ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಸಿಕೆ ಹಾಕಿದ ಪ್ರವಾಸಿಗರಿಗೆ ನೇಪಾಳಕ್ಕೆ ತಲುಪಿದ ಬಳಿಕ ವೀಸಾ, ನಿಯಮ ಏನಿದೆ?

|
Google Oneindia Kannada News

ಕಠ್ಮಂಡು, ಸೆಪ್ಟೆಂಬರ್‌, 27: ನೀವು ನೇಪಾಳಕ್ಕೆ ಪ್ರಯಾಣ ಮಾಡುವ ಯೋಜನೆಯನ್ನು ಮಾಡಿಕೊಂಡಿದ್ದೀರಿಯೇ?. ಹಾಗಿದ್ದರೆ ನಿಮಗೆ ಸಿಹಿ ಸುದ್ದಿ ಇಲ್ಲಿದೆ. ನೇಪಾಳ ಸರ್ಕಾರವು ಕೋವಿಡ್‌ ಕಾರಣದಿಂದಾಗಿ ನಿರ್ಬಂಧವನ್ನು ಹೇರಿದ್ದ ತಮ್ಮ ಸಂಚಾರ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದೆ.

ನೇಪಾಳ ಸರ್ಕಾರವು ತಮ್ಮ ಪ್ರವಾಸೋದ್ಯಮವನ್ನು ಪುನರುಜ್ಜೀವನ ಮಾಡುವ ನಿಟ್ಟಿನಲ್ಲಿ, ವಿದೇಶಿ ಪ್ರವಾಸಿಗರಿಗೆ ತನ್ನ ಏಳು ದಿನಗಳ ಕಡ್ಡಾಯ ಕೋವಿಡ್‌ ಸಂಪರ್ಕತಡೆಯನ್ನು ತೆಗೆದು ಹಾಕಿದೆ. ಹಾಗೆಯೇ ಕೊರೊನಾ ವೈರಸ್‌ ಸೋಂಕಿನ ವಿರುದ್ದ ಲಸಿಕೆಯನ್ನು ಪಡೆದ ಪ್ರಯಾಣಿಕರಿಗೆ ವಿಸಿಟಿಂಗ್‌ ವೀಸಾವನ್ನು ನೀಡುವುದನ್ನು ಮತ್ತೆ ಆರಂಭ ಮಾಡಿದೆ.

ನೇಪಾಳ ಪ್ರಧಾನಿಯಾಗಿ ದೇವುಬಾ ಪ್ರಮಾಣ ವಚನ ಸ್ವೀಕಾರನೇಪಾಳ ಪ್ರಧಾನಿಯಾಗಿ ದೇವುಬಾ ಪ್ರಮಾಣ ವಚನ ಸ್ವೀಕಾರ

ಇನ್ನು ಈ ಪ್ರವಾಸೋದ್ಯಮಕ್ಕೆ ಇನ್ನಷ್ಟು ಬಲತುಂಬುವ ನಿಟ್ಟಿನಲ್ಲಿ ಪ್ರಮುಖ ವಿಮಾನಯಾನ ಸಂಸ್ಥೆಗಳು ಪ್ರತಿ ವರ್ಷ ಲಕ್ಷ ಪ್ರವಾಸಿಗರನ್ನು ಸೆಳೆಯುವ, ಅತ್ಯಂತ ಬೇಡಿಕೆ ಇರುವ ಪರ್ವತ ವಿಮಾನಯಾನವನ್ನು ಕೂಡಾ ಮತ್ತೆ ಆರಂಭ ಮಾಡಲಾಗುವುದು ಎಂದು ಘೋಷಣೆ ಮಾಡಿದೆ.

