ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಠಾತ್ ಸಂಸತ್ ವಿಸರ್ಜನೆಗೆ ಕಾರಣ ನೀಡುವಂತೆ ನೇಪಾಳ ಪ್ರಧಾನಿ ಓಲಿಗೆ ಸುಪ್ರೀಂನಿಂದ ಶೋಕಾಸ್ ನೋಟಿಸ್

|
Google Oneindia Kannada News

ಕಠ್ಮಂಡು, ಡಿಸೆಂಬರ್ 25: ಸಂಸತ್ ಹಠಾತ್ ವಿಸರ್ಜನೆಗೆ ಸಂಬಂಧಿಸಿದಂತೆ ಸ್ಪಷ್ಟೀಕರಣ ನೀಡುವಂತೆ ಕೋರಿ ಪ್ರಧಾನಿ ಕೆಪಿ ಶರ್ಮಾ ಓಲಿ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಶೋಕಾಸ್ ನೋಟಿಸ್ ಜಾರಿ ಮಾಡಿದೆ.

ಮುಖ್ಯ ನ್ಯಾಯಮೂರ್ತಿ ಚೋಳೇಂದ್ರ ಶುಮ್ಶರ್ ರಾಣಾ ನೇತೃತ್ವದ ಐದು ಸದಸ್ಯರ ಸಾಂವಿಧಾನಿಕ ಪೀಠ ಪ್ರಾಥಮಿಕ ವಿಚಾರಣೆಯ ನಂತರ ಈ ನೋಟಿಸ್ ನೀಡಿದೆ 275 ಸದಸ್ಯರ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಅನ್ನು ವಿಸರ್ಜಿಸುವ ಸರ್ಕಾರದ ನಿರ್ಧಾರದ ವಿರುದ್ಧ ಸಲ್ಲಿಸಲಾದ ರಿಟ್ ಅರ್ಜಿಗಳ ಕುರಿತು ನೋಟಿಸ್ ಜಾರಿಮಾಡಲಾಗಿದೆ.

ಹಿಂದೂ ದೇವರು ಶ್ರೀರಾಮನ ಮೂಲ ಭಾರತವೋ ನೇಪಾಳವೋ?ಹಿಂದೂ ದೇವರು ಶ್ರೀರಾಮನ ಮೂಲ ಭಾರತವೋ ನೇಪಾಳವೋ?

ಎಲ್ಲಾ ರಿಟ್ ಅರ್ಜಿಗಳಲ್ಲಿ ಒಲಿಯವರನ್ನು ಪ್ರತಿವಾದಿಗಳನ್ನಾಗಿ ಮಾಡಿರುವುದರಿಂದ ನ್ಯಾಯಮಂಡಳಿ ಪ್ರಧಾನ ಮಂತ್ರಿ ಕಚೇರಿ ಮತ್ತು ಮಂತ್ರಿ ಮಂಡಳಿ ಮತ್ತು ರಾಷ್ಟ್ರಪತಿಗಳ ಕಚೇರಿಯಿಂದ ಲಿಖಿತ ಸ್ಪಷ್ಟೀಕರಣವನ್ನು ಕೋರಿದೆ.

Nepal’s Supreme Court Issues Show-Cause Notice To Oli Govt Over Parliament Dissolution

ಸದನವನ್ನು ವಿಸರ್ಜಿಸಲು ಸರ್ಕಾರ ಮಾಡಿದ ಶಿಫಾರಸುಗಳ ಮೂಲ ಪ್ರತಿಯನ್ನು ಮತ್ತು ಸರ್ಕಾರದ ಶಿಫಾರಸುಗಳನ್ನು ದೃಢಪಡಿಸಲು ಅಧ್ಯಕ್ಷ ಬಿದ್ಯಾ ದೇವಿ ಭಂಡಾರಿ ತೆಗೆದುಕೊಂಡ ನಿರ್ಧಾರವನ್ನು ನ್ಯಾಯಾಲಯಕ್ಕೆ ಒದಗಿಸುವಂತೆ ನೋಟೀಸ್ ನಲ್ಲಿ ಹೇಳಿದೆ.

ಪ್ರಧಾನಿ ಓಲಿಯನ್ನು ಪಕ್ಷದ ಸಂಸದೀಯ ನಾಯಕ ಮತ್ತು ಅಧ್ಯಕ್ಷರ ಹುದ್ದೆಗಳಿಂದ ಉಚ್ಚಾಟಿಸಿದ ನಂತರ ನೇಪಾಳ ಕಮ್ಯುನಿಸ್ಟ್ ಪಕ್ಷದ ಕಾರ್ಯನಿರ್ವಾಹಕ ಅಧ್ಯಕ್ಷ ಪುಷ್ಪ ಕಮಲ್ ದಹಲ್ ಅವರನ್ನು ಚೀನಾದ ರಾಯಭಾರಿ ಹೂ ಯಾಂಕಿ ಅವರು ಗುರುವಾರ ಭೇಟಿಯಾದರು.

ಗುರುವಾರ ತಮ್ಮ ಆಪ್ತ ಕೇಂದ್ರ ಸಮಿತಿ ಸದಸ್ಯರ ಸಭೆಯಲ್ಲಿ ಓಲಿ ಪ್ರಚಂಡ ಅವರನ್ನು ಪಕ್ಷದ ಕಾರ್ಯಕಾರಿ ಅಧ್ಯಕ್ಷ ಹುದ್ದೆಯಿಂದ ತೆಗೆದುಹಾಕುವುದಾಗಿ ಘೋಷಿಸಿದರು. ಇದಕ್ಕೂ ಮೊದಲು, ಆಡಳಿತ ಪಕ್ಷದ ಪ್ರಚಂಡ ನೇತೃತ್ವದ ಬಣವು ಅವರನ್ನು ಹೊಸ ಸಂಸದೀಯ ನಾಯಕರನ್ನಾಗಿ ಆಯ್ಕೆ ಮಾಡಿತ್ತು.

ಬುಧವಾರ, ಮುಖ್ಯ ನ್ಯಾಯಮೂರ್ತಿ ರಾಣಾ ಅವರ ಏಕ ಪೀಠವು ಎಲ್ಲಾ ರಿಟ್ ಅರ್ಜಿಗಳನ್ನು ಸಾಂವಿಧಾನಿಕ ಪೀಠಕ್ಕೆ ರವಾನಿಸಿತು. ಸಂಸತ್ತನ್ನು ವಿಸರ್ಜಿಸುವ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಒಟ್ಟಾರೆ 13 ರಿಟ್ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ನಲ್ಲಿ ದಾಖಲಿಸಲಾಗಿದೆ.

ಇದರ ಮಧ್ಯೆ ಪಕ್ಷದ ಮೇಲೆ ಹಿಡಿತ ಸಾಧಿಸಲು ಆಡಳಿತಾರೂಢ ನೇಪಾಳ ಕಮ್ಯುನಿಸ್ಟ್ ಪಕ್ಷದ ಎರಡು ಬಣಗಳ ನಡುವೆ ತೀವ್ರವಾದ ಹೋರಾಟದ ನಡುವೆ ಪ್ರಧಾನಿ ಓಲಿ ಶುಕ್ರವಾರ ಸಂಜೆ ಸಂಪುಟ ಸಭೆ ಕರೆದಿದ್ದಾರೆ.

English summary
Nepal’s Supreme Court on Friday issued a show-cause notice to Prime Minister K P Sharma Oli-led government, asking it to furnish a written clarification over its decision to abruptly dissolve Parliament.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X