ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ- ನೇಪಾಳ ನಡುವಿನ 108 ಕಿ.ಮೀ ಗಡಿ ರಸ್ತೆ ಸಾರ್ವಜನಿಕರಿಗೆ ಮುಕ್ತ

|
Google Oneindia Kannada News

ನವದೆಹಲಿ, ಫೆಬ್ರವರಿ 7: ಭಾರತ- ನೇಪಾಳ ನಡುವಿನ 108 ಕಿ.ಮೀಗಳ ಗಡಿ ಭಾಗದ ಹೊಸ ರಸ್ತೆ ಇದೀಗ ಸಾರ್ವಜನಿಕರಿಗೆ ಮುಕ್ತವಾಗಿದೆ. ಈ ರಸ್ತೆಯನ್ನು ಭಾರತ ಹಾಗೂ ನೇಪಾಳ ಜಂಟಿಯಾಗಿ ಉದ್ಘಾಟಿಸಿದೆ ಎಂದು ಭಾರತೀಯ ರಾಯಭಾರ ಕಚೇರಿ ಪ್ರಕಟಿಸಿದೆ.

ಭಾರತದ ಅನುದಾನದ ನೆರವಿನಿಂದ ನಿರ್ಮಾಣಗೊಂಡಿರುವ ಈ ರಸ್ತೆಯು ಭಾರತದ ಗಡಿಯ ಲಕ್ಷ್ಮಿಪುರ್-ಬಲಾರಾದಿಂದ ಸರ್ಲಾಹಿಜ ಜಿಲ್ಲೆಯ ಗಧೈಯಾವರೆಗೆ ಇದೆ. ಹೊಸದಾಗಿ ಡಾಂಬರೀಕರಣವಾದ ರಸ್ತೆಯನ್ನು ಭಾರತದ ಕಾನ್ಸುಲೇಟ್ ಜನರಲ್ ನಿತೇಶ್ ಕುಮಾರ್, ಚಂದ್ರನಿಗಪುರ ರಸ್ತೆ ವಿಭಾಗದ ಮುಖ್ಯಸ್ಥ ಬಿನೋದ್ ಹಾಗೂ ಬುರ್ಗುಂಜ್ ಅವರು ಉಪಸ್ಥಿತರಿದ್ದರು.

ಭಾರತಕ್ಕೆ ಸೆಡ್ಡು, ಚೀನಾ ಸಂಪರ್ಕಕ್ಕೆ ನೇಪಾಳದಿಂದ ರಸ್ತೆ ನಿರ್ಮಾಣಭಾರತಕ್ಕೆ ಸೆಡ್ಡು, ಚೀನಾ ಸಂಪರ್ಕಕ್ಕೆ ನೇಪಾಳದಿಂದ ರಸ್ತೆ ನಿರ್ಮಾಣ

ಈ ರಸ್ತೆ ನಿರ್ಮಾಣಕ್ಕೆ ಭಾರತದಿಂದ 4.4 ಕೋಟಿ ರು ಅನುದಾನ ಸಿಕ್ಕಿದೆ. ಮೇ 8ರಂದು ಉತ್ತರಾಖಂಡ್ ಜಿಲ್ಲೆಯ ಧಾರ್ಚುಲಾದಿಂದ ಲಿಪುಲೇಖ್ ಪಾಸ್ ಸಂಪರ್ಕಿಸುವ 80 ಕಿ.ಮೀ ಉದ್ದದ ರಸ್ತೆಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಲೋಕಾರ್ಪಣೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

Nepal, India jointly inaugurate road link connecting Indo-Nepal border

ಇದಕ್ಕೆ ಪ್ರತಿಯಾಗಿ ನೇಪಾಳ ತನ್ನ ನೆಲದಿಂದ ಚೀನಾಕ್ಕೆ ಸಂಪರ್ಕ ಕಲ್ಪಿಸಲು ಸಮಾನಾಂತರವಾಗಿ ರಸ್ತೆ ನಿರ್ಮಾಣದಲ್ಲಿ ತೊಡಗಿದೆ. ಗಡಿಭಾಗದ ಲಿಪುಲೇಖ್, ಕಾಲಾಪಾನಿ ಲಿಂಪಿಯಾಧುರ ಭೂಪ್ರದೇಶ ವಿವಾದವನ್ನು ಹಗುರವಾಗಿ ತೆಗೆದುಕೊಳ್ಳುವುದಿಲ್ಲ ಎಂದು ಅಂದಿನ ನೇಪಾಳ ಪ್ರಧಾನಿ ಓಲಿ ಹೇಳಿದ್ದರು.

English summary
Nepal and India jointly inaugurated a newly-constructed 108-kilometer road that connects the Indian border with several areas of the Himalayan nation on Tuesday, the Indian embassy here said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X