ದೇಹಗಳು ಚದುರಿಹೋಗಿವೆ ಎನ್ನಲಾಗಿದೆ.

ಮೃತ ದೇಹಗಳ ಹಸ್ತಾಂತರ ಕಾರ್ಯ

ಮೃತ ದೇಹಗಳ ಹಸ್ತಾಂತರ ಕಾರ್ಯ

ಕಠ್ಮಂಡುವಿನಲ್ಲಿನ ಭಾರತೀಯ ರಾಯಭಾರ ಕಚೇರಿ ಈಗಾಗಲೇ ಅಗಲಿದ ಭಾರತೀಯ ಪ್ರಜೆಗಳ ಕುಟುಂಬ ಸದಸ್ಯರೊಂದಿಗೆ ಸಂಪರ್ಕವನ್ನು ಸ್ಥಾಪಿಸಿದೆ. ವಿಮಾನ ಅಪಘಾತದ ನಂತರ, ನೇಪಾಳದ ನಾಗರಿಕ ವಿಮಾನಯಾನ ಮತ್ತು ಪ್ರವಾಸೋದ್ಯಮ ಸಚಿವಾಲಯವು ದುರಂತದ ಹಿಂದಿನ ಕಾರಣಗಳನ್ನು ಕಂಡುಹಿಡಿಯಲು ಸೋಮವಾರ ಐದು ಸದಸ್ಯರ ತನಿಖಾ ಸಮಿತಿಯನ್ನು ರಚಿಸಿದೆ. ಮೃತ ದೇಹಗಳನ್ನು ಕಠ್ಮಂಡುವಿಗೆ ತಂದ ನಂತರ ಕುಟುಂಬಗಳಿಗೆ ಹಸ್ತಾಂತರಿಸಲಾಗುವುದು ಎಂದು ನೇಪಾಳದ ಗೃಹ ಸಚಿವಾಲಯ ತಿಳಿಸಿದೆ.

Recommended Video

ಸೋತ್ವಿ ಅಂತ ಬೇಜಾರ್ ಆಗ್ದೆ ಚಹಲ್ ಪತ್ನಿ ಜೊತೆ ಕುಣಿದು ಕುಪ್ಪಳಿಸಿದ ಜೋಸ್ ಬಟ್ಲರ್ | OneIndia Kannada
ಹಲವಾರು ತುಂಡುಗಳಾಗಿ ಧ್ವಂಸ

ಹಲವಾರು ತುಂಡುಗಳಾಗಿ ಧ್ವಂಸ

ಭಾನುವಾರ ನಾಪತ್ತೆಯಾಗಿದ್ದ ವಿಮಾನ ಮುಸ್ತಾಂಗ್ ಜಿಲ್ಲೆಯಲ್ಲಿ ಪತನಗೊಂಡ 24 ಗಂಟೆಗಳ ನಂತರ ಪತ್ತೆಯಾಗಿದೆ. ಭಾನುವಾರ ಬೆಳಗ್ಗೆ ಅಪಘಾತದಲ್ಲಿ ಅಂತ್ಯಗೊಂಡ ನಾಪತ್ತೆಯಾದ ವಿಮಾನದ ಫೋಟೋವನ್ನು ಟ್ವೀಟ್ ಮಾಡಿರುವ ನೇಪಾಳ ಸೇನಾ ವಕ್ತಾರ ಬ್ರಿಗೇಡಿಯರ್ ಜನರಲ್ ನಾರಾಯಣ್ ಸಿಲ್ವಾಲ್, ನಾಪತ್ತೆಯಾದ ವಿಮಾನವು ಜೋಮ್ಸಮ್ ವಿಮಾನ ನಿಲ್ದಾಣದ ಬಳಿಯ ಮುಸ್ತಾಂಗ್‌ನಲ್ಲಿ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ. ಸೇನೆಯು ಬಿಡುಗಡೆ ಮಾಡಿದ ಫೋಟೋ ಪ್ರಕಾರ, 19 ಪ್ರಯಾಣಿಕರು ಮತ್ತು ಮೂವರು ಸಿಬ್ಬಂದಿಯನ್ನು ಹೊತ್ತಿದ್ದ ವಿಮಾನವು ಹಲವಾರು ತುಂಡುಗಳಾಗಿ ಧ್ವಂಸಗೊಂಡಿದೆ.

ಭಾನುವಾರದಂದು ಪ್ರತಿಕೂಲ ಹವಾಮಾನದಿಂದಾಗಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಿಂದಾಗಿ ಸೇನೆಯು ಕಾರ್ಯಾಚರಣೆಯನ್ನು ಹಿಂತೆಗೆದುಕೊಂಡಿತು ಮತ್ತು ಸೋಮವಾರ ಬೆಳಿಗ್ಗೆ ಕಾರ್ಯಾಚರಣೆಯನ್ನು ಪುನರಾರಂಭಿಸಿತು.

ಭಾನುವಾರ ಬೆಳಗ್ಗೆ ಸಂಪರ್ಕ ಕಳೆದುಕೊಂಡ ಸ್ವಲ್ಪ ಹೊತ್ತಿನಲ್ಲೇ ತಾರಾ ಅವರ ವಿಮಾನದ ಹುಡುಕಾಟ ಆರಂಭವಾಯಿತು. ಆದರೆ ವಿಮಾನ ಪತ್ತೆಯಾಗಿಲ್ಲ. ಪೋಖರಾದಿಂದ ಜೋಮ್ಸಮ್ ತಲುಪಲು 20 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಆದರೆ ಟೇಕಾಫ್ ಆದ 12 ನಿಮಿಷಗಳಲ್ಲಿ ವಿಮಾನ ಸಂಪರ್ಕ ಕಳೆದುಕೊಂಡಿದೆ.

(ಒನ್ಇಂಡಿಯಾ ಸುದ್ದಿ)

English summary
All passengers, including four Indians, were killed when the Tara plane crashed on Sunday, the airline said on Monday. There were 13 Nepalis, four Indians and two Germans.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X