ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಓಮಿಕ್ರಾನ್‌ ಆತಂಕ: ನೇಪಾಳದಲ್ಲಿ 67 ದೇಶದಿಂದ ಆಗಮಿಸುವವರಿಗೆ 2 ವಾರ ಕ್ವಾರಂಟೈನ್‌ ಕಡ್ಡಾಯ

|
Google Oneindia Kannada News

ಕಠ್ಮಂಡು, ಡಿಸೆಂಬರ್‌ 19: ದಕ್ಷಿಣ ಆಫ್ರಿಕಾದಲ್ಲಿ ಮೊದಲು ಪತ್ತೆಯಾದ ಕೊರೊನಾ ವೈರಸ್‌ನ ಹೊಸ ರೂಪಾಂತರ ಓಮಿಕ್ರಾನ್‌ ಈಗ ವಿಶ್ವದ ಹಲವಾರು ದೇಶಗಳಲ್ಲಿ ಹರಡಿದೆ. ಈ ನಡುವೆ ಓಮಿಕ್ರಾನ್‌ ಹಿನ್ನೆಲೆಯಿಂದಾಗಿ ನೇಪಾಳ ಸರ್ಕಾರವು 67 ವಿವಿಧ ದೇಶಗಳಿಂದ, ಮುಖ್ಯವಾಗಿ ಯುರೋಪಿಯನ್ ಮತ್ತು ಆಫ್ರಿಕನ್ ದೇಶಗಳಿಂದ ಆಗಮಿಸುವ ಪ್ರಯಾಣಿಕರಿಗೆ ಎರಡು ವಾರಗಳ ಕ್ವಾರಂಟೈನ್‌ ಅನ್ನು ಕಡ್ಡಾಯಗೊಳಿಸಿದೆ.

ಈ ಬಗ್ಗೆ ನೇಪಾಳದ ಗೃಹ ವ್ಯವಹಾರಗಳ ಸಚಿವಾಲಯವು ಹೇಳಿಕೆಯನ್ನು ಬಿಡುಗಡೆ ಮಾಡಿದೆ. "ಈ ಪಟ್ಟಿಯಲ್ಲಿ ಇರುವ 67 ದೇಶಗಳಿಂದ ಆಗಮಿಸುವ ಪ್ರಯಾಣಿಕರು ತಮ್ಮ ಸ್ವಂತ ಖರ್ಚಿನಲ್ಲಿ 7 ದಿನಗಳ ಕಾಲ ಹೋಟೆಲ್ ಕ್ವಾರಂಟೈನ್‌ನಲ್ಲಿ ಉಳಿಯ ಬೇಕು ಎಂದು ವಿನಂತಿಸುತ್ತೇವೆ. ಹಾಗೆಯೇ ಏಳು ದಿನಗಳ ಹೋಟೆಲ್ ಕ್ವಾರಂಟೈನ್‌ ಮುಗಿದ ಬಳಿಕ ಮತ್ತೆ ಆರ್‌ಟಿ-ಪಿಸಿಆರ್‌ ಪರೀಕ್ಷೆಗೆ ಒಳಪಟ್ಟು, ಕೋವಿಡ್‌ ನೆಗೆಟಿ‌ವ್‌ ಬಂದರೆ ಮತ್ತೆ ಏಳು ದಿನಗಳ ಕಾಲ ಹೋಮ್ ಕ್ವಾರಂಟೈನ್‌ನಲ್ಲಿ ಇರಬೇಕು," ಎಂದು ಹೇಳಿಕೆಯಲ್ಲಿ ನೇಪಾಳದ ಗೃಹ ವ್ಯವಹಾರಗಳ ಸಚಿವಾಲಯವು ತಿಳಿಸಿದೆ.

