ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತಕ್ಕೆ ಸೆಡ್ಡು, ಚೀನಾ ಸಂಪರ್ಕಕ್ಕೆ ನೇಪಾಳದಿಂದ ರಸ್ತೆ ನಿರ್ಮಾಣ

|
Google Oneindia Kannada News

ಕಠ್ಮಂಡು, ಮೇ 25: ಭಾರತದ ಪ್ರದೇಶಗಳನ್ನೂ ಸೇರಿಸಿ ಹೊಸ ಗಡಿ ನಕ್ಷೆ ಬಿಡುಗಡೆ ಮಾಡಿದ್ದ ನೇಪಾಳ ಈಗ ಮತ್ತೊಂದು ಆಘಾತಕಾರಿ ಹೆಜ್ಜೆ ಇಟ್ಟಿದೆ.

Recommended Video

ಕೊಹ್ಲಿ, ಸ್ಮಿತ್ ದಾಖಲೆಯನ್ನು ಧೂಳೀಪಟ ಮಾಡಿದ ಪರಾಸ್ ಖಡ್ಕ | Oneindia Kannada

ಗಡಿಭಾಗದ ಲಿಪುಲೇಖ್, ಕಾಲಾಪಾನಿ ಲಿಂಪಿಯಾಧುರ ಭೂಪ್ರದೇಶಗಳನ್ನೂ ಒಳಗೊಂಡಿರುವ ನಕ್ಷೆ ಬಿಡುಗಡೆ ಮಾಡಿ ವಿವಾದಕ್ಕೆ ನಾಂದಿ ಹಾಡಿದ್ದ ನೇಪಾಳ ಈಗ ಚೀನಾಕ್ಕೆ ರಸ್ತೆ ನಿರ್ಮಾಣ ಮಾಡತೊಡಗಿದೆ.

ಲಿಪುಲೇಖ್ ಪ್ರದೇಶವನ್ನು ಸಂಪರ್ಕಿಸುವ ಉತ್ತರಾಖಂಡ್ ದಾರ್ಚುಲಾ ಪ್ರದೇಶದಲ್ಲಿನ ರಸ್ತೆ ಕಾಮಗಾರಿ ಬಗ್ಗೆ ಭಾರತೀಯ ರಾಯಭಾರಿ ವಿನಯ್ ಮೋಹನ್ ಕ್ವಾತ್ರಾ ಜೊತೆಗೆ ನೇಪಾಳ ವಿದೇಶಾಂಗ ಸಚಿವ ಪ್ರದೀಪ್ ಕುಮಾರ್ ಗ್ಯಾವಾಲಿ ಚರ್ಚೆ ನಡೆಸಿದ್ದಾರೆ. ಈ ಬೆನ್ನಲ್ಲೇ 12 ವರ್ಷಗಳಿಂದ ಸ್ಥಗಿತಗೊಂಡಿದ್ದ ರಸ್ತೆ ನಿರ್ಮಾಣ ಕಾಮಗಾರಿಗೆ ನೇಪಾಳ ಚಾಲನೆ ನೀಡಿದೆ.

ಇದಪ್ಪಾ ವರಸೆ! ಭಾರತ-ನೇಪಾಳದ ನಡುವೆ ಚೀನಾಗೇನು ಕೆಲಸ?ಇದಪ್ಪಾ ವರಸೆ! ಭಾರತ-ನೇಪಾಳದ ನಡುವೆ ಚೀನಾಗೇನು ಕೆಲಸ?

