ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎವರೆಸ್ಟ್ ಹಿಮಪಾತಕ್ಕೆ ಅನೇಕ ಸಾಹಸಿಗಳು ಬಲಿ

By Mahesh
|
Google Oneindia Kannada News

ಕಠ್ಮಂಡು, ಏ.26: ವಿಶ್ವದ ಅತಿ ಎತ್ತರದ ಪರ್ವತ ಎವರೆಸ್ಟ್ ಏರಲು ಮುಂದಾಗಿದ್ದ ಸಾಹಸಿಗಳು ಎವರೆಸ್ಟ್ ಪಾದಕ್ಕೆ ಅರ್ಪಿತವಾಗಿದ್ದಾರೆ. ಬೇಸ್ ಕ್ಯಾಂಪ್ ಮೇಲೆ ಸತತವಾಗಿ ಸುರಿದ ಭಾರಿ ಹಿಮಪಾತಕ್ಕೆ ಸುಮಾರು 65ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.

ಅತ್ತ ನೇಪಾಳದಲ್ಲಿ ಭೂಕಂಪ ಹಾಗೂ ಕಂಪನದ ನಂತರ ಪರಿಣಾಮಗಳಿಂದ 2ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರೆ ಇತ್ತ ಸೋಲೋಕುಂಬು ಕಣಿವೆಯಲ್ಲಿರುವ ಎವರೆಸ್ಟ್ ಪರ್ವತ ಶ್ರೇಣಿಯಲ್ಲಿ ಹಿಮಪಾತಕ್ಕೆ ಸಿಲುಕಿ ಪರ್ವತಾರೋಹಿಗಳು ಅಸುನೀಗುತ್ತಿದ್ದಾರೆ.

ಶನಿವಾರದ ಹಿಮಪಾತಕ್ಕೆ ಸಿಲುಕಿ ಸುಮಾರು 17 ಮಂದಿ ಪರ್ವತಾರೋಹಿಗಳು ಜೀವ ಕಳೆದುಕೊಂಡಿರುವ ಸುದ್ದಿ ಬಂದಿತ್ತು. ಸಮುದ್ರ ಮಟ್ಟದಿಂದ ಸುಮಾರು 5,400 ಮೀಟರ್ ಎತ್ತರದಲ್ಲಿ ಕ್ಯಾಂಪ್ (EBC) ಮಾಡಿದ್ದ ಪರ್ವತಾರೋಹಿಗಳ ಮೇಲೆ ಭಾರಿ ಪ್ರಮಾಣದಲ್ಲಿ ಹಿಮಪಾತವಾಗಿದೆ. [ನೇಪಾಳ, ಭಾರತ ಭೂಕಂಪ ಪೀಡಿತರಿಗೆ ಸಹಾಯವಾಣಿ]

Nepal Earthquake: Avalanche in Mount Everest kills many

ಏಪ್ರಿಲ್ ಮೇ ತಿಂಗಳು ಎವರೆಸ್ಟ್ ಏರುವ ಪರ್ವಕಾಲ. ಜೊತೆಗೆ ಹಿಮಪಾತದ ಅಂಜಿಕೆಯೂ ಇರುತ್ತದೆ. ಅದರೆ, ಈಗ ದೊಡ್ಡ ಪ್ರಮಾಣದಲ್ಲಿ ಹಿಮಪಾತವಾಗಿ ಪರ್ವತಾರೋಹಿಗಳ ಗಂಡೆದೆಯನ್ನು ನಡುಗಿಸಿದೆ. [ಗೂಗಲ್ ಬಳಸಿ ನಿಮ್ಮವರ ಹುಡುಕಾಟ ನಡೆಸಿ]

ಭಾರತೀಯ ಸೇನೆ: 34ಜನರಿದ್ದ ಭಾರತೀಯ ಸೇನೆಯ ತಂಡ ಮೌಂಟ್ ಎವರೆಸ್ಟ್ ಪರ್ವತ ಏರಲು ಮುಂದಾಗಿತ್ತು. ಉಳಿದಂತೆ ಚೀನೀಯರು, ಕೆಲ ಯುರೋಪಿಯನ್ನರು, ಸ್ಥಳೀಯ ಶೆರ್ಪಾಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಇಂಗ್ಲೆಂಡಿನ ಡೇನಿಯಲ್ ರಿಂದ ಸತತ ಮಾಹಿತಿ ಲಭ್ಯವಾಗುತ್ತಿದೆ. [ಚಿತ್ರಸುದ್ದಿ : ಏಕೋ ಈ ಕೋಪ ಶಂಕರ, ಶಿವಶಂಕರ]