ಓಮಿಕ್ರಾನ್‌ ಆತಂಕ: ಬೂಸ್ಟರ್‌ ಶಾಟ್‌ ಬಗ್ಗೆ ಶೀಘ್ರ ನಿರ್ಧಾರ ಎಂದ ನೀತಿ ಆಯೋಗಓಮಿಕ್ರಾನ್‌ ಆತಂಕ: ಬೂಸ್ಟರ್‌ ಶಾಟ್‌ ಬಗ್ಗೆ ಶೀಘ್ರ ನಿರ್ಧಾರ ಎಂದ ನೀತಿ ಆಯೋಗ

"ಇನ್ನು 7 ದಿನಗಳ ಕಾಲ ಹೋಟೆಲ್ ಕ್ವಾರಂಟೈನ್‌ ಬಳಿಕ ಆರ್‌ಟಿ-ಪಿಸಿಆರ್ ಪರೀಕ್ಷೆಯನ್ನು ನಡೆಸಿದಾಗ ಕೋವಿಡ್‌ ಪಾಸಿಟಿವ್‌ ಬಂದರೆ ಬಳಿಕ ಆ ವ್ಯಕ್ತಿಯು ಪ್ರತ್ಯೇಕ ಕೇಂದ್ರ ಅಥವಾ ಆಸ್ಪತ್ರೆಗೆ ದಾಖಲಾಗಬೇಕು ಎಂದು ಮನವಿ," ಎಂದು ಕೂಡಾ ನೇಪಾಳದ ಗೃಹ ವ್ಯವಹಾರಗಳ ಸಚಿವಾಲಯ ಹೇಳಿಕೆಯಲ್ಲಿ ಉಲ್ಲೇಖ ಮಾಡಿದೆ.

Nepal makes 2-week quarantine mandatory for travelers arriving from 67 nations

"ಮೊದಲು ಆಫ್ರಿಕನ್ ದೇಶಗಳಲ್ಲಿ ಕಂಡುಬಂದ ಕೊರೊನಾ ವೈರಸ್‌ನ ಹೊಸ ರೂಪಾಂತರ ಓಮಿಕ್ರಾನ್‌ ಈಗ ಹರಡುತ್ತಿದೆ. ಬಳಿಕ ಯುರೋಪಿಯನ್ ಮತ್ತು ಏಷ್ಯನ್ ದೇಶಗಳಲ್ಲಿ ಕೂಡಾ ಈ ಓಮಿಕ್ರಾನ್‌ ಹರಡಿದೆ. ಈ ಎಲ್ಲಾ ಬೆಳವಣಿಗೆಯ ಹಿನ್ನೆಲೆಯಿಂದಾಗಿ ನೇಪಾಳದಿಂದ ತೆರಳುವ ಹಾಗೂ ನೇಪಾಳಕ್ಕೆ ಆಗಮಿಸುವ ಜನರಿಗೆ ನಿಯಮವನ್ನು ಕಡ್ಡಾಯಗೊಳಿಸಲು ನಿರ್ಧಾರವನ್ನು ನವೆಂಬರ್‌ 29, 2021 ರಂದು ಕೈಗೊಳ್ಳಲಾಗಿದೆ," ಎಂದು ಹೇಳಿದೆ.

ಯಾವೆಲ್ಲಾ ದೇಶಗಳಿಂದ ಆಗಮಿಸುವವರಿಗೆ ನೇಪಾಳದಲ್ಲಿ ಕ್ವಾರಂಟೈನ್‌ ಕಡ್ಡಾಯ ಮಾಡಲಾಗಿದೆ ಎಂಬ ಪಟ್ಟಿ ಈ ಕೆಳಗಿದೆ ನೋಡಿ...

Nepal makes 2-week quarantine mandatory for travelers arriving from 67 nations

ಇನ್ನು ಈ ನಿರ್ಬಂಧ ಹೇರಲಾದ ದೇಶಗಳನ್ನು ಹೊರತುಪಡಿಸಿ ಇತರ ದೇಶದ ಪ್ರಯಾಣಿಕರು ನೇಪಾಳಕ್ಕೆ ಆಗಮಿಸುವ ಹಾಗೂ ನೇಪಾಳದಿಂದ ತೆರಳುವ ವೇಳೆ ಈ ಕ್ವಾರಂಟೈನ್‌ ಕಡ್ಡಾಯವಾಗಿರುವುದಿಲ್ಲ ಎಂದು ವರದಿಯು ಉಲ್ಲೇಖ ಮಾಡಿದೆ.