12 ವರ್ಷಗಳ ಬಳಿಕ ಚೀನಾ ಗಡಿಗೆ ಸಂಪರ್ಕ: ನೇಪಾಳ- ಚೀನಾ ಗಡಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ನಿರ್ಮಾಣ ಕಾರ್ಯವನ್ನು ಆರಂಭಿಸಲಾಗಿದೆ. 2008ರಲ್ಲಿ ಟಿಂಕಾರ್ ಪಾಸ್ ನಿರ್ಮಾಣದ ವೇಳೆ ಪ್ರತಿಕೂಲ ಹವಾಮಾನ, ಪ್ರತಿಕೂಲ ಸನ್ನಿವೇಶ ಎದುರಾಗಿದ್ದರಿಂದ ರಸ್ತೆ ನಿರ್ಮಾಣವನ್ನು ಸ್ಥಗಿತಗೊಳಿಸಲಾಗಿತ್ತು. 2015ರಲ್ಲಿ ಭಾರತ ಹಾಗೂ ಚೀನಾ ನಡುವಿನ ರಸ್ತೆ ಸಂಪರ್ಕಕ್ಕೆ ಕೊಂಡಿಯಾಗಲು ನಿರಾಕರಿಸಿದ್ದ ನೇಪಾಳ, ವಿರೋಧ ವ್ಯಕ್ತಪಡಿಸಿತ್ತು.

ಡಾರ್ಚುಲಾ-ಟಿಂಕರ್ ಪಾಸ್ ಮಾರ್ಗ

ಡಾರ್ಚುಲಾ-ಟಿಂಕರ್ ಪಾಸ್ ಮಾರ್ಗ

ಚೀನಾ ಗಡಿಗೆ ಸಂಪರ್ಕ ಕಲ್ಪಿಸುವ 130 ಕಿ.ಮೀ ಉದ್ದದ ಡಾರ್ಚುಲಾ-ಟಿಂಕರ್ ಹೆದ್ದಾರಿ ನಿರ್ಮಾಣ ಕಾರ್ಯಕ್ಕೆ ನೇಪಾಳ ಮರುಚಾಲನೆ ನೀಡಿದೆ. 2008 ರಲ್ಲಿ ಮಂಜೂರಾಗಿದ್ದ ರಸ್ತೆ ನಿರ್ಮಾಣ ಯೋಜನೆ, ಕಠಿಣ ಭೂಪ್ರದೇಶ ಹಾಗೂ ಹವಾಮಾನ ಪರಿಸ್ಥಿತಿಯಿಂದ ಕಾಮಗಾರಿಯನ್ನು ನಿಲ್ಲಿಸಲಾಗಿತ್ತು. ಕೇವಲ 43 ಕಿ.ಮೀ ತನಕ ರಸ್ತೆ ನಿರ್ಮಾಣ ಸಾಧ್ಯವಾಗಿತ್ತು.

87 ಕಿ.ಮೀ ರಸ್ತೆ ನಿರ್ಮಾಣದ ಗುರಿ

87 ಕಿ.ಮೀ ರಸ್ತೆ ನಿರ್ಮಾಣದ ಗುರಿ

ಈಗ ಬಾಕಿ ಉಳಿದಿರುವ 87 ಕಿ.ಮೀ ಉದ್ದದ ರಸ್ತೆ ನಿರ್ಮಾಣದ ಗುರಿಯನ್ನು ಇಟ್ಟುಕೊಂಡಿರುವ ನೇಪಾಳವು ಕಾರ್ಯಾಚರಣೆ ಆರಂಭಿಸಿದೆ. ಘಾಟಿಯಾಬಾಘಾರ್ ಎಂಬಲ್ಲಿ ನೇಪಾಳದ ಆರ್ಮಿ ತನ್ನ ಬೇಸ್ ಕ್ಯಾಂಪ್ ಸ್ಥಾಪಿಸಿದೆ. ರಸ್ತೆ ನಿರ್ಮಾಣಕ್ಕೆ ಚೀನಾ ನೆರವು ನೀಡುತ್ತಿರುವುದು ಬಹಿರಂಗ ಸತ್ಯವಾದರೂ ನೇಪಾಳ ಒಪ್ಪಿಕೊಳ್ಳಲು ತಯಾರಿಲ್ಲ.