ಬೆಂಗಳೂರಿನ ಜೆಪಿ ನಗರ ನಿವಾಸಿ ಸಿಎಂ ಪ್ರವೀಣ್ ಎಂಬ ಯುವಕ ಎವರೆಸ್ಟ್ ಶ್ರೇಣಿ ಏರಲು ಬಂದಿದ್ದು,ಇಲ್ಲಿ ತನಕ ಆತನ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಸಾವನ್ನಪ್ಪಿರುವ 65 ಮಂದಿಗಳ ಪೈಕಿ ಪ್ರವೀಣ್ ಹೆಸರಿರುವ ಸಾಧ್ಯತೆ ಹೆಚ್ಚಿದೆ. ಪ್ರವೀಣ್ ಸಾಹಸಕ್ಕೆ ಮೆಚ್ಚಿ ಕರ್ನಾಟಕ ಸರ್ಕಾರ ಲಕ್ಷಾಂತರ ಮೊತ್ತದ ಪರಿಹಾರ ಧನವನ್ನು ಘೋಷಿಸಿದೆ. [ಎವರೆಸ್ಟ್ ಏರಿದ ಆಂಧ್ರದ ಕಿರಿಯ ಸಾಹಸಿ]

Mount Everest

ಗೂಗಲ್ ಸಿಬ್ಬಂದಿ ದುರ್ಮರಣ: ಎವರೆಸ್ಟ್ ಪರ್ವತ ಶ್ರೇಣಿಯಲ್ಲಿ ಸಂಭವಿಸಿದ ಹಿಮಪಾತದಲ್ಲಿ ಗೂಗಲ್ ಸಂಸ್ಥೆಯ ಸಿಬ್ಬಂದಿ ಡಾನ್ ಫ್ರೆಡಿಂಗ್ ಬರ್ಗ್ ಎಂಬುವರು ಸಾವನ್ನಪ್ಪಿದ್ದಾರೆ. ಕ್ಯಾಲಿಫೋರ್ನಿಯಾ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಡಾನ್ ಅವರ ಜೊತೆ ಇನ್ನೂ ಮೂರು ಜನ ಸಿಬ್ಬಂದಿ ಎಬಿಸಿ ಕಡೆಗೆ ತೆರಳಿದ್ದರು. ಈ ಪೈಕಿ ಡಾನ್ ಮೃತಪಟ್ಟಿದ್ದರೆ ಉಳಿದ ಮೂವರು ಸುರಕ್ಷಿತರಾಗಿದ್ದಾರೆ ಎಂದು ಗೂಗಲ್ ತಿಳಿಸಿದೆ.

ಇಂಗ್ಲೆಂಡಿನ ಡೇನಿಯಲ್ ರಿಂದ ಸತತ ಮಾಹಿತಿ ರವಾನೆ, ನೆರವಿಗಾಗಿ ಪ್ರಾರ್ಥನೆ


ಎವರೆಸ್ಟ್ ಬೇಸ್ ಕ್ಯಾಂಪಿನಿಂದ ಪರ್ವತ ಏರಲು ಸಿದ್ದವಾಗಿದ್ದ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ಕ್ಯಾಂಪ್ 1 ರಲ್ಲೇ ಸ್ಥಗಿತಗೊಂಡ ಯೋಜನೆ.

ರೋಮಾನಿಯಾದ ಪರ್ವತಾರೋಹಿ ಅಲೆಕ್ಸ್ ಗಾವನ್ ಟ್ವೀಟ್ ಅಪ್ಡೇಟ್ಸ್

ಎವರೆಸ್ಟ್ ಹಿಮಪಾತದ ಸಣ್ಣ ಝಲಕ್ ಇಲ್ಲಿದೆ:

English summary
Nepal Earthquake: A day after the massive earthquake in Nepal and adjoining and northern states of India, it has been confirmed that Google executive was killed on Mount Everest on Saturday, April 25. The death toll increased to more than 65.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X