ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೌಂಟ್ ಎವರೆಸ್ಟ್ ಸ್ವಚ್ಛತಾ ಅಭಿಯಾನ, 3,000 ಕೆಜಿ ತ್ಯಾಜ್ಯ ಸಂಗ್ರಹ

|
Google Oneindia Kannada News

ಕಠ್ಮಂಡು, ಏಪ್ರಿಲ್ 29: ನೇಪಾಳದಲ್ಲಿ ಹೊಸ ವರ್ಷದ ಆಚರಣೆಯ ಅಂಗವಾಗಿ ಈ ಬಾರಿ ಕೂಡಾ ಮೌಂಟ್ ಎವರೆಸ್ಟ್ ಪರ್ವತ ಶ್ರೇಣಿಯಲ್ಲಿ ಸ್ವಚ್ಛತಾ ಕಾರ್ಯವನ್ನು ಇಲ್ಲಿನ ಪ್ರವಾಸೋದ್ಯಮ ಇಲಾಖೆ ಹಮ್ಮಿಕೊಂಡಿದೆ. ಏಪ್ರಿಲ್ 14ರಿಂದ ಇಲ್ಲಿ ತನಕ ಸರಿ ಸುಮಾರು 3,000 ಕೆಜಿ ಘನ ತ್ಯಾಜ್ಯ ಸಂಗ್ರಹಿಸಲಾಗಿದೆ.

ಏಪ್ರಿಲ್ 14ರಿಂದ 45 ದಿನಗಳ ಕಾಲ ಈ ಸ್ವಚ್ಛತಾ ಅಭಿಯಾನ ಜಾರಿಯಲ್ಲಿರುತ್ತದೆ ಎಂದು ಸೊಲೊಖುಂಬು ಜಿಲ್ಲೆಯ ಪಸಂಗ್ ಲ್ಹುಮು ಗ್ರಾಮೀಣ ಮುನ್ಸಿಪಾಲಿಟಿ ಹೇಳಿದೆ. ಸುಮಾರು 10,000 ಕೆಜಿಯಷ್ಟು ತ್ಯಾಜ್ಯ ಸಂಗ್ರಹ ಗುರಿ ಹೊಂದಲಾಗಿದೆ.

ಕಿಲಿಮಂಜಾರೊ ಪರ್ವತವೇರಿ ಸಾಧನೆ ಮಾಡಿದ ಹರಿಯಾಣದ ಯುವತಿಕಿಲಿಮಂಜಾರೊ ಪರ್ವತವೇರಿ ಸಾಧನೆ ಮಾಡಿದ ಹರಿಯಾಣದ ಯುವತಿ

ಸದ್ಯ ಸಂಗ್ರಹವಾಗಿರುವ 3,000 ಕೆಜಿಯಲ್ಲಿ 2,000 ಕೆಜಿ ತ್ಯಾಜ್ಯವನ್ನು ಒಖ್ಲಧುಂಗಾಗೆ 1,000 ಕೆಜಿಯನ್ನು ಕಠ್ಮಂಡುವಿಗೆ ಸಂಸ್ಕರಣೆಗೆ ಕಳಿಸಲಾಗುತ್ತದೆ ಎಂದು ನೇಪಾಳಿ ಆರ್ಮಿ ಹೆಲಿಕಾಪ್ಟರ್ ಗೆ ಬಳಸಲಾಗುತ್ತದೆ ಎಂದು ಪ್ರವಾಸೋದ್ಯಮ ಇಲಾಖೆ ಪ್ರಧಾನ ನಿರ್ದೇಶಕ ದಂಡು ರಾಜ್ ಘಿಮಿರೆ ಹೇಳಿದರು.

Nepal Clean-Up Campaign: 3,000-Kg Garbage Collected From Mount Everest

ಎವರೆಸ್ಟ್ ಬೇಸ್ ಕ್ಯಾಂಪಿನಲ್ಲಿ 5,000ಕೆಜಿಗೂ ಅಧಿಕ ತ್ಯಾಜ್ಯ ಸಂಗ್ರಹವಾಗುವ ನಿರೀಕ್ಷೆಯಿದೆ. ಕ್ಯಾಂಪ್ 2 ಹಾಗೂ 3 ಸೇರಿದಂತೆ 3000 ಕೆಜಿ ತ್ಯಾಜ್ಯ ಸಂಗ್ರಹ ಗುರಿಯಿದೆ. ತ್ಯಾಜ್ಯದ ಜೊತೆಗೆ ಟ್ರೆಕ್ಕಿಂಗ್ ಸಂದರ್ಭದಲ್ಲಿ ಮೃತಪಟ್ಟು ಅಲ್ಲೇ ಉಳಿದ ಶವಗಳಿದ್ದರೆ, ಅವುಗಳನ್ನು ಕೆಳಗಿಳಿಸಲಾಗುತ್ತದೆ.

ಈ ಋತುವಿನಲ್ಲಿ 500 ವಿದೇಶಿ ಟ್ರೆಕ್ಕರ್ಸ್ ಸೇರಿದಂತೆ 1,000ಕ್ಕೂ ಅಧಿಕ ಟ್ರೆಕ್ಕರ್ಸ್ ಎವರೆಸ್ಟ್ ಬೇಸ್ ಕ್ಯಾಂಪ್ ಹಾಗೂ ಅದಕ್ಕಿಂತ ಮೇಲ್ಪಟ್ಟದ ಆರೋಹಣಕ್ಕಾಗಿ ನೋಂದಾಯಿಸಿಕೊಂಡಿದ್ದಾರೆ. ಎವರೆಸ್ಟ್ ಶ್ರೇಣಿಯನ್ನು ವಿಶ್ವದ ಅತಿದೊಡ್ಡ ಕಸದ ತೊಟ್ಟಿಯಾಗಲು ಬಿಡುವುದಿಲ್ಲ ಎದು ದಂಡುರಾಜ್ ಹೇಳಿದ್ದಾರೆ.

ಈ ಸ್ವಚ್ಛತಾ ಅಭಿಯಾನವು ಮೇ 29ರಂದು ಮುಕ್ತಾಯವಾಗಲಿದ್ದು, 1953ರಲ್ಲಿ ಮೊಟ್ಟ ಮೊದಲಬಾರಿಗೆ ತೇನ್ ಸಿಂಗ್ ನಾರ್ಗೆ ಹಾಗೂ ಎಡ್ಮಂಡ್ ಹಿಲರಿ ಅವರು ಎವರೆಸ್ಟ್/ ಸಾಗರಮಾತ/ ಚೊಮೊಲ್ಮುಂಗಾ ಹತ್ತಿದ ಸಾಧನೆ ಮಾಡಿದ್ದರು. ಜೂನ್ 05ರ ಪರಿಸರ ದಿನದಂದು ಈ ತ್ಯಾಜ್ಯವನ್ನು ಪ್ರದರ್ಶನ ಮಾಡಿ ನಂತರ ಮರು ಬಳಕೆಗಾಗಿ ಸಂಸ್ಕರಣೆ ಮಾಡಲಾಗುತ್ತದೆ.

English summary
The 45-day "Everest Cleaning Campaign", led by Solukhumbu district's Khumbu Pasanglhamu Rural Municipality began on April 14 with the Nepali new year and aims to collect nearly 10,000 kg of garbage from Mt Everest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X