ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೇಪಾಳ ಪ್ರಧಾನಿ ಶರ್ಮಾಗೆ ಅನಾರೋಗ್ಯ ಆಸ್ಪತ್ರೆಗೆ ದಾಖಲು

|
Google Oneindia Kannada News

ಕಠ್ಮಂಡು,ಜುಲೈ 2: ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಒಲಿ ಅವರಿಗೆ ಅನಾರೋಗ್ಯ ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಧಾನಿ ಆಸ್ಪತ್ರೆಗೆ ದಾಖಲಾಗಿರುವುದು ಅವರ ನಿಯಮಿತ ಆರೋಗ್ಯ ತಪಾಸಣೆಯ ಒಂದು ಭಾಗವಾಗಿದೆ ಎಂದು ಪ್ರಧಾನಿ ಪತ್ರಿಕಾ ಸಲಹೆಗಾರ ಸೂರ್ಯ ಥಾಪಾ ಸಾಮಾಜಿಕ ಮಾಧ್ಯಮದಲ್ಲಿ ಟ್ವೀಟ್ ಮಾಡಿದ್ದಾರೆ.

ಒಲಿ ಕಠ್ಮಂಡುವಿನ ಸಾಹಿದ್ ಗಂಗಲಾಲ್ ರಾಷ್ಟ್ರೀಯ ಹೃದಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಧಾನಿ ಸಚಿವ ಸಂಪುಟ ಸಭೆ ಕರೆದುದ್ದು ಈ ವೇಳೆ ನೇಪಾಳ್ ಕಮ್ಯುನಿಟಿ ಪಾರ್ಟಿ ಒಲಿ ಅವರ ರಾಜೀನಾಮೆಗೆ ಒತ್ತಾಯಿಸಿತ್ತು.

Nepal Prime Minister KP Sharma Oli Hospitalised Due To Chest Pain

ಅಲ್ಲದೆ ನಿನ್ನೆ ಪ್ರಧಾನಿ ನಿವಾಸದಲ್ಲಿ ನಡೆದಿದ್ದ ಆಡಳಿತ ಪಕ್ಷದ ಸ್ಥಾಯಿ ಸಮಿತಿ ಸಭೆಯಲ್ಲಿ ನೇಪಾಳ ಮಾಜಿ ಪ್ರಧಾನಿ ಪುಷ್ಪ ಕಮಲ್ ದಹಾಲ್ ಪ್ರಚಂಡ ಒಲಿ ಅವರ ಭಾರತದ ಕುರಿತಾದ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು.

ಕಳೆದ ಮಾರ್ಚ್ ತಿಂಗಳಿನಲ್ಲಿ ಕೂಡ ಶರ್ಮಾ ಅವರು ತ್ರಿಭುವನ್ ಯೂನಿವರ್ಸಿಟಿ ಟೀಚಿಂಗ್ ಆಸ್ಪತ್ರೆಗೆ ದಾಖಲಾಗಿದ್ದರು. ಅವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ. ಹಾಗೆಯೇ ಒಲಿ ಅವರು ಕಳೆದ ವರ್ಷ ಸಿಂಗಾಪುರಕ್ಕೆ ತೆರಳಿ ಪ್ಲಾಸ್ಮಾಫೆರಿಸಿಸ್ ಮಾಡಿಸಿದ್ದರು.

English summary
Nepal Prime Minister KP Sharma Oli was on Wednesday hospitalised in Sahid Gangalal National Heart Center in Kathmandu after he complained of chest pain.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X