ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀರಾಮನ ಬಗ್ಗೆ ಓಲಿ ಹೇಳಿಕೆ: ಸ್ಪಷ್ಟನೆ ಕೊಟ್ಟ ನೇಪಾಳ ಸರ್ಕಾರ

|
Google Oneindia Kannada News

ಕಠ್ಮಂಡು, ಜುಲೈ 14: ಶ್ರೀರಾಮನ ಮೂಲದ ಬಗ್ಗೆ ಎಡವಟ್ಟು ಹೇಳಿಕೆ ನೀಡಿ, ಟೀಕೆಗೊಳಗಾಗಿದ್ದ ನೇಪಾಳದ ಪ್ರಧಾನಿ ಕೆಪಿ ಓಲಿ ಬಗ್ಗೆ ನೇಪಾಳ ಸರ್ಕಾರವೀಗ ಸ್ಪಷ್ಟನೆ ನೀಡಿದೆ.

Recommended Video

Swathi Radar ಎಂದರೇನು ? | Oneindia Kannada

ನೇಪಾಳ ಪ್ರಧಾನಿ ಹೇಳಿಕೆ ಕುರಿತು ಭಾರತದಲ್ಲಿ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ನೇಪಾಳ ವಿದೇಶಾಂಗ ಇಲಾಖೆ ಮಧ್ಯ ಪ್ರವೇಶಿಸಿ ಸ್ಪಷ್ಟನೆಯ ಹೇಳಿಕೆ ಬಿಡುಗಡೆ ಮಾಡಿದೆ.

ಕೋವಿಡ್ 19: ನೇಪಾಳ ಪಿಎಂ ಓಲಿಯಿಂದ ಭಾರತ ವಿರುದ್ಧ ಆರೋಪಕೋವಿಡ್ 19: ನೇಪಾಳ ಪಿಎಂ ಓಲಿಯಿಂದ ಭಾರತ ವಿರುದ್ಧ ಆರೋಪ

ಭಾರತೀಯರು ಅಥವಾ ಧಾರ್ಮಿಕ ಭಾವನೆಗಳಿಗೆ, ಧಕ್ಕೆ ಉಂಟು ಮಾಡುವ ಯಾವುದೇ ಉದ್ದೇಶವಿಲ್ಲ, ಓಲಿ ಆ ರೀತಿಯ ಹೇಳಿಕೆ ನೀಡಿಲ್ಲ, ಹಾಗೆಯೇ ಹಾಲಿ ರಾಜಕೀಯ ಪರಿಸ್ಥಿತಿಗೂ ಈ ಹೇಳಿಕೆಗೂ ಸಂಬಂಧವೂ ಇಲ್ಲ. ರಾಮನ ಮೂಲ ಹಾಗೂ ರಾಮಾಯಣದ ಬಗ್ಗೆ ಸಾಕಷ್ಟು ಪುರಾಣದ ಕತೆಗಳಿವೆ, ಹೀಗಾಗಿ ಪ್ರಧಾನಿಯವರು ಸಾಂದರ್ಭಿಕವಾಗಿ ಇಂತಹ ಹೇಳಿಕೆ ನೀಡಿದ್ದಾರೆ ಎಂದು ನೇಪಾಳದ ವಿದೇಶಾಂಗ ಇಲಾಖೆ ಸ್ಪಷ್ಟನೆ ನೀಡಿದೆ.

Nepal In Damage Control After Oli’s Ramayana Fiasco

ಭಾರತ ಹಾಗೂ ನೇಪಾಳ ಸರ್ಕಾರಗಳ ಮೇಲುಸ್ತುವಾರಿಯಲ್ಲೇ ಪ್ರತಿ ವರ್ಷ ವಿವಾಹ ಪಂಚಮಿ ಕಾರ್ಯಕ್ರಮ ನಡೆಯುತ್ತಿದ್ದು, ಜನಕಪುರದಿಂದ ಅಯೋಧ್ಯೆವರೆಗೆ ದಿಬ್ಬಣದ ಮೆರವಣಿಗೆ ನಡೆಸಲಾಗುತ್ತಿದೆ.

2018ರಲ್ಲಿ ಉಭಯ ದೇಶಗಳ ಪ್ರಧಾನಿಗಳು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ನೇಪಾಳವು ಬೇರೆಯವರ ಭಾವನೆಗಳನ್ನು ಗೌರವಿಸುತ್ತದೆ, ಹೀಗಾಗಿ ಪ್ರಧಾನಿಯವರ ಹೇಳಿಕೆಗೆ ರಾಜಕೀಯ ಬಣ್ಣ ಬಳಿಯುವ ಅಗತ್ಯವಿಲ್ಲವೆಂದು ನೇಪಾಳ ಹೇಳಿದೆ.

'ರಾಮನ ಮೂಲ ಅಯೋಧ್ಯೆಯಲ್ಲ, ಬದಲಾಗಿ ನೇಪಾಳದ ಬೀರ್‌ಗುಂಜ್ ಆಗಿದೆ. ರಾಮ ಭಾರತೀಯನಲ್ಲ ನೇಪಾಳದವರು' ಎಂದು ಓಲಿ ಹೇಳಿಕೆ ನೀಡಿದ್ದರು. ಈ ಹೇಳಿಕೆ ಬಗ್ಗೆ ಭಾರತದಲ್ಲಿ ಆಕ್ರೋಶವೂ ವ್ಯಕ್ತವಾಗಿತ್ತು, ಗೇಲಿ ಮಾಡಲಾಗಿತ್ತು.

English summary
Kathmandu has issued a clarification over Nepal prime minister KP Sharma Oli’s controversial claim that Hindu deity Ram was born in the Himalayan country and the real Ayodhya, believed to be his birthplace, was not located in the Indian state of Uttar Pradesh but was in Nepal. His claims have been widely condemned both inside Nepal and in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X