ನವೆಂಬರ್ 25 ರಂದು ದಕ್ಷಿಣ ಆಫ್ರಿಕಾದಲ್ಲಿ ಕೊರೊನಾ ವೈರಸ್‌ ಸೋಂಕಿನ ಹೊಸ ರೂಪಾಂತರ ಕಾಣಿಸಿಕೊಂಡಿದೆ. ವಿಶ್ವ ಆರೋಗ್ಯ ಸಂಸ್ಥೆಯ ವರದಿ ಪ್ರಕಾರ, ಮೊದಲು ದೃಢಪಟ್ಟ ಈ B.1.1.529 ವೈರಸ್‌ ಈ ವರ್ಷದ ನವೆಂಬರ್ 9 ರಂದು ಸಂಗ್ರಹಿಸಲಾದ ಮಾದರಿಯಿಂದ ದೃಢಪಟ್ಟಿದೆ. ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ ಈ ಹೊಸ ರೂಪಾಂತರಕ್ಕೆ ವಿಶ್ವ ಆರೋಗ್ಯ ಸಂಸ್ಥೆಯು ಓಮಿಕ್ರಾನ್‌ ಎಂದು ಹೆಸರಿರಿಸಿದೆ. ಪ್ರಸ್ತುತ ಈ ರೂಪಾಂತರವು ವಿಶ್ವದ ಹಲವಾರು ದೇಶಗಳಲ್ಲಿ ಹರಡಿಸಿದೆ. ಈ ಓಮಿಕ್ರಾನ್‌ ಹಿನ್ನೆಲೆಯಿಂದಾಗಿ ಈಗಾಲೇ ಹಲವು ದೇಶಗಳು ಪ್ರಯಾಣ ಮಾರ್ಗಸೂಚಿಯನ್ನು ಬಿಗಿಗೊಳಿಸಿದೆ.

ಕೋವಿಡ್ ರೂಪಾಂತರಿ ವೈರಸ್ ಸಮುದಾಯಕ್ಕೆ ಹಬ್ಬಿರುವ ದೇಶಗಳಲ್ಲಿ ಡೆಲ್ಟಾಗಿಂತ ವೇಗವಾಗಿ ಹರಡುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಜಗತ್ತಿನಲ್ಲಿಯೇ ತಲ್ಲಣ ಉಂಟು ಮಾಡಿರುವ ಓಮಿಕ್ರಾನ್ ಕುರಿತು ಇತ್ತೀಚಿನ ಮಾಹಿತಿ ನೀಡಿರುವ ವಿಶ್ವ ಆರೋಗ್ಯ ಸಂಸ್ಥೆ, ಹೆಚ್ಚು ಓಮಿಕ್ರಾನ್ ಪ್ರಕರಣ ಪತ್ತೆಯಾಗಿರುವ ದೇಶಗಳಲ್ಲಿ 1.5 ರಿಂದ 3 ದಿನದಲ್ಲಿ ಸೋಂಕು ವೇಗವಾಗಿ ಹಬ್ಬುತ್ತಿದೆ ಎಂದು ಹೇಳಿದೆ. ಕೋವಿಡ್ ರೂಪಾಂತರಿ ವೈರಸ್ ಡೆಲ್ಟಾಗಿಂತ ವೇಗವಾಗಿ ಓಮಿಕ್ರಾನ್ ಹರಡುತ್ತಿದೆ. ಅಮೆರಿಕದಲ್ಲಿ ಕಳೆದ ತಿಂಗಳಿಗೆ ಹೋಲಿಕೆ ಮಾಡಿದರೆ ಆಸ್ಪತ್ರೆಗೆ ದಾಖಲಾಗುವ ಕೋವಿಡ್ ಸೋಂಕಿತರ ಸಂಖ್ಯೆ ಶೇ 45ರಷ್ಟು ಏರಿಕೆಯಾಗಿದೆ ಎಂದು ತಿಳಿಸಿದೆ.

(ಒನ್‌ಇಂಡಿಯಾ ಸುದ್ದಿ)

English summary
Nepal makes 2-week quarantine mandatory for travelers arriving from 67 nations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X