 Nepal Resumes Visa on Arrival For Vaccinated Travellers, Know Latest Rules on Quarantine, in kannada

ನೇಪಾಳ ಸರ್ಕಾರವು ಈ ಬಗ್ಗೆ ಪ್ರಕಟಣೆಯನ್ನು ಹೊರಡಿಸಿದೆ. "ನೇಪಾಳಕ್ಕೆ ವಿದೇಶಿ ಪ್ರಯಾಣಿಕರು ಕಠ್ಮಂಡುವಿನ ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಇತರ ಪ್ರವೇಶ ಸ್ಥಳಗಳಲ್ಲಿ ವೀಸಾಗಳನ್ನು ಪಡೆದುಕೊಳ್ಳಬಹುದು. ನೆರೆಯ ದೇಶವಾದ ಭಾರತದಿಂದ ಬಸ್‌ನಲ್ಲಿ ಬರುವ ಪ್ರಯಾಣಿಕರು ಕೂಡಾ ವೀಸಾವನ್ನು ಇಲ್ಲಿ ಬಂದು ಪಡೆಯಬಹುದು. ಅರ್ಜಿದಾರರು ಕೊರೊನಾ ವೈರಸ್‌ ಸೋಂಕಿನ ವಿರುದ್ದ ಎರಡೂ ಡೋಸ್‌ ಲಸಿಕೆಯನ್ನು ಕನಿಷ್ಠ 14 ದಿನ ಮೊದಲೇ ಪಡೆದುಕೊಂಡಿರಬೇಕು," ಎಂದು ನೇಪಾಳ ಸರ್ಕಾರ ಹೇಳಿದೆ.

ಇನ್ನು ಪ್ರಯಾಣಿಕರು ತಮ್ಮ ಕೋವಿಡ್‌ ನೆಗೆಟಿವ್‌ ಪರೀಕ್ಷಾ ವರದಿಯನ್ನು ಕೂಡಾ ಹೊಂದಿರುವುದು ಕಡ್ಡಾಯವಾಗಿದೆ. ಆರ್‌ಟಿ-ಪಿಸಿಆರ್‌ ಅಥವಾ ಯಾವುದೇ ಕೋವಿಡ್‌ ಪರೀಕ್ಷೆಯನ್ನು ಪ್ರವಾಸಿಗರು ಮಾಡಿಕೊಂಡಿರಬಹುದು. ಈ ನೆಗೆಟಿವ್ ಕೋವಿಡ್‌ ವರದಿಯು, ಸುಮಾರು 72 ಗಂಟೆಗಳಿಗಿಂತ ಒಳಗೆ ಮಾಡಿಕೊಂಡಿರಬೇಕು. ಹಾಗೆಯೇ ಹೊಟೇಲ್‌ ವ್ಯವಸ್ಥೆಯನ್ನು ಮೊದಲೇ ಮಾಡಿಕೊಂಡಿರಬೇಕು.

ನೇಪಾಳದಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಆರಂಭ!ನೇಪಾಳದಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಆರಂಭ!

ಪ್ರಯಾಣಿಕರು ವಿದೇಶದಲ್ಲಿರುವ ನೇಪಾಳಿ ರಾಯಭಾರ ಕಚೇರಿಗಳಿಂದ ವೀಸಾಗಳನ್ನು ಸಂಗ್ರಹಿಸಲು ಬಯಸಿದರೆ, ಮುಂಚಿತವಾಗಿ ಲಸಿಕೆಯನ್ನು ಹಾಕಿಸಿಕೊಳ್ಳಬೇಕಾಗುತ್ತದೆ. ಕೋವಿಡ್‌ ಲಸಿಕೆಯನ್ನು ಪಡೆಯದ ಪ್ರಯಾಣಿಕರು ಹತ್ತು ದಿನಗಳ ಕಾಲ ಕ್ವಾರಂಟೈನ್‌ಗೆ ಒಳಗಾಗುವುದು ಕಡ್ಡಾಯವಾಗಿದೆ ಎಂದು ಸೂಚನೆ ನೀಡಲಾಗಿದೆ.

ಕಳೆದ ಕೆಲವು ತಿಂಗಳಿನಿಂದ ನೇಪಾಳದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಇಳಿಕೆ ಕಂಡ ಕಾರಣದಿಂದಾಗಿ ಈ ಘೋಷಣೆಯನ್ನು ನೇಪಾಳ ಸರ್ಕಾರವು ಮಾಡಿಕೊಂಡಿದೆ. ಏಪ್ರಿ‌ಲ್‌, ಮೇ ತಿಂಗಳಿನಲ್ಲಿ ಸುಮಾರು ಎಂಟು ಸಾವಿರದಷ್ಟು ಇದ್ದ ದೈನಂದಿನ ಕೋವಿಡ್‌ ಪ್ರಕರಣಗಳು ಈಗ ಸೆಪ್ಟೆಂಬರ್‌ನಲ್ಲಿ ಸುಮಾರು 100 ಕ್ಕೆ ಇಳಿಕೆ ಕಂಡಿದೆ. ಈ ನಡುವೆ ಪರ್ವತ ವಿಮಾನಯಾನವನ್ನು ನಡೆಸುತ್ತಿರುವ ಎರಡು ವಿಮಾನಯಾನ ಸಂಸ್ಥೆಗಳು, ತಮ್ಮ ಪ್ರಯಾಣವನ್ನು ಅಧಿಕ ಮಾಡುವ ಚಿಂತನೆ ನಡೆಸಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.

ಒಂದು ಗಂಟೆಯ ಪರ್ವತ ವಿಮಾನಯಾನದಲ್ಲಿ ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರನ್ನು 25,000 ಅಡಿ ಎತ್ತರಕ್ಕೆ ಕರೆದುಕೊಂಡು ಹೋಗುತ್ತಾರೆ. ಮೌಂಟ್‌ ಎವರೆಸ್ಟ್‌ನ ಎರಡೂ ಬದಿಯಲ್ಲಿ ಸುಮಾರು 25,000 ಅಡಿ ಎತ್ತರಕ್ಕೆ ಕರೆದೊಯ್ಯಲಾಗುತ್ತದೆ. ಇದು ಇದು ರಾಷ್ಟ್ರದ ಅತ್ಯಂತ ಆಕರ್ಷಣೀಯ ಸ್ಥಳಗಳಲ್ಲಿ ಒಂದಾಗಿದೆ. ಇನ್ನು ತಮ್ಮ ವಿಮಾನಯಾನವನ್ನು ಸ್ಥಗಿತಗೊಳಿಸಿದ್ದ, ಏಟಿ ವಿಮಾನಯಾನ ಸಂಸ್ಥೆಯು, ಮುಂಬರುವ ಭಾನುವಾರದಿಂದ ತನ್ನ ಕಾರ್ಯಾಚರಣೆಯನ್ನು ಮತ್ತೆ ಆರಂಭ ಮಾಡಲಿದೆ ಎಂದು ಹೇಳಿಕೊಂಡಿದೆ.

ಪ್ರಸ್ತುತ ಬುದ್ಧ ಏರ್‌ ವಿಮಾನಯಾನ ಸಂಸ್ಥೆ ಪರ್ವತ ವಿಮಾನಯಾನವನ್ನು ನಡೆಸುತ್ತಿದೆ. ಆದರೆ ಶನಿವಾರ ಮಾತ್ರ ಈ ಬುದ್ಧ ಏರ್‌ ವಿಮಾನಯಾನ ಸಂಸ್ಥೆ ಪರ್ವತ ವಿಮಾನಯಾನ ಸೇವೆಯನ್ನು ನೀಡುತ್ತದೆ. ಆದರೆ ಈ ತಮ್ಮ ಸೇವೆಯನ್ನು ಹೆಚ್ಚಿಸುವ ಬಗ್ಗೆ ಮಾಹಿತಿ ನೀಡಿದ ಬುದ್ಧ ಏರ್‌ ವಿಮಾನಯಾನ ಸಂಸ್ಥೆಯ ರೂಪೇಶ್‌ ಜೋಶಿ, "ಮುಂಬರುವ ತಿಂಗಳಿನಿಂದ ಅಧಿಕ ವಿಮಾನವನ್ನು ಆರಂಭ ಮಾಡಲಾಗುವುದು," ಎಂದು ತಿಳಿಸಿದ್ದಾರೆ.

ವಿಶ್ವದ ಅತೀ ಎತ್ತರದ 14 ಪರ್ವತಗಳ ಪೈಕಿ ನೇಪಾಳದಲ್ಲೇ ಎಂಟು ಪರ್ವತಗಳು ಇದೆ. ಆ ಹಿನ್ನೆಲೆಯಿಂದಾಗಿ ನೇಪಾಳವು ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿದೆ.

(ಒನ್‌ಇಂಡಿಯಾ ಸುದ್ದಿ)

English summary
Nepal Resumes Visa on Arrival For Vaccinated Travellers, Know Latest Rules on Quarantine, in kannada. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X