ಭಾರತಕ್ಕೆ ಸೆಡ್ಡು, ಚೀನಾಕ್ಕೆ ರಸ್ತೆ ನಿರ್ಮಿಸುತ್ತಿರುವ ನೇಪಾಳ

ಭಾರತಕ್ಕೆ ಸೆಡ್ಡು, ಚೀನಾಕ್ಕೆ ರಸ್ತೆ ನಿರ್ಮಿಸುತ್ತಿರುವ ನೇಪಾಳ

ಚೀನಾದೊಂದಿಗೆ ವ್ಯಾಪಾರ ಸಂಬಂಧ ಗಟ್ಟಿಗೊಳಿಸುವ ನಿಟ್ಟಿನಲ್ಲಿ 12 ವರ್ಷಗಳ ಬಳಿಕ ಪುನರಾರಂಭಿಸುವುದು ಅನಿವಾರ್ಯ ಎಂದು ನೇಪಾಳ ಪ್ರಧಾನಿ ಕೆಪಿ ಶರ್ಮ ಓಲಿ ಹೇಳಿದ್ದಾರೆ.

ಈ ರಸ್ತೆ ನಿರ್ಮಾಣದಿಂದ ಟಿಂಕಾರ್, ಛಾಂಗ್ರು ಗ್ರಾಮದ ವಲಸಿಗರಿಗೆ ನೆರವಾಗಲಿದೆ. 2015ರಲ್ಲಿ ಕಾಲಾಪಾನಿ ಪ್ರದೇಶದಲಿ ಬರುವ ಲಿಪುಲೇಖ್ ಪಾಸ್ ಕುರಿತಂತೆ ಭಾರತ ಹಾಗೂ ಚೀನಾ ದ್ವಿಪಕ್ಷೀಯ ಒಪ್ಪಂದವನ್ನು ನೇಪಾಳದ ಪಿಎಂ ಓಲಿ ವಿರೋಧಿಸಿದ್ದರು.

ಭಾರತದ ರಸ್ತೆಗೆ ಸಮಾನಾಂತರವಾಗಿ ಹೆದ್ದಾರಿ

ಭಾರತದ ರಸ್ತೆಗೆ ಸಮಾನಾಂತರವಾಗಿ ಹೆದ್ದಾರಿ

ಭಾರತದ ಉತ್ತರಾಖಂಡ್ ರಾಜ್ಯದ ದಾರ್ಚುಲಾದಿಂದ ಲಿಪುಲೇಖ್ ಪಾಸ್ ಗೆ ಸಂಪರ್ಕ ಕಲ್ಪಿಸುವ 80 ಕಿ. ಮೀ ದೂರದ ರಸ್ತೆಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮೇ 8, 2020ರಂದು ಉದ್ಘಾಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಈಗ ಇದಕ್ಕೆ ಪ್ರತಿಯಾಗಿ ನೇಪಾಳ ತನ್ನ ನೆಲದಿಂದ ಚೀನಾಕ್ಕೆ ಸಂಪರ್ಕ ಕಲ್ಪಿಸಲು ಸಮಾನಾಂತರವಾಗಿ ರಸ್ತೆ ನಿರ್ಮಾಣದಲ್ಲಿ ತೊಡಗಿದೆ. ಗಡಿಭಾಗದ ಲಿಪುಲೇಖ್, ಕಾಲಾಪಾನಿ ಲಿಂಪಿಯಾಧುರ ಭೂಪ್ರದೇಶ ವಿವಾದವನ್ನು ಹಗುರವಾಗಿ ತೆಗೆದುಕೊಳ್ಳುವುದಿಲ್ಲ ಎಂದು ನೇಪಾಳ ಪ್ರಧಾನಿ ಓಲಿ ಹೇಳಿದ್ದಾರೆ.

English summary
The Nepalese government has restarted work on the 130-km long Darchula-Tinkar road project in Darchula district after 12 